ಹಾಸನದಿಂದ ಪ್ರಜ್ವಲ್‌ ಕಣಕ್ಕೆ

ಬೆಂಗಳೂರು:      ಹಾಸನವನ್ನ ಪ್ರಜ್ವಲ್ ಗೆ ಬಿಟ್ಟುಕೊಡ್ತೇನೆ ಅಂತ ಮಾಜಿ ಪಿಎಂ ಹೆಚ್.ಡಿ ದೇವೇಗೌಡ್ರು ಘೋಷಣೆ ಮಾಡಿದ್ದಾರೆ.       ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದರು. ಇದೇ ವೇಳೆ ಪ್ರಜ್ವಲ್ ರೇವಣ್ಣ ಹಾಸನದಿಂದ ಸ್ಪರ್ಧೆ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿ, ಪ್ರಜ್ವಲ್‌ ಹಾಸನದಲ್ಲಿ ಪಕ್ಷ ಸಂಘಟಿಸುವ ಕೆಲಸ ಮಾಡುತ್ತಿದ್ದಾನೆ. ಹೀಗಾಗಿ ನಾನು ಹಾಸನ ಲೋಕಸಭಾ ಕ್ಷೇತ್ರವನ್ನು ಅವನಿಗೆ ಬಿಟ್ಟುಕೊಡುತ್ತೇನೆ ಎಂದರು.        ಈ ಮೂಲಕ ಅಧಿಕೃತವಾಗಿ ಮುಂದಿನ ಲೋಕಸಭಾ ಚುನಾವಣೆಗೆ ಪ್ರಜ್ವಲ್ ರೇವಣ್ಣನವರು ಪ್ರವೇಶ ಮಾಡುವುದು ಬಹುತೇಕ ಫಿಕ್ಸ್ ಆಗಿದೆ.

ಮುಂದೆ ಓದಿ...

ಬೆಸ್ಕಾಂ ಕುಣಿಗಲ್ ವಿಭಾಗದಿಂದ ವಿದ್ಯುತ್ ಸುರಕ್ಷತಾ ಸಪ್ತಾಹ ಆಚರಣೆ

 ತುಮಕೂರು:       ಬೆಸ್ಕಾಂ ಕುಣಿಗಲ್ ವಿಭಾಗ ಕಚೇರಿಯಲ್ಲಿ ಇಂದು ವಿದ್ಯುತ್ ಅಪಘಾತ ತಡೆಯುವ ನಿಟ್ಟಿನಲ್ಲಿ ಸುರಕ್ಷತಾ ಸಪ್ತಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.       ಕಾರ್ಯಕ್ರಮವನ್ನು ಬೆಸ್ಕಾಂನ ಕಾರ್ಯನಿರ್ವಾಹಕ ಇಂಜಿನಿಯರ್ ಬಸವರಾಜು ಚಾಲನೆ ನೀಡಿದರು.ಈ ವೇಳೆ ಮಾತನಾಡಿದ ಅವರು, ಇಲಾಖೆಯ ಸಿಬ್ಬಂದಿ ವರ್ಗದವರು, ತಾವು ಕಾರ್ಯನಿರ್ವಹಿಸುವ ವೇಳೆ ಇಲಾಖೆ ನೀಡಿರುವ ಸುರಕ್ಷತಾ ಸಾಧನಗಳನ್ನು ಬಳಸಿಕೊಂಡು, ಅಪಘಾತರಹಿತ ಕಾರ್ಯನಿರ್ವಹಣೆಗೆ ಒತ್ತು ನೀಡುವಂತೆ ಸಲಹೆ ನೀಡಿದರು.       ಈಗಾಗಲೇ ನೌಕರರಿಗೆ ಹರ್ತರಾಡ್,ಹೆಲ್ಮೇಟ್‍ಗಳು,ಸೇಪ್ಟಿ ಶೂ, ಕಟ್ಟಿಂಗ್ ಪ್ಲೇಯರ್,ಸೇಪ್ಟಿ ಬೆಲ್ಟ್ ಅಳವಡಿಸಿಕೊಂಡು, ವಿದ್ಯುತ್ ಮಾರ್ಗಮುಕ್ತಗೊಳಿಸಿ ಕೆಲಸ ಮಾಡುವುದರಿಂದ ಶೇ100ಕ್ಕೆ ನೂರಷ್ಟು ವಿದ್ಯುತ್ ಅವಘಡಗಳನ್ನು ತಡೆ ಹಿಡಿಯ ಬಹುದಾಗಿದೆ.ಆದ್ದರಿಂದ ನೌಕರರು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ಇಲಾಖೆಯನ್ನು ಅಪಘಾತ ರಹಿತ ಸಂಸ್ಥೆಯನ್ನಾಗಿಸಲು ಮುಂದಾಗುವಂತೆ ಮನವಿ ಮಾಡಿದರು.       ಲೆಕ್ಕಾಧಿಕಾರಿ ಬಿ.ವಿ.ನಾಗರಾಜು ಮಾತನಾಡಿ,ಇಲಾಖೆಯಲ್ಲಿ ನೌಕರರ ಸುರಕ್ಷತೆ ಕುರಿತಂತೆ…

ಮುಂದೆ ಓದಿ...

