ತುಮಕೂರು : ನ.12ರಂದು ಗ್ರಾಮ ಪಂಚಾಯಿತಿ ಉಪಚುನಾವಣೆ!!

ತುಮಕೂರು :       ಜಿಲ್ಲೆಯ 8 ವಿವಿಧ ಗ್ರಾಮ ಪಂಚಾಯಿತಿಯಲ್ಲಿ ವಿವಿಧ ಕಾರಣಗಳಿಗೆ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಸಲು ಆದೇಶಿಸಿ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ|| ಕೆ. ರಾಕೇಶ್‍ಕುಮಾರ್ ತಿಳಿಸಿದ್ದಾರೆ.    ಚುನಾವಣಾ ವೇಳಾಪಟ್ಟಿ:       ವೇಳಾಪಟ್ಟಿಯನ್ವಯ ಚುನಾವಣಾಧಿಕಾರಿಗಳು ಅಕ್ಟೋಬರ್ 28ರಂದು ಚುನಾವಣಾ ನೋಟೀಸ್ ಹೊರಡಿಸಲಿದ್ದಾರೆ. ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ಅಕ್ಟೋಬರ್ 31 ಕಡೆಯ ದಿನವಾಗಿದ್ದು, ನವೆಂಬರ್ 2ರಂದು ನಾಮಪತ್ರಗಳನ್ನು ಪರಿಶೀಲಿಸಲಾಗುವುದು. ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ನವೆಂಬರ್ 4 ಕೊನೆಯ ದಿನ. ಮತದಾನದ ಅವಶ್ಯವಿದ್ದರೆ ನವೆಂಬರ್ 12ರಂದು ಬೆಳಿಗ್ಗೆ 7 ರಿಂದ ಸಂಜೆ 5ರವರೆಗೆ ಮತದಾನ ನಡೆಸಲಾಗುವುದು. ಮರು ಮತದಾನದ ಅವಶ್ಯವಿದ್ದಲ್ಲಿ ನವೆಂಬರ್ 13ರಂದು ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಸಲಾಗುವುದು.       ಗ್ರಾಮ ಪಂಚಾಯತಿಗೆ ಸಂಬಂಧಿಸಿದ ತಾಲ್ಲೂಕು ಕೇಂದ್ರದಲ್ಲಿ ನವೆಂಬರ್ 14ರಂದು ಗುರುವಾರ ಬೆಳಿಗ್ಗೆ…

ಮುಂದೆ ಓದಿ...

ಹೇಮಾವತಿಯಿಂದ ಜಿಲ್ಲೆಯ ಕೆರೆಗಳಿಗೆ ವೇಳಾಪಟ್ಟಿ ನಿಗಧಿಯಂತೆ ನೀರು!!

ತುಮಕೂರು :       ಹೇಮಾವತಿ ಜಲಾಶಯದಲ್ಲಿ ಸಾಕಷ್ಟು ಪ್ರಮಾಣದ ನೀರು ಸಂಗ್ರಹವಿದ್ದು, ತುಮಕೂರು ಜಿಲ್ಲೆಯಲ್ಲಿ ಕುಡಿಯುವ ನೀರಿನ ಕೆರೆಗಳು ಹಾಗೂ ಇನ್ನಿತರೆ ಕೆರೆಗಳಿಗೆ ವೇಳಾಪಟ್ಟಿ ನಿಗಧಿ ಮಾಡಿಕೊಂಡು ನೀರು ಪೂರೈಸಲಾಗುತ್ತಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದರು.       ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ ಎರಡನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಸಚಿವರು, ಪಿಂಚಣಿಗೆ ಸಂಬಂಧಿಸಿದಂತೆ ಅಂಚೆ ಇಲಾಖೆಯ ಅಧಿಕಾರಿಗಳು ಹಾಗೂ ಬ್ಯಾಂಕ್ ಅಧಿಕಾರಿಗಳನ್ನು ಒಳಗೊಂಡಂತೆ ಉಪ ವಿಭಾಗ ಅಧಿಕಾರಿಗಳು ಪಿಂಚಣಿ ಅದಾಲತ್‍ಗಳನ್ನು ನಡೆಸಿ ಪಿಂಚಣಿಗೆ ಸಂಬಂಧಿಸಿದಂತೆ ಜನರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.       ಕುಣಿಗಲ್ ಎಕ್ಸ್‍ಪ್ರೆಸ್ ಕೆನಾಲ್ ಯೋಜನೆಯನ್ನು ರದ್ದುಪಡಿಸಲಾಗಿದ್ದು, ಯೋಜನೆಗೆ ಮೀಸಲಿಟ್ಟಿದ್ದ…

ಮುಂದೆ ಓದಿ...

ತುಮಕೂರು : ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲು ಆಗ್ರಹ!!

ತುಮಕೂರು :       ಮಧುಗಿರಿ ತಾಲ್ಲೂಕು ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತರನ್ನು ವಜಾ ಗೊಳಿಸದೇ ವಿಳಂಬ ಧೋರಣೆಯನ್ನು ಖಂಡಿಸಿ ಶ್ರೀ ಪಂಡಿತ್ ಪುಟ್ಟರಾಜು ಗವಾಯಿ ತಾಲ್ಲೂಕು ಅಂಗವಿಕಲರ ಒಕ್ಕೂಟ, ಮಧುಗಿರಿ ಇವರಿಂದ ಜಿಲ್ಲಾ ಪಂಚಾಯತಿ ಕಾರ್ಯಾಲಯದ ಮುಂಭಾಗ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ.       ಶತ ಶತಮಾನಗಳಿಂದ ಸಕಲ ಸವಲತ್ತು ಸಂಪನ್ಮೂಲ ಮತ್ತು ಅವಕಾಶಗಳಿಂದ ವಂಚಿತಗೊಂಡ ವಿಕಲ ಚೇತನ ಸಮಾಜ 1995 ಅಂಗವಿಕಲರ ಅಧಿನಿಯಮ ಕಾಯ್ದೆಯಿಂದ ವಿಮೋಚನೆಗೊಂಡಿತ್ತು. ಈ ಸದರಿ ಕಾಯ್ದೆ ಮಹತ್ತರ ಬದಲಾವಣೆ ತಂದಿದೆ. ಈ ಕಾಯ್ದೆಯ ಆಶಯದಂತೆ ಶ್ರೀ ಪಂಡಿತ್ ಪುಟ್ಟರಾಜು ಗವಾಯಿ ತಾಲ್ಲೂಕು ಅಂಗವಿಕಲರ ಒಕ್ಕೂಟ ಸುಮಾರು 8 ವರ್ಷಗಳಿಂದಲೂ ಮಧುಗಿರಿ ತಾಲ್ಲೂಕಿನ ಎಲ್ಲಾ ವಿಕಲ ಚೇತನ ವ್ಯಕ್ತಿಗಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವುದು ಸರಿಯಷ್ಟೇ. ಯಾವುದೇ ಪ್ರೋತ್ಸಾಹ ಧನವಿಲ್ಲದೆ ಒಕ್ಕೂಟವು ತನ್ನ ಪದಾಧಿಕಾರಿಗಳಾದ ನಾವುಗಳು ದುಡಿಯುವ ಹಣದಲ್ಲಿಯೇ ಇದಕ್ಕೆ ತಗಲುವ ಖರ್ಚು,…

ಮುಂದೆ ಓದಿ...