ಮಾರಮ್ಮನ ಪ್ರಸಾದ ಸೇವಿಸಿ ೧೦ ಜನರ ದುರ್ಮರಣ!

ಚಾಮರಾಜನಗರ:       ಹನೂರು ತಾಲೂಕಿನ ಸೂಲವಾಡಿ ಬಿಚ್ಚುಕತ್ತಿ ಮಾರಮ್ಮನ ದೇಗುಲದ ಪ್ರಸಾದ ಸೇವಿಸಿ 7 ಮಂದಿ ಮೃತಪಟ್ಟಿರುವ ಘಟನೆಗೆ ವಿಷ ಪ್ರಾಶನವೇ ಕಾರಣ ಎನ್ನಲಾಗಿದೆ.       ಗೋಪಿಯಮ್ಮ(35), ಶಾಂತಾ (20). ಪಾಪಣ್ಣ (35), ಅನಿಲ್​ (12), ಅನಿತಾ (14) ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ. ಗಂಭೀರವಾಗಿ ಅಸ್ವಸ್ಥಗೊಂಡವರನ್ನೆಲ್ಲ ಆಂಬುಲೆನ್ಸ್​ ಮೂಲಕ ಕೊಳ್ಳೆಗಾಲ, ಕಾಮಗೆರೆ, ಮೈಸೂರು ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗುತ್ತಿದೆ.       ಸುಲ್ವಾಡಿಯಲ್ಲಿ ಕಿಚ್ಚುಕುತ್ತಿ ಮಾರಮ್ಮದೇವಸ್ಥಾನದಲ್ಲಿ ಗೋಪುರ ಶಂಕುಸ್ಥಾಪನೆ ಸಮಾರಂಭವಿತ್ತು. ಕಾರ್ಯಕ್ರಮದಲ್ಲಿ ರೈಸ್​ಬಾತ್​ ತಯಾರಿಸಲಾಗಿತ್ತು. ಅದನ್ನು ತಿಂದ ಬಳಿಕ ಎಲ್ಲರೂ ಅಸ್ವಸ್ಥರಾಗಿದ್ದಾರೆ. ಅದರಲ್ಲೂ 6 ಜನರ ಸ್ಥಿತಿ ಚಿಂತಾಜನಕವಾಗಿದೆ. 25ಕ್ಕೂ ಹೆಚ್ಚು ಅಯ್ಯಪ್ಪ ಮಾಲಾಧಾರಿಗಳ ಆರೋಗ್ಯದಲ್ಲೂ ಏರುಪೇರಾಗಿದೆ.        ಅಲ್ಲಲ್ಲಿ ಚೆಲ್ಲಿದ್ದ ಪ್ರಸಾದ ತಿಂದ ಕಾಗೆಗಳು, ಹಲವು ಪಕ್ಷಿಗಳೂ ಅಸ್ವಸ್ಥಗೊಂಡಿದ್ದು ಸುಮಾರು 3000 ಕಾಗೆಗಳು ಮೃತಪಟ್ಟಿವೆ. …

ಮುಂದೆ ಓದಿ...

