ಪಾವತಿಯಾಗದ ಸಾಲ: 6,000 ಬ್ಯಾಂಕ್‌ ಅಧಿಕಾರಿಗಳ ವಿರುದ್ಧ ಕ್ರಮ

ಹೊಸದಿಲ್ಲಿ :        ಕಳೆದ ಸಾಲಿನಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳ ಪಾವತಿಯಾಗದ ಸಾಲಗಳ ಪ್ರಮಾಣ ಹೆಚ್ಚಾಗುವಲ್ಲಿ ಕರ್ತವ್ಯ ಲೋಪ ತೋರಿದ ಆರು ಸಾವಿರಕ್ಕೂ ಅಧಿಕ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ.       ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಲೋಕಸಭೆಯಲ್ಲಿಂದು, ತಪ್ಪುಗಾರ ಅಧಿಕಾರಿಗಳಿಗೆ ಲಘು ಪ್ರಮಾಣದಿಂದ ಕಠಿನ ಪ್ರಮಾಣದ ವರೆಗಿನ ದಂಡವನ್ನು ಹೇರಲಾಗಿದೆ ಎಂದು ಲಿಖೀತ ಉತ್ತರದಲ್ಲಿ ಈ ವಿಷಯ ತಿಳಿಸಿದರು.       ಕೆಲವೊಂದು ಪ್ರಕರಣಗಳಲ್ಲಿ ಕೆಲಸದಿಂದ ಕಿತ್ತು ಹಾಕುವ, ಕಡ್ಡಾಯ ನಿವೃತ್ತಿ ನೀಡುವ ಮತ್ತು ಹಿಂಭಡ್ತಿ ನೀಡುವ ಶಿಕ್ಷೆಯನ್ನು ಕರ್ತವ್ಯ ಲೋಪ ತೋರಿದ ಅಧಿಕಾರಿಗಳಿಗೆ ನೀಡಲಾಗಿದೆ ಎಂದು ಹೇಳಿದರು.

ಮುಂದೆ ಓದಿ...

ಭ್ರಷ್ಟ ಅಧಿಕಾರಿಗಳ ಮೇಲೆ ಎಸಿಬಿ ದಾಳಿ

ಮಂಗಳೂರು:       ನಗರದ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ  ಪ್ರವಾಚಕ (ರೀಡರ್) ಮಂಜುನಾಥಯ್ಯ ಅಕ್ರಮ ಆಸ್ತಿ ಹೊಂದಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಶುಕ್ರವಾರ ಭ್ರಷ್ಟಾಚಾರ ನಿಗ್ರಹದಳ (ಎಸಿಬಿ) ಅಧಿಕಾರಿಗಳು ಮಂಗಳೂರು ಮತ್ತು ಉಡುಪಿಯಲ್ಲಿ ದಾಳಿ ನಡೆಸಿದ್ದಾರೆ.       ಮಂಜುನಾಥಯ್ಯ ಅಕ್ರಮ ಆಸ್ತಿ ಹೊಂದಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಉಡುಪಿಯ ವಾಸದ ಮನೆ, ದಾವಣಗೆರೆ, ಚಿಕ್ಕಮಗಳೂರಿನಲ್ಲಿರುವ ಸಂಬಂಧಿಕರ ಮನೆ, ಅಧಿಕಾರಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ ಕಚೇರಿಗೆ ದಾಳಿ ನಡೆಸಿದ್ದಾರೆ. ಮಂಗಳೂರಿನಲ್ಲಿ ಎಸಿಬಿ ಇನ್‌ಸ್ಪೆಕ್ಟರ್ ಯೋಗೀಶ್ ನೇತೃತ್ವದ ತಂಡ ದಾಳಿ ನಡೆಸಿದ್ದು, ಕಚೇರಿಯಲ್ಲಿರುವ ಹಲವು ಕಡತಗಳನ್ನು ಪರಿಶೀಲಿಸಿ, ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.       ಮಂಜುನಾಥಯ್ಯ ಮೂರು ತಿಂಗಳ ಹಿಂದೆ ನಗರದಲ್ಲಿರುವ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯಕ್ಕೆ ಪ್ರವಾಚಕರಾಗಿ ಬಂದಿದ್ದರು.ಆದರೆ ಒಂದೂವರೆ ತಿಂಗಳಿನಿಂದ ಕೆಲಸಕ್ಕೆ ಬಾರದೆ ತುರ್ತು ರಜೆ ಹಾಕಿದ್ದರು. ಬಿಎಡ್ ಕಾಲೇಜಿನಲ್ಲಿ ಕೆಲಸ ಮಾಡಲು ಇಷ್ಟವಿಲ್ಲದ…

