ತುಮಕೂರು :

      ಪ್ರಸ್ತುತ ದಿನಗಳಲ್ಲಿ ಗ್ರಾಮಂತರ ಪ್ರದೇಶಗಳಲ್ಲಿ ಸಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿರುವ ಸರ್ಕಾರೇತರ ಸಂಸ್ಥೆಗಳ ಪಾತ್ರ ಅತ್ಯಂತ ಅವಶ್ಯಕವಾದುದ್ದು ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಶಿವಕುಮಾರ್ ತಿಳಿಸಿದರು.

     ತಾಲೂಕಿನ ಗೂಳೂರು ಗ್ರಾಮದ ಸರಕಾರಿ ಶಾಲಾ ಅವರಣದಲ್ಲಿ ಯಶಸ್ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಹೆಚ್1,ಎನ್1 ಮತ್ತು ಸ್ವಚ್ಛತೆ ಬಗ್ಗೆ ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದಿನ ಒತ್ತಡದ ಬದುಕಿನಲ್ಲಿ ಮಾನುಷ್ಯನ ನೆಮ್ಮದಿ ಜೀವನಕ್ಕೆ ಆರೋಗ್ಯ ಅತಿ ಅವಶ್ಯಕವಾಗಿದ್ದು ಅರೋಗ್ಯವನ್ನು ಕಪಾಡಿಕೊಳ್ಳಲು ಮುಂಜಾಗ್ರತವಾಗಿ ಹೆಚ್ಚರಿಕೆವಯಿಸಬೇಕಾಗಿದೆ ಎಂದು ತಿಳಿಸಿದರು.

      ಹೆಚ್1,ಎನ್1 ನಂತಹ ರೋಗದ ಬಗ್ಗೆ ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಇಂತಹ ಕಾರ್ಯಕ್ರಮಗಳು ನಿಜಕ್ಕೂ ಅರ್ಥಪೂರ್ಣವಾಗಿದೆ ಯಶಸ್ ಫೌಂಡೇಷನ್ ಈ ನಿಟ್ಟಿನಲ್ಲಿ ಸಮಾಜ ಸೇವೆ ಮಾಡುತ್ತಿದ್ದು, ಈ ಸಂಸ್ಥೆ ಗ್ರಾಮೀಣ ಬಾಗಗಳಲ್ಲಿ ಇಂತಹ ಜಾಗೃತಿ ಕಾರ್ಯಕ್ರಮಗಳು ಹೆಚ್ಚಿನ ಮಟ್ಟದಲಿ ನಡಸಿ ಜನರ ಅರೋಗ್ಯ ಸುಧಾರಣೆಗೆ ದಾರಿ ದೀಪಾವಾಗಲಿ ಇಂತಹ ಕಾರ್ಯಕ್ರಮಗಳಿಗೆ ನಮ್ಮ ಪ್ರೋತ್ಸಾಹ ಮತ್ತು ಸಹಕಾರ ಸಾದ ಇರುತ್ತದೆ ಎಂದು ತಿಳಿಸಿದರು.

      ಕಾರ್ಯಕ್ರಮದ ಸಂಪನ್ಮೊಲ ವ್ಯೆಕ್ತಿಯಾಗಿ ಬಾಗವಹಿಸಿದ್ದ ಗೂಳೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೆಂದ್ರದ ವೈದ್ಯರಾದ ಡಾ.ಜ್ಯೋತಿ ಮಾತನಾಡಿ, ಜನರಲ್ಲಿ ಹೆಚ್1,ಎನ್1 ಒಂದು ಮಾರಕ ರೋಗ ಎಂಬ ತಪ್ಪು ಕಲ್ಪನೆಯಿದೆ ಇದು ತಪ್ಪು ಬಾವನೆಯಾಗಿದೆ ಸೂಕ್ತ ಸಮಯಕ್ಕೆ ಸರಿಯಾದ ಚಿಕಿತ್ಸೆ ಪಡೆದರೆ ಬೇಗ ಈ ರೋಗದಿಂದ ಗುಣಮುಖರಾಗಬಹುದು ಎಂದು ತಿಳಿಸಿದರು.

