ಶಾಲಾ ಆವರಣದಲ್ಲಿ ಹುಕ್ಕಾ ಮಾರಾಟ!

ಕಲಬುರಗಿ:        ಇಲ್ಲಿನ ಶಾಲೆ, ಕಾಲೇಜುಗಳಆವರಣದಲ್ಲಿ ಎಗ್ಗಿಲ್ಲದೆ ಹುಕ್ಕಾ ಮಾರಾಟ ನಡೆಯುತ್ತಿದ್ದು, ವಿದ್ಯಾರ್ಥಿಗಳು ಹುಕ್ಕಾ ಚಟಕ್ಕೆ ದಾಸರಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.       ಶಹಬಾದ್​ನ ನಿವಾಸಿ ರಜ್ವಾನ್​ ಎಂಬಾತ ಆರನೇ ತರಗತಿ ಮಕ್ಕಳಿಗೆ 1 ಸಾವಿರ ರೂ.ದಿಂದ 1,200 ರೂ.ವರೆಗೆ ಹಣ ತೆಗೆದುಕೊಂಡು ಹುಕ್ಕಾ ಮಾರಾಟ ಮಾಡಿ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದು ದಂಧೆ ಬಯಲಾಗಿದೆ. ಶಹಬಾದ್​ನ ಖಾಸಗಿ ಶಾಲೆ ಹಾಗೂ ಕಾಲೇಜಿನಲ್ಲಿ ವಿದ್ಯಾರ್ಥಿಗಳುಬಿಂದಾಸ್​ ಆಗಿ ಹುಕ್ಕಾ ಸೇದುತ್ತಿದ್ದಾರೆ. ಮಕ್ಕಳ ಈ ಚಟ ಪಾಲಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಕಳ್ಳತನದಲ್ಲಿ ತೊಡಗಿದ್ದ ಮಕ್ಕಳು:       ತಮ್ಮ ಮನೆಯಲ್ಲಿ ಹಣ ಕಳವು ಆಗುತ್ತಿದ್ದ ಹಿನ್ನೆಲೆಯಲ್ಲಿ ಅನುಮಾನಗೊಂಡ ಪಾಲಕರು ಮಗನನ್ನು ಹಿಂಬಾಲಿಸಿದಾಗ ಹುಕ್ಕಾ ತೆಗೆದುಕೊಂಡು ಹಣ ನೀಡುತ್ತಿದ್ದುದನ್ನು ಕಂಡು ಕಂಗಾಲಾಗಿದ್ದಾರೆ. ಕೂಡಲೇ ರಿಜ್ವಾನ್​ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮಕ್ಕಳಿಗೆ ಹಣ ಕದಿಯುವ ಉಪಾಯವನ್ನೂ…

ಮುಂದೆ ಓದಿ...

ಅಂಗನವಾಡಿ ಮಕ್ಕಳಿಗೂ ಶಾಲಾ ಸಮವಸ್ತ್ರ

ಬೆಂಗಳೂರು:       ಪ್ರಾಥಮಿಕ ಶಾಲಾ ಮಕ್ಕಳಿಗೆ ನೀಡುವಂತೆ ಅಂಗನವಾಡಿ ಮಕ್ಕಳಿಗೂ ಶಾಲಾ ಸಮವಸ್ತ್ರ ನೀಡುವ ಯೋಜನೆಗೆ ಮುಂದಿನ ಆಯವ್ಯಯದಲ್ಲಿ ಚಾಲನೆ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಡಾ.ಜಯಮಾಲಾ ತಿಳಿಸಿದರು.       ಗುರುವಾರ ವಿಧಾನ ಪರಿಷತ್‍ನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ವೀಣಾ ಅಚ್ಚಯ್ಯ ಪ್ರಶ್ನೆಗೆ ಉತ್ತರಿಸಿದ ಅವರು, ಅಂಗನವಾಡಿ ಮಕ್ಕಳಿಗೂ ಶಾಲಾ ಸಮವಸ್ತ್ರ ನೀಡುವ ಯೋಜನೆ ಆರಂಭಿಸುವ ಬಗ್ಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹೀಗಾಗಿ ಮುಂದಿನ ಆಯವ್ಯಯದಲ್ಲಿ ಚಾಲನೆ ನೀಡಲಾಗುವುದು. ಮಾತೃಪೂರ್ಣ ಯೋಜನೆಯಡಿ 7 ತಿಂಗಳ ಗರ್ಭಿಣಿ ಮಹಿಳೆ ಅಂಗನವಾಡಿಗೆ ಬರಲು ಕಷ್ಟವಾಗುವುದರಿಂದ ಕಿಟ್ ಅನ್ನು ಮನೆಗೆ ತಲುಪಿಸಲಾಗುವುದು ಎಂದರು.       ಈ ವೇಳೆ ವೀಣಾ ಅಚ್ಚಯ್ಯ ಮಾತನಾಡಿ, ಉದ್ಯೋಗ ಯೋಜನೆಯಡಿ 40ಕ್ಕೂ ಹೆಚ್ಚು ಮಹಿಳೆಯರು ಟೈಲರಿಂಗ್ ತರಬೇತಿ ಪಡೆದಿದ್ದು, ಅವರಿಗೆ ಶಾಲಾ ಮಕ್ಕಳ ಸಮವಸ್ತ್ರ ಹೊಲಿಯುವ…

