ನ. 30ರಿಂದ ಮೂರು ದಿನಗಳ ಕಾಲ ತುಮಕೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಯುವಜನೋತ್ಸವದ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು. ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆಯುತ್ತಿತ್ತು. ಈ ಮಧ್ಯೆ ಸಭೆಯಲ್ಲಿ ಭಾಗವಹಿಸಿದವರಿಗೆ ಬಿಸ್ಕೆಟ್​​​, ಕೇಕ್, ಚಿಪ್ಸ್ ಕೊಡಲಾಗಿತ್ತು.

      ಸಭೆಯಲ್ಲಿ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಬಿಸ್ಕೆಟ್​​​ ತಿನ್ನಲು ಮುಂದಾದಾಗ ಅದರಲ್ಲಿ ಮೊಳೆ ಕಂಡುಬಂದಿದೆ. ಸ್ಕ್ರೂ ಆಕಾರದ ಕಬ್ಬಿಣದ ತುಂಡು ಕಂಡ ಜಿಲ್ಲಾಧಿಕಾರಿ ಗಾಬರಿಯಾದರು. ಅಲ್ಲದೆ ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ, ಯಾವ ಬೇಕರಿಯಿಂದ ಬಿಸ್ಕೆಟ್ ಮತ್ತು ಕೇಕ್ ತಂದದ್ದು ಎಂದು ವಿಚಾರಿಸಿದರು. ಮಹಾತ್ಮ ಗಾಂಧಿ ಕ್ರೀಡಾಂಗಣ ಬಳಿಯ ಮಯೂರ ಬೇಕರಿಯಲ್ಲಿ ತಂದಿರುವುದಾಗಿ ಸಿಬ್ಬಂದಿ ತಿಳಿಸಿದ್ದಾರೆ.

      ಉಪ ವಿಭಾಗಾಧಿಕಾರಿ ಶಿವಕುಮಾರ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆೆ ತೆರಳಿ ಬೇಕರಿ ಪರಿಶೀಲನೆ ನಡೆಸಿ, ಬೇಕರಿ ಮಾಲೀಕನನ್ನು ತರಾಟೆಗೆ ತೆಗೆದುಕೊಂಡರು. ಬೇಕರಿಯಲ್ಲಿದ್ದ ಕೆಲ ಸಾಮಗ್ರಿಗಳನ್ನು ವಶಕ್ಕೆೆ ತೆಗೆದುಕೊಂಡರು ಮತ್ತು ಅಲ್ಲಿನ ಸ್ವಚ್ಛತೆ ಬಗ್ಗೆೆ ಮಾಹಿತಿ ಕಲೆ ಹಾಕಿದರು. ನಂತರ ಜಿಲ್ಲಾಧಿಕಾರಿ ಸೂಚನೆಯಂತೆ ಬೇಕರಿಗೆ ಬೀಗ ಹಾಕಿದರು.

 

(Visited 19 times, 1 visits today)