ಎಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಶಾಕ್ ಕೊಟ್ಟ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ

ಬೆಂಗಳೂರು:       ಪರೀಕ್ಷಾ ಕೇಂದ್ರಗಳಲ್ಲಿನ ನಕಲು ತಡೆಯುವ ಉದ್ದೇಶದಿಂದ ಎಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ವೇಳೆ ಕೈ ಗಡಿಯಾರ ಕಟ್ಟಿಕೊಂಡು ಪರೀಕ್ಷಾ ಕೇಂದ್ರಗಳಿಗೆ ಹಾಜರಾಗುವುದಕ್ಕೆ ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿಷೇಧ ಹೇರಲಾಗಿದೆ.        ಮುಂದಿನ ವರ್ಷ ನಡೆಯಲಿರುವ ಎಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಿಂದ ಈ ನಿಯಮ ಅನ್ವಯವಾಗಲಿದ್ದು, ಪರ್ಯಾಯ ಮಾರ್ಗವಾಗಿ ಪರೀಕ್ಷಾ ಕೇಂದ್ರಗಳಲ್ಲೆ ಗೋಡೆ ಗಡಿಯಾರ ಹಾಕಲು ನಿರ್ಧರಿಸಿದೆ.       ಇದರಿಂದಾಗಿ ವಿದ್ಯಾರ್ಥಿಗಳು ಕೈ ಗಡಿಯಾರ ಬಿಟ್ಟು ಪರೀಕ್ಷಾ ಕೊಠಡಿಗೆ ತೆರಳಬೇಕು. ಈ ಹಿಂದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ್ದ ಸಿಇಟಿಯಲ್ಲಿ ಇದನ್ನು ಜಾರಿಗೆ ತರಲಾಗಿತ್ತು. ಕೆಇಎ ತನ್ನ ಹಣದಿಂದಲೇ ಪರೀಕ್ಷಾ ಕೇಂದ್ರಗಳಿಗೆ ಗೋಡೆ ಗಡಿಯಾರ ಖರೀದಿಸಿ ಹಾಕಿತ್ತು.       ಪರೀಕ್ಷಾ ಸಮಯದಲ್ಲಿ ಗಡಿಯಾರ ಇಲ್ಲದಿದ್ದರೆ ನಾವು ಸಮಯದ ನಿರ್ವಹಣೆ ಮಾಡುವುದು ಕಷ್ಟವಾಗುತ್ತದೆ. ಡಿಜಿಟಲ್…

ಮುಂದೆ ಓದಿ...

ಆಸ್ಪತ್ರೆಯೆಂಬ ಮೃತ್ಯುಕೂಪಕ್ಕೆ ಮಹಿಳೆ ಬಲಿ; ಮಕ್ಕಳಿಬ್ಬರು ತಬ್ಬಲಿ

ತುಮಕೂರು :       ಕಟ್ಟಡ ಹಂತದಲ್ಲಿದ್ದ ಆಸ್ಪತ್ರೆಯಲ್ಲಿ ಮಹಿಳೆಗೆ ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆ ಮಾಡಿದ್ದು, ವೈದ್ಯರ ನಿರ್ಲಕ್ಷದಿಂದಾಗಿ ಮಹಿಳೆ ಸಾವನ್ನಪ್ಪಿರುವ ಘಟನೆ ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.       ನಗರದ ರಾಜಲಕ್ಷ್ಮೀ ನರ್ಸಿಂಗ್ ಹೋಂನಲ್ಲಿ ಈ ಘಟನೆ ನಡೆದಿದ್ದು, ನೆಲಮಂಗಲ ತಾಲ್ಲೂಕಿನ ಹಳೆ ನಿಜಗಲ್ ಗ್ರಾಮದ ವಸಂತ (32)ಮೃತ ಪಟ್ಟ ದುರ್ದೈವಿ. ಅಪೆಂಡಿಕ್ಸ್ ನಿಂದ ಬಳಲುತ್ತಿದ್ದ ವಸಂತ ನ.21 ರಂದು ರಾಜಲಕ್ಷ್ಮೀ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದಳು. ನಿನ್ನೆ ಮದ್ಯಾಹ್ನ ಅಂದರೆ ನ.26 ರಂದು ಡಾ.ನರೇಂದ್ರ ರವರು ವಸಂತಗೆ ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆ ಮಾಡಿದ್ದರು. ಆಸ್ಪತ್ರೆಯಲ್ಲಿ ಐಸಿಯು ಇಲ್ಲದ ಕಾರಣ ಜನರಲ್ ವಾರ್ಡ್ ಗೆ ಶಿಫ್ಟ್ ಮಾಡಲಾಗಿತ್ತು. ಸಂಜೆ ವೇಳೆಗೆ ಉಸಿರಾಟದ ಸಮಸ್ಯೆ ಅಧಿಕವಾದ ಕಾರಣ ತುರ್ತು ನಿಗಾ ಘಟಕದ ಅಗತ್ಯತೆ ಅನಿವಾರ್ಯವಾಗಿದ್ದು, ಚಿಕಿತ್ಸೆ ನೀಡದೇ ಟಿಎಚ್‍ಎಸ್ ಆಸ್ಪತ್ರೆಗೆ ಮಹಿಳೆಯನ್ನು ವರ್ಗಾಯಿಸಿ ಕೈತೊಳೆದುಕೊಂಡಿದ್ದಾರೆ. ಟಿಹೆಚ್‍ಎಸ್…

