ಚಿಕ್ಕನಾಯಕನಹಳ್ಳಿ :

      1914 ರ ಡಿಸೆಂಬರ್‍ಗೂ ಹಿಂದೆ ನಮ್ಮ ದೇಶಕ್ಕೆ ಮೂರು ಇಸ್ಲಾಂ ದೇಶದಿಂದ ಕಿರುಕುಳಕ್ಕೊಳಗಾಗಿ ಇಲ್ಲಿಗೆ ಬಂದ 6 ಧಾರ್ಮಿಕ ನಿರಾಶ್ರಿತರಿಗೆ ಯಾವುದೇ ದಾಖಲೆಯಿಲ್ಲದೆ ಪೌರತ್ವ ನೀಡುವ ಕಾಯ್ದೆ ಇದಾಗಿದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ ಸ್ಪಷ್ಟಪಡಿಸಿದರು.

      ಅವರು ಪಟ್ಟಣದ ಕಾರ್ಯನಿರತ ಪತ್ರಕರ್ತರ ಕಾರ್ಯಾಲಯದಲ್ಲಿ ಈ ಕುರಿತು ಮಾತನಾಡಿ ಈ ಕಾಯ್ದೆಯಿಂದ ಈ ದೇಶದ ಮಸ್ಲಿಂರಿಗೆ ಕಿಂಚಿತ್‍ಭಾದೆಯಿಲ್ಲ. ಮುಸ್ಲಿಂ ರಾಷ್ಟ್ರಗಳೆನಿಸಿದ ಪಾಕಿಸ್ಥಾನ, ಆಫ್ಘಾಸ್ಥಾನ ಹಾಗೂ ಬಾಂಗ್ಲಾದೇಶದಿಂದ ಮುಸ್ಲಿಂಮೇತರರಾದ ಆರು ಧರ್ಮಿಯರು ಅಲ್ಲಿನ ಕಿರುಕುಳ ಸಹಿಸಲಾರದೆ ಬದುಕುಳಿಯಲು ನಮ್ಮ ದೇಶಕ್ಕೆ ವಲಸೆ ಬಂದಿದ್ದಾರೆ. ಇವರಲ್ಲಿ ಯಾವುದೇ ದಾಖಲೆಗಳಿಲ್ಲ. ದಾಖಲೆಗಳಿದ್ದ ಕಾರಣ ಇವರಿಗೆ ದೇಶದ ಯಾವುದೇ ಸವಲತ್ತುಗಳು ದೊರೆಯುತ್ತಿಲ್ಲ. ಇಂತಹ ಆರು ಧರ್ಮೀಯರಾದ ಹಿಂದೂ, ಪಾರ್ಸಿ, ಸಿಖ್, ಕ್ರಿಶ್ಚಯನ್, ಜೈನ, ಭೌದ್ದಮತದ ಸುಮಾರು 30 ಸಾವಿರ ಅಜುಬಾಜಿನಲ್ಲಿರುವರಿಗೆ ದಾಖಲೆಗಳಿಲ್ಲದಿದರೂ ಪೌರತ್ವ ನೀಡುವ ಕಾಯ್ದೆ ಇದಾಗಿದೆ. ಇದರಲ್ಲಿ ಯಾವುದೇ ದುರುದ್ದೇಶವಿಲ್ಲವೆಂದರು.

       ದೇಶದ ಸಾರ್ವಭೌತ್ವಕ್ಕೆ ಧಕ್ಕೆ ತರುವ ಉದ್ದೇಶದಿಂದ ಅಕ್ರಮವಾಗಿ ಮುಸ್ಲಿಂರು, ರೋಹಿಂಗ್ಯಾನ್ನರು ಪ್ರವಾಹಪಾದಿಯಲ್ಲಿ ಬರುತ್ತಿರುವುದನ್ನು ತಡಯಲೇಬೇಕಾಗಿದೆ. ಹಿಂದೆಯೂ ನಿರಾಶ್ರಿತರಿಗೆ ಆಸರೆ ನೀಡುವ ವ್ಯವಸ್ಥೆಯಿತ್ತು ನೆಹರೂ ಆಡಳಿತದಲ್ಲಿ ಟಿಬೆಟ್¬ನ್‍ರಿಗೆ, ಇಂದಿರಾಗಾಂಧಿ ಆಳ್ವಿಕೆಯಲ್ಲಿ ಬಾಂಗ್ಲಾದವರಿಗೂಸಹ ಷರತ್ತಿನ ಮೇಲೆ ಆಶ್ರಯ ನೀಡಿದ್ದಾರೆ ಹೊರತು ಈ ದೇಶದ ಪೌರತ್ವನೀಡಿಲ್ಲ.