ಟ್ರಾಯ್‍ನ ಹೊಸ ದರ ನೀತಿ ಖಂಡಿಸಿ ಕೇಬಲ್ ಆಪರೇಟರ್ಸ್ ಪ್ರತಿಭಟನೆ

 ತುಮಕೂರು:       ಟ್ರಾಯ್‍ನ ಹೊಸ ದರ ನಿಗದಿಪಡಿಸಿರುವ ನೀತಿಯನ್ನು ಖಂಡಿಸಿ ಜಿಲ್ಲಾ ಕೇಬಲ್ ಟಿವಿ ಆಪರೇಟರ್ಸ್ ಅಸೋಸಿಯೇಷನ್ ವತಿಯಿಂದ ನಗರಲ್ಲಿ ಪ್ರತಿಭಟನೆ ನಡೆಸಲಾಯಿತು.       ಇಲ್ಲಿನ ಟೌನ್‍ಹಾಲ್ ವೃತ್ತದಲ್ಲಿ ಜಮಾಯಿಸಿದ ನೂರಾರು ಮಂದಿ ಕೇಬಲ್ ಆಪರೇಟರ್ಸ್ ಟೆಲಿಕಾಮ್ ರೆಗ್ಯೂಲೇಟರಿ ಅಥಾರಿಟಿ ಆಫ್ ಇಂಡಿಯಾ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಅಶೋಕ ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.       ಡಿ. 29 ರಿಂದ ಜಾರಿಗೆ ತರಲು ಹೊರಟಿರುವ ಹೊಸ ದರ ನಿಗದಿ ನಿಯಮದಿಂದ ಸ್ಥಳೀಯ ಕೇಬಲ್ ನಿರ್ವಾಹಕರು ನಿರುದ್ಯೋಗಿಗಳಾಗುವ ಆತಂಕ ಎದುರಾಗಿದೆ. ಅಲ್ಲಗೆ ಗ್ರಾಹಕರಿಗೂ ತೊಂದರೆಯುಂಟಾಗಲಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.        ಜಿಲ್ಲೆಯಲ್ಲಿ ಕೇಬಲ್ ನಿರ್ವಾಹಕರು ಮತ್ತು ಸಹಾಯಕರು ಸೇರಿ ಸುಮಾರು 10 ಸಾವಿರಕ್ಕೂ ಹೆಚ್ಚು…

ಮುಂದೆ ಓದಿ...

16ರಂದು ಅಮಾನಿಕರೆಯಲ್ಲಿ “ವೈಭವದ ಕನ್ನಡ ರಾಜ್ಯೋತ್ಸವ”

 ತುಮಕೂರು:       ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಅಮಾನಿಕೆರೆ ಮುಂಜಾನೆ ಗೆಳೆಯರ ಬಳಗ(ರಿ) ಇವರ ಸಹಯೋಗದಲ್ಲಿ ನಗರದ ಅಮಾನಿಕೆರೆ ದ್ವಾರದ ಬಳಿ ಡಿಸೆಂಬರ್ 16ರಂದು ಭಾನುವಾರ ಬೆಳಿಗ್ಗೆ 8 ಗಂಟೆಗೆ “ವೈಭವದ ಕನ್ನಡ ರಾಜ್ಯೋತ್ಸವ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.       ಮಹಾ ನಗರಪಾಲಿಕೆ ಮಾಜಿ ಸದಸ್ಯ ಹಾಗೂ ಅಮಾನಿಕೆರೆ ಮುಂಜಾನೆ ಗೆಳೆಯರ ಬಳಗದ ಅಧ್ಯಕ್ಷರಾದ ಟಿ.ಹೆಚ್.ವಾಸುದೇವ್ ಅವರು ಅಂದು ಬೆಳಿಗ್ಗೆ 8 ಗಂಟೆಗೆ ಧ್ವಜಾರೋಹಣ ನೆರವೇರಿಸುವರು. ರಾಜ್ಯೋತ್ಸವದ ಅಂಗವಾಗಿ ಸಂಜೆ 6 ಗಂಟೆಗೆ ವೇದಿಕೆ ಕಾರ್ಯಕ್ರಮ ಹಾಗೂ ಸಂಗೀತ ರಸ ಸಂಜೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ವೇದಿಕೆ ಕಾರ್ಯಕ್ರಮವನ್ನು ಹಿರೇಮಠದ ಡಾ: ಶ್ರೀ ಶ್ರೀ ಶಿವಾನಂದ ಶಿವಾಚಾರ್ಯಸ್ವಾಮಿಗಳವರು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಹಾಗೂ ಸನ್ಮಾನಿತರಾಗಿ ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್, ರಾಷ್ಟ್ರ ಪ್ರಶಸ್ತಿ ಪುರಸ್ಕøತ ಡಿವೈಎಸ್‍ಪಿ ನಾಗರಾಜು, ಹೋಮ್ ಆಫ್ ಹೋಮ್ ಸಂಸ್ಥಾಪಕ…

ಮುಂದೆ ಓದಿ...

