ಹೊಸದಿಲ್ಲಿ : 

      ಕಳೆದ ಸಾಲಿನಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳ ಪಾವತಿಯಾಗದ ಸಾಲಗಳ ಪ್ರಮಾಣ ಹೆಚ್ಚಾಗುವಲ್ಲಿ ಕರ್ತವ್ಯ ಲೋಪ ತೋರಿದ ಆರು ಸಾವಿರಕ್ಕೂ ಅಧಿಕ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ.

      ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಲೋಕಸಭೆಯಲ್ಲಿಂದು, ತಪ್ಪುಗಾರ ಅಧಿಕಾರಿಗಳಿಗೆ ಲಘು ಪ್ರಮಾಣದಿಂದ ಕಠಿನ ಪ್ರಮಾಣದ ವರೆಗಿನ ದಂಡವನ್ನು ಹೇರಲಾಗಿದೆ ಎಂದು ಲಿಖೀತ ಉತ್ತರದಲ್ಲಿ ಈ ವಿಷಯ ತಿಳಿಸಿದರು.

      ಕೆಲವೊಂದು ಪ್ರಕರಣಗಳಲ್ಲಿ ಕೆಲಸದಿಂದ ಕಿತ್ತು ಹಾಕುವ, ಕಡ್ಡಾಯ ನಿವೃತ್ತಿ ನೀಡುವ ಮತ್ತು ಹಿಂಭಡ್ತಿ ನೀಡುವ ಶಿಕ್ಷೆಯನ್ನು ಕರ್ತವ್ಯ ಲೋಪ ತೋರಿದ ಅಧಿಕಾರಿಗಳಿಗೆ ನೀಡಲಾಗಿದೆ ಎಂದು ಹೇಳಿದರು.

(Visited 25 times, 1 visits today)