ಸ್ಮಾರ್ಟ್ ಸಿಟಿ ವ್ಯವಸ್ಥಿತವಾಗಿಲ್ಲ-ಮಾಜಿ ಶಾಸಕ ರಫೀಕ್ ಅಹ್ಮದ್

ತುಮಕೂರು:       ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಯಿಂದ ಜನರಿಗೆ ಆಗುತ್ತಿರುವ ಸಮಸ್ಯೆಗಳಿಗೆ ಇಲಾಖೆ ಹಾಗೂ ಜನಪ್ರತಿನಿಧಿಗಳ ನಡುವೆ ಸಮನ್ವಯತೆ ಇಲ್ಲದೇ ಇರುವುದೇ ಕಾರಣ ಎಂದು ಮಾಜಿ ಶಾಸಕ ಡಾ.ರಫೀಕ್ ಅಹಮದ್ ಅಭಿಪ್ರಾಯಪಟ್ಟರು.       ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮಕೂರು ನಗರವನ್ನು ಸರ್ವಾಂಗೀಣ ಅಭಿವೃದ್ಧಿ ಮಾಡಲು ಸಾಧ್ಯವಿದ್ದ ಸ್ಮಾರ್ಟ್ ಸಿಟಿ ಕಾಮಗಾರಿಗಳು ವ್ಯವಸ್ಥಿತವಾಗಿ ನಡೆಯುತ್ತಿಲ್ಲ, ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ನೋಡಿದರೆ ಬೇಸರವಾಗುತ್ತದೆ ಎಂದು ತಿಳಿಸಿದರು.       ನನ್ನ ಅಧಿಕಾರವಧಿಯಲ್ಲಿ ನಗರದಲ್ಲಿ ರಸ್ತೆ, ಉದ್ಯಾನಗಳನ್ನು ಅಭಿವೃದ್ಧಿ ಪಡಿಸಲಾಗಿತ್ತು, ಕಾಮಗಾರಿ ನಡೆಯುವ ಸಮಯದಲ್ಲಿ ಜನರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿದ್ದೇವು, ಆದರೆ ಸ್ಮಾರ್ಟ್ ಸಿಟಿ ಕಾಮಗಾರಿಗಳಿಂದ ಜನರಿಗೆ ಸಾಕಷ್ಟು ತೊಂದರೆಯಾಗುತ್ತದೆ, ಎಲ್ಲಿ? ಯಾವಾಗ? ಏಕೆ? ರಸ್ತೆಯನ್ನು ಅಗೆಯುತ್ತಾರೆ ಎನ್ನುವುದು ಜನಪ್ರತಿನಿಧಿಗಳಿಗೆ ಗೊತ್ತಿಲ್ಲ ಎಂದರೆ ಹೇಗೆ? ಎಂದು ಪ್ರಶ್ನಿಸಿದರು.       2200…

ಮುಂದೆ ಓದಿ...

ಜಮೀನಿನ ಖಾತೆ ಮಾಡದಂತೆ ಆಯುಕ್ತರಿಗೆ ಮನವಿ!

ತುಮಕೂರು :       ತಾಲ್ಲೂಕಿನ ಅಮಾನಿಕೆರೆ ಗ್ರಾಮದ ಸರ್ವೇ ನಂ 8, ಕಸಬಾ ಹೋಬಳಿಯ 91,92 (ರೈಲ್ವೆ ನಿಲ್ದಾಣದ ಪಕ್ಕ)ರ ಸರ್ವೇ ನಂಬರ್‍ನಲ್ಲಿರುವ ಎನ್.ಆರ್.ಕಾಲೋನಿಯ ಕುಳವಾಡಿ ವಂಶಸ್ಥರ ಜಮೀನುಗಳನ್ನು ಕೆಲವರು ಕಬಳಿಸುವ ಹುನ್ನಾರ ಮಾಡಿದ್ದು, ಸದರಿ ಜಮೀನುಗಳಿಗೆ ಖಾತೆ, ಪಿಐಡಿಯನ್ನು ಪಾಲಿಕೆ ವತಿಯಿಂದ ಮಾಡಿಕೊಡದಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ನೇತೃತ್ವದಲ್ಲಿ ಪಾಲಿಕೆ ಆಯುಕ್ತ ಯೋಗಾನಂದ್ ಅವರಿಗೆ ಮನವಿ ಸಲ್ಲಿಸಲಾಯಿತು.       ಸದರಿ ಜಮೀನಿಗೆ ಸಂಬಂಧಿಸಿದಂತೆ ತುಮಕೂರು ತಹಶೀಲ್ದಾರ್ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದ್ದು, ಪ್ರಕರಣಗಳು ಬಾಕಿ ಇರುವಾಗಲೇ ಸಂಬಂಧಿತ ಇಲಾಖೆಗಳು ಬೇರೆಯವರ ಹೆಸರಿಗೆ ಖಾತೆ ಮಾಡಲು ಮುಂದಾಗಿದ್ದು, ಸದರಿ ಜಮೀನಿಗೆ ಸಂಬಂಧಿ ಸಿದಂತೆ ಖಾತೆ ಸೇರಿದಂತೆ ಇತರೆ ಬದಲಾವಣೆಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.      ಈ ವಿವಾದಿತ ಜಮೀನುಗಳಿಗೆ ಸಂಬಂಧಿಸಿದಂತೆ ಒತ್ತಡಕ್ಕೆ ಮಣಿದು ಖಾತೆ ಬದಲಾವಣೆ…

ಮುಂದೆ ಓದಿ...