ಕನ್ನಡ ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಶಾಸಕರ ಹಸ್ತಕ್ಷೇಪ : ಆರೋಪ

ತಿಪಟೂರು :       ತಾಲ್ಲೂಕು ಆಡಳಿತ ನೀಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಇಲ್ಲಿನ ಶಾಸಕರು ಬಿಜೆಪಿ ಕಾರ್ಯಕರ್ತರಿಗೆ ಹಾಗೂ ತಮ್ಮ ಹಿಂಬಾಲಕರಿಗೆ ನೀಡಿದ್ದು, ಪ್ರಶಸ್ತಿ ಆಯ್ಕೆಯಲ್ಲಿ ಸರಿಯಾದ ಮಾನದಂಡ ಬಳಕೆಯಾಗಿಲ್ಲ ಎಂದು ಜಯ ಕರ್ನಾಟಕ ಸಂಘಟನೆ ತಾ. ಅಧ್ಯಕ್ಷ ಬಿ.ಟಿ. ಕುಮಾರ್ ಗಂಭೀರ ಆರೋಪ ಮಾಡಿದರು.       ಈ ಸಂಬಂಧ ನಗರದಲ್ಲಿ ಗುರುವಾರ ಸಂಜೆ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಬಾರಿ ಎಲ್ಲಾ ಕ್ಷೇತ್ರಗಳನ್ನು ಗುರುತಿಸಿ ತಾಲ್ಲೂಕು ಆಡಳಿತದ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿತ್ತು. ಆದರೆ ಈ ಬಾರಿ ಕ್ರೀಡೆ, ಪತ್ರಿಕೋದ್ಯಮ, ವೈದ್ಯಕೀಯ, ಕನ್ನಡಪರ ಹೋರಾಟಗಾರ ಸೇರಿದಂತೆ ಮತ್ತಿತರ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಬಿಟ್ಟು ಕೇವಲ ಜಾತಿ ರಾಜಕಾರಣದ ಆಧಾರದ ಮೇಲೆ ತಾ. ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ಆಯ್ಕೆ ಸಂದರ್ಭದಲ್ಲಿ ಶಾಸಕರು ತಮಗೆ ಬೇಕಾದವರ ಹೆಸರನ್ನು ಸೇರಿಸಿ ಪ್ರಶಸ್ತಿ ನೀಡಲು…

ಮುಂದೆ ಓದಿ...

ಡಾ.ರಾಜ್‍ಕುಮಾರ್ ಹೆಬ್ಬಾಗಿಲು ಉದ್ಘಾಟನೆ

ಹುಳಿಯಾರು:       ಪಟ್ಟಣದ ಕರ್ನಾಟಕ ರತ್ನ ಡಾ.ರಾಜ್‍ಕುಮಾರ್ ಅಭಿಮಾನಿಗಳ ಬಳಗದ ವತಿಯಿಂದ ಡಾ.ರಾಜ್ ಕುಮಾರ್ ರಸ್ತೆಯಲ್ಲಿ 63 ನೇ ಕನ್ನಡ ರಾಜ್ಯೋತ್ಸವ ಹಾಗೂ ಡಾ.ರಾಜ್ ಕುಮಾರ್ ಹೆಬ್ಬಾಗಿಲು ಉದ್ಘಾಟನೆ ಕಾರ್ಯಕ್ರಮ ನಡೆಯಿತು.       ಪಿಎಸ್‍ಐ ವಿಜಯಕುಮಾರ್ ಹೆಬ್ಬಾಗಿಲು ಉದ್ಘಾಟಿಸಿ ಮಾತನಾಡಿ ಕನ್ನಡ ರಾಜ್ಯೋತ್ಸವ ಆಚರಿಸುವ ಮೂಲಕ ಕನ್ನಡಿಗರಲ್ಲಿ ಕನ್ನಡಾಭಿಮಾನ ಬೆಳೆಯುತ್ತಿದೆ. ರಾಜ್ಯೋತ್ಸವವೂ ಇಲ್ಲದಿದ್ದರೆ ಕನ್ನಡವೂ ಇಲ್ಲ ಅಭಿಮಾನವೂ ಇಲ್ಲ ಅನ್ನುವಂತಾಗುತ್ತಿತ್ತು. ನವೆಂಬರ್ ಮಾಹೆಯಲ್ಲಿ ಭಾಷೆ ಮೇಲೆ ಉಕ್ಕುವ ಪ್ರೀತಿ ವರ್ಷ ಪೂರ್ತಿ ಇದ್ದರೆ ಕನ್ನಡಕ್ಕೆ ಎಂದೆಂದೂ ಧಕ್ಕೆಯಾಗದು ಎಂದರಲ್ಲದೆ ಹುಳಿಯಾರಿನಲ್ಲಿ ಟೀ ಅಂಗಡಿ ಪರಪ್ಪ ಅವರಿಗಿರುವ ಕನ್ನಡಾಭಿಮಾನ ಇತರರಿಗೆ ಮಾಧರಿಯಾಗಿದೆ ಎಂದರಲ್ಲದೆ ರಾಜ್‍ಕುಮಾರ್ ಅಭಿಮಾನಿ ಬಳಗ ರಚಿಸಿಕೊಂಡು ದಾನಿಗಳ ನೆರವಿನಿಂದ ಹೆಬ್ಬಾಗಿಲು ನಿರ್ಮಾಣ ಮಾಡಿರುವುದು ಶ್ಲಾಘನೀಯ ಎಂದರು.       ಈ ಸಂದರ್ಭದಲ್ಲಿ ಕರ್ನಾಟಕ ರತ್ನ ಡಾ.ರಾಜಕುಮಾರ್ ಅಭಿಮಾನಿ ಬಳಗದ…

ಮುಂದೆ ಓದಿ...

