ಸಿಎಂ ಕುಮಾರಸ್ವಾಮಿ ಜನ್ಮದಿನದಂದು 70 ಲಕ್ಷ ಮೌಲ್ಯದ ಕ್ರೀಡಾ ಸಾಮಗ್ರಿಗಳ ವಿತರಣೆ : ಡಿ ಸಿ ಗೌರೀಶಂಕರ್

ತುಮಕೂರು:       ತುಮಕೂರು-ಗ್ರಾಮಾಂತರ ಕ್ಷೇತ್ರವ್ಯಾಪ್ತಿಯ ಎಲ್ಲಾ ಸರ್ಕಾರಿ ಶಾಲೆಗಳಿಗೂ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಜನ್ಮದಿನದಂದು 70 ಲಕ್ಷ ಮೌಲ್ಯದ ಕ್ರೀಡಾ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸುವುದಾಗಿ ಗ್ರಾಮಾಂತರ ಶಾಸಕ ಡಿ ಸಿ ಗೌರೀಶಂಕರ್ ತಿಳಿಸಿದರು.       ಅವರು ಶುಕ್ರವಾರದಂದು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಗೂಳೂರು ಜಿಲ್ಲಾಪಂಚಾಯ್ತಿ ವ್ಯಾಪ್ತಿಯ ಅರೆಯೂರು, ದೊಮ್ಮನಕುಪ್ಪೆ,  ಗೊಲ್ಲರಹಟ್ಟಿ, ರೈತರ ಪಾಳ್ಯ ಗ್ರಾಮಗಳಲ್ಲಿ ಅಂಗನವಾಡಿ ಕಟ್ಟಡನಿರ್ಮಾಣಕ್ಕೆ ಶಂಕುಸ್ತಾಪನೆ. ಹರಳೂರು, ಗುಡಿಪಾಲಸಂದ್ರಗ್ರಾಮಗಳಲ್ಲಿ ಸಿ ಸಿ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ, ಗೂಳಹರಿವೆ,ಕೆ ಪಾಲಸಂದ್ರ,ಕಿತ್ತಗಾನಹಳ್ಳಿ,ಕರಡಿಗೆರೆ ಕಾವಲ್ ಸರ್ಕಾರಿಶಾಲಾ ಮಕ್ಕಳಿಗೆ ಸೈಕಲ್ ವಿತರಣೆ, ದೊಮ್ಮನಕುಪ್ಪೆ ಶಾಲಾ ಕಾಂಪೌಂಡ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.       ಮುಂದಿನ ತಿಂಗಳು ಡಿಸೆಂಬರ್ 16 ರಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರ ಜನ್ಮದಿನವಿದ್ದು ಅಂದು ಗ್ರಾಮಾಂತರ ಜೆಡಿಎಸ್ ಕಾರ್ಯಕರ್ತರು ಹಾಗು ನಾನು ವೈಯಕ್ತಿಕವಾಗಿ ದೇಣಿಗೆ ಹಾಕಿ ಗ್ರಾಮಾಂತರಕ್ಷೇತ್ರದ ಎಲ್ಲಾ…

ಮುಂದೆ ಓದಿ...

