ಕೊರಟಗೆರೆ


ರೈತನಾಯಕ ಕುಮಾರಣ್ಣನ ಕನಸಿನ ಯೋಜನೆಯಾದ ಪಂಚರತ್ನದ ಮಹತ್ವವನ್ನು ಕೊರಟಗೆರೆ ವಿಧಾನಸಭಾ ಕ್ಷೇತ್ರದ ಮನೆಮನೆಗೆ ತಲುಪಿಸುವುದೇ ಗ್ರಾಮವಾಸ್ತವ್ಯದ ಪ್ರಮುಖ ಉದ್ದೇಶವಾಗಿದೆ ಎಂದು ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ತಿಳಿಸಿದರು.
ಕೊರಟಗೆರೆ ವಿಧಾನಸಭಾ ಕ್ಷೇತ್ರ ಹೊಳವನಹಳ್ಳಿ ಹೋಬಳಿ ಅರಸಾಪುರ ಗ್ರಾಪಂ ವ್ಯಾಪ್ತಿಯ ಕಾಶಾಪುರ ಗ್ರಾಮದಲ್ಲಿ ಜಾತ್ಯಾತೀತಾ ಜನತಾದಳ ಪಕ್ಷದಿಂದ ಸೋಮವಾರ ಏರ್ಪಡಿಸಲಾಗಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಕುಟುಂಬಕ್ಕೆ ಶಿಕ್ಷಣವೇ ಶಕ್ತಿ, ಬಡಜನತೆಗೆ ವಸತಿಯ ಆಸರೆ, ಗ್ರಾಪಂ ಮಟ್ಟದಲ್ಲೇ ಆರೋಗ್ಯವೇ ಸಂಪತ್ತು, ರೈತರ ಆಸರೆಗಾಗಿ ರೈತ ಚೈತನ್ಯ, ಉದ್ಯೋಗ ಸೃಷ್ಟಿಗಾಗಿ ಯುವಜನ ಮತ್ತು ಮಹಿಳಾ ಸಬಲೀಕರಣದ ಪಂಚರತ್ನ ಯೋಜನೆಯು ಕರ್ನಾಟಕ ರಾಜ್ಯ ಮತ್ತು ಕೊರಟಗೆರೆ ಕ್ಷೇತ್ರದ ಅಭಿವೃದ್ದಿಗೆ ಪೂರಕವಾಗಲಿದೆ ಎಂದು ತಿಳಿಸಿದರು.
ಕೋಡ್ಲಾಪುರ ಮತ್ತು ಅರಸಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಈಗಾಗಲೇ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಮಾಡಿದ್ದೇನೆ. ಕೊರಟಗೆರೆ ಕ್ಷೇತ್ರದಲ್ಲಿ ಪ್ರತಿ ಹೋಬಳಿಯಲ್ಲೂ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಮೂಲಕವೆ ಪಂಚರತ್ನ ಯೋಜನೆಯ ಅರಿವು ಮೂಡಿಸುತ್ತೇನೆ. ಸ್ತ್ರೀಶಕ್ತಿ ಸಂಘಗಳ ಸಾಲಮನ್ನ ಮತ್ತು ಹಿರಿಯ ನಾಗರೀಕರ ಮಾಶಾಸನ ಯೋಜನೆಯು ಅತಿಮುಖ್ಯ ಆಗಿವೆ ಎಂದು ತಿಳಿಸಿದರು.
ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಮಾಜಿ ತಾಪಂ ಸದಸ್ಯ ಎಲ್.ವಿ.ಪ್ರಕಾಶ್, ಮುಖಂಡರಾದ ರಾಜಣ್ಣ, ಕಿಶೋರ್, ಹೊನ್ನಪ್ಪ, ಗಂಗಾಧರಪ್ಪ, ನಾಗೇಶ್, ಪಾಪಣ್ಣ, ಗೋವಿಂದರಾಜು, ರೆಡ್ಡಪ್ಪ, ವೇಣುಗೋಪಾಲ್, ವೆಂಕಟೇಶ್, ಲಿಂಗಪ್ಪ, ಹರೀಶ್, ರಂಗಯ್ಯ, ಹನುಮಂತರಾಯಪ್ಪ ಸೇರಿದಂತೆ ಇತರರು ಇದ್ದರು.

(Visited 9 times, 1 visits today)