ಕುವೆಂಪು ಎನ್ನುವ ಹೆಸರೇ ಮಹಾನ್ ಚೇತನ -ಸಂಸದ ಎಸ್.ಪಿ. ಮುದ್ದಹನುಮೇಗೌಡ

 ತುಮಕೂರು:       ರಾಷ್ಟ್ರ ಕವಿ ಕುವೆಂಪು ಅವರ ಜನ್ಮ ದಿನವನ್ನು ನಾವು ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ “ವಿಶ್ವ ಮಾನವ ದಿನಾಚರಣೆ”ಯನ್ನಾಗಿ ಆಚರಿಸುತ್ತಿದ್ದು, ರೈತರು ಬೆಳೆದ ಬೆಳೆಗೆ ಮತ್ತು ರೈತರ ಆತ್ಮಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದ ಕುವೆಂಪು ಅವರೇ ಮಹಾನ್ ಚೇತನ ಎಂದು ಸಂಸದ ಎಸ್.ಪಿ. ಮುದ್ದಹನುಮೇಗೌಡ ಅವರು ಅಭಿಪ್ರಾಯಪಟ್ಟರು.       ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಗುರುಶ್ರೀ ಕಾಲೇಜ್ ಆಫ್ ಕಾಮರ್ಸ್ ಅಂಡ್ ಸೋಷಿಯಲ್ ವರ್ಕ್‍ನ ಸಂಯುಕ್ತಾಶ್ರಯದಲ್ಲಿಂದು ನಗರದ ಕನ್ನಡ ಭವನದಲ್ಲಿ ಆಯೋಜಿಸಿದ್ದ “ವಿಶ್ವ ಮಾನವ ದಿನಾಚರಣೆ”ಯನ್ನು ಉದ್ಘಾಟಿಸಿ ಮಾತನಾಡಿದರು.       ಕುವೆಂಪು ಅವರು ತೀರ್ಥಹಳ್ಳಿಯಲ್ಲಿ ಹುಟ್ಟಿ, ಅತ್ಯಂತ ಸರಳ ವಿಚಾರ, ಸಾಹಿತ್ಯ, ಕಾವ್ಯಗಳನ್ನು ರಚಿಸಿ ಜನರ ಮನ ಮುಟ್ಟುವಂತೆ ಮಾಡಿದ್ದಾರೆ. ಅವರಿಂದ ಕನ್ನಡ…

ಮುಂದೆ ಓದಿ...

ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ವಿಧಿವಶ : ನಾಳೆ ಅಂತ್ಯಕ್ರಿಯೆ

ಉಡುಪಿ:       ಹೈದರಾಬಾದ್ ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ನಿಧನರಾದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಪಾರ್ಥಿವ ಶರೀರದ ಅಂತ್ಯಕ್ರಿಯೆ ಅವರ ಸ್ವಂತ ಊರು ಕುಂದಾಪುರ ತಾಲೂಕಿನ ಯೆಡಾಡಿಯಲ್ಲಿ ರವಿವಾರ ಬೆಳಗ್ಗೆ 10 ಗಂಟೆಗೆ ನಡೆಯಲಿದೆ.      ಶನಿವಾರ ಬೆಳಗ್ಗೆ 11ರಿಂದ 2 ಗಂಟೆ ತನಕ ಯಲಹಂಕದಲ್ಲಿರುವ ಸಶಸ್ತ್ರ ಪೊಲೀಸ್ ಪಡೆಯ ತರಬೇತಿ ಶಾಲೆಯ ಆವರಣದಲ್ಲಿ ಮಧುಕರ್ ಶೆಟ್ಟಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆ 5 ಗಂಟೆಯ ಸುಮಾರಿಗೆ ಪಾರ್ಥಿವ ಶರೀರವನ್ನು ಹುಟ್ಟೂರಿಗೆ ಕೊಂಡೊಯ್ಯಲಾಗುವುದು. ಇಂದು ರಾತ್ರಿ 11 ಗಂಟೆಗೆ ಪಾರ್ಥಿವ ಶರೀರ ಮಧುಕರ ಶೆಟ್ಟಿಯವರ ಊರಿಗೆ ತಲುಪಲಿದೆ ಎಂದು ಮೂಲಗಳು ತಿಳಿಸಿವೆ. ತನಿಖೆಗೆ ಆಗ್ರಹ:        ದಕ್ಷ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರ ಸಾವು ಕುರಿತ ವರದಿಯನ್ನು ಆಧರಿಸಿ ಸಂಶಯವಿದ್ದರೆ…

ಮುಂದೆ ಓದಿ...