#Metoo ಅನುಭವ ನನಗೂ ಆಗಿದೆ ಎಂದ ಬಿ.ಜಯಶ್ರೀ

ತುಮಕೂರು:        ‘#Metoo ಅನುಭವ ನನಗೂ ಆಗಿದೆ. ನನ್ನ ಕಾಲದಲ್ಲಿ ಅದನ್ನು ಅನುಭವಿಸಿದ್ದೇನೆ. ನನ್ನ ಆತ್ಮಚರಿತ್ರೆ ‘ಕಣ್ಣಾಮುಚ್ಚೆ ಕಾಡೇಗೂಡೆ’ ಪುಸ್ತಕದಲ್ಲಿ ಹೇಳಿದ್ದೇನೆ’ ಎಂದು ಹಿರಿಯ ಕಲಾವಿದೆ ಬಿ.ಜಯಶ್ರೀ ಹೇಳಿದರು.       ನಗರದಲ್ಲಿ ಶುಕ್ರವಾರ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ‘ಮಿಟೂ ಅನುಭವ ವೈಯಕ್ತಿಕದಾದುದು. ಅದನ್ನು ಯಾಕೆ ಹೇಳಿಕೊಳ್ಳಬೇಕು ಎಂಬುದು ನನ್ನ ಪ್ರಶ್ನೆ. ಏನಾದರೂ ಆಗಿದ್ದರೆ ಇಬ್ಬರಿಗೆ ಮಾತ್ರ ಗೊತ್ತಿರುತ್ತದೆ’ ಎಂದು ಹೇಳಿದರು.       ‘ಮಿಟೂಗೆ ಸಂಬಂಧಿಸಿದಂತೆ ಎಷ್ಟರ ಮಟ್ಟಿಗೆ ಸಾಕ್ಷಿ ಒದಗಿಸುತ್ತೀರಿ ಎಂಬುದೇ ಪ್ರಶ್ನೆಯಾಗಿದೆ. ಉದಾಹರಣೆಗೆ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ಎಷ್ಟೊಂದು ಪ್ರಶ್ನೆ ಕೇಳ್ತಾರೆ. ಅದಕ್ಕೆ ಉತ್ತರಿಸುವಾಗ ಸಾಕಷ್ಟು ನೋವು ಆಗುತ್ತದೆಯಲ್ಲವೆ’ ಎಂದು ಹೇಳಿದರು.       ‘ಅಭಿಪ್ರಾಯ ಸ್ವಾತಂತ್ರ್ಯದ ಹೆಸರಿನಲ್ಲಿ ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮನಸೋ ಇಚ್ಛೆ ಹೇಳಿಕೊಳ್ಳಲಾಗುತ್ತಿದೆ. ಹೀಗೆ…

ಮುಂದೆ ಓದಿ...

ಅಧಿಕಾರಿಗಳು ಸರ್ಕಾರದ ಸೌಲಭ್ಯಗಳನ್ನ ತಲುಪಿಸುವಲ್ಲಿ ವಿಫಲಗೊಂಡಿದ್ದಾರೆ : ಸಂಸದ ಡಿ.ಕೆ.ಸುರೇಶ್

ಕುಣಿಗಲ್:       ಮನುಷ್ಯ ಹುಟ್ಟಿನಿಂದ ಸಾವಿನವರೆಗೂ ಸರ್ಕಾರ ವಿವಿಧ ಸೌಲಭ್ಯಗಳನ್ನ ರೈತರಿಗೆ,ಬಡವರಿಗೆ,ಶೋಷಿತರಿಗೆ ನೀಡುತ್ತಿದ್ದರೂ ಸಹ ಅಧಿಕಾರಿಗಳು ತಲುಪಿಸುವಲ್ಲಿ ವಿಫಲಗೊಂಡಿದ್ದಾರೆ ಎಂದು ಬೆಂ.ಗ್ರ್ರಾ.ಸಂಸದ ಡಿ.ಕೆ.ಸುರೇಶ್ ತಿಳಿಸಿದರು.       ತಾಲ್ಲೂಕಿನ ಹುಲಿಯೂರುದುರ್ಗದಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯ್ತಿ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜನಸಂಪರ್ಕ ಸಭೆಯಲ್ಲಿ ಮಾತನಾಡುತ್ತಾ,ಸರ್ಕಾರ ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ಹಲವಾರು ಸೌಲಭ್ಯಗಳನ್ನ ನೀಡುತ್ತಿದ್ದರೂ ಸಹ ಅಧಿಕಾರಿಗಳು ಈ ವರ್ಗಧ ಜನರಿಗೆ ಸಮರ್ಪಕವಾಗಿ ತಲುಪಿಸಲು ಆಗುತ್ತಿಲ್ಲ.ಈ ಬಗ್ಗೆ ಜಿಲ್ಲಾಡಳಿತ ಕೂಡಲೇ ಕ್ರಮ ತೆಗೆದುಕೊಂಡು ವಿವಿಧ ಸೌಲಭ್ಯಗಳನ್ನ ರೈತರಿಗೆ,ಬಡವರಿಗೆ ತಲುಪಿಸುವಂತಹ ಕಾರ್ಯವನ್ನ ಕೈಗೊಳ್ಳಬೇಕಾಗಿದೆ. ಗ್ರ್ರಾಮ ಪಂಚಾಯ್ತಿಗಳಲ್ಲಿ ಈಗಾಗಲೇ ಶುದ್ಧ ನೀರಿನ ಘಟಕಗಳನ್ನ ಆರಂಭಿಸಿದ್ದು,ಇವುಗಳ ನಿರ್ವಹಣೆಯನ್ನ ಪಂಚಾಯ್ತಿಗಳು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದರು.        ಕುಣಿಗಲ್ ತಾಲ್ಲೂಕಿಗೆ ಹೇಮಾವತಿ ನೀರನ್ನ ವೈ.ಕೆ.ರಾಮಯ್ಯ ಹುಚ್ಚಮಾಸ್ತಿಗೌಡ ಸೇರಿದಂತೆ ಹಲವಾರು ಹೋರಾಟಗಾರರು ತಾಲ್ಲೂಕಿಗೆ ಹೇಮಾವತಿ ನೀರು ತೆಗೆದುಕೊಂಡು ಹೋಗಿರುತ್ತಾರೆ,ನಮ್ಮ ಪಾಲಿನ ಹಕ್ಕಿನ…

