ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ

ಕುಣಿಗಲ್:       ತಾಲ್ಲೂಕಿನ ಗ್ರಾಮ ಪಂಚಾಯಿತಿ ನೌಕರರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ತಾಪಂ ಮುಂಭಾಗ ಪ್ರತಿಭಟನೆ ನಡೆಸಿದರು .       ತಾಲ್ಲೂಕಿನ ಗ್ರಾಮ ಪಂಚಾಯಿತಿ ನೌಕರರು ತಾಪಂ ಆವರಣದಲ್ಲಿ ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷ ನಾಗೇಶ್ ಮತ್ತು ಶ್ರೀನಿವಾಸ್ ನೇತೃತ್ವದಲ್ಲಿ ಜಮಾವಣೆಗೊಂಡ ಗ್ರಾಪಂ ನೌಕರರು ಸುಮಾರು ವರ್ಷಗಳಿಂದ ಗ್ರಾಮ ಪಂಚಾಯಿತಿಗಳಲ್ಲಿ ದುಡಿಯುತ್ತಿರುವ ನೌಕರರಿಗೆ ಅನ್ಯಾಯವಾಗಿದೆ ಸರ್ಕಾರದ ಆದೇಶದಂತೆ ಸಂಬಳ, ನಿವೃತ್ತಿ ಮರಣೋತ್ತರ ಉಪಧನ, ಹಾಗೂ ಬಿಲ್ ಕಲೆಕ್ಟರ್, ಮತ್ತು ಡಾಟಾ ಎಂಟ್ರಿ ಆಪರೇಟರ್ಗಳ ಜೇಷ್ಠತಾ ಪಟ್ಟಿಯನ್ನು ಜಿಪಂಗೆ ರವಾನಿಸಬೇಕು,ಬಾಕಿ ಉಳಿದುಕೊಂಡಿರುವ ವೇತನವನ್ನು ನೀಡಲು ಪಿಡಿಒಗಳಿಗೆ ಆದೇಶ ನೀಡಬೇಕು, ಖಾಲಿ ಇರುವ ಬಿಲ್ ಕಲೆಕ್ಟರ್ ಹುದ್ದೆಗೆ ನೌಕರರನ್ನು ಕೂಡಲೇ ಭರ್ತಿ ಮಾಡಬೇಕು ,ಸರ್ಕಾರದ ಆದೇಶದಂತೆ ನೌಕರರ ವಿವರಗಳನ್ನು ಪಂಚತಂತ್ರದಲ್ಲಿ ಅಳವಡಿಸಲು ಪಿಡಿಒ ಹಾಗೂ ಇಒ ರವರು ಕ್ರಮ ವಹಿಸಬೇಕು,ಇನ್ನು ಹತ್ತು…

ಮುಂದೆ ಓದಿ...

ಕುಡಿವ ನೀರಿಗೆ ತೊಂದರೆ ಆಗದಂತೆ ಮಾಸ್ಟರ್ ಪ್ಲಾನ್ ತಯಾರಿಸಿ : ಶಾಸಕ ಎಂ.ವಿ.ವೀರಭದ್ರಯ್ಯ

ಮಧುಗಿರಿ :       ತಾಲೂಕಿನಲ್ಲಿ ಮಳೆ ಬೀಳದೆ ಬೇಸಿಗೆಕಾಲ ಬೀಕರವಾಗಿದ್ದು ಅಂತರ್ಜಲ ಸಂಪೂರ್ಣ ಕುಸಿದಿರುವುದರಿಂದ ಜನ, ಜಾನುವಾರುಗಳಿಗೆ ಕುಡಿವ ನೀರಿಗೆ ತೊಂದರೆ ಆಗದಂತೆ ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಪುರಸಭೆ ಹಾಗೂ ನಿರಾವರಿ ಇಲಾಖೆಯ ಅಧಿಕಾರಿಗಳು ಒಂದು ಮಾಸ್ಟರ್ ಪ್ಲಾನ್ ತಯಾರಿಸಿ ಮುನ್ನಚ್ಚರಿಕೆ ಕ್ರಮ ಕೈಗೊಳ್ಳುವಂತೆ ಶಾಸಕ ಎಂ.ವಿ.ವೀರಭದ್ರಯ್ಯ ಸಲಹೆ ನೀಡಿದರು.       ಶನಿವಾರ ಮಧುಗಿರಿ ಪುರಸಭೆಯಲ್ಲಿ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ವತಿಯಿಂದ ಆಯೋಜಿಸಿದ್ದ ಪೌರ ಕಾಮಿರ್ರಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.       ಈ ಬಾರಿ ಸಕಾಲದಲ್ಲಿ ಮಳೆ ಬಾರದೆ ಜಲ ಮೂಲಗಳಾದ ಕೆರೆ, ಕಟ್ಟೆಗಳು ಬತ್ತಿದ್ದು, ಕೊಳವೆ ಬಾವಿಗಳಲ್ಲಿ ನೀರು ಸಿಗದ ಕಾರಣ ಮತ್ತು ಈಗ ಸಿಗುವ ನೀರನ್ನೇ ಸಮರ್ಪಕವಾಗಿ ವಿತರಿಸುವ ಮೂಲಕ ಕುಡಿವ ನೀರಿಗೆ ಜನ, ಜಾನುವಾರುಗಳಿಗೆ…