      ಹೆಚ್1,ಎನ್1 ಚಳಿಗಾಲದಲ್ಲಿ ಬರುವ ಒಂದು ಕಾಯಿಲೆ ,ಈಗಾಗಲೆ ಬೇರೆ ಕಾಯಿಲೆಗಳಿಂದ ನರಳುತ್ತಿದ್ದರೆ ಅಥಾವ ಬಿ.ಪಿ,ಶುಗರ್,ಹೃದಯಕಾಯಿಲೆ,ಮತ್ತು ಗರ್ಭಿಣಿಯರಿಗೆ ಈ ಸೊಂಕು ತಗುಲಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯದೆ ಹೋದರೆ ಮಾತ್ರ ಇದು ಮಾರಣಾಂತಿಕವಾಗಿ ಪರಿಣಮಿಸುತ್ತದೆ. ನೆಗಡಿ,ಕೆಮ್ಮು,ಜ್ವರ ಮತ್ತು ಕೈಕಾಲು ನೋವು ಬರುವುದು ಇದರ ಲಕ್ಷಣವಾಗಿದ್ದು ಈ ಲಕ್ಷಣಗಳು ಕಂಡು ಬಂದ ತಕ್ಷಣ ಡಾಕ್ಟರ್ ಬಳಿ ಹೋಗಿ ಸಲಹೆ ಪಡೆದು ಚಿಕಿತ್ಸೆ ಪಡೆದರೆ ಇದರಿಂದ ಒಳಿತು ಕಾಣಬಹುದು ಎಂದು ತಿಳಿಸಿದರು.

      ಶುಚಿತ್ವ ಪಾಲನೆ ಮಾಡುವುದರಿಂದ ನಾವು ಅನೇಕ ಕಾಯಿಲೆಗಳಿಂದ ದೂರವಿರಬಹುದು ಕೆವಲ ಕೈಯನ್ನು ತೊಳೆದು ಶುಚಿತ್ವ ಪಾಲನೆ ಮಾಡುವುದರಿಂದ ಸುಮಾರು 50 ಕಾಯಿಲೆಗಳಿಂದ ದೂರ ಇರಬಹುದು ,ಏಳು ರೀತಿಯಾಗಿ ಕೈ ತೊಳೆದರೆಮಾತ್ರ ಅದು ಸಂಪೂರ್ಣ ಕೈ ತೊಳೆದಂತಗುತ್ತದೆ ಎಂದು ಶಾಲಾ ಮಕ್ಕಳಿಗೆ ತಿಳಿಸಿ ಅವರು ಯಾವ ರೀತಿಯಾಗಿ ಕೈ ತೊಳೆಯಬೇಕು ಎಂದು ತೊರಿಸಿದರು.

      ಶಾಲಾ ಮುಖ್ಯೋಪಾದ್ಯಯರಾದ ಹೆಚ್.ಎನ್. ಹೆಮಾವತಿ ಮಾತನಾಡಿ,ಶಾಲಾ ಅವರಣದಲ್ಲಿ ಇಂತಹ ಒಂದು ಜಾಗೃತಿ ಕಾರ್ಯಕ್ರಮ ಮಾಡುತ್ತಿರುವುದು ಸಂತಸದ ವಿಷಯವಾಗಿದೆ ಕಾರ್ಯಕ್ರಮದಲ್ಲಿ ಡಾಕ್ಟರ್ ತಿಳಿಸಿದ್ದನ್ನು ಶಾಲಾ ಮಕ್ಕಳಾದ ನೀವು ಪಾಲನೆ ಮಾಡುವುದರ ಜತೆಗೆ ನಿಮ್ಮ ಪೋಷಕರಿಗು ತಿಳಿಸಿ ಕೋಡಬೇಕು ಎಂದು ತಿಳಿಸಿದರು.

      ಕಾರ್ಯಕ್ರದಲ್ಲಿ ಗ್ರಾ.ಪಂ ಅಧ್ಯೆಕ್ಷೆ ಯಶೋದ ಗಂಗಾಧರ್,ಯಶಸ್ ಫೌಂಡೇಷನ್‍ನ ಕಾರ್ಯದರ್ಶಿ ಸುರೇಶ್, ಹಿರಿಯ ಮುಖಂಡ ಚಿಕ್ಕರಂಗಯ್ಯ,ಶಿಕ್ಷಕರಾದ ಮಂಜುನಾಥ್, ರೇಣುಕಾದೇವಿ, ಕರೆಗೌಡ,ಹರೀಶ್.ಜಿಎಸ್ ಮತ್ತು ಶಾಲಾ ಸಿಬ್ಬಂದಿಗಳು ಗ್ರಾಮಸ್ಥರು ಉಪಸ್ಥಿತರರಿದ್ದರು.

(Visited 340 times, 1 visits today)