ತುಮಕೂರು : 36 ಸಾಧಕರಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ತುಮಕೂರು:       ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 36 ಸಾಧಕರನ್ನು ಪ್ರಸಕ್ತ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜಪ್ಪ ಆಪಿನಕಟ್ಟೆ ತಿಳಿಸಿದ್ದಾರೆ.       ಪ್ರಶಸ್ತಿಗೆ ಆಯ್ಕೆಯಾದವರಿಗೆ ನವೆಂಬರ್ 1ರಂದು ಸಂಜೆ 4 ಗಂಟೆಗೆ ನಗರದ ಗಾಜಿನಮನೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರಂಗಭೂಮಿ, ಪತ್ರಿಕೋದ್ಯಮ, ಸಾಹಿತ್ಯ, ಕ್ರೀಡೆ, ಜಾನಪದ, ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ಪ್ರಶಸ್ತಿಗೆ ಆಯ್ಕೆಯಾದವರ ಕ್ಷೇತ್ರವಾರು ಪಟ್ಟಿ ಇಂತಿದೆ. ರಂಗಭೂಮಿ ಕ್ಷೇತ್ರ:       ಶಿರಾ ತಾಲ್ಲೂಕು ಕಟಾವೀರನಹಳ್ಳಿ ಗ್ರಾಮದ ಜಿ.ಕೆ.ರಂಗನಾಥ, ತುಮಕೂರು ತಾಲ್ಲೂಕು ಮರಳೂರಿನ ಬಿ.ರಾಮಂಜಿನೇಯ, ಭೈರವೇಶ್ವರ ನಗರದ ಡಿ.ಎನ್.ನವಿಲೇಶ್, ಗೂಳೂರಿನ ಜಿ.ಕೆ.ರಂಗಸ್ವಾಮಯ್ಯ, ತುರುವೇಕೆರೆಯ…

ಮುಂದೆ ಓದಿ...