ಮುಂದೆ ಓದಿ...

ಸುಸ್ತು ಇರುವುದರಿಂದ ಸಿದ್ಢಗಂಗಾ ಶ್ರೀಗಳಿಗೆ ವಿಶ್ರಾಂತಿ ಬೇಕು: ಶ್ರೀ ನಿರ್ಮಲಾನಂದ ಸ್ವಾಮೀಜಿ

ತುಮಕೂರು:       ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಆರೋಗ್ಯವಾಗಿದ್ದು, ಸುಸ್ತು ಇರುವುದರಿಂದ ಸ್ವಲ್ಪ ವಿಶ್ರಾಂತಿ ಬೇಕು ಎಂದು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ ತಿಳಿಸಿದರು. ಇಂದು ಸಿದ್ಧಗಂಗಾ ಮ ಠಕ್ಕೆ ಭೇಟಿ ನೀಡಿದ್ದ ವೇಳೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ಮಠದ ಕಿರಿಯ ಸ್ವಾಮೀಜಿ ಅವರೊಂದಿಗೆ ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯದ ಕುರಿತು ಮಾಹಿತಿ ಪಡೆದರು.       ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿವಕುಮಾರ ಸ್ವಾಮೀಜಿಯವರ ಎಲ್ಲಾ ಪ್ಯಾರಾ ಮೀಟರ್ಸ್ ನಾರ್ಮಲ್ ಆಗಿದೆ. ಬಿಪಿ, ಪಲ್ಸ್​ ರೇಟ್, ಆಕ್ಸಿಜನ್ ಸ್ಯಾಚುರೇಷನ್ ಕೂಡ ಸಹಜ ಸ್ಥಿತಿಯಲ್ಲಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದರು.       ಯಾವಾಗ ಬಂದ್ರಿ,  ಚೆನ್ನಾಗಿದ್ದೀರಾ ಪ್ರಸಾದ ಮಾಡಿಕೊಂಡು ಹೋಗಿ. ಇನ್ನೂ ಸ್ವಲ್ಪ ಹೊತ್ತು ಇದ್ದು ಹೋಗಿ  ಎಂದು ಶಿವಕುಮಾರ ಸ್ವಾಮೀಜಿ ತಮ್ಮೊಂದಿಗೆ ಮಾತನಾಡಿದ್ದಾರೆ. ತಾವು…

ಮುಂದೆ ಓದಿ...