  ಡಿ.15ಕ್ಕೆ ಗೂಳೂರು ಗಣೇಶ ವಿಸರ್ಜನಾ ಮಹೋತ್ಸವ

 ತುಮಕೂರು:       ಐತಿಹಾಸಿಕ ಗೂಳೂರು ಶ್ರೀ ಮಹಾಗಣಪತಿಯ ವಿಸರ್ಜನಾ ಮಹೋತ್ಸವ ಡಿ.15ಮತ್ತು16ರಂದು ನಡೆಯಲಿದೆ ಎಂದು ದೇವಾಲಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತಿ ಸದಸ್ಯ ಗೂಳೂರು ಶಿವಕುಮಾರ್ ತಿಳಿಸಿದ್ದಾರೆ.       ನರಕ ಚರ್ತುದರ್ಶಿಯಂದು ಆರಂಭವಾದ ಗೂಳೂರು ಗಣಪನ ಪೂಜಾ ಕೈಂಕರ್ಯಗಳು ಕಾರ್ತಿಕ ಮಾಸದಲ್ಲಿ ಸಂಪೂರ್ಣಗೊಂಡಿದ್ದು, ಸಕಲ ಧಾರ್ಮಿಕ ವಿಧಿವಿಧಾನಗಳ ಮೂಲಕ ಡಿಸೆಂಬರ್ 15ರಂದು ಮಹಾಗಣಪತಿಯ ಉತ್ಸವ ಹಾಗೂ 16ರಂದು ಗೂಳೂರು ಕೆರೆಯಲ್ಲಿ ವಿಸರ್ಜನಾ ಮಹೋತ್ಸವ ನಡೆಯಲಿದೆ       ಡಿ.15ರಂದು ರಾತ್ರಿ 8ಗಂಟೆಗೆ ಗ್ರಾಮದ 18 ಕೋಮಿನ ಜನರು ಒಗ್ಗೂಡಿ ನಿರ್ಮಿಸಿರುವ ಸರ್ವಾಲಂಕೃತ ವಾಹನದಲ್ಲಿ ಗಣಪತಿ ಮೂರ್ತಿಯನ್ನು ಸ್ಥಾಪಿಸಲಾಗುವುದು ನಂತರ ಇಡೀರಾತ್ರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಾದಸ್ವರ, ಕರಡಿಮಜಲು, ನಾಸಿಕ್ ಡೋಲ್, ನಂದಿಕೋಲು, ಕೀಲು ಕುದುರೆ, ಬೊಂಬೆಕುಣಿತ, ವೀರಭದ್ರನ ಕುಣಿತ, ಡೊಳ್ಳುಕುಣಿತ, ಪೂಜಾಕುಣಿತ, ಸೋಮನ ಕುಣಿತದಂತಹ ಜನಪದ ಕಲಾತಂಡಗಳ…

ಮುಂದೆ ಓದಿ...

ಸಿದ್ಧಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ ಸಿಎಂ

ಚನ್ನೈ:       ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಇಂದು ಚೆನ್ನೈನ ರೇಲಾ ಇನ್ಸ್ಟಿಟ್ಯೂಟ್ ಆಂಡ್ ಮೆಡಿಕಲ್ ಸೆಂಟರ್‍ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಸಿದ್ದಗಂಗಾ ಮಠ ಇವರ ಆರೋಗ್ಯ ವಿಚಾರಿಸಿದರು.       ಶ್ರೀಗಳು ಶೀಘ್ರವೇ ಗುಣಮುಖರಾಗಿ ಜನತಾ ಜನಾರ್ದನನ ಸೇವೆಯಲ್ಲಿ ತೊಡಗಲಿ. ಶ್ರೀಗಳು ಮಾಡುತ್ತಿರುವ ತ್ರಿವಿಧ ದಾಸೋಹ ಕೈಂಕರ್ಯ ಇಡೀ ದೇಶಕ್ಕೆ ಮಾದರಿಯಾಗಿದ್ದು ಅವರ ಆಶೀರ್ವಾದ ಎಲ್ಲರ ಮೇಲೂ ನಿರಂತರವಾಗಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಮುಂದೆ ಓದಿ...