ಮುಂದೆ ಓದಿ...

ಅಪಘಾತ : ಶಾಲಾ ವಾಹನ ಚಾಲಕನಿಗೆ ಗಾಯ

ಕೊರಟಗೆರೆ:        ಕಾರು ಚಾಲಕನ ಅಡ್ಡಾದಿಡ್ಡಿ ಚಾಲನೆಯಿಂದ ಹಾಲಿನ ಲಾರಿ ಮತ್ತು ಶಾಲಾ ವಾಹನದ ನಡುವೆ ಅಪಘಾತ ಆಗಿ ಶಾಲಾ ವಾಹನ ಚಾಲಕನಿಗೆ ಪೇಟ್ಟಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಗುರುವಾರ ಮುಂಜಾನೆ ನಡೆದಿದೆ.       ತಾಲೂಕಿನ ಕಸಬಾ ಹೋಬಳಿ ವಡ್ಡಗೆರೆ ಗ್ರಾಪಂ ವ್ಯಾಪ್ತಿಯ ಯಾದಗೆರೆ ಗ್ರಾಮದ ಸಮೀಪದ ಸೇಂಟ್ ಮೇರಿಸ್ ಪಬ್ಲಿಕ್ ಸ್ಕೂಲ್‍ನ ಶಾಲಾ ವಾಹನದ ಚಾಲಕನಿಗೆ ತೀರ್ವವಾಗಿ ತಲೆಗೆ ಪೆಟ್ಟಾಗಿ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತೀದ್ದಾರೆ. ಶಾಲಾ ವಾಹನದಲ್ಲಿದ್ದ ಓರ್ವ ವಿದ್ಯಾರ್ಥಿಗೆ ಯಾವುದೇ ರೀತಿಯ ಗಾಯ ಆಗದೇ ಪ್ರಾಣಪಾಯದಿಂದ ಪಾರಾಗಿದ್ದಾನೆ.       ತುಮಕೂರು ಕಡೆಯಿಂದ ಬಂದ ಹಾಲಿನ ವಾಹನ ಮತ್ತು ಕೊರಟಗೆರೆ ಕಡೆಯಿಂದ ವಿದ್ಯಾರ್ಥಿಗಳನ್ನು ಕರೆತರಲು ಬೆಳಧರ ಹೋಗುವ ವೇಳೆ ಅಡ್ಡದಿಡ್ಡಿಯಾಗಿ ಕಾರು ಚಲಾಯಿಸಿಕೊಂಡು ಬಂದ ವೇಳೆ ಅಪಘಾತ ವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.  …

ಮುಂದೆ ಓದಿ...

ಶಾಲಾ ಕೊಠಡಿಗಳಿಗೆ ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ವರ್ಗಾವಣೆ : ಓದುಗರಿಂದ ವ್ಯಾಪಕ ವಿರೋಧ

