ತುಮಕೂರು ವಿವಿ ಡಿಜಿಟಲ್ ಗ್ರಂಥಾಲಯ ಉದ್ಘಾಟಿಸಿದ ಯದುವೀರ ಒಡೆಯರ್

ತುಮಕೂರು:       ತುಮಕೂರು ವಿವಿ ಡಿಜಿಟಲ್ ಗ್ರಂಥಾಲಯವನ್ನು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಿದರು.       “ಇಂದಿನ ಯುಗ ಡಿಜಿಟಲ್ ಯುಗ. ಈ ಡಿಜಿಟಲ್ ಯುಗದಲ್ಲಿ ಮಾಹಿತಿ ಸಂಪನ್ಮೂಲಗಳನ್ನು ಕ್ಷಿಪ್ರವಾಗಿ ತಲುಪಿಸಲು ಡಿಜಿಟಲ್ ರೂಪದಲ್ಲಿ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ತುಮಕೂರು ವಿವಿಯು ರೂಸಾ ಯೋಜನೆಯಡಿ ಡಿಜಿಟಲ್ ಗ್ರಂಥಾಲಯವನ್ನು ಸ್ಥಾಪಿಸಿ, ಪ್ರತಿಯೊಬ್ಬರಿಗೂ ತಾವಿರುವಲ್ಲಿಯೇ ಗ್ರಂಥಾಲಯವನ್ನು ಕೊಂಡೊಯ್ಯುವಲ್ಲಿ ಮಹತ್ತರ ಹೆಜ್ಜೆಯನ್ನಿಟ್ಟಿದೆ.” ಎಂದು ತುಮಕೂರು ವಿವಿ ಕುಲಪತಿ ಪ್ರೊ. ಸಿದ್ದೇಗೌಡ ಹೇಳಿದರು.       ತುಮಕೂರು ವಿವಿಯು ರೂಸಾ ಯೋಜನೆಯಡಿ ನವೀಕರಿಸಿರುವ ಗ್ರಂಥಾಲಯ ಮಾಹಿತಿ ವಿಜ್ಞಾನ ವಿಭಾಗದ ಗಣಕಯಂತ್ರ ಪ್ರಯೋಗಾಲಯ ಮತ್ತು ವಿವಿ ಡಿಜಿಟಲ್ ಗ್ರಂಥಾಲಯವನ್ನು ಮೈಸೂರು ರಾಜವಂಶಸ್ಥ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ. ಟಿ.ಡಿ.ಕೆಂಪರಾಜು ಉದ್ಘಾಟಿಸಿದರು.    …

ಮುಂದೆ ಓದಿ...