ನ.10ರಂದು ಟಿಪ್ಪು ಜಯಂತಿ ಆಚರಣೆಗೆ ಸರ್ಕಾರ ನಿರ್ಧಾರ

ಬೆಂಗಳೂರು:        ನವೆಂಬರ್ 10ರಂದು ಟಿಪ್ಪು ಜಯಂತಿ ಆಚರಣೆಗೆ ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಅವರು ಶನಿವಾರ ಹೇಳಿದ್ದಾರೆ.        ಇಂದು ವಿಧಾನಸೌಧದಲ್ಲಿ ಟಿಪ್ಪು ಜಯಂತಿ ಆಚರಣೆ ಕುರಿತು ಸಭೆ ನಡೆಯಿತು. ಸಚಿವ ಜಮೀರ್ ಅಹಮದ್ ಕೂಡ ಸಭೆಯಲ್ಲಿ ಪಾಲಗೊಂಡಿದ್ದರು, ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಸಿಎಂ ಗೃಹ ಕಚೇರಿ ಕೃಷ್ಣಾಗೆ ತೆರಳಿ ಸಲ್ಲಿಸಲಾಯಿತು.       ನಿನ್ನೆಯಷ್ಟೇ ಕುಮಾರಸ್ವಾಮಿ ಟಿಪ್ಪು ಜಯಂತಿ ವಿಚಾರದ ಕುರಿತು ಮಾತನಾಡಿದ್ದು ಕಾಂಗ್ರೆಸ್ ಸರ್ಕಾರದಲ್ಲಿ ಆರಂಭಗೊಂಡು ಭಾರಿ ವಿವಾದ ಸೃಷ್ಠಿಸಿದ್ದ ಟಿಪ್ಪು ಜಯಂತಿಯನ್ನು ಕುಮಾರಸ್ವಾಮಿ ಸರ್ಕಾರ ಕೈಬಿಡುವುದಿಲ್ಲವೆಂದು  ಮುಖ್ಯಮಂತ್ರಿ ಅವರೇ ಸ್ಪಷ್ಟಪಡಿಸಿದ್ದರು.       ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಇದಕ್ಕೆ ಒಪ್ಪಿಗೆ ಸೂಚಿಸಿದ ಬಳಿಕ ಟಿಪ್ಪು ಆಚರಣೆ ಒಂದು ರೂಪ ಪಡೆದುಕೊಳ್ಳಲಿದೆ.     Share

ಮುಂದೆ ಓದಿ...

12 ಕೋಟಿ ಖಾತೆದಾರರ ಡಾಟಾ ಹ್ಯಾಕ್!!

ನವದೆಹಲಿ:        ಹನ್ನೆರಡು ಕೋಟಿ ಫೇಸ್ ಬುಕ್ ಬಳಕೆದಾರರ ಖಾಸಗಿ ಚಾಟ್ ಮಾಹಿತಿ ಸಹಿತ ಹಲವಾರು ವಿವರಗಳನ್ನು ಹ್ಯಾಕ್ ಮಾಡಿ ಅವುಗಳನ್ನು ಅಂತರ್ಜಾಲದಲ್ಲಿ ಮಾರಾಟಕ್ಕಿಡಲಾಗಿತ್ತು ಎಂದು ಬಿಬಿಸಿ ರಷ್ಯನ್ ಸರ್ವಿಸ್ ವರದಿ ಮಾಡಿದೆ. ಹ್ಯಾಕರ್ ಗಳು ಫೇಸ್ ಬುಕ್‍ನ 81,000 ಬಳಕೆದಾರರ ಖಾಸಗಿ ಮಾಹಿತಿಗಳನ್ನು ಬಿಡುಗಡೆಗೊಳಿಸಿದ್ದಾರೆಂದು ಹೇಳಲಾಗಿದೆ.       ಈ ಹ್ಯಾಕ್ ಆದ ವಿಚಾರ ಸೆಪ್ಟೆಂಬರ್ ತಿಂಗಳಲ್ಲಿ ಎಫ್‍ಬಿ ಸೇಲರ್ ಎಂಬ ಬಳಕೆದಾರ ಆಂಗ್ಲ ಭಾಷೆಯ ಅಂತರ್ಜಾಲ ವೇದಿಕೆಯಲ್ಲಿ ಜಾಹೀರಾತನ್ನು ಹಾಕಿ ಒಂದು ಫೇಸ್ ಬುಕ್ ಖಾತೆಯ ಡಾಟಾ ಮಾಹಿತಿಯನ್ನು ಹತ್ತು ಸೆಂಟ್ಸ್ ಗೆ ಒದಗಿಸುವುದಾಗಿ ಹೇಳಿದಾಗ ಬಹಿರಂಗಗೊಂಡಿತ್ತು. ಆದರೆ ಆ ಜಾಹೀರಾತು ಈಗ ಅಂತರ್ಜಾಲದಲ್ಲಿ ಕಾಣಿಸುತ್ತಿಲ್ಲ.       ತನ್ನ ಸೆಕ್ಯುರಿಟಿ ಫೀಚರ್ಸ್ ಸುರಕ್ಷಿತವಾಗಿದ್ದು, ಕೆಲವು ಶಂಕಾಸ್ಪದ ಬ್ರೌಸರ್ ಎಕ್ಸ್‍ಟೆನ್ಶನ್‍ಗಳ ಮುಖಾಂತರ ಈ ಮಾಹಿತಿಗಳನ್ನು ಹ್ಯಾಕ್ ಮಾಡಲಾಗಿದೆ ಎಂದು…

ಮುಂದೆ ಓದಿ...