ಕಾಂಗ್ರೆಸ್ ಪಕ್ಷದ 134ನೇ ಸಂಸ್ಥಾಪನಾ ದಿನಾಚರಣೆ

ತುಮಕೂರು:      ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ 134ನೇ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು.       ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಸಂಸ್ಥಾಪನಾ ದಿನವನ್ನು ಆರಂಭಿಸಿದರು.       ಕಾರ್ಯಕ್ರಮ ಕುರಿತು ಮಾತನಾಡಿದ ಮಾಜಿ ಶಾಸಕ ಡಾ.ರಫೀಕ್ ಅಹಮದ್,ಸ್ವಾತಂತ್ರ ಹೋರಾಟಗಾರರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ 1885ರಲ್ಲಿ ಸ್ಥಾಪಿತವಾದ ಕಾಂಗ್ರೆಸ್ ಆರಂಭದಲ್ಲಿ ರಾಜಕೀಯೇತರ ಸಂಘಟನೆಯಾಗಿ, ಸ್ವಾತಂತ್ರ ಚಳವಳಿಗೆ ಜನರನ್ನು ಒಗ್ಗೂಡಿಸುವ ಕೆಲಸವನ್ನು ಮಾಡಿ, ಹತ್ತಾರು ವರ್ಷಗಳ ನಿರಂತರ ಹೋರಾಟದ ಫಲವಾಗಿ 1947 ರಲ್ಲಿ ದೇಶ ಸ್ವಾತಂತ್ರ ಪಡೆಯುವಂತಾಯಿತು.ಮಹಾತ್ಮಗಾಂಧಿ ಮತ್ತು ಇನ್ನಿತರ ನಾಯಕರ ತ್ಯಾಗ ಮತ್ತು ಹೋರಾಟದ ಫಲವಾಗಿ ದೇಶ ಅಭಿವೃದ್ದಿಯತ್ತ ಸಾಗಿದೆ.ಸ್ವಾತಂತ್ರ ನಂತರದಲ್ಲಿ ರಾಜಕೀಯ ಪಕ್ಷವಾಗಿ ನೊಂದಾಯಿತವಾದ ಕಾಂಗ್ರೆಸ್,…

ಮುಂದೆ ಓದಿ...

ಪ್ರಾದೇಶಿಕ ಭಾಷೆಗಳು ಸಂಕಷ್ಟ ಎದುರಿಸುತ್ತಿವೆ-ಜಿ.ಬಿ.ಜೋತಿಗಣೇಶ

 ತುಮಕೂರು:       ಕನ್ನಡ ಸೇರಿದಂತೆ ದೇಶದ ಹಲವು ಪ್ರಾದೇಶಿಕ ಭಾಷೆಗಳು ಸಮಸ್ಯೆಯನ್ನು ಎದುರಿಸುತ್ತಿದ್ದು, ಇವುಗಳ ಉಳಿವಿಗೆ ಮನೆಯಿಂದಲೇ ಮಕ್ಕಳಿಗೆ ಅಯಾಯ ಸ್ಥಳೀಯ ಭಾಷೆಗಳನ್ನು ಕಲಿಸುವ ಮತ್ತು ಬಳಸುವ ಕೆಲಸ ಆಗಬೇಕಾಗಿದೆ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ.       ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಕೆ.ಎಸ್.ಆರ್.ಟಿ.ಸಿ ಕನ್ನಡ ಕ್ರಿಯಾ ಸಮಿತಿ ಆಯೋಜಿಸಿದ್ದ ಕನ್ನಡ ನುಡಿ ಸಿರಿ-2018ಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ತಾಯಂದಿರುವ ಮನೆಯಲ್ಲಿ ಮಕ್ಕಳೊಂದಿಗೆ ಕನ್ನಡದಲ್ಲಿಯೇ ಮಾತನಾಡು ವುದನ್ನು ಆರಂಭಿಸಿದರೆ ತಾನಾಗಿಯೇ ಕನ್ನಡ ಬೆಳೆಯಲು ಕಾರಣವಾಗುತ್ತದೆ ಎಂದರು.       ಇಂದು ಒಂದು ಮಗು ಕನ್ನಡ ಭಾಷೆಯಿಂದ ಶಿಕ್ಷಣ ಪಡೆದಾಗ, ಅದರ ಮನಸ್ಸು ವಿಕಾಸಗೊಳ್ಳುವುದರ ಜೊತೆಗೆ, ಭಾಷೆಯ ಜೊತೆಯಲ್ಲಿಯೇ ಅಂಟಿಕೊಂಡಿರುವ ಸಂಸ್ಕøತಿ, ಸಾಂಸ್ಕøತಿಕ ಹಿರಿಮೆ, ಗರಿಮೆಗಳ ಪರಿಚಯವಾಗುತ್ತದೆ. ಆಡಳಿತ ಭಾಷೆ ಯಾವುದೇ ಇದ್ದರೂ ಮನೆಯಲ್ಲಿ ಕನ್ನಡ ಮಾತನಾಡುವುದನ್ನು ರೂಢಿಸಿಕೊಂಡರೆ,…

ಮುಂದೆ ಓದಿ...