ಮುಂದೆ ಓದಿ...

ಪಿಂಚಣಿ ಪರಾಮರ್ಶೆಗೆ ಸಮಿತಿ ರಚನೆ : ಸಿಎಂ ಭರವಸೆ

ಬೆಳಗಾವಿ:       2006ರ ನಂತರ ರಾಜ್ಯ ಸರ್ಕಾರಿ ನೌಕರರ ಪಿಂಚಣಿ ಯೋಜನೆ ಪರಾಮರ್ಶೆ ಕುರಿತಂತೆ ಹಿರಿಯ ಐಎಎಸ್ ಅಧಿಕಾರಿ ನೇತೃತ್ವದ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿ ವರದಿ ಬಂದ ನಂತರ ಸರ್ಕಾರ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ. ನೌಕರರು ಆತಂಕಪಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೌಕರರಿಗೆ ಭರವಸೆ ನೀಡಿದ್ದಾರೆ.       ಸುವರ್ಣಸೌಧದಲ್ಲಿ ಇಂದು ಪ್ರತಿಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ, ಉಪ ನಾಯಕ ಗೋವಿಂದ ಕಾರಜೋಳ ಸೇರಿದಂತೆ ಅನೇಕ ಮುಖಂಡರು ಬರ ನಿರ್ವಹಣೆ ಚರ್ಚೆಯ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ, ರಾಜ್ಯ ಸರ್ಕಾರಿ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ, ನಿವೃತ್ತಿ ಹೊಂದಿದ ನೌಕರರಿಗೆ ಸೌಲಭ್ಯಗಳನ್ನು ಮುಂದುವರೆಸಬೇಕೆಂದು ಸಲಹೆ ಮಾಡಿದರು.       ಮುಖ್ಯಮಂತ್ರಿ ಕುಮಾರಸ್ವಾಮಿ 2004ರಲ್ಲಿ ಅಂದಿನ ಕೇಂದ್ರ ಸರ್ಕಾರ ಜಾರಿಗೆ ತಂದು ನೌಕರರಿಗೆ ಪಿಂಚಣಿ ರಹಿತ ವೇತನ ನೀಡುವ ಯೋಜನೆ…

ಮುಂದೆ ಓದಿ...

ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಅಂತಿಮ ವೇಳಾಪಟ್ಟಿ

ಬೆಂಗಳೂರು:       2018-19ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢಶಿಕ್ಷಣಾ ಮಂಡಳಿ ಗುರುವಾರ ಬಿಡುಗಡೆ ಮಾಡಿದೆ. ಪರೀಕ್ಷೆಯು 2019ರ ಮಾರ್ಚ್ 23ರಿಂದ ಏಪ್ರಿಲ್ 4ರವರೆಗೆ ನಡೆಯಲಿದೆ. ಪರೀಕ್ಷಾ ವೇಳಾಪಟ್ಟಿ ಈ ಕೆಳಗಿನಂತಿವೆ. ದಿನಾಂಕ ವಿಷಯ ಸಮಯ 21-3-2019 ಗುರುವಾರ ಪ್ರಥಮ ಭಾಷೆಕನ್ನಡ ತೆಲುಗು ಹಿಂದಿ ಮರಾಠಿ ತಮಿಳು ಉರ್ದು ಇಂಗ್ಲಿಷ್ ಸಂಸ್ಕೃತ ಬೆಳಗ್ಗೆ 9.30ರಿಂದ ಮಧ್ಯಾಹ್ನ 12.30 23-3-2019 ಶನಿವಾರ 1)ಎಲಿಮೆಂಟ್ಸ್ ಆಫ್ ಮೆಕಾನಿಕಲ್ ಅಂಡ್ ಎಲೆಕ್ಟ್ರಿಕಲ್2)ಎಂಜಿನಿಯರಿಂಗ್-2 ಎಂಜಿನಿಯರಿಂಗ್ ಗ್ರಾಫಿಕ್ಸ್-2 3)ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕ್ ಎಂಜಿನಿಯರಿಂಗ್ 4)ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್ 5)ಅರ್ಥಶಾಸ್ತ್ರ ಬೆ.9.30ರಿಂದ 12.452ರಿಂದ05.15 ಬೆ.9.30ರಿಂದ 12.45 ಬೆ.9.30ರಿಂದ 12.45 ಬೆ.9.30ರಿಂದ 12.30 25-3-2019 ಸೋಮವಾರ ಗಣಿತ, ಸಮಾಜ ಶಾಸ್ತ್ರ, ಬೆ.9.30ರಿಂದ 12.30 27-3-2019 ಬುಧವಾರ ದ್ವಿತೀಯ ಭಾಷೆಇಂಗ್ಲಿಷ್, ಕನ್ನಡ ಬೆ.9.30ರಿಂದ 12 29-3-2019 ಶುಕ್ರವಾರ ಸಮಾಜ ವಿಜ್ಞಾನ…