       ನಿರಾಶ್ರಿತರಂತೆ ಬಾಂಗ್ಲಾದಿಂದ ಬಂಗಾಳದಲ್ಲಿ ತುಂಬಿರುವ ಅಕ್ರಮವಲಸಿಗರನ್ನು ಹೊರದಬ್ಬಬೇಕೆಂದು ದೊಡ್ಡ ಹೋರಾಟ ಮಾಡಿದ ಮಮತಾಬ್ಯಾನರ್ಜಿ ಇಂದು ಪದವಿಯ ಆಸಗೆ ಪೌರತ್ವಕಾಯ್ದೆಗೆ ವಿರೋಧವ್ಯಕ್ತಪಡಿಸುತ್ತಿರುವುದು ದುರಂತವೆಂದರು. ಇಂತಹ ಅಕ್ರಮ ವಲಸಿಗರಿಂದ ಕಾಶ್ಮೀರದ ಮೂಲನಿವಾಸಿಗಳಾಗಿದ್ದ ಅಪಾರ ಸಂಖ್ಯೆಯ ಪಂಡಿತರು ತಮ್ಮ ನೆಲೆಯನ್ನು ಬಿಟ್ಟು ಈದೇಶದಲ್ಲಿಯೇ ನಿರಾಶ್ರಿತರಾಗಿದ್ದಾರೆ. ಇಂತಹ ಸ್ಥಿತಿ ಮತ್ತೆಯಾವರಾಜ್ಯಕ್ಕೂ ಬರಬಾರದೆಂದರು. ಅಕ್ರಮವಾಗಿ ಬಂದು ಇಲ್ಲಿಯೇ ನೆಲೆಸಿದ್ದರೆ ಸೂಕ್ತ ದಾಖಲೆ ನೀಡಿ ಪೌರತ್ವ ಪಡೆಯಬಹುದಾಗಿದೆಯೆಂದರು.

        ಈ ಸಂದರ್ಭದಲ್ಲಿ ಕಾಂಗ್ರೆಸ್‍ನ ಮಾಜಿ ಶಾಸಕ ಬಿ.ಲಕ್ಕಪ್ಪ ಮಾತನಾಡಿ ಪ್ರಸ್ತುತ ಪೌರತ್ವಕಾಯ್ದೆಯಿಂದ ದೇಶದ ಯಾವುದೇ ಮೂಲ ನಾಗರೀಕರಿಗೂ ತೊಂದರೆಯಾಗದು. ಇದನ್ನು ಅರ್ಥಮಾಡಿಕೊಳ್ಳದೆ ದ್ವೇಶದ ಕಾರಣಕ್ಕಾಗಿ ದೇಶದ ಜನರನ್ನು ದಿಕ್ಕುತಪ್ಪಿಸಲಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಕಾಯ್ದೆಗಳು ಜಾರಿಯಾಗುವ ಮುನ್ನ ಸಂಸತ್ ಹಾಗೂ ರಾಜ್ಯಸಭೆಗಳಲ್ಲಿ ಚರ್ಚೆಗಳಾಗಿ ಬಹುಮತದ ಆಧಾರದಲ್ಲಿ ಕಾಯ್ದೆ ರೂಪುಗೊಳ್ಳಲಿದೆ. ಈ ಕಾಯ್ದೆಯೂಸಹ ಈ ಮಾದರಿಯಲ್ಲಿಯೇ ಜಾರಿಯಾಗಿದೆ.

        ಅಧಿವೇಶನದಲ್ಲಿ ಜನಪ್ರತಿನಿಧಿಗಳು ಕಾಯ್ದೆಗಳ ಕುರಿತು ಸಮರ್ಪಕವಾಗಿ ಚರ್ಚೆಯಲ್ಲಿ ಭಾಗವಹಿಸಿದೆ ಪಲಾಯನಗೈದು ಕಾಯ್ದೆಯಾದ ನಂತರ ಜನರನ್ನು ದಿಕ್ಕುತ್ಪಿಸುತ್ತಿರುವುದು ಅಸಂವಿಧಾನಿಕವೆಂದರು.

(Visited 36 times, 1 visits today)