ಮುಂದೆ ಓದಿ...

ಹಳ್ಳಿಗಳ ಹಾಗೂ ಬಡವರ ಉದ್ದಾರವೇ ಸರಕಾರದ ಆಶಯ : ಶಾಸಕ ಎಂ.ವಿ.ವೀರಭದ್ರಯ್ಯ

ಮಧುಗಿರಿ  :       ರಾಜ್ಯ ಸರಕಾರ ಗ್ರಾಮೀಣ ಭಾಗದ ಬಡವರು ಹಾಗೂ ಹಳ್ಳಿಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುತ್ತಿದ್ದು, ಫಲಾನುಭವಿಗಳು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.       ತಾಲೂಕಿನ ಐ.ಡಿ.ಹಳ್ಳಿ ಹೋಬಳಿಯ ಗರಣಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಗರಣಿ ಗ್ರಾ.ಪಂ.ನಿಂದ ವಿವಿಧ ಫಲಾನುಭವಿಗಳಿಗೆ ಹಲವಾರು ಯೋಜನೆಯಡಿ ಸವಲತ್ತುಗಳನ್ನು ವಿತರಿಸಿ ಮಾತನಾಡಿದರು.       ದೇಶವು ಅಭಿವೃದ್ಧಿ ಪಥದಲ್ಲಿ ಮುನ್ನೆಡೆಯಲು ಮೊದಲು ಹಳ್ಳಿಗಳ ಅಭಿವೃದ್ಧಿಯಾಗಬೇಕು ಎಂದು ರಾಷ್ಟ್ರಪಿತ ಮಹಾತ್ಮ ಗಾಂೀಜಿಯವರು ಹೇಳಿದ್ದರು. ಕುಮಾರಸ್ವಾಮಿ ನೇತೃತ್ವದ ಸರಕಾರವು ಅದೇ ಹಾದಿಯಲ್ಲಿ ಮುನ್ನಡೆಯುತ್ತಿದ್ದು, ಗ್ರಾಮೀಣ ಜನರ ಬದುಕನ್ನು ಆರ್ಥಿಕವಾಗಿ ಸದೃಢವಾಗಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಂತೆ ಈ ಕಾರ್ಯಕ್ರಮ ನಡೆಯುತ್ತಿದೆ. ವಿಕಲಚೇತನರಿಗೆ ಸಹಾಯಧನ, ಮನೆಯಿಲ್ಲದವರಿಗೆ ಸೂರು, ಶುದ್ಧ ಕುಡಿಯುವ ನೀರು, ಹಾಗೂ ಇನ್ನಿತರೆ ಮೂಲಭೂತ ಸೌಕರ್ಯಗಳನ್ನು…

ಮುಂದೆ ಓದಿ...