ಮುಂದೆ ಓದಿ...

ಬೆಳೆ ವಿವರ ಪರಿಶೀಲನೆಗೆ “ಬೆಳೆ ದರ್ಶಕ್” ಆ್ಯಪ್

 ತುಮಕೂರು :       ಜಿಲ್ಲೆಯ ರೈತರು “ಬೆಳೆ ದರ್ಶಕ್” ಮೊಬೈಲ್ ಆ್ಯಪ್ ಮೂಲಕ ಮುಂಗಾರು ಋತುವಿನಲ್ಲಿ ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ಪರಿಶೀಲಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.       ಜಿಲ್ಲೆಯಲ್ಲಿ 2018ರ ಮುಂಗಾರು ಋತುವಿನಲ್ಲಿ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳ ಮಾಹಿತಿಯನ್ನು ಸ್ಥಳೀಯ ವಿದ್ಯಾವಂತ ಯುವಕರನ್ನು ತೊಡಗಿಸಿಕೊಂಡು, ಮೊಬೈಲ್ ತಂತ್ರಾಂಶದ ಮೂಲಕ ಈಗಾಗÀಲೇ ಸಂಗ್ರಹಿಸಲಾಗಿದೆ. ಸಂಗ್ರಹಿತ ಮಾಹಿತಿಯನ್ನು ತಾಲ್ಲೂಕು ಆಡಳಿತವು ಈಗಾಗಲೇ ಪರಿಶೀಲಿಸುತ್ತಿದೆ.       ಸರ್ಕಾರವೂ ಸಹ ಬೆಳೆಗಳ ಮಾಹಿತಿಯನ್ನು ಬೆಳೆ ವಿಮೆ, ಕನಿಷ್ಠ ಬೆಂಬಲ ಬೆಲೆ, ಬೆಳೆ ನಷ್ಟ ಪರಿಹಾರ ಇತ್ಯಾದಿ ಯೋಜನೆಗಳಲ್ಲಿ ಉಪಯೋಗಿಸುವ ಸಾಧ್ಯತೆಯ ಬಗ್ಗೆ ಪರಿಶೀಲಿಸುತ್ತಿದ್ದು, ಸರ್ಕಾರವು ದಾಖಲಿಸಿರುವ ಈ ಮಾಹಿತಿಯನ್ನು ರೈತರು ಪರಿಶೀಲಿಸಿಕೊಳ್ಳುವುದು ಅತಿ ಮಹತ್ವದ್ದಾಗಿರುತ್ತದೆ. ಈ ಹಿನ್ನಲೆಯಲ್ಲಿ ಆಯಾ ತಾಲ್ಲೂಕು ವ್ಯಾಪ್ತಿಯ…

ಮುಂದೆ ಓದಿ...

ಹೆಣ್ಣುಮಕ್ಕಳಿಗೆ ಉದ್ಯೋಗ ಒದಗಿಸುವ ವಲಯಗಳಲ್ಲಿ ಸಿಂಹ ಪಾಲು ಗಾರ್ಮೆಂಟ್ಸ್ ಗಳದ್ದು”