ಚಿಕ್ಕನಾಯಕನಹಳ್ಳಿ :     ಗ್ರಾಮ ಪಂಚಾಯಿತಿ ಗ್ರಂಥಾಲಯಗಳನ್ನು ಖಾಲಿ ಇರುವ ಶಾಲಾ ಕಟ್ಟಡಗಳಿಗೆ ಸ್ಥಳಾಂತರಿಸಲು ಗ್ರಂಥಾಲಯ ಇಲಾಖೆ ಹೊರಡಿಸಿರುವ ಆದೇಶಕ್ಕೆ ಓದುಗರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.       ತಾಲ್ಲೂಕಿನ 23 ಗ್ರಾಮ ಪಂಚಾಯಿತಿ ಗ್ರಂಥಾಲಯಗಳನ್ನು ಪಂಚಾಯಿತಿ ವ್ಯಾಪ್ತಿಯಲ್ಲಿ ಖಾಲಿ ಇರುವ ಶಾಲಾ ಕೊಠಡಿಗಳಿಗೆ ಸ್ಥಳಾಂತರಿಸಲು ಶಿಕ್ಷಣ ಇಲಾಖೆ ಒಪ್ಪಿಗೆ ನೀಡಿದೆ, 7 ಪಂಚಾಯಿತಿಗಳಲ್ಲಿ ಮಾತ್ರ ಶಾಲಾ ಕೊಠಡಿಗಳ ಲಭ್ಯತೆ ಇಲ್ಲದೆ ಇರುವುದರಿಂದ ಗ್ರಂಥಾಲಯಗಳನ್ನು ಇರುವ ಕಛೇರಿಯಲ್ಲೇ ಮುಂದುವರೆಸಲು ತೀರ್ಮಾನಿಸಲಾಗಿದೆ.       ಇಲಾಖೆಯ ಆದೇಶದಲ್ಲಿ ಪಂಚಾಯಿತಿ ವ್ಯಾಪ್ತಿಯ ಯಾವುದೇ ಊರುಗಳಲ್ಲಿ ಖಾಲಿ ಶಾಲಾ ಕೊಠಡಿ ಗುರುತಿಸಿ ಗ್ರಂಥಾಲಯ ಸ್ಥಳಾಂತರಿಸುವ ಅವಕಾಶ ಕಲ್ಪಿಸಲಾಗಿದೆ, ಇದರಿಂದ ಈಗಾಗಲೇ ಗ್ರಂಥಾಲಯ ಹೊಂದಿರುವ ಕೆಲವು ಪಂಚಾಯ್ತಿ ಕಛೇರಿಗಳು ಗ್ರಂಥಾಲಯವನ್ನು ಕಳೆದುಕೊಳ್ಳುವಂತಾಗಿದೆ, ಅಲ್ಲದೆ ಜನಸಾಂದ್ರತೆ ಇಲ್ಲದ ಕುಗ್ರಾಮಗಳಿಗೆ ಗ್ರಂಥಾಲವನ್ನು ಸ್ಥಳಾಂತರಿಸಲಾಗಿದ್ದು ಇದರಿಂದ ಪುಸ್ತಕ ಪ್ರೇಮಿಗಳು ಆಕ್ರೋಶಗೊಂಡಿದ್ದಾರೆ.    …

ಮುಂದೆ ಓದಿ...

ಅಕ್ರಮ ಮರಳು ಸಾಗಾಣೆ ಲಾರಿ ವಶ

 ಕೊರಟಗೆರೆ:       ಅಕ್ರಮವಾಗಿ ಮರಳು ಶೇಖರಣೆ ಮತ್ತು ಸಾಗಾಣಿಕೆ ಮಾಡುತ್ತೀದ್ದ ಮರಳು ಅಡ್ಡೆಯ ಮೇಲೆ ದಾಳಿ ನಡೆಸಿದ ಪಿಎಸೈ ಮಂಜುನಾಥ ನೇತೃತ್ವದ ಪೊಲೀಸರ ತಂಡ 2ಟ್ರಾಕ್ಟರ್ ಮತ್ತು 1ಲಾರಿಯನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುವ ಘಟನೆ ಗುರುವಾರ ನಡೆದಿದೆ.       ತಾಲೂಕಿನ ಚನ್ನರಾಯನದುರ್ಗ ಹೋಬಳಿ ತೋವಿನಕೆರೆ ಗ್ರಾಪಂ ವ್ಯಾಪ್ತಿಯ ಬೋರಪ್ಪನಹಟ್ಟಿ ಸಮೀಪದ ಗೋಬಲಗುಟ್ಟೆ ಕೆರೆಯ ಮರಳನ್ನು ಟ್ರಾಕ್ಟರ್ ಮೂಲಕ ಮರಳು ಸಾಗಾಣಿಕೆಯ ಮೂಲಕ ಬೋರಪ್ಪನಹಟ್ಟಿ ಸರಕಾರಿ ಶಾಲೆಯ ಹಿಂಭಾಗ ಮರಳು ಶೇಖರಣೆ ಮಾಡಿದ ಮರಳನ್ನು ಲಾರಿಯ ಮೂಲಕ ಬೆಂಗಳೂರಿಗೆ ಸಾಗಾಣಿಕೆ ಮಾಡುತ್ತೀದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.       ಮರಳು ಸಾಗಾಣಿಕೆಯಲ್ಲಿ ತೊಡಗಿದ್ದ ಬೋರಪ್ಪನಹಟ್ಟಿಯ ಗಿರೀಶ್ ಮತ್ತು ಗಟ್ಲಹಳ್ಳಿಯ ಮೋಹನ್ ಎಂಬುವರನ್ನು ಬಂಧಿಸಿದ್ದಾರೆ. ದಾಳಿಯಲ್ಲಿ ಪೊಲೀಸ್ ಇಲಾಖೆಯ ಸದಾನಂದ, ರಾಜಶೇಖರ್, ರಂಗನಾಥ, ಸಿದ್ದಲಿಂಗಪ್ರಸನ್ನ, ಕಿರಣ್ ಇದ್ದರು. ಕೊರಟಗೆರೆ ಪೊಲೀಸ್…

