ತುಮಕೂರು:

      ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಗೂಳೂರಿನಲ್ಲಿ ತಲೆದೋರಿದ್ದ ನೀರಿನ ಸಮಸ್ಯೆ ಬಗ್ಗೆ ಗೂಳೂರಿನ ಗ್ರಾಮಸ್ತರು ಹಾಗು ಗಣಪತಿ ದೇವಾಲಯಕ್ಕೆ ಭೇಟಿ ನೀಡುತ್ತಿದ್ದ ಭಕ್ತಾಧಿಗಳು ಶಾಸಕ ಡಿ ಸಿ ಗೌರೀಶಂಕರ್ ಅವರ ಗಮನಕ್ಕೆ ತಂದ ತಕ್ಷಣ ಶಾಸಕರ ಅನುದಾನದಡಿ ಎರಡು ಬೋರ್ ವೆಲ್ ಗಳನ್ನು ಕೊರೆಸಿ ನೀರಿನ ಭವಣೆ ನೀಗಿಸಿದ್ದಾರೆ.

      ಐತಿಹಾಸಿಕ ಪ್ರಸಿದ್ದ ಗೂಳೂರು ಗಣಪತಿ ವಿಸರ್ಜನೆಗೆ ಲಕ್ಷಾಂತರ ಜನ ಭಕ್ತಾಧಿಗಳು ಭಾಗವಹಿಸಲಿದ್ದು ಈ ಮಧ್ಯೆ ಗೂಳೂರು ಗ್ರಾಮದಲ್ಲಿ ನೀರಿನ ಸಮಸ್ಯೆ ಉಲ್ಬಣವಾಗಿತ್ತು ಗೂಳೂರಿನ ಗ್ರಾಮಸ್ತರು ಹಾಗು ಭಕ್ತಾಧಿಗಳು ಮತ್ತು ಸ್ತಳೀಯ ಜೆಡಿಎಸ್ ಮುಖಂಡರು ಶಾಸಕ ಡಿ ಸಿ ಗೌರೀಶಂಕರ್ ಅವರಿಗೆ ಸಮಸ್ಯೆ ಬಗ್ಗೆ ವಿವರಿಸಿ ಬೋರ್ ವೆಲ್ ಕೊರೆಸುವಂತೆ ಮನವಿ ಮಾಡಿದ್ದರು,ಶಾಸಕರು ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿದ್ದರೂ ಸಹ ತಕ್ಷಣ ದೂರವಾಣಿ ಮೂಲಕ ಅಧಿಕಾರಿಗಳನ್ನು ಸಂಪರ್ಕಿಸಿ ತುರ್ತಾಗಿ ಎರಡು ಬೋರ್ ವೆಲ್ ಕೊರೆಯುವಂತೆ ತಾಕೀತು ಮಾಡಿದ್ದರು ,ಶಾಸಕರ ಆದೇಶದಂತೆ ಒಂದೇ ದಿನದಲ್ಲಿ ಎರಡು ಬೋರ್ ವೆಲ್ ಕೊರೆಸಿ ತುರ್ತಾಗಿ ಪಂಪು ಮೋಟಾರ್ ಅಳವಡಿಸಿ 1000 ಮೀಟರ್ ಪೈಪ್ ಲೈನ್ ಅಳವಡಿಸಿ ಗಣೇಶನ ವಿಸರ್ಜನೆಗೆ ಬರುವ ಭಕ್ತಾಧಿಗಳಿಗೆ ನೀರಿನ ತೊಂದರೆಯಾಗುವುದನ್ನು ತಪ್ಪಿಸಿದ್ದಾರೆ .

      ಶಾಸಕರ ನಿರ್ಧಾರದಿಂದ ಗೂಳೂರಿನಲ್ಲಿ ಉಲ್ಬಣಿಸಲಿದ್ದ ನೀರಿನ ಸಮಸ್ಯೆ ನಿವಾರಣೆಯಾದಂತಾಗಿದೆ ,ಗೂಳೂರು ಹೋಬಳಿ ಜೆಡಿಎಸ್ ಅಧ್ಯಕ್ಷ ಪಾಲನೇತ್ರಯ್ಯ,ಗೂಳೂರು ಜೆಡಿಎಸ್ ಮುಖಂಡ ಕೃಷ್ಣೇಗೌಡ,ಗೂಳೂರು ಗ್ರಾಮಪಂಚಾಯ್ತಿ ಅಧ್ಯಕ್ಷೆ ಯಶೋಧಮ್ಮ,ಗ್ರಾಮ ಪಂಚಾಯ್ತಿ ಸದಸ್ಯರಾದ ನವೀನ್ ಗೌಡ,ರೇಣುಕಪ್ಪ,ಮೆಹಬೂಬ್ ಜಾನ್,ಮಹದೇವಣ್ಣ,ಸತ್ಯವತಿ ಜೆಡಿಎಸ್ ಮುಖಂಡರಾದ ಪಂಚೆಗಂಗಣ್ಣ.ರವಿ,ಮಂಜುನಾಥ್,ಶ್ರೀನಿವಾಸ್,ರಾಜು,ಶೇಖರ್ ,ರವೀಶ್,ಸಿದ್ದಪ್ಪ,ಖಾಲಿದ್ ಪಾಷ,ಸೇರಿದಂತೆ ಗೂಳೂರು ಭಾಗದ ಜೆಡಿಎಸ್ ಮುಖಂಡರು ಪೈಪ್ ಲೈನ್ ಕಾಮಗಾರಿ ಮೇಲುಸ್ತುವಾರಿ ವಹಿಸಿ ಶಾಸಕರಿಗೆ ಕೃತಜತೆ ಸಲ್ಲಿಸಿದರು

(Visited 24 times, 1 visits today)