  ತುಮಕೂರು :      ಇಂದು ನಗರದ ಸಮರ್ಥ್ ಫೌಂಡೇಷನ್ ಕೌಶಲ್ಯಾಭಿವೃಧ್ಧಿ ಮತ್ತು ತರಬೇತಿ ಕೇಂದ್ರದಲ್ಲಿ ಜವಳಿ ಮತ್ತು ಕೈಮಗ್ಗ ಇಲಾಖೆಯಿಂದ ನಡೆಯುತ್ತಿರುವ ಉಚಿತ ಟೈಲರಿಂಗ್ ತರಬೇತಿಯ ಶಿಬಿರಾರ್ಥಿಗಳಿಗಾಗಿ ತುಮಕೂರಿನ ಭೀಮಸಂದ್ರದಲ್ಲಿ ಇರುವ ಷಾಹಿ  ಗಾರ್ಮೆಂಟ್ಸ್ ನ ಅಧಿಕಾರಿಗಳೊಂದಿಗೆ ಸಂವಾದ ಕಾರ್ಯಕ್ರಮವವನ್ನು ಏರ್ಪಡಿಸಲಾಗಿತ್ತು.       ಸಂವಾದ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಆಗಮಿಸಿದ್ದ ಷಾಹಿ ಗಾರ್ಮೆಂಟ್ಸ್‍ನ ಮಾನವ ಸಂಪನ್ಮೂಲ ಅಧಿಕಾರಿಯಾದ ಲೋಕೇಶ್ ರವರು ಮಾತನಾಡುತ್ತಾ. ಒಬ್ಬ ಹೆಣ್ಣು ಮಗಳಿಂದ ಪ್ರಾರಂಭವಾದ ಪುಟ್ಟ ಕಂಪನಿ 21 ಘಟಕಗಳನ್ನು ಹೊಂದಿದ್ದು ಇಂದು ಒಂದೂವರೆ ಲಕ್ಷ ಹೆಣ್ಣುಮಕ್ಕಳಿಗೆ ಉದ್ಯೋಗ ಒದಗಿಸಿದೆ, ಕೇವಲ ಸಹಿ ಮಾಡಲು ಬರುವ ಕ್ರಿಯಾಶೀಲ ಹೆಣ್ಣು ಮಕ್ಕಳು ಇಪ್ಪತ್ತು ಸಾವಿರಕ್ಕಿಂತಲೂ ಹೆಚ್ಚು ವೇತನವನ್ನು ಪಡೆದು ತಮ್ಮ ಕುಟುಂಬ ನಡೆಸುತ್ತಿದ್ದಾರೆ. ಅಂತಹ ವ್ಯಾಪಕ ಅವಕಾಶವನ್ನು ಗಾರ್ಮೆಂಟ್ಸ್ ವಲಯ ಸೃಷ್ಠಿಸಿದೆ. ನೀವು ಇಲ್ಲಿ ತರಬೇತಿ ಮುಗಿಸಿದ ನಂತರ ನಮ್ಮಲ್ಲಿ ಬಂದು ಉದ್ಯೋಗ…

ಮುಂದೆ ಓದಿ...

ಹಣವಿದ್ದರೆ ಮಾತ್ರ ಸಾಲದು ಜೊತೆಗೆ ಸದ್ಗುಣಗಳ ಅವಶ್ಯಕತೆ ಇದೆ

 ಹುಳಿಯಾರು:       ಭಾರತದ ಸನಾತನ ಸಂಸ್ಕೃತಿಯಲ್ಲಿ ಹೆಣ್ಣಿಗೆ ಹೆಚ್ಚು ಪ್ರಾಧ್ಯಾನ್ಯತೆ ಕೊಟ್ಟಿದ್ದು ಹೆಣ್ಣಿನಲ್ಲಿ ಸೃಷ್ಟಿಯ ಎಲ್ಲಾ ಗುಣಗಳು ಇರುತ್ತದೆ. ಆಕೆ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂಬ ನಿದರ್ಶನಗಳಿವೆ. ಸ್ತ್ರೀಯಲ್ಲಿ ಅಪಾರ ಶಕ್ತಿ, ಸಹನೆ, ಸಾಮಥ್ರ್ಯವಿರುವ ಕಾರಣ ಸ್ತ್ರೀರೂಪದಲ್ಲಿನ ಅಷ್ಟಲಕ್ಷ್ಮಿಯರನ್ನು ಪೂಜಿಸುತ್ತಾರೆಂದು ಹುಳಿಯಾರು ಪಿಎಸೈ ವಿಜಯ್ ಕುಮಾರ್ ನುಡಿದರು.       ಹುಳಿಯಾರಿನ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಶುಭಸಂಕಲ್ಪ ದೀಪೋತ್ಸವ ಹಾಗೂ ಅಷ್ಟ ಚೈತನ್ಯ ಲಕ್ಷ್ಮಿಯರ ದಿವ್ಯ ದರ್ಶನ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.       ಮನುಷ್ಯನಿಗೆ ಕೇವಲ ಹಣವಿದ್ದರೆ ಮಾತ್ರ ಸಾಲದು ಜೊತೆಗೆ ಮಾನಸಿಕ ಶಾಂತಿ, ಸಹನೆ ಎಂಬ ಸದ್ಗುಣಗಳ ಅವಶ್ಯಕತೆ ಇದೆ.ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಶಾಂತಿ ಪ್ರಶಾಂತತೆ ದೊರೆಯಲಿದ್ದು ಇದಕ್ಕಾಗಿ ಸ್ವಲ್ಪ ಸಮಯವನ್ನು ಮೀಸಲಿಡಿ ಎಂದರು.      …