ಕೆ.ಎಸ್.ಎಫ್.ಸಿ.ಯಿಂದ ನೆರವು ಪಡೆದು ಬೃಹತ್ ಉದ್ದಿಮೆದಾರರಾಗಲು ಕರೆ

 ತುಮಕೂರು :       ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಿಂದ ಸಾಲ ಸೌಲಭ್ಯದ ನೆರವು ಪಡೆದು ಬೃಹತ್ ಉದ್ದಿಮೆದಾರರಾಗಬೇಕೆಂದು ಜಿಲ್ಲಾ ವಾಣಿಜ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಹೆಚ್.ಜಿ.ಚಂದ್ರಶೇಖರ್ ಕರೆ ನೀಡಿದರು.       ರಾಜ್ಯ ಹಣಕಾಸು ಸಂಸ್ಥೆ ಜಿಲ್ಲಾ ಕಚೇರಿ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದಲ್ಲಿ ಇತ್ತೀಚೆಗೆ ಡಿಐಸಿ ಸಭಾಂಗಣದಲ್ಲಿ ಏರ್ಪಡಿಸಿದ್ದ “ಉದ್ದಿಮೆದಾರರ ಸಮಾವೇಶ”ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂಸ್ಥೆಯಿಂದ ತಾವು ಪಡೆದ ಸಾಲ ಸೌಲಭ್ಯದ ನೆರವಿನ ಬಗ್ಗೆ ಅನುಭವವನ್ನು ಹಂಚಿಕೊಂಡರು. ಉದ್ದಿಮೆದಾರರು ಕಡಿಮೆ ಬಡ್ಡಿ ದರದಲ್ಲಿ ದೊರೆಯುವ ಸಾಲ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆಗೆ ಕಾರಣೀಭೂತರಾಗಬೇಕೆಂದು ಸಲಹೆ ನೀಡಿದರು.       ಅಧ್ಯಕ್ಷತೆವಹಿಸಿದ್ದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಎಲ್. ನಾಗರಾಜು ಮಾತನಾಡಿ, ಜಿಲ್ಲಾ ಕೈಗಾರಿಕಾ ಕೇಂದ್ರದಿಂದ ಕೈಗಾರಿಕೋದ್ಯಮಿಗಳಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.  …

ಮುಂದೆ ಓದಿ...

