ಶಾಸಕರಿಗೆ ಡಿಕೆಶಿಯಿಂದ ಭರ್ಜರಿ ಭೋಜನಕೂಟ

ಬೆಳಗಾವಿ :       ಅಧಿವೇಶನ ನಡೆಯುತ್ತಿರುವ ಹಿನ್ನಲೆಯಲ್ಲಿ ಡಿ ಕೆ ಶಿವಕುಮಾರ್ ನಾಳೆ ಸಂಜೆ ಸರ್ವ ಪಕ್ಷದ ಶಾಸಕರಿಗೆ ಭೋಜನಕೂಟ ಆಯೋಜಿಸಿದ್ದಾರೆ.       ಪ್ರತಿ ಬಾರಿ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವಾಗ ಶಾಸಕರಿಗೆ ಜಾರಕೀಹೊಳಿ ಬ್ರದರ್ಸ್ ಭೋಜನಕೂಟ ಏರ್ಪಡಿಸುತ್ತಿದ್ದರು. ಈ ಬಾರಿ ಅಧಿವೇಶ ಆರಂಭವಾಗಿ ವಾರ ಕಳೆದರೂ ಜಾರಕಿಹೊಳಿ ಬ್ರದರ್ಸ್ ಅವರಿಂದ ಶಾಸಕರಿಗೆ ಉಟದ ವಿಚಾರ ಪ್ರಸ್ತಾಪವಾಗಿರಲಿಲ್ಲ. ಬೆಳಗಾವಿ ಉಸ್ತುವಾರಿ ಸಚಿವರಾದ್ರೂ ರಮೇಶ್ ಜಾರಕಿಹೊಳಿ ಮೌನ ವಹಿಸಿದ್ದಾರೆ.       ಡಿಕೆಶಿ ಸರ್ವ ಪಕ್ಷದ ಸಚಿವರಿಗೆ ಭೋಜನಕೂಟ ಆಯೋಜಿಸಿದ್ದು ಜಾರಕೀಹೊಳಿ ಬ್ರದರ್ಸ್ ಗೆ ಟಾಂಗ್ ಕೊಡಲು ಮುಂದಾಗಿದ್ದಾರಾ ಎಂಬ ಮಾತು ಕೇಳಿ ಬರುತ್ತಿದೆ.

ಮುಂದೆ ಓದಿ...

ಸದನದಲ್ಲಿ ಯುವತಿಯ ಫೋಟೋ ವೀಕ್ಷಿಸಿ ಸಿಕ್ಕಿ ಬಿದ್ದ ಮಾಜಿ ಸಚಿವ!

  ಬೆಳಗಾವಿ:     ಸದನದಲ್ಲಿ ಮತ್ತೆ ಮೊಬೈಲ್ ಬಳಕೆ ವಿವಾದ ಸದ್ದು ಮಾಡಿದೆ. ಸದನದಲ್ಲಿ ಮೊಬೈಲ್ ಬಳಕೆಗೆ ನಿಷೇಧವಿದ್ದರೂ, ಮಾಜಿ ಸಚಿವರೊಬ್ಬರು ಮೊಬೈಲ್‌ನಲ್ಲಿ ಯುವತಿಯ ಫೋಟೋ ವೀಕ್ಷಣೆಯಲ್ಲಿ ನೋಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.        ಮಾಜಿ ಸಚಿವ ಎನ್​. ಮಹೇಶ್​ ಅವರು ಸೋಮವಾರ ಮಧ್ಯಾಹ್ನ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ವೇಳೆ ವಿಧಾನಸಭೆಯಲ್ಲಿ ಗಂಭೀರ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಮಹೇಶ್​ ಅವರು ಮೊಬೈಲ್​ ಬಳಕೆಯಲ್ಲಿ ಮಗ್ನರಾಗಿದ್ದರು. ಈ ಮೂಲಕ ಅವರು ಸದನದ ನಿಯಮವನ್ನು ಉಲ್ಲಂಘಿಸಿರುವುದು ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ.

ಮುಂದೆ ಓದಿ...