ತಂದೆ-ಮಗನನ್ನು ಬಲಿ ಪಡೆದ ಅವೈಜ್ಞಾನಿಕ ರಸ್ತೆ ಕಾಮಗಾರಿ

 ಕೊರಟಗೆರೆ:       ಅವೈಜ್ಞಾನಿಕ ಕೇಶಿಪ್ ರಾಜ್ಯ ಹೆದ್ದಾರಿಯ ತಿರುವಿನಲ್ಲಿ ಖಾಸಗಿ ಮತ್ತು  ದ್ವಿಚಕ್ರ ವಾಹನದ ನಡುವೆ ಅಪಘಾತ ಆಗಿ ತನ್ನ ತಮ್ಮನ ಮದುವೆ ಆಮಂತ್ರಣ ಪತ್ರಿಕೆ ಕೊಟ್ಟು ಹಿಂದಕ್ಕೆ ಬರುತ್ತಿದ್ದ ದ್ವಿಚಕ್ರ ವಾಹನದಲ್ಲಿದ್ದ ತಂದೆ ಮತ್ತು ಮಗ ಇಬ್ಬರು ಮೃತ ಪಟ್ಟಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.      ತಾಲೂಕಿನ ಚನ್ನರಾಯನದುರ್ಗ ಹೋಬಳಿ ಸಿದ್ದರಬೆಟ್ಟ ಗ್ರಾಪಂ ವ್ಯಾಪ್ತಿಯ ಮಲ್ಲೇಕಾವು ಗ್ರಾಮದ ವಾಸಿಯಾದ ಕೃಷ್ಣಪ್ಪನ ಮಗನಾದ ತಿಮ್ಮಯ್ಯ(62) ಮತ್ತು ತಿಮ್ಮಯ್ಯನ ಮಗನಾದ ವೆಂಕಟೇಶ್(38) ಎಂಬ ತಂದೆಮಗ ಮೃತಪಟ್ಟ ದುರ್ದೈವಿ. ತನ್ನ ಚಿಕ್ಕ ಮಗನ ಮದುವೆಯ ಆಮಂತ್ರಣ ಪತ್ರಿಕೆ ಕೊಟ್ಟು ಹಿಂದಕ್ಕೆ ಬರುವ ದಾರಿಯಲ್ಲಿ ಅಪಘಾತ ಆಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.       ಕೊರಟಗೆರೆ ಪಟ್ಟಣದ ಬೈಪಾಸ್‍ಗೆ ಸಂಪರ್ಕ ಕಲ್ಪಿಸುವ ಸಿದ್ದೇಶ್ವರ ಕಲ್ಯಾಣ ಮಂಟಪ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಅಪಘಾತವಾಗಿದೆ. ಮಧುಗಿರಿ ಕಡೆಯಿಂದ ತಿರುವಿನಲ್ಲಿ ಅತಿವೇಗದಿಂದ…

ಮುಂದೆ ಓದಿ...

ಸಿಮೆಂಟ್ ಕಾರ್ಖಾನೆಯ ಹಳ್ಳಕ್ಕೆ ಬಿದ್ದ ಲಾರಿ : ಕಾರ್ಮಿಕನ ಧಾರುಣ ಸಾವು!

ಗುಬ್ಬಿ :       ಖಾಸಗಿ ಒಡೆತನದ ಆರ್.ಸಿ.ಸಿ ಪೋಲ್‍ಗಳನ್ನು ತಯಾರಿಸುವ ಸಿಮೆಂಟ್ ಕಾರ್ಖಾನೆಯ ಹಳ್ಳಕ್ಕೆ ಲಾರಿ ಬಿದ್ದು ಯಾದಗಿರಿ ಮೂಲದ ಕೂಲಿ ಕಾರ್ಮಿಕ ಶಾಂತಪ್ಪ ಅಸುನೀಗಿರುವ ಘಟನೆ ನಡೆದಿದೆ.       ತಾಲ್ಲೂಕಿನ ಎನ್.ಹೆಚ್. 206 ರಸ್ತೆಯ ಬದಿಯಲ್ಲಿರುವ ನಂದಿ ಕಾಂಕ್ರಿಟ್ ಪ್ರಾಡಕ್ಟ್‍ನಲ್ಲಿ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಅನುನಾಳದ ಗ್ರಾಮದ ಶಾಂತಪ್ಪ ಮತ್ತು ಕುಟುಂಬದವರು ಸುಮಾರು ಒಂದೂವರೆ ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದು ಇಂದು ಬೆಳಗಿನ ಸಮಯದಲ್ಲಿ ಟಿಪ್ಪರ್ ಲಾರಿಯಲ್ಲಿ ಬಂದಂತಹ ಸರಕನ್ನು ಇಳಿಸಲು ಗುಂಡಿಯ ಒಳಗೆ ಇಳಿದಿದ್ದ ಕಾರ್ಮಿಕನಿಗೆ ಮೇಲಿದ್ದ ಲಾರಿಯು ಗುಂಡಿಯು ಕುಸಿದ ಕಾರಣ ಲಾರಿ ಸಮೇತ ಗುಂಡಿಯೊಳಗೆ ಜಾರಿದ ಕಾರಣ ವ್ಯಕ್ತಿಯು ಮೃತಪಟ್ಟಿದ್ದಾನೆ.       ಮೂಕನಹಳ್ಳಿ ಪಟ್ಟಣ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಈ ಕಾರ್ಖಾನೆಗೆ ದಿನಾಂಕ : 12-04-2018ರಂದು ಪರವಾನಗಿ ಪಡೆದಿದ್ದು ಮೂರು ಜನ…

ಮುಂದೆ ಓದಿ...