ಮುಂದೆ ಓದಿ...

ಕಾರ್ಮಿಕನ ಅಮಾನತು : ಕಾರ್ಖಾನೆ ವಿರುದ್ಧ ಕ್ರಮಕ್ಕೆ ಒತ್ತಾಯ

 ತುಮಕೂರು:       ಕಾರ್ಮಿಕ ಕಾನೂನುಗಳನ್ನು ಗಾಳಿಗೆ ತೂರಿ ಯಾವುದೇ ನೋಟಿಸ್ ನೀಡದೆ ಅಮಾನತುಗೊಳಿಸುವ ಮೂಲಕ ನೌಕರ ಆತ್ಮಹತ್ಯೆಗೆ ಯತ್ನಿಸಲು ಕಾರಣವಾದ ಬಳ್ಳಾರಿ ಜಿಲ್ಲೆಯ ತುಂಗಭದ್ರ ಪವರ್ ಪ್ರಾಜೆಕ್ಟ್ ಲಿಮಿಟೆಡ್ ಕಂಪೆನಿ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟ ಮಾನವ ಹಕ್ಕುಗಳ ಜನಜಾಗೃತಿ ಸಮಿತಿ ಒತ್ತಾಯಿಸಿದೆ. ‌       ಕಾರ್ಖಾನೆಯ ಈ ಧೋರಣೆಯಿಂದಾಗಿ ಮನನೊಂದು ಅಮಾನತುಗೊಂಡಿರುವ ನೌಕರ ಹೂವಿನ ಹಡಗಲಿಯ ಸಂತೋಷ್ ಕುಮಾರ್ ಆತ್ಮಹತ್ಯೆ ಯತ್ನಿಸಿದ್ದು, ಸದ್ಯ ತುಮಕೂರಿನ ಶ್ರೀದೇವಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ ಕರ್ನಾಟಕ ಮಾನವ ಹಕ್ಕುಗಳ ಜನಜಾಗೃತಿ ಸಮಿತಿಯ ರಾಜ್ಯಾಧ್ಯಕ್ಷ ಜ್ಞಾನ ಪ್ರಕಾಶ್, ಸಂತೋಷ್‌ಕುಮಾರ್ ಅವರ ಆರೋಗ್ಯ ವಿಚಾರಿಸಿದ ನಂತರ ಮಾತನಾಡಿ, ಸರ್ಕಾರ ಮತ್ತು ಕಾರ್ಮಿಕ ಇಲಾಖೆ ಈ ಬಗ್ಗೆ ದೂರು ದಾಖಲಿಸಿಕೊಂಡು ಕಾನೂನಾತ್ಮಕವಾಗಿ ಬಡ ನೌಕರನಿಗೆ ನ್ಯಾಯ ಒದಗಿಸಬಕು. ಅಲ್ಲದೇ ಅದೇ…

ಮುಂದೆ ಓದಿ...