ವಕೀಲರ ಸಮಸ್ಯೆ ನೀಗಿಸಲು ಆಪ್ ರೀತಿಯಲ್ಲಿ ಪೇಮೆಂಟ್ ವ್ಯವಸ್ಥೆಗೆ ಚಿಂತನೆ

ಚಿಕ್ಕನಾಯಕನಹಳ್ಳಿ:       ವಕೀಲರ ಸಮಸ್ಯೆ ನೀಗಿಸಲು ಸ್ಟಾಂಪ್ ತೆಗೆದು ಹಾಕುವ ಮೂಲಕ ಆನ್‍ಲೈನ್ ಮೂಲಕ ಮೊಬೈಲ್‍ನಲ್ಲಿ ಆಪ್ ರೀತಿಯಲ್ಲಿ ಪೇಮೆಂಟ್ ಮಾಡುವ ವ್ಯವಸ್ಥೆಗೆ ರಾಜ್ಯ ವಕೀಲರ ಪರಿಷತ್ ಚಿಂತನೆಯಲ್ಲಿದೆ ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯ ಹೆಚ್. ಎಲ್ ವಿಶಾಲ್ ರಾಘು ತಿಳಿಸಿದರು.       ಪಟ್ಟಣದ ಸಿವಿಲ್ ನ್ಯಾಯಾಲಯದ ಸಭಾಂಗಣದಲ್ಲಿ ವಕೀಲರಿಗೆ ಆಯೋಜಿಸಿದ್ದ ಕಾನೂನು ಕಾರ್ಯಗಾರದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ ವಕೀಲರ ಪರಿಷತ್ ಸದಾ ನಿಮ್ಮೊಂದಿಗೆ ಕೈ ಜೋಡಿಸುತ್ತೇವೆ. ಹತ್ತು ಹಲವಾರು ವಕೀಲರ ಬೇಡಿಕೆಗೆ ಪರಿಷತ್ ಕೂಡ ಪೂರಕವಾಗಿ ಕೆಲಸ ಮಾಡಲು ಕಂಕಣ ಬದ್ದವಾಗಿದೆ ಈಗಾಗಲೇ ರಾಜ್ಯದ ನಾನಾ ಮೂಲಗಳಿಂದ ವಕೀಲರ ಸ್ಟಾಂಪ್‍ವೇಲ್‍ಪೇರ್ ಬಗ್ಗೆ ಇದ್ದ ಪ್ರಶ್ನೆಗೆ ಪೂರಕವಾಗಿ ಸ್ಟಾಂಫ್ ತೆಗೆದುಹಾಕುವಂತೆ ಇರುವ ಬೇಡಿಕೆಗೆ ಪೂರಕವಾಗಿ ಚರ್ಚೆ ನಡೆಯುತ್ತಿದ್ದು, ಆನ್‍ಲೈನ್ ಮೂಲಕವೇ ಪೇಮೆಂಟ್ ಮಾಡುವ ವ್ಯವಸ್ಥೆಯ ಮೂಲಕ ಗ್ರಾಮಾಂತರ…

ಮುಂದೆ ಓದಿ...

ಉತ್ತಮ ‘ಮಾನವ ಹಕ್ಕುಗಳ ಕಾರ್ಯಕರ್ತ’ ಪುರಸ್ಕಾರ

 ತುಮಕೂರು:       ಅಂತರರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ ಪ್ರಯುಕ್ತ ನವದೆಹಲಿಯ ಜಂತರ್‍ಮಂತರ್‍ನಲ್ಲಿ ಆಲ್ ಇಂಡಿಯಾ ಹ್ಯುಮರ್‍ರೈಟ್ಸ್ ಅಸೋಸಿಯೇಷನ್ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸಮಾವೇಶದಲ್ಲಿ ಅಸೋಸಿಯೇಷನ್‍ನ (AIHRA) ತುಮಕೂರು ಜಿಲ್ಲಾ ಮುಖ್ಯಸ್ಥ ನಗರದ ಸೈಯದ್ ಯೂಸುಫ್ ಉಲ್ಲಾ ಅವರಿಗೆ (AIHRA) ಅಸೋಸಿಯೇಷನ್‍ನ ರಾಷ್ಟ್ರೀಯ ಅಧ್ಯಕ್ಷ ಎಂ.ಯು.ದುವಾ ಅವರು ಉತ್ತಮ ‘ಮಾನವ ಹಕ್ಕುಗಳ ಕಾರ್ಯಕರ್ತ’ ಪುರಸ್ಕಾರ ನೀಡಿ ಗೌರವಿಸಿರುತ್ತಾರೆ.       ದೆಹಲಿಯ ಜಂತರ್‍ಮಂತರ್‍ನಲ್ಲಿ (AIHRA) ಅಸೋಸಿಯೇಷನ್ ವತಿಯಿಂದ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ ಪ್ರಯುಕ್ತ ಹಲವು ಪ್ರಮುಖ ವಿಚಾರಗಳ ಕುರಿತು ಚರ್ಚೆನಡೆಸುವ ಜೊತೆಗೆ ಕೇಂದ್ರ ಸರ್ಕಾರದ ಗಮನಸೆಳೆಯಲು ಒಂದು ದಿನದ ಪ್ರತಿಭಟನಾ ಧರಣಿಯನ್ನೂ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ದೇಶದ ನಾನಾ ಭಾಗಗಳಿಂದ ಸಾವಿರಾರು ಮಾನವಹಕ್ಕುಗಳ ಕಾರ್ಯಕರ್ತರು ಭಾಗವಹಿಸಿದ್ದರು. ದೇಶದ ಆಯ್ದ ಉತ್ತಮ ಮಾನವ ಹಕ್ಕು ಕಾರ್ಯಕರ್ತರನ್ನು ರಾಷ್ಟ್ರೀಯ ಅಧ್ಯಕ್ಷರು ಪುರಸ್ಕರಿಸಿದ್ದು, ಇವರಲ್ಲಿ ತುಮಕೂರಿನ ಸೈಯದ್ ಯೂಸುಫ್…

ಮುಂದೆ ಓದಿ...