 ವಿಕಲಚೇತನರ ಯೋಜನೆಗಳ ಬಗ್ಗೆ ಪೋಷಕರಲ್ಲಿ ಹೆಚ್ಚಿನ ಅರಿವು ಅಗತ್ಯ

ತುಮಕೂರು :       ವಿಕಲಚೇತನರಿಗೆ ವಿವಿಧ ಇಲಾಖೆಗಳಲ್ಲಿರುವ ಯೋಜನೆಗಳ ಬಗ್ಗೆ ಪೋಷಕರಿಗೆ ಹೆಚ್ಚಿನ ಅರಿವು ಮೂಡಿಸಬೇಕಾಗಿದೆ ಎಂದು ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಆಯುಕ್ತ ವಿ.ಎಸ್. ಬಸವರಾಜು ಅವರು ತಿಳಿಸಿದರು.        ನಗರದ ಬಾಲಭವನದಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಹೊಸ ಕಾಯ್ದೆ ಪ್ರಕಾರ 21 ವಿವಿಧ ರೀತಿಯ ದೈಹಿಕ ಹಾಗೂ ಮಾನಸಿಕ ವೈಕಲ್ಯತೆಗಳು ಸೇರ್ಪಡೆಗೊಂಡಿದ್ದು, ವಿಕಲಚೇತನ ರ ಸಂಖ್ಯೆ ಹೆಚ್ಚಳವಾಗಲಿದೆ. ರಾಜ್ಯದಲ್ಲಿ ಅಂಗವಿಕಲರ ಸಮೀಕ್ಷೆ ನಡೆಸಲು ಪ್ರಸ್ತಾವನೆಯನ್ನು ಸಿದ್ಧಪಡಿಸಿದ್ದು, ಸಂಪೂರ್ಣ ಸಮೀಕ್ಷೆ ನಡೆಸಲು ಎರಡು ವರ್ಷಗಳು ಬೇಕಾಗುವುದು ಎಂದು ಅವರು ತಿಳಿಸಿದರು.        ತುಮಕೂರು ಜಿಲ್ಲೆಯಲ್ಲಿ ನಿನ್ನೆ ಮತ್ತು ಇಂದು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಲಾಗಿದೆ. ಅಧಿಕಾರಿಗಳಿಗೆ ಹೊಸ ಕಾಯ್ದೆಯಲ್ಲಿ ಕೆಲವೊಂದು ನಿಯಮಗಳ ಬಗ್ಗೆ ಅರಿವು ಬೇಕಾಗಿದೆ ಎಂದು ಅವರು ತಿಳಿಸಿದರು. …

ಮುಂದೆ ಓದಿ...

ರಾಷ್ಟ್ರೀಯ ಹೆದ್ದಾರಿ ತುರುವೇಕೆರೆ ಪಟ್ಟಣದಲ್ಲಿಯೇ ಹಾದು ಹೋಗಬೇಕು : ಪರಿಸರ ತಜ್ನ ಡಾ:ಎ.ಎನ್.ಯಲ್ಲಪ್ಪರೆಡ್ಡಿ

ತುರುವೇಕೆರೆ:       ಚಾಮರಾಜನಗರ ದಿಂದ ಜೇವರ್ಗಿಯವರೆಗೆ ಅಭಿವೃದ್ದಿಪಡಿಸಲು ಮುಂದಾಗಿರುವ ರಾಷ್ಟ್ರೀಯ ಹೆದ್ದಾರಿ ತುರುವೇಕೆರೆ ಪಟ್ಟಣದಲ್ಲಿಯೇ ಹಾದು ಹೋಗಬೇಕೆ ಹೊರತು ಬೈಪಾಸ್ ನಿರ್ಮಾಣವೆಂಬುದು ಅವೈಜ್ನಾನಿಕ ನಿರ್ಧಾರವಾಗಿದೆ ಎಂದು ಪರಿಸರ ತಜ್ನ ಡಾ:ಎ.ಎನ್.ಯಲ್ಲಪ್ಪರೆಡ್ಡಿ ಸರ್ಕಾರದ ಕ್ರಮವನ್ನು ಖಂಡಿಸಿದರು.        ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫಲವತ್ತಾದ ಕೃಷಿ ಭೂಮಿಯಲ್ಲಿ ಹೆದ್ದಾರಿ ನಿರ್ಮಾಣ ಮಾಡುವುದೇ ಅಭಿವೃದ್ದಿ ಎನ್ನುವುದಾದರೆ, ಅಂಥಹ ಅಭಿವೃದ್ದಿ ನಮಗೆ ಅವಶ್ಯಕತೆಯಿಲ್ಲ, ರೈತರು ತಮ್ಮ ಜಮೀನುಗಳಲ್ಲಿ ಬೆಳೆಸುವ ಮರಗಳನ್ನು ತಮ್ಮ ಮಕ್ಕಳ ರೀತಿ ಪೋಷಿಸಿರುತ್ತಾರೆ, ಅಂತಹ ಅವಿನಾಭಾವ ಸಂಭಂದವನ್ನು ಅವರು ತಮ್ಮ ಜಮೀನಿನೊಡನೆ ಹೊಂದಿರುತ್ತಾರೆ, ಏಕಾ-ಏಕಿ ಕೇಂದ್ರದ ನಿರ್ಧಾರ ಅಥವಾ ರಾಜ್ಯದ ನಿರ್ಧಾರವೆಂದು ರೈತರಿಗೆ ನೋಟೀಸ್ ನೀಡಿ ವಶಪಡಿಸಿಕೊಂಡರೆ ಸಾಕಿ-ಸಲಹಿ ಶಿಕ್ಷಣಕೊಡಿಸಿದ ಮಕ್ಕಳನ್ನು ತನ್ನ ಕಣ್ಣ ಮುಂದೆಯೇ ಹತ್ಯೆಗೈದಂತಾಗುತ್ತದೆ ಇಂತಹ ಭಾವನಾತ್ಮಕ ಸಂಭಂಧ ಸರ್ಕಾರಕ್ಕೆ ಕಾಣುವುದಿಲ್ಲ.       ಬೈಪಾಸ್…