ವಕೀಲರು ನಾವು ಹೇಳುವುದೆಲ್ಲಾ ಸತ್ಯಾ ಎಂಬ ಭ್ರಮೆಯಲ್ಲಿರಬಾರದು

ಚಿಕ್ಕನಾಯಕನಹಳ್ಳಿ:       ವಕೀಲರು ನಾವು ಹೇಳುವುದೆಲ್ಲಾ ಸತ್ಯಾ ಎಂಬ ಭ್ರಮೆಯಲ್ಲಿರಬಾರದು ತಾಳ್ಮೆಯ ಜೊತೆಗೆ ಸಹನೆಯಿಂದ ಗುಣಾತ್ಮಕವಾಗಿ ವಿಚಾರಗಳನ್ನು ನ್ಯಾಯಾಧೀಶರೆದುರು ಅರ್ಥೈಸಿದರೆ ಮಾತ್ರ ಉತ್ತಮ ತೀರ್ಪು ಬರಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ ಉಪಾಧ್ಯಕ್ಷ ಬಿ.ವಿ.ಶ್ರೀನಿವಾಸ್ ಹೇಳಿದರು.       ಪಟ್ಟಣದಲ್ಲಿರುವ ಪ್ರಧಾನ ಸಿವಿಲ್ ನ್ಯಾಯಾಲಯದ ಸಭಾಂಗಣದಲ್ಲಿ ರಾಜ್ಯ ವಕೀಲರ ಪರಿಷತ್, ತಾಲ್ಲೂಕು ಕಾನೂನು ಸೇವಾ ಸಮಿತಿ ತಾಲ್ಲೂಕು ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ವಕೀಲರಿಗಾಗಿ ಕಾನೂನು ಕಾರ್ಯಗಾರ ಉದ್ಘಾಟಿಸಿ ಮಾತನಾಡುತ್ತಾ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ರಾಜ್ಯ ಸಮಿತಿಯ ಅಧ್ಯಕ್ಷರು ಕಾರ್ಯನಿಮಿತ್ತ ಆಗಿ ಬಾಗಿ ಆಗಿರುವುದರಿಂದ ಇಲ್ಲಿಗೆ ಬರಲು ಸಾಧ್ಯವಾಗಿಲ್ಲ ಇಂತಹ ಕಾರ್ಯಗಾರಗಳಿಗೆ ಹಣದ ಕೊರತೆ ಇಲ್ಲ ಇಂತಹ ಕಾರ್ಯಗಾರಗಳು ಹೆಚ್ಚು ಹೆಚ್ಚು ಮಾಡುವಂತೆ ಹೇಳಿದ ಅವರು ವಕೀಲರಲ್ಲಿ ಸಹನೆ ಅತ್ಯವಶ್ಯಕವಾದದ್ದು, ನಮ್ಮಲ್ಲಿ ನ್ಯಾಯ ಹರಸಿ ಬರುವ ಕಕ್ಷಿದಾರರು ಎಲ್ಲರೂ ಬುದ್ದಿವಂತರೇನಲ್ಲ…

ಮುಂದೆ ಓದಿ...

ಅನುದಾನವನ್ನು ಫೆಬ್ರುವರಿ ಮಾಹೆಯೊಳಗೆ ಸದ್ಭಳಕೆ ಮಾಡಿ: ಸಿಇಓ ಅನೀಸ್ ಕಣ್ಮಣಿ ಜಾಯ್

 ತುಮಕೂರು:       ಜಿಲ್ಲಾ ಪಂಚಾಯತಿಯ ಲಿಂಕ್ ಡಾಕ್ಯೂಮೆಂಟ್‍ನಡಿ ಬಿಡುಗಡೆಯಾಗುವ ಅನುದಾನವನ್ನು ಮುಂಬರುವ 2019ರ ಫೆಬ್ರುವರಿ ಮಾಹೆಯ ಅಂತ್ಯದ ಒಳಗೆ ಸದ್ಭಳಕೆ ಮಾಡುವಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸೂಚನೆ ನೀಡಿದರು.       ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಇಂದು ನಡೆದ ನವೆಂಬರ್ ಅಂತ್ಯದ ಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಲಿಂಕ್ ಡಾಕ್ಯೂಮೆಂಟ್ ಅನುದಾನವನ್ನು ಸದ್ಭಳಕೆ ಮಾಡಿಕೊಂಡು ಪ್ರಗತಿಯನ್ನು ಡಿ.ಎಸ್.ಸಾಫ್ಟ್‍ವೇರ್‍ನಲ್ಲಿ ಅಪ್‍ಲೋಡ್ ಮಾಡಬೇಕಾಗುತ್ತದೆ. ಈ ಪ್ರಗತಿಯನ್ನು ಮುಖ್ಯ ಕಾರ್ಯದರ್ಶಿಗಳು ಪರಿಶೀಲನೆ ಮಾಡುತ್ತಿದ್ದು, ತುಮಕೂರು ಜಿಲ್ಲೆ ಶೇ. 49ರಷ್ಟು ಮಾತ್ರ ಪ್ರಗತಿಯಾಗಿದೆ. ಇದು ಜಿಲ್ಲಾ ಪಂಚಾಯತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದರು.       ಸಹಕಾರ, ಸಣ್ಣ ನೀರಾವರಿ, ರೇಷ್ಮೆ ಇಲಾಖೆ, ತೋಟಗಾರಿಕೆ ಇಲಾಖೆ ಸೇರಿದಂತೆ ಮತ್ತಿತರ…

ಮುಂದೆ ಓದಿ...