ಪತಿಯ ಕಾಟ ತಾಳಲಾರದೇ ಪತ್ನಿ ನೇಣಿಗೆ ಶರಣು

ಚಿಕ್ಕನಾಯಕನಹಳ್ಳಿ :       ತಾಲ್ಲೂಕಿನ ಹಂದನಕೆರೆ ಹೋಬಳಿಯ ರಂಗಾಪುರ ಗ್ರಾಮದ 21 ವರ್ಷದ ಯಶೋಧ ತನ್ನ ವೇಲನ್ನೇ ಕುತ್ತಿಗೆಗೆ ಕುಣಿಕೆ ಮಾಡಿಕೊಂಡು ಮೃತ ಪಟ್ಟಿರುವ ಘಟನೆ ನಡೆದಿದೆ.       ಹುಳಿಯಾರು ಹೋಬಳಿಯ ಕುರಿಹಟ್ಟಿ ನಿವಾಸಿ ಲಿಂಗರಾಜುಗೆ ಮಗಳಾದ ಯಶೋದಳನ್ನು ಹಂದನಕೆರೆ ಹೋಬಳಿಯ ರಂಗಾಪುರ ಗ್ರಾಮದ ನಿವಾಸಿ ಪಾಂಡುರಂಗನಿಗೆ ವಿವಾಹ ಮಾಡಿಕೊಡಲಾಗಿತ್ತು, ಗಂಡ ಪಾಂಡುರಂಗ ತನ್ನ ಹೆಂಡ್ತಿಗೆ ಹಣ ತರುವಂತೆ ಪೀಡಿಸುತ್ತಿದ್ದ ಇವನ ಒತ್ತಡಕ್ಕೆ ಮಣಿದ ಮಾವನ ಮನೆಯವರು ಒಂದು ಚಿನ್ನದ ಸರವನ್ನು ಕೊಟ್ಟಿದ್ದರು. ತೃಪ್ತನಾಗದ ಅಳಿಮಯ್ಯ ಹೆಂಡತಿಯನ್ನು ಪೀಡಿಸುತ್ತಿದ್ದ ಎನ್ನಲಾಗಿದೆ. ಇವನ ಕಾಟಕ್ಕೆ ಸೋತುಹೋಗಿದ್ದ ಹೆಂಡತಿ ಯಶೋಧ ಗಂಡನ ಮನೆಯಲ್ಲಿ ನೇಣು ಬಿಗಿದು ಸತ್ತಿರುತ್ತಾಳೆ.       ಮೃತ ಯಶೋದ ಗಾರ್ಮೆಂಟ್ ಉದ್ಯಮದಲ್ಲಿ ಕೆಲಸ ಮಾಡಿಕೊಂಡು ಗಂಡನ ಹೆಗಲಿಗೆ ಹೆಗಲಾಗಿ ದುಡಿದು ಜೀವನ ನಡೆಸುತ್ತಿದ್ದಳು. ಆರೋಪಿ ಪಾಂಡುರಂಗ ತಲೆ ಮರೆಸಿಕೊಂಡು…

ಮುಂದೆ ಓದಿ...