ಮುಂದೆ ಓದಿ...

ರೋಟರಿ ಸಂಸ್ಥೆ ದೇಶದಾದ್ಯಂತ ಹೆಚ್ಚಿನ ಜನಮನ್ನಣೆ ಗಳಿಸಿಕೊಂಡಿದೆ : ರೋಟರಿ ಜಿಲ್ಲಾ ರಾಜ್ಯಪಾಲ ಸುರೇಶ್‍ಹರಿ

ತುರುವೇಕೆರೆ:       ಜಾತಿ, ಮತ, ಧರ್ಮಗಳೆಂಬ ಸೀಮಾತೀತ ಎಲ್ಲೆಯನ್ನೂ ಮೀರಿದ ಆಶಯಗಳನ್ನು ಹೊಂದಿರುವ ರೋಟರಿ ಸಂಸ್ಥೆ ದೇಶದಾದ್ಯಂತ ಹೆಚ್ಚಿನ ಜನಮನ್ನಣೆ ಗಳಿಸಿಕೊಂಡಿದೆ ಎಂದು ರೋಟರಿ ಜಿಲ್ಲಾ ರಾಜ್ಯಪಾಲ ಸುರೇಶ್‍ಹರಿ ಅಭಿಪ್ರಾಯಪಟ್ಟರು.       ಪಟ್ಟಣದ ಜೆ.ಪಿ, ಆಂಗ್ಲಶಾಲಾ ಆವರಣದಲ್ಲಿ ತಾಲ್ಲೂಕು ರೋಟರಿ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ರೋಟರಿ ಜಿಲ್ಲಾ-3190 ರಾಜ್ಯಪಾಲಾರ ಅಧಿಕೃತ ಭೇಟಿ ಸಮಾರಂಭದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶುದ್ದಕುಡಿಯುವ ನೀರಿನ ಘಟಕ ಸ್ಥಾಪನೆ ಸೇರಿದಂತೆ ಜನರಿಗೆ ಅನುಕೂಲವಾಗುವ ಇನ್ನು ಹತ್ತಾರು ಶಾಶ್ವತ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸಮಾಜಮುಖಿ ಕೆಲಸಗಳಲ್ಲಿ ರೋಟರಿ ಕ್ಲಬ್ ತೊಡಗಿಸಿಕೊಳ್ಳಬೇಕು. ದುಡಿಮೆಯ ಸ್ವಲ್ಪಭಾಗವನ್ನಾದರೂ ಸಮಾಜಕ್ಕೆ ಮರಳಿ ನೀಡುವ ಎಷ್ಟೋ ಮಂದಿ ದಾನಿಗಳಿದ್ದಾರೆ. ಅವರಿಂದ ದಾನ ಪಡೆದು ಗ್ರಾಮೀಣ ಪ್ರದೇಶದ ಜನರ ಶ್ರೇಯೋಭಿವೃದ್ದಿಗೆ ಶ್ರಮಿಸಿ ಎಂದು ರೋಟರಿ ಸದಸ್ಯರಿಗೆ ಕಿವಿ ಮಾತು ಹೇಳಿದರು.       ಸಾರ್ವಜನಿಕರ…

ಮುಂದೆ ಓದಿ...