ತುಮಕೂರು :

      ಇತಿಹಾಸ ಪ್ರಸಿದ್ದ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ದನಗಳ ಜಾತ್ರೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಬಹುಮಾನ ನೀಡಲು ಉತ್ತರ ರಾಸುಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

      ಉತ್ತಮ ರಾಸುಗಳ ಆಯ್ಕೆಯಲ್ಲಿ ಹೋರಿಗಳು ಮತ್ತು ಎತ್ತುಗಳು ಎಂದು 2 ವಿಭಾಗಗಳಾಗಿ ವಿಂಗಡಿಸಲಾಗಿತ್ತು. ಈ ಪೈಕಿ ಹೋರಿಗಳಲ್ಲಿ 5 ವಿಭಾಗ ಹಾಗೂ ಎತ್ತುಗಳಲ್ಲಿ 5 ವಿಭಾಗದಂತೆ ಒಟ್ಟು 10 ರೀತಿಯಲ್ಲಿ ರಾಸುಗಳನ್ನು ಆಯ್ಕೆ ಪ್ರಕ್ರಿಯೆಗೆ ಒಳಪಡಿಸಲಾಯಿತು.

      ಹೋರಿಗಳ ವಿಭಾಗದಲ್ಲಿ ಹಾಲು ಹಲ್ಲು, 2 ಹಲ್ಲು, 4 ಹಲ್ಲು, 6 ಹಲ್ಲು ಹಾಗೂ ಬಾಯಿಗೂಡಿದ ಹೋರಿಗಳು ಎಂದು ವಿಂಗಡಿಸಿ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.  ಎತ್ತುಗಳಲ್ಲೂ ಸಹ ತಳಿ, ಲಕ್ಷಣಗಳು, ಮುಖ ಛಾಯೆ, ಮೈಬಣ್ಣ, ನಡಿಗೆ, ಕಾಲು ಎಲ್ಲವನ್ನೂ ಗಮನಿಸಿ ಬಹುಮಾನಕ್ಕೆ ರಾಸುಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಉತ್ತಮ ರಾಸುಗಳ ಆಯ್ಕೆ ಸಮಿತಿಯ ಕೋರಿ ಮಂಜಣ್ಣ ತಿಳಿಸಿದರು.

       ಪ್ರತಿ ವರ್ಷವೂ ರೈತರಿಗೆ ಪ್ರೇರೇಪಣೆ ಮತ್ತು ಉತ್ತೇಜನ ನೀಡುವ ಸಲುವಾಗಿ ಶ್ರೀಗಳ ಅಪೇಕ್ಷೆಯ ಮೇರೆಗೆ ಉತ್ತಮ ರಾಸುಗಳ ಪ್ರದರ್ಶನ ಏರ್ಪಡಿಸಲಾಗುತ್ತಿದೆ ಎಂದು ಅವರು ಹೇಳಿದರು.

        ಶ್ರೀಗಳ ಅಪೇಕ್ಷೆಯಂತೆ ಆಯ್ಕೆಯಾಗುವ ಉತ್ತಮ ರಾಸುಗಳಿಗೆ ನಗದು ಬಹುಮಾನ ನೀಡಲಾಗುವುದು ಎಂದು ಅವರು ತಿಳಿಸಿದರು.
ಉತ್ತಮ ರಾಸುಗಳ ಆಯ್ಕೆ ಸಮಿತಿಯಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಇಲಾಖೆಯ ಉಪನಿರ್ದೇಶಕ ಡಾ. ಎಲ್. ಪ್ರಕಾಶ್, ಡಾ. ಶ್ರೀಧರ್, ಡಾ.ಎಂ.ಪಿ. ಪುಟ್ಟಸ್ವಾಮಿ, ಡಾ. ವಿ.ಸಿ. ರುದ್ರಪ್ರಸಾದ್, ಡಾ. ದತ್ತ, ಕೋರಿ ಮಂಜುನಾಥ್, ಎಸ್. ವಿಶ್ವನಾಥಯ್ಯ. ಜಿ. ಗವಿಸಿದ್ದಯ್ಯ, ಜಿ.ಆರ್. ಶಂಕರಪ್ಪ, ಬಿ. ನಂಜಪ್ಪ, ಜಯರಾಮ್ ಇದ್ದಾರೆ.

(Visited 24 times, 1 visits today)