ಐಎಲ್‍ಸಿ ಶಿಫಾರಸು ಜಾರಿಗೆ ಅಂಗನವಾಡಿ ನೌಕರರ ಆಗ್ರಹ

 ತುರುವೇಕೆರೆ:       ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಹಂತಹಂತವಾಗಿ ಕೇಂದ್ರದಿಂದ ನೀಡುವ ಶೇಕಡ 75ರಷ್ಟು ಅನುದಾವನ್ನು ಕಡಿತ ಮಾಡಿರುವುದು ಬಡಜನ ವಿರೋಧಿ ಕ್ರಮವಾಗಿದೆ. ಹಾಗೆಯೇ ಅಪೌಷ್ಠಕತೆಯಿಂದ ಬಳಲುವ ಮಕ್ಕಳು ಮತ್ತು ಮಹಿಳೆಯರಿಗೆ ಖರ್ಚು ಮಾಡಲು ತಯಾರಿಲ್ಲದ ಸರ್ಕಾರ ಲಕ್ಷಗಟ್ಟಲೆ ಕೋಟಿಗಳ ತೆರಿಗೆ ವಿನಾಯಿತಿಯನ್ನು ಶ್ರೀಮಂತ ಉದ್ಯಮಿಗಳಿಗೆ ನೀಡುತ್ತಿದೆ. ಇದು ಸರ್ಕಾರ ಯಾರ ಪರ ಇದೆ ಎಂಬುದಕ್ಕೆ ಸಾಕ್ಷಿಯಾಗಿದೆ ಸಿಐಟಿಯು ರಾಜ್ಯಧ್ಯಕ್ಷರು ಹಾಗೂ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್.ವರಲಕ್ಷ್ಮಿ ಆಪಾದಿಸಿದರು.       ತುರುವೇರೆ ಪಟ್ಟಣದ ಸಿದ್ದರಾಮೇಶ್ವ ಸಮುದಾಯ ಭವನದಲ್ಲಿ ನಡೆಯುತ್ತಿರುವ ರಾಜ್ಯ ಅಂಗನವಾಡಿ ನೌಕರರ ಸಂಘದ ತುಮಕೂರು ಜಿಲ್ಲೆಯ ಆರನೇ ಸಮ್ಮೇನಳನ ಉದ್ಘಾಟಿಸಿ ಬಹಿರಂಗ ಸಭೆಯಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರ ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಸ್ಸಿನಂತೆ ಅಂಗನವಾಡಿ ನೌಕರರನ್ನು ಕಾರ್ಮಿಕರೆಂದು ಪರಿಗಣಿಸಿ ಕನಿಷ್ಠ ಕೂಲಿ ಪಿಂಚಣಿ ಹಾಗೂ…

ಮುಂದೆ ಓದಿ...

ನಿವೃತ್ತರು ಚಿಂತೆ ಬಿಟ್ಟು ಬದುಕಿ – ಡಾ.ಸಿ.ಸೋಮಶೇಖರ್

ತುಮಕೂರು:        ಪ್ರತಿಯೊಬ್ಬ ಮನುಷ್ಯನ ಜೀವನ ಜೀವನದಿ ಇದ್ದಂತೆ. ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ. ಆದುದರಿಂದ ಜೀವನ ಶಾಶ್ವತವಲ್ಲ ಎಂಬುದನ್ನು ಅರ್ಥ ಮಾಡಿಕೊಂಡು ನಿವೃತ್ತರು ಚಿಂತೆ ಮಾಡುವುದನ್ನು ಬಿಟ್ಟು ಸಹಜವಾದ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ನಿವೃತ್ತ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ತಿಳಿಸಿದರು.       ಅವರು ತುಮಕೂರಿನ ಎಂ.ಜಿ.ರಸ್ತೆಯಲ್ಲಿರುವ ಬಾಲಭವನದಲ್ಲಿ ನಡೆದ ನಿವೃತ್ತರ ದಿನಾಚರಣೆ ಮತ್ತು ಹಿರಿಯ ಚೇತನಗಳಿಗೆ ಸನ್ಮಾನ ಹಾಗೂ ನಿವೃತ್ತರ ವಾಣಿ ಬಿಡುಗಡೆ ಮತ್ತು ಕುವೆಂಪು ನೆನಪಿನ ದಿನಾಚರಣೆಯ ಕಾರ್ಯಮವನ್ನು ಉದ್ಘಾಟಿಸಿ ಹಿರಿಯ ಚೇತನಗಳಿಗೆ ಹಾಗೂ ಎಂಬತ್ತೈದು ವರ್ಷ ಪೂರೈಸಿದ ಮಹಾಚೇತನಗಳಿಗೆ ಸನ್ಮಾನ ಮಾಡಿ ಮಾತನಾಡಿದರು.       ನಿವೃತ್ತರಾಗಿ ಹಿರಿಯರಾಗಿರುವ ಪ್ರತಿಯೊಬ್ಬರು ಹೇಳುವುದೇನೆಂದರೆ ಮೊದಲು ನೀವು ನಿಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ. ನಿವೃತ್ತಿ ಎಂಬುದು ನಿಮ್ಮಲ್ಲಿ ನ್ಯೂವೃತ್ತಿಯಾಗಬೇಕು. ಮಹಾತ್ಮರುಗಳಾದ ಅರವಿಂದ ಬಸವಣ್ಣ, ಅಲ್ಲಮ, ಅಕ್ಕಮಹಾದೇವಿ ಗಾಂಧೀಜಿಯಂತಹವರ ಜೀವನ…

ಮುಂದೆ ಓದಿ...