ತುಮಕೂರು:

      ಭಾರತೀಯ ಪರಂಪರೆಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲು ರೂಢಿಯಲ್ಲಿದ್ದ ಗುರುಕುಲಗಳ ಮಾದರಿಯಲ್ಲಿಯೇ ಇಂದೂಸಹ ಸಮಾಜದ ನಿರ್ಗತಿಕ ಮಕ್ಕಳಿಗೆ ಶಿಕ್ಷಣ-ಸಂಸ್ಕಾರಗಳನ್ನು ನೀಡಲು ಆಶ್ರಮ ಶಾಲೆಯನ್ನು ತೆರೆದು ಮುನ್ನೆಡೆಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದುಜಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಭರತ್ ಕುಮಾರ್ ಕೆ.ಎಸ್. ತಿಳಿಸಿದರು.

      ಅವರು ಮೈದಾಳದ ಶ್ರೀ ಶಿವ ಶೈಕ್ಷಣಿಕ ಸೇವಾ ಆಶ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳ ಆಶ್ರಯದಲ್ಲಿ ಆಯೋಜಿಸಿದ್ದ ಮಕ್ಕಳ ಪಾಲನಾ ಸಂಸ್ಥೆಯಲ್ಲಿನ ಮಕ್ಕಳಿಗೆ ‘ಮಕ್ಕಳ ಹಕ್ಕುಗಳು’ಕುರಿತ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಪ್ರಸ್ತುತ ದಿನಗಳಲ್ಲಿ ಶಿಕ್ಷಣ ಸಂಸ್ಕಾರಗಳಿಗೆ ಗುರುಕುಲ ಮಾದರಿಯ ಇಂತಹ ಆಶ್ರಮ ಶಾಲೆಗಳು ಅತ್ಯಗತ್ಯ ನಾನೂ ಕೂಡ ಶ್ರೀ ಸಾಯಿನಾಥ ಆಶ್ರಮದ ಶಾಲೆಯಲ್ಲಿ ಓದಿದವನು.ಹಾಗಾಗಿ ಆಶ್ರಮಶಾಲೆಗಳಲ್ಲಿ ಓದಿದವರು ಉತ್ತಮ ಶಿಕ್ಷಣ,ಸಂಸ್ಕಾರಗಳಿಂದ ಒಳ್ಳೆಯ ವಿದ್ಯಾರ್ಥಿಗಳಾಗಿ ರೂಪುಗೊಂಡು ತಮ್ಮ ಜೀವನದಲ್ಲಿ ಗುರಿ ಮುಟ್ಟಿ ಉನ್ನತ ಸ್ಥಾನಕ್ಕೇರುತ್ತಾರೆ. ಇಂದು ಈ ಆಶ್ರಮ ನೋಡಿ ನನ್ನ ಮನಸ್ಸಿಗೆ ತುಂಬಾ ಸಂತೋಷವಾಯಿತು ಎಂದು ಹೇಳಿ ಭಾವಪರವಶವಾದರು.

      ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ನ್ಯಾಯಮೂರ್ತಿ ಬಿ. ಎಲ್.ಜಿನರಾಳ್ಕರ್ ಮಾತನಾಡಿ ಜಗತ್ತಿನ 750 ಕೋಟಿ,ಭಾರತದ 127 ಕೋಟಿ ಜನಸಂಖ್ಯೆ ಯಲ್ಲಿ ಶೇ 3.7 ರಷ್ಟು ಮಕ್ಕಳೇ ಇದ್ದಾರೆ. ನಮ್ಮ ಸಂವಿಧಾನ ಮತ್ತು ವಿಶ್ವಸಂಸ್ಥೆಯ ಕಾನೂನುಗಳಲ್ಲಿ 10 ಮೂಲಭೂತ ಹಕ್ಕುಗಳನ್ನು ನೀಡಲಾಗಿದೆ. ಈಗ 11ನೇ ಹಕ್ಕನ್ನೂ ಸಹ ಸೇರಿಸಿದ್ದು, ಕಲಂ15(3)ನೇ ಕಾನೂನಿನ ಪ್ರಕಾರ ಮಹಿಳೆಯರು ಮತ್ತು ಮಕ್ಕಳು ದುರ್ಬಲ ವರ್ಗದವರಾಗಿದ್ದು ಇವರನ್ನು ವಿಶೇಷವಾಗಿ ರಕ್ಷಿಸಲು ಈ ಹಕ್ಕನ್ನು ವಾಜಪೇಯಿಯವರ ಕಾಲದಲ್ಲಿ ಜಾರಿಗೊಳಿಸಲಾಗಿದೆ. ಭಾರತದ ನೊಬೆಲ್ ಪ್ರಶಸ್ತಿ ಪುರಸ್ಕøತ ಕೈಲಾಶ್ ಸತ್ಯಾರ್ಥಿ ಮತ್ತು ಪಾಕಿಸ್ತಾನದ ಮಲಾಲರವರು ಮಕ್ಕಳ ಹಕ್ಕುಗಳ ರಕ್ಷಣೆಗಾಗಿಯೇ ಈ ನೊಬೆಲ್ ಪುರಸ್ಕಾರವನ್ನು ಜಂಟಿಯಾಗಿ ಪಡೆದುಕೊಂಡಿದ್ದು ಇವರೀರ್ವರೂ ಕೂಡ ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದರು.

      ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್ ಮಾತನಾಡಿ ನಾವು ಪಡೆದ ವಿದ್ಯೆಯನ್ನು ಯಾರೂ ಕದಿಯಲು ಸಾಧ್ಯವಿಲ್ಲ. ಹಾಗಾಗಿ ಮಕ್ಕಳು ಈಗಿನಿಂದಲೇ ಉತ್ತಮ ಯೋಚನಾಮಗ್ನರಾಗಿ ಶಿಕ್ಷಣ-ಸಂಸ್ಕಾರಗಳನ್ನು ಮೈಗೂಡಿಸಿಕೊಂಡರೆ ಮುಂದೆ ಉತ್ತಮ ಜೀವನ ಹೊಂದಬಹುದು ಎಂದುತಿಳಿಹೇಳಿದರು. ಬಾಲ ನ್ಯಾಯ ಮಂಡಳಿ ಸದಸ್ಯರಾದ ಶ್ರೀಮತಿ ಶಾಲಿನಿ ಮತ್ತು ಆಶಾರವರು ಮಾತನಾಡಿ ಮಕ್ಕಳ ಹಕ್ಕುಮತ್ತು ಕರ್ತವ್ಯಗಳ ಬಗ್ಗೆವಿವರಿದಸಿದರು. ಆಶ್ರಮದ ಶರಣಶ್ರೀ ಲೇಪಾಕ್ಷಯ್ಯ ಅಧ್ಯಕ್ಷೀಯ ನುಡಿಗಳನ್ನಾಡಿದರು.ವ್ಯವಸ್ಥಾಪಕ ತಿಪ್ಪೇಸ್ವಾಮಿ ವ<ಂದಿಸಿದರು. ಶಿಕ್ಷಕಿ ವಿಜಯಲಕ್ಷ್ಮಿ ನಿರೂಪಿಸಿದರೆ ಆಶ್ರಮದ ಮಕ್ಕಳು ಪ್ರಾರ್ಥಿಸಿದರು.

 

(Visited 48 times, 1 visits today)