ಮುಂದೆ ಓದಿ...

ಶಾಲಾ ಕೊಠಡಿಗಳಿಗೆ ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ವರ್ಗಾವಣೆ

  ಹುಳಿಯಾರು:       ಗ್ರಾಮ ಪಂಚಾಯಿತಿ ಗ್ರಂಥಾಲಯಗಳನ್ನು ಖಾಲಿ ಇರುವ ಶಾಲಾ ಕಟ್ಟಡಗಳಿಗೆ ಸ್ಥಳಾಂತರಿಸಲು ಗ್ರಂಥಾಲಯ ಇಲಾಖೆ ಆದೇಶ ಹೊರಡಿಸಿದೆ.       ಇಲಾಖೆಯ ಆದೇಶದಲ್ಲಿ ಪಂಚಾಯಿತಿ ವ್ಯಾಪ್ತಿಯ ಯಾವುದೇ ಊರುಗಳಲ್ಲಿ ಖಾಲಿ ಶಾಲಾ ಕೊಠಡಿ ಗುರುತಿಸಿ ಗ್ರಂಥಾಲಯ ಸ್ಥಳಾಂತರಿಸುವ ಅವಕಾಶ ಕಲ್ಪಿಸಲಾಗಿದೆ, ಇದರಿಂದ ಈಗಾಗಲೇ ಗ್ರಂಥಾಲಯ ಹೊಂದಿರುವ ಕೆಲವು ಪಂಚಾಯಿತಿ ಕಚೇರಿಗಳು ಗ್ರಂಥಾಲಯವನ್ನು ಕಳೆದುಕೊಳ್ಳುವಂತಾಗಿದೆ.       ತಾಲ್ಲೂಕಿನ 23 ಗ್ರಾಮ ಪಂಚಾಯಿತಿಯ ಗ್ರಂಥಾಲಯಗಳನ್ನು ಪಂಚಾಯಿತಿ ವ್ಯಾಪ್ತಿಯಲ್ಲಿ ಖಾಲಿ ಇರುವ ಶಾಲಾ ಕೊಠಡಿಗಳಿಗೆ ಸ್ಥಳಾಂತರಿಸಲು ಶಿಕ್ಷಣ ಇಲಾಖೆ ಒಪ್ಪಿಗೆ ನೀಡಿದೆ. 7 ಪಂಚಾಯಿತಿಗಳಲ್ಲಿ ಪಂಚಾಯಿತಿ ಕಟ್ಟಡದಲ್ಲಿ ಗ್ರಂಥಾಲಯಗಳನ್ನು ಮುಂದುವರಿಸಲಾಗಿದೆ. 10 ಪಂಚಾಯಿತಿ ಕೇಂದ್ರಗಳಲ್ಲಿ ಖಾಲಿ ಶಾಲಾ ಕೊಠಡಿ ಸಿಗದೆ ಜನ ಸಾಂದ್ರತೆ ಇಲ್ಲದ ಕುಗ್ರಾಮಗಳಿಗೆ ಗ್ರಂಥಾಲಯಗಳನ್ನು ವರ್ಗಾಯಿಸಲಾಗಿದೆ.       ಬರಕನಾಳು ಪಂಚಾಯಿತಿಯ ಗ್ರಂಥಾಲಯವನ್ನು ಸಂಗೇನಹಳ್ಳಿಗೆ, ಹೊಯ್ಸಳಕಟ್ಟೆ ಪಂಚಾಯಿತಿ…

ಮುಂದೆ ಓದಿ...