ಯುವಕರು ಜಾಗತಿಕ ನಾಗರಿಕರಾಗಬೇಕಿದೆ-ಯದುವೀರ ಒಡೆಯರ್

ತುಮಕೂರು:       ಇಂದಿನ ಯುವಕರು ಜಾಗತಿಕ ನಾಗರಿಕರಾಗಿ ಬೆಳೆಯುವುದು ಅನಿವಾರ್ಯವಾಗಿದೆ. ಬದಲಾಗಿರುವ ಕಾಲಕ್ಕೆ ತಕ್ಕಂತೆ ಹೊಸತನ ಮತ್ತು ಉದ್ಯಮಶೀಲತೆಯನ್ನು ಬೆಳೆಸಿಕೊಳ್ಳುವುದು ಅಗತ್ಯ ಎಂದು ಮೈಸೂರು ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.       ತುಮಕೂರು ವಿಶ್ವವಿದ್ಯಾನಿಲಯವು ಶನಿವಾರ ಏರ್ಪಡಿಸಿದ್ದ ‘ಯುವ ಸಬಲೀಕರಣ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಾರತವು ತನ್ನಲ್ಲಿರುವ ಯುವಶಕ್ತಿಯ ಸದುಪಯೋಗಪಡಿಸಿಕೊಳ್ಳಬೇಕಾಗಿದೆ ಎಂದರು.       ಭಾರತದ ವಿಶ್ವದಲ್ಲೇ ಅತ್ಯಂತ ಹೆಚ್ಚು ಯುವಕರನ್ನು ಹೊಂದಿರುವ ದೇಶ. ಅಭಿವೃದ್ಧಿ ಕೆಲಸಗಳಲ್ಲಿ ಪಾಲ್ಗೊಳ್ಳುವ ಅವಕಾಶ ಯುವಕರಷ್ಟು ಬೇರೆ ಯಾರಿಗೂ ಇಲ್ಲ. ಇದನ್ನು ಬಳಸಿಕೊಂಡರೆ ಭಾರತ ವಿಶ್ವಮಟ್ಟದಲ್ಲಿ ಇನ್ನಷ್ಟು ಪ್ರಭಾವಶಾಲಿಯಾಗಿ ಕಾಣಿಸಿಕೊಳ್ಳುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದರು.        ಭೌಗೋಳಿಕ ಸೂಚಿಗಳ ದಾಖಲೀಕರಣದಲ್ಲಿ ಮೈಸೂರು ಅರಮನೆಗೆ ವಿಶೇಷ ಆಸಕ್ತಿ ಇದೆ ಎಂದ ಅವರು ಭೌಗೋಳಿಕ ಸೂಚಿ ಗುರುತನ್ನು…

ಮುಂದೆ ಓದಿ...

ಹೇಮಾವತಿ ವತಿಯಿಂದ ಹಂತ-ಹಂತವಾಗಿ ಜಿಲ್ಲೆಯ ಕೆರೆಗಳಿಗೆ ನೀರು ಪೂರೈಕೆ – ಸಚಿವ

 ತುಮಕೂರು:       ಹೇಮಾವತಿ ಜಲಾಶಯದಲ್ಲಿ ಸಾಕಷ್ಟು ಪ್ರಮಾಣದ ನೀರು ಸಂಗ್ರಹವಿದ್ದು, ತುಮಕೂರು ಜಿಲ್ಲೆಯಲ್ಲಿ ಕುಡಿಯುವ ನೀರಿನ ಕೆರೆಗಳು ಹಾಗೂ ಇನ್ನಿತರೆ ಕೆರೆಗಳಿಗೆ ವೇಳಾಪಟ್ಟಿ ನಿಗಧಿ ಮಾಡಿಕೊಂಡು ನೀರು ಪೂರೈಸಲಾಗುತ್ತಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದರು.       ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ ಎರಡನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಸಚಿವರು, ಮೊದಲ ಹಂತದಲ್ಲಿ ಕುಡಿಯುವ ನೀರಿಗಾಗಿ ಕುಡಿಯುವ ನೀರಿನ ಕೆರೆಗಳಿಗೆ ಪೂರೈಸಲಾಗಿದೆ. ಎರಡನೆ ಹಂತದಲ್ಲಿ ವೇಳಾಪಟ್ಟಿಯಂತೆ ಶಿರಾ ಹಾಗೂ ಗುಬ್ಬಿ ತಾಲೂಕು ಕೆರೆಗಳಿಗೆ ನೀರು ಪೂರೈಸಲಾಗುತ್ತಿದೆ ಹಂತಹಂತವಾಗಿ ಇತರೆ ತಾಲೂಕಿನ ಕೆರೆಗಳಿಗೂ ಸಮಯ ನಿಗಧಿ ಮಾಡಿ ನೀರು ಪೂರೈಕೆ ಮಾಡಲಾಗುವುದು. ಈ ಬಾರಿ ಜಲಾಶಯದಲ್ಲಿ ಸಾಕಷ್ಟು ಪ್ರಮಾಣದ ನೀರು ಸಂಗ್ರಹವಿದ್ದು ನೀರಿನ ಬಗ್ಗೆ…

ಮುಂದೆ ಓದಿ...