ಮುಂದೆ ಓದಿ...

ಅರ್ಥಪೂರ್ಣ ಕನಕದಾಸರ ಜಯಂತಿಗೆ ನಿರ್ಧಾರ

 ತುಮಕೂರು :       ಕಳೆದ ವರ್ಷದಂತೆ  ಈ ಬಾರಿಯೂ ನವೆಂಬರ್ 26ರಂದು ಸಂತಶ್ರೇಷ್ಠ ಕನಕದಾಸ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.       ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಸಂತಶ್ರೇಷ್ಠ ಕನಕದಾಸ ಜಯಂತಿಯನ್ನು ಅರ್ಥಪೂರ್ಣ ಹಾಗೂ ಸಂತಸದಿಂದ ಆಚರಿಸಲು ತುಮಕೂರು ಜಿಲ್ಲೆಯಲ್ಲಿರುವ ಕುರುಬ ಸಮುದಾಯದ ಸಂಘ ಸಂಸ್ಥೆಗಳು-ಮುಖಂಡರ ಸಹಕಾರ ಅತಿ ಮುಖ್ಯ ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದರು.       ಅಂದು ಕನಕದಾಸರ ಭಾವಚಿತ್ರದ ಮೆರವಣಿಗೆಯನ್ನು ಕಲಾ ತಂಡಗಳೊಂದಿಗೆ ಶಿರಾಗೇಟ್‍ನ ಬಳಿಯ ಕನಕ ವೃತ್ತದಲ್ಲಿರುವ ಕನಕದಾಸರ ಪ್ರತಿಮೆಗೆ ಪೂಜೆ ಸಲ್ಲಿಸಿದ ನಂತರ ಚಾಲನೆ ನೀಡಲಾಗುತ್ತದೆ. ಮೆರವಣಿಗೆಯು ತುಮಕೂರು ನಗರದ ವಿವಿಧ ರಸ್ತೆಗಳಲ್ಲಿ ತೆರಳಿ ಸಮಾರಂಭ ನಡೆಯುವ ಸ್ಥಳದಲ್ಲಿ ಕೊನೆಗೊಳ್ಳಲಿದೆ ಎಂದು ಅವರು ಹೇಳಿದರು.       ಕನಕದಾಸರ ಬದುಕು…

ಮುಂದೆ ಓದಿ...