ಪದ್ಯ ಹೇಳಲಿಲ್ಲವೆಂದು ಬಾಸುಂಡೆ ಬರುವಂತೆ ಬಾರಿಸಿದ ಶಿಕ್ಷಕಿ

ಮಧುಗಿರಿ :       ಶಾಲೆಯಲ್ಲಿ ಹೇಳಿದ ಕೆಲಸ ಮಾಡಲಿಲ್ಲವೆಂದು ಶಿಕ್ಷಕಿಯೊಬ್ಬರು ವಿದ್ಯಾರ್ಥಿಗೆ ಮನಸೋ ಇಚ್ಛೆ ಥಳಿಸಿರುವ ಘಟನೆ ತಾಲೂಕಿನ ಬ್ಯಾಲ್ಯ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.      ಬ್ಯಾಲ್ಯ ಗ್ರಾಮದ ಶ್ರೀನಿವಾಸ್ ಮತ್ತು ಸೌಮ್ಯರವರ ಮಗನಾದ ನಂದೀಶ್ ಶಿಕ್ಷಕಿಯ ಹೊಡೆತದಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದು, ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾನೆ.       ನಂದೀಶ್ ಎಂಬ ಬಾಲಕ ಇಂಗ್ಲಿಂಷ್ ಪದ್ಯ, ಇಂಗ್ಲಿಷ್ ಪದ್ಯ ಹಾಗೂ ಎಬಿಸಿಡಿ ಹೇಳದಿದ್ದಾಗ ಕೋಪಗೊಂಡ ಶಿಕ್ಷಕಿ ಬಾಲಕನಿಗೆ ಬೆತ್ತದಿಂದ ಹಿಗ್ಗಾಮುಗ್ಗ ಥಳಿಸಿದ್ದಾರೆ. ಬಾಲಕ ನಂದೀಶ್ ಮೇಲೆ ಬರೆಗಳು ಬಿದ್ದಿವೆ ಎಂದು ನಂದೀಶ್ ತಾಯಿ ಹೇಳಿದ್ದಾರೆ. ಶಿಕ್ಷಕಿ ಇದೇ ರೀತಿ ಹಲವು ವಿದ್ಯಾರ್ಥಿಗಳಿಗೆ ಥಳಿಸಿದ್ದಾರೆ ಎಂದು ಪಾಲಕರು ಆರೋಪಿಸಿದ್ದಾರೆ.

ಮುಂದೆ ಓದಿ...

ಜನ ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವಲ್ಲಿ ಅಧಿಕಾರಿಗಳು ಮೀನಾಮೇಷ

ಪಾವಗಡ:       ದಾಖಲೆ ರಹಿತ ಜನ ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವಂತೆ ಸರ್ಕಾರ ಕಾನೂನು ಮಾಡಿದ್ದರೂ ಅದನ್ನು ಅನುಷ್ಠಾನ ಗೊಳಿಸುವಲ್ಲಿ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿರುವುದು ಸರಿಯಲ್ಲ ಎಂದು ಮಾಜಿ ಸಚಿವ ಶಂಕರಮೂರ್ತಿ ನಾಯಕ ಅರೋಪಿಸಿದ್ದಾರೆ.       ಅವರು ಪಾವಗಡ ನಿರೀಕ್ಷಣಾ ಮಂದಿರದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಾ, ಇದೊಂದು ಐತಿಹಾಸಿಕ ಕಾಯ್ದೆ. ರಾಜ್ಯದಲ್ಲಿರುವ 68 ಸಾವಿರ ಜನವಸತಿ ಪ್ರದೇಶಗಳನ್ನು ಈ ಕಾಯ್ದೆ ಕೆಳಗೆ ತರುವ ಮೂಲಕ ಅವರ ಪ್ರದೇಶಗಳಿಗೆ ತನ್ನದೇ ಆದ ಅಸ್ತಿತ್ವ ನೀಡುವ ಮೂಲಕ ಅವರ ಅಭಿವೃದ್ಧಿಗೆ ಮೂಲಭೂತ ಸೌಲಭ್ಯಗ¼ನ್ನು ಹೊಂದಲು ಅನುವು ಮಾಡಿಕೊಡಬೇಕು ಎಂಬುದೇ ಈ ಕಾಯ್ದೆಯ ಉದ್ದೇಶವಾಗಿದೆ. ಇದುವರೆಗೂ ಈ ಜನವಸತಿ ಪ್ರದೇಶಗಳ ಹೆಸರಲ್ಲಿ ಯಾವುದೇ ಸರ್ಕಾರಿ ಸೌಲಭ್ಯಗಳು ಮುಂಜೂರಾಗುತ್ತಿಲ್ಲ. ಬೇರೆ ಪ್ರದೇಶಕ್ಕೆ ಮಂಜೂರು ಆಗಿ ಅವರು ಕೊಟ್ಟದನ್ನು ಪಡೆಯಬೇಕಿದೆ. ಕಂದಾಯ ಗ್ರಾಮದ ಮಾನ್ಯತೆ ಸಿಕ್ಕಲ್ಲಿ…