ಮಕ್ಕಳ ಪ್ರತಿಭೆಯನ್ನು ಗುರುತಿಸಿ ಸೂಕ್ತ ತರಬೇತಿ ನೀಡಿ

 ತುಮಕೂರು :       ಪ್ರತಿಯೊಂದು ಮಕ್ಕಳಲ್ಲೂ ಒಂದಲ್ಲಾ ಒಂದು ರೀತಿಯ ಸುಪ್ತ ಪ್ರತಿಭೆಗಳು ಅಡಗಿರುತ್ತವೆ ಎಂದು ಜಿಲ್ಲಾಧಿಕಾರಿ ಡಾ: ರಾಕೇಶ್‍ಕುಮಾರ್ ಅವರು ಹೇಳಿದರು.       ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸರ್ಕಾರಿ ಬಾಲಕರ ಬಾಲಮಂದಿರ, ಸರ್ಕಾರಿ ಬಾಲಕಿಯರ ಬಾಲಮಂದಿರ ಇವರ ಸಂಯುಕ್ತಾಶ್ರಯದಲ್ಲಿ ಬಾಲಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ “ಮಕ್ಕಳ ದಿನಾಚರಣೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಾ, ಮಕ್ಕಳ ಪ್ರತಿಭೆಯನ್ನು ಗುರುತಿಸಿ ಸೂಕ್ತ ತರಬೇತಿ ನೀಡಿ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸುವ ಕೆಲಸ ಮಾಡಬೇಕಿದೆ ಎಂದರು.       ಜಿಲ್ಲಾ ಪಂಚಾಯತ್ ಸಿಇಓ ಅನೀಸ್ ಕಣ್ಮಣಿ ಜಾಯ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್ ಅವರು ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ದಪಡಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಮಕ್ಕಳಿಂದ ವಿವಿಧ ರೀತಿಯ ಮನರಂಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.…

ಮುಂದೆ ಓದಿ...

ಕರ್ನಾಟಕ ಪೊಲೀಸರ ಸೇವೆ ಇತರೆ ರಾಜ್ಯಗಳಿಗೆ ಮಾದರಿ

 ತುಮಕೂರು: ಕರ್ನಾಟಕ ಪೊಲೀಸರ ಸೇವೆ ದೇಶದ ಇತರೆ ರಾಜ್ಯಗಳಿಗೆ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್ ಇಂದಿಲ್ಲಿ ಹೇಳಿದರು.       ನಗರದ ಡಿಎಆರ್ ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಪಾರಿವಾಳ ಮತ್ತು ಬಲೂನ್‍ಗಳನ್ನು ಹಾರಿ ಬಿಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಕರ್ನಾಟಕ ಪೊಲೀಸ ರು ಕಾನೂನು ಸುವ್ಯವಸ್ಥೆ, ಶಾಂತಿ ಕಾಪಾಡುವಲ್ಲಿ ಇತರೆ ರಾಜ್ಯಗಳ ಪೊಲೀಸರಿಗಿಂತ ಮುಂಚೂಣಿಯಲ್ಲಿದ್ದಾರೆ. ಹಾಗಾಗಿ ನಮ್ಮ ರಾಜ್ಯದ ಪೊಲೀಸರ ಸೇವೆ ಬೇರೆ ರಾಜ್ಯಗಳ ಪೊಲೀಸರಿಗೆ ಮಾದರಿಯಾಗಿದೆ ಎಂದು ಪುನರುಚ್ಚರಿಸಿದರು.       ವರ್ಷದ 365 ದಿನವೂ, ದಿನದ 24 ಗಂಟೆಯೂ ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾರ್ವಜನಿಕ ಬದುಕಿನಲ್ಲಿ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮ ರಾಜ್ಯದ  ಪೊಲೀಸರು ದಕ್ಷತೆ, ನಿಷ್ಠೆ ಹಾಗೂ ಪ್ರಾಮಾಣಿಕತೆಗೆ ಹೆಸರಾಗಿದ್ದಾರೆ ಎಂದರು.    …

ಮುಂದೆ ಓದಿ...