ಮಹಿಳೆಯರಿಗೆ ಸೌಲಭ್ಯ ಒದಗಿಸಲು ಪ್ರಮಾಣಿಕ ಪ್ರಯತ್ನ : ಮೈಸೂರು ನೂತನ ಮೇಯರ್​ ಪುಷ್ಪಲತಾ

ಮೈಸೂರು:          ಅರ್ಥಿಕ ಪರಿಸ್ಥಿತಿ ಹಿಂದುಳಿದ ಏರಿಯಾಗಳಿಗೆ ಶುದ್ಧ ಕುಡಿಯುವ ನೀರು ವ್ಯವಸ್ಥೆ ಮಾಡುತ್ತೇನೆ. ಹಾಗೆಯೇ ಸರ್ಕಾರದಿಂದ ಮಹಿಳೆಯರಿಗೆ ಬರುವ ಎಲ್ಲಾ ಸೌಲಭ್ಯ ಒದಗಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ನೂತನ ಮೇಯರ್​ ಪುಷ್ಪಲತಾ ಹೇಳಿದರು.       ಉಪ ಮೇಯರ್ ಆಗಿ ಅನುಭವ ಪಡೆದಿದ್ದೆ. ಈಗ ಮೇಯರ್ ಆಗಿರುವುದು ತುಂಬಾ ಖುಷಿ ತಂದಿದೆ. ಈ ಹಿಂದೆ ಕೆಲಸ ಮಾಡಿದ ರೀತಿಯಲ್ಲೇ ಕೆಲಸ ಮಾಡಿ ಪ್ರಾಮಾಣಿಕತೆಯಿಂದ ಇರುತ್ತೇನೆ. ನನ್ನ ಮೊದಲ ಆದ್ಯತೆ ಸ್ವಚ್ಛತೆ ಕಡೆಗೆ. ಸ್ವಚ್ಛತೆಯಲ್ಲಿ ಮೈಸೂರಿಗೆ ಮತ್ತೆ ಮೊದಲ ಸ್ಥಾನ ತರುವುದು ನನ್ನ ಗುರಿ ಎಂದರು.      ಮಾಧ್ಯಮಗಳೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರ ಹಠ ಈ ಚುನಾವಣೆಯಲ್ಲಿ ಗೆದ್ದಿದೆ. ಅದಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ. ಮೈಸೂರಿನಲ್ಲಿ ಕಾಂಗ್ರೆಸ್​ಗೆ ಅಧಿಕಾರ ಇರಲಿಲ್ಲ. ಆದರೆ ಮೈತ್ರಿ ಸರ್ಕಾರದಿಂದ ಈಗ ಮೇಯರ್ ಸ್ಥಾನ ಸಿಕ್ಕಿದೆ. ಮೇಯರ್…

ಮುಂದೆ ಓದಿ...

ಅಪ್ರಾಪ್ತ ಬಾಲೆಯ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ನರಭಕ್ಷಕರು

  ನಂಜನಗೂಡು:     ಬಡ ಕೂಲಿಕಾರ್ಮಿಕರ ಪುಟ್ಟ ಗುಡಿಸಿಲಿನಲ್ಲಿ ಒಬ್ಬಂಟಿಯಾಗಿದ್ದ ಪುಟ್ಟ ಕಂದಮ್ಮಳನ್ನು ಗಮನಿಸಿ ಅತ್ಯಾಚಾರವೆಸಗಿ ಕೊಲೆ ಮಾಡಿ ಪರಾರಿಯಾಗಿರುವ ಅಮಾನವೀಯ ಘಟನೆ ನಡೆದಿದೆ.       ನಂಜಗೂಡಿನ ಕೈಗಾರಿಕಾ ನಿರ್ಜನ ಪ್ರದೇಶದ ಪುಟ್ಟ ಗುಡಿಸಲೊಂದರಲ್ಲಿ ವಾಸಿಸುತ್ತಿರುವ ಕುಮಾರ ಮತ್ತು ತಾಯಮ್ಮ ಎಂಬ ದಂಪತಿಗಳ ಮೊದಲ ಮಗ¼ರುವ ಬಾಲಕಿ ಚಾಮಲಾಪುರದ ಹುಂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ 8 ನೇ ತರಗತಿ ಓದುತ್ತಿದ್ದಳು. ಬಾಲಕಿಯ ತಂದೆ ಕುಮಾರ್, ಸನಿಹದ ಜನಿತ್ ಟೆಕ್ಸ್‍ಟೈಲ್ಸ್ ಕಾರ್ಖಾನೆಯ ಬಳಿ ಪುಟ್ಟದಾದ ನಾಲ್ಕು ಚಕ್ರದ ಗಾಡಿಯಲ್ಲಿ ಹೋಟೆಲ್ ಕೆಲಸ ಮಾಡಿಕೊಂಡಿದ್ದರು. ಇವರು ಬೆಳಗ್ಗೆ 9 ಗಂಟೆಗೆ ತಮ್ಮ ಹೋಟೆಲ್‍ಗೆ ಕೆಲಸಕ್ಕೆ ತೆರಳಿದರೆ ಮತ್ತೆ ಮನೆಗೆ ಹಿಂತಿರುಗುವುದು ಸಂಜೆ 6 ಗಂಟೆ ವೇಳೆಗೆ. ಇದನ್ನು ಗಮನಿಸಿ, ಹೊಂಚುಹಾಕುತ್ತಿದ್ದ ಕಾಮುಕರು ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆಗೈದಿದ್ದಾರೆ ಎನ್ನಲಾಗುತ್ತಿದೆ.       ಸಂಜೆ…

ಮುಂದೆ ಓದಿ...