ತುಮಕೂರು : 15ನೇ ವಾರ್ಡಿನ ಪಾಲಿಕೆ ಸದಸ್ಯರಿಂದ ಜನಸ್ಪಂದನ ಕಾರ್ಯಕ್ರಮ

ತುಮಕೂರು:       ನಗರದ 15ನೇ ವಾರ್ಡಿನ ಪಾಲಿಕೆ ಸದಸ್ಯರಾದ ಶ್ರೀಮತಿ ಗಿರಿಜಾ ಧನಿಯಾಕುಮಾರ್ ಅವರ ಅಧ್ಯಕ್ಷತೆ ಯಲ್ಲಿ ಇಂದು ಪಾಲಿಕೆಯ ಅಧಿಕಾರಿಗಳು ಮತ್ತು ನಾಗರಿಕರ ಜನಸ್ಪಂದನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.        ಪಾಲಿಕೆಯ ಪರವಾಗಿ ಆರೋಗ್ಯಾಧಿಕಾರಿ ಡಾ.ನಾಗೇಶ್,ಇಂಜಿನಿಯರ್‍ಗಳಾದ ಸಂದೀಪ್, ಮಧುಸೂಧನ್, ಪರಿಸರ ವಿಭಾಗದ ಕೃಷ್ಣಮೂರ್ತಿ, ಕಂದಾಯ ವಿಭಾಗದ ರುದ್ರಮೂರ್ತಿ, ಬೀದಿ ದೀಪ, ಕಸ ನಿರ್ವಹಣೆ ವಿಭಾಗಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರೆ,ಜೈನ ಸಮಾಜದ ಸುರೇಶ್, ಧನಿಯಕುಮಾರ್,ಬೆಸ್ಟೆಕ್ ರಾಮರಾಜು,ವಿನೋದ್,ಬಾಲಚಂದ್ರ, ಸುಮಾರು ಮೂವತ್ತು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮೊದಲಿಗೆ ಮಾತನಾಡಿದ ಪಾಲಿಕೆಯ ಸದಸ್ಯರಾದ ಶ್ರೀಮತಿ ಗಿರಿಜಾ ಧನಿಯಕುಮಾರ್,ನಾವು ಚುನಾವಣೆ ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ಹಲವು ನಾಗರಿಕರು ತಮ್ಮ ಬಡಾವಣೆಯ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತಂದಿದ್ದರು. ಅವರುಗಳನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಕುಡಿಯುವ ನೀರು ಮತ್ತು ಕಸ ವಿಲೇವಾರಿಯನ್ನು ಹೊರತುಪಡಿಸಿ, ಉಳಿದಂತೆ ಬೇರೆ ಸಮಸ್ಯೆಗಳು ಬಗೆಹರಿದಿಲ್ಲ.ಈ ಹಿನ್ನೆಲೆಯಲ್ಲಿ ಇಂದು…

ಮುಂದೆ ಓದಿ...

ತುಮುಲ್ ಅಧ್ಯಕ್ಷರಾಗಿ ತುರುವೇಕೆರೆ ಮಹಾಲಿಂಗಪ್ಪ ಆಯ್ಕೆ

  ತುಮಕೂರು:       ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷರಾಗಿ ತುರುವೇಕೆರೆ ತಾಲೂಕಿನ ಸಿ.ವಿ.ಮಹಾಲಿಂಗಪ್ಪ ಅವರು ಆಯ್ಕೆಯಾಗಿದ್ದಾರೆ. ಜಿಲ್ಲೆಯ 10 ತಾಲೂಕುಗಳಿಂದ ತಲಾ ಒಬ್ಬರಂತೆ 10 ಜನ ನಿರ್ದೇಶಕರು ಹಾಗೂ 4 ಜನ ಅಧಿಕಾರಿಗಳನ್ನು ಒಳಗೊಂಡ 14 ಜನ ಮತದಾರರನ್ನು ಹೊಂದಿದ್ದು,9 ಮತಗಳನ್ನು ಪಡೆದ ಪಡೆದ ಸಿ.ವಿ.ಮಹಾಲಿಂಗಪ್ಪ ಮುಂದಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಡಿ.ಕೃಷ್ಣಕುಮಾರ್ 5 ಮತಗಳನ್ನು ಪಡೆದರು.       ಇಂದು ಮಧ್ಯಾಹ್ನ 12ಕ್ಕೆ ಆರಂಭವಾದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ತುರುವೇಕೆರೆ ಕ್ಷೇತ್ರದ ಸಿ.ವಿ.ಮಹಾಲಿಂಗಯ್ಯ ಮತ್ತು ಕುಣಿಗಲ್ ಕ್ಷೇತ್ರದ ಡಿ.ಕೃಷ್ಣಮೂರ್ತಿ ಅವರುಗಳು ಅಧ್ಯಕ್ಷಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ವಾಪಸ್ಸು ಪಡೆಯಲು ನಿಗಧಿಪಡಿಸಿದ್ದ ಕಾಲಾವಕಾಶದಲ್ಲಿ ಇಬ್ಬರಲ್ಲಿ ಯಾರು ತಮ್ಮ ನಾಮಪತ್ರ ಹಿಂಪಡೆಯದ ಕಾರಣ ಚುನಾವಣೆ ನಡೆಸಲಾಯಿತು.       10 ತಾಲೂಕುಗಳ ಚುನಾಯಿತ ನಿರ್ದೇಶಕರಲ್ಲದೆ,ಸಹಕಾರ ಇಲಾಖೆಯ ಜಂಟಿ ಉಪನಿಬಂಧಕರು, ಕೆ.ಎಂ.ಎಫ್. ಪ್ರತಿನಿಧಿ, ಪಶುಸಂಗೋಪನಾ ಇಲಾಖೆಯ…