ಸಾಲ ಮನ್ನಾಕ್ಕೆ ರೈತರ ಸ್ವಯಂಘೋಷಣೆ ಜ.10 ಕಡೆಯ ದಿನ: ರಾಕೇಶ್ ಕುಮಾರ್

 ತುಮಕೂರು:       ವಾಣಿಜ್ಯ ಬ್ಯಾಂಕ್‍ಗಳಲ್ಲಿನ ರೈತರ ಬೆಳೆ ಸಾಲ ಮನ್ನಾ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದ್ದು, ಅರ್ಹ ಫಲಾನುಭವಿ ರೈತರು ಸ್ವಯಂ ಘೋಷಣೆಯನ್ನು ನೋಂದಾಯಿಸಿಕೊಳ್ಳಲು ಬರುವ 2019ರ ಜನವರಿ 10 ಕಡೆ ದಿನಾಂಕವಾಗಿದೆ ಎಂದು ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಅವರು ತಿಳಿಸಿದ್ದಾರೆ.       ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ 226 ವಾಣಿಜ್ಯ ಬ್ಯಾಂಕ್‍ಗಳ ಶಾಖೆಗಳಲ್ಲಿನ ಸುಮಾರು 85 ಸಾವಿರ ರೈತರ ಅರ್ಹತೆಯನ್ನು ಪಡೆದಿರುತ್ತಾರೆ. ಅದೇ ರೀತಿ 1.22ಲಕ್ಷ ರೈತರು ಸಹಕಾರ ಸಂಘ/ ಬ್ಯಾಂಕ್‍ಗಳಲ್ಲಿ ಬೆಳೆ ಸಾಲ ಪಡೆದಿದ್ದು, ಸಾಲ ಮನ್ನಾ ಯೋಜನೆಯಡಿ ಅರ್ಹತೆ ಪಡೆದಿರುತ್ತಾರೆ ಎಂದು ತಿಳಿಸಿದರು.       ಜಿಲ್ಲೆಯ ವಾಣಿಜ್ಯ ಬ್ಯಾಂಕ್‍ಗಳಲ್ಲಿ ಸಾಲ ಪಡೆದ ರೈತರ ಸಂಖ್ಯೆಯನ್ನು ಆಧರಿಸಿ ಜನವರಿ 10 ಕಡೆಯ ದಿನಾಂಕ ಎಂದು ನಿಗಧಿಪಡಿಸಲಾಗಿದೆ. ಆದರೆ…

ಮುಂದೆ ಓದಿ...

ರಸ್ತೆ ನಿರ್ಮಾಣ : ನಾಗರಕಟ್ಟೆ, ದರ್ಗಾಗಳಿಗೆ ಪಾಲಿಕೆ ನೋಟೀಸ್ – ಜಿಲ್ಲಾಧಿಕಾರಿ

 ತುಮಕೂರು:      ರಾಷ್ಟ್ರೀಯ ಹೆದ್ದಾರಿ 206ರ ರಸ್ತೆ ನಿರ್ಮಾಣ ಕಾಮಗಾರಿ ಉದ್ದೇಶಕ್ಕೆ ತುಮಕೂರು ನಗರದ ನಾಗರಕಟ್ಟೆ, ದರ್ಗಾ ಸೇರಿದಂತೆ 8 ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸುವುದು ಸೂಕ್ಷ್ಮ ವಿಷಯವಾಗಿದ್ದು, ಎಲ್ಲಾ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್ ರವರು ತಿಳಿಸಿದ್ದಾರೆ.        ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮಕೂರು-ಶಿವಮೊಗ್ಗ 206 ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ತುಮಕೂರು ನಗರದ ನಾಗರಕಟ್ಟೆ, 2 ದರ್ಗಾ ಸೇರಿದಂತೆ 8 ಧಾರ್ಮಿಕ ಕಟ್ಟಡಗಳು ತೆರವುಗೊಳಿಸುವ ಕುರಿತು ಸಂಬಂಧಿಸಿದವರಿಗೆ ತುಮಕೂರು ನಗರ ಪಾಲಿಕೆ ನೋಟೀಸ್ ಜಾರಿ ಮಾಡಿದೆ ಎಂದು ಅವರು ಹೇಳಿದರು.       ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸುವ ವಿಚಾರ ಸೂಕ್ಷ್ಮ ವಿಷಯವಾಗಿದ್ದು, ಯಾವುದೇ ಗೊಂದಲಗಳಿಗೆ ಅವಕಾಶ ನೀಡದೆ ಎಲ್ಲಾ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧಾರ ಕೈಗೊಳ್ಳುವುದಾಗಿ ಅವರು ತಿಳಿಸಿದರು.  …

ಮುಂದೆ ಓದಿ...