ಮುಂದೆ ಓದಿ...

ಮಹರ್ಷಿ ವಾಲ್ಮೀಕಿ ಸರ್ವಜನಾಂಗಗಳು ಪೂಜಿಸುವ ವ್ಯಕ್ತಿ

  ಪಾವಗಡ :       ಮಹರ್ಷಿ ವಾಲ್ಮೀಕಿ ಒಂದು ಸಮಾಜಕ್ಕೆ ಸಿಮಿತವಾಗದೆ ಸರ್ವಜನಾಂಗಗಳು ಪೂಜಿಸುವ ವ್ಯಕ್ತಿ ಮಹರ್ಷಿ ವಾಲ್ಮೀಕಿ ಎಂದು ಶಿಡ್ಲಕೋಣ ವಾಲ್ಮೀಕಿ ಸಂಸ್ಥಾನದ ಸಂಜಯ್ ಕುಮಾರ್ ಸ್ವಾಮಿಜಿ ತಿಳಿಸಿದರು.        ಪಾವಗಡ ತಾಲ್ಲೂಕು ನಾಗಲಮಡಿಕೆ ಗ್ರಾಮದಲ್ಲಿ ಶುಕ್ರವಾರ ಮಹರ್ಷಿ ವಾಲ್ಮೀಕಿ ವಿಗ್ರಹ ಪ್ರತಿಷ್ಠಾಪನೆ ನೆರವೇರಿಸಿ ಮಾತನಾಡಿದ ಅವರು, ವಿಶ್ವದಲ್ಲೇ ಮಹರ್ಷಿ ವಾಲ್ಮೀಕಿ ರಾಮಾಯಣ ಅತ್ಯುತ್ತಮ ಹಿಂದೂ ಧರ್ಮದ ಗ್ರಂಥವಾಗಿದೆ. ಪೂಜನೀಯ ಗ್ರಂಥವಾಗಿದೆ ಎಲ್ಲರ ಸಮಸ್ಯೆಗಳಿಗೆ ಎಲ್ಲಾ ಕಾಲಕ್ಕೂ ಪರಿಹರಿಸಬಲ್ಲ ಶಕ್ತಿ ಈ ಗ್ರಂಥಕ್ಕೆ ಇದೆ ಎಂಬುದು ಎಲ್ಲರೂ ಕಂಡುಕೊಂಡಿರುವ ಸತ್ಯವಾಗಿದೆ ಎಂದರು.      ಒಂದೇ ಜಾತಿಗೆ ವಾಲ್ಮೀಕಿ ಸೀಮಿತವಾಗಿದೆ ಸರ್ವಜನಾಂಗಳ ಆರಾಧಕನಾಗಿರುವುದು ನಾಯಕ ಸಮಾಜಕ್ಕೆ ಹೆಮ್ಮೆಯ ಸಂಗತಿಯಾಗಿದೆ. ರಾವi ರಾಜ್ಯದ ಪರಿಕಲ್ಪನೆಯನ್ನು ರಾಮಾಯಣದಲ್ಲಿ ಮಹರ್ಷಿ ಉಲ್ಲೇಖಿಸಿದ ಕಾರಣದಿಂದ ಮಹಾತ್ಮ ಗಾಂಧೀಜಿಯವರು ಭಾರತ ದೇಶಕ್ಕೆ ರಾವiರಾಜ್ಯದ ಪರಿಕಲ್ಪನೆಗೆ ಒತ್ತು ನೀಡಿದರು…

ಮುಂದೆ ಓದಿ...