ಮುಂದೆ ಓದಿ...

ಕಲ್ಲೂರಿನಲ್ಲಿ ಗ್ರಾಮೀಣ ಸಾರಿಗೆ ಬಸ್ ಉದ್ಘಾಟನೆ

 ತುಮಕೂರು:       ಗ್ರಾಮೀಣ ಪ್ರದೇಶದ ಪ್ರಯಾಣಿಕರ ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಲ್ಲೂರು ಗ್ರಾಮದಿಂದ ತುಮಕೂರು ನಗರಕ್ಕೆ ಕಡಬ, ನಿಟ್ಟೂರು, ಗುಬ್ಬಿ ಮಾರ್ಗವಾಗಿ ಗ್ರಾಮೀಣ ಸಾರಿಗೆ ಮಾರ್ಗಕ್ಕೆ ಚಾಲನೆ ನೀಡಲಾಯಿತು.       ಹೊಸ ಮಾರ್ಗದ ಬಸ್ ಉದ್ಘಾಟಿಸಿ ಮಾತನಾಡಿದ ಸಾರಿಗೆ ಸಂಸ್ಥೆಯ ವಿಭಾಗೀಯ ತಾಂತ್ರಿಕ ಶಿಲ್ಪಿ ಕೆ.ಜೆ.ಬಸವರಾಜು ಈ ಮಾರ್ಗದಲ್ಲಿ ಬಸ್‍ಬೇಕೆಂಬ ಇಲ್ಲಿನ ಜನರ ಬಹಳ ದಿನಗಳ ಬೇಡಿಕೆಯನ್ನು ಈಡೇರಿಸಿದ್ದು, ಇದರ ಉಪಯೋಗವನ್ನು ಪಡೆದುಕೊಳ್ಳಬೇಕೆಂದರು.       ಮುಂದಿನ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆಗನುಣವಾಗಿ ಹೆಚ್ಚಿನ ಟ್ರಿಪ್‍ಗಳನ್ನು ಕಾರ್ಯಾಚರಣೆ ಮಾಡಲಾಗುವುದು. ಈ ಭಾಗದ ಪ್ರಯಾಣಿಕರ ಮತ್ತು ವಿದ್ಯಾರ್ಥಿಗಳ ಬೇಡಿಕೆಯಂತೆ ಮುಂದಿನ ದಿನಗಳಲ್ಲಿ ಕಲ್ಲೂರಿನ ಅಕ್ಕಪಕ್ಕದ ಹಳ್ಳಿಗಳಿಗೂ ಬಸ್ ಸಂಪರ್ಕ ಕಲ್ಪಿಸಲಾಗುವುದು ಎಂದು ತಿಳಿಸಿದರು.       ಈ ಕಾರ್ಯಕ್ರಮದಲ್ಲಿ ಸಾರಿಗೆ ಸಂಸ್ಥೆಯ ಅಧಿಕಾರಿಗಳಾದ ಬಿ.ಮಂಜುನಾಥ್, ಮಹೇಶ್ ಮತ್ತು ಜಿಲ್ಲಾ ಪಂಚಾಯತಿ ಸದಸ್ಯ…

ಮುಂದೆ ಓದಿ...