ಎಸ್‍ಸಿಪಿ/ಟಿಎಸ್‍ಪಿಯ ಅನುದಾನವನ್ನು ಶೇ.100ರಷ್ಟು ಖರ್ಚು ಮಾಡಿ

ತುಮಕೂರು :       ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಬಿಡುಗಡೆಯಾಗುವ ಅನುದಾನವನ್ನು ಮುಂದಿನ ತ್ರೈಮಾಸಿಕ ಅವಧಿಯಲ್ಲಿ ಶೇಕಡ 100ರಷ್ಟು ಖರ್ಚು ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಅವರು ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.       ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ನಡೆದ ವಿವಿಧ ಇಲಾಖೆಗಳ ಪರಿಶಿಷ್ಟ ಜಾತಿ ಉಪಯೋಜನೆ/ಗಿರಿಜನ ಉಪಯೋಜನೆ ಕಾಯ್ದೆ 2013ರ ಅನುಷ್ಟಾನದ ಕುರಿತ ಜಿಲ್ಲಾ ಮೇಲ್ವಿಚಾರಣ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.       ಜಿಲ್ಲಾ ಮೇಲ್ವಿಚಾರಣ ಸಮಿತಿ ಸಭೆಗೆ ಗೈರು ಹಾಜರಾಗಿರುವ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿ ಡಾ|| ರಾಕೇಶ್‍ಕುಮಾರ್ ಅವರು ಸೂಚಿಸಿದರು.       ಜನವರಿ, ಫೆಬ್ರವರಿ ಮಾಹೆಯೊಳಗಾಗಿ ಸರ್ಕಾರದಿಂದ ಬಂದಿರುವ ಅನುದಾನವನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಅನುದಾನ ನಷ್ಟವಾಗದಂತೆ ಅಧಿಕಾರಿಗಳು ಗಮನಹರಿಸಬೇಕು ಎಂದರು.…

ಮುಂದೆ ಓದಿ...

ಗುಬ್ಬಿ :  ರಾಷ್ಟ್ರಧ್ವಜಕ್ಕೆ ಅಪಮಾನವೆಸಗಿರುವ ಸರ್ಕಾರಿ ಶಾಲಾ ಶಿಕ್ಷಕರು!

ಗುಬ್ಬಿ :      ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುವುದನ್ನು ಹೇಳಿಕೊಡುವ ದೈಹಿಕ ಶಿಕ್ಷಕಿ ಅಕ್ತರ್‍ತಾಜ್‍ರವರ ನಿರ್ಲಕ್ಷ್ಯತನದಿಂದ ದೇಶವೇ ಕೈಮುಗಿಯುವಂತಹ ರಾಷ್ಟ್ರಧ್ವಜವನ್ನು ಗೆದ್ದಲು ಹಿಡಿಸಿ ಕಸಪೊರಕೆಯ ಮಧ್ಯದಲ್ಲಿ ಬಿಸಾಕಿರುವುದು ಇವರ ರಾಷ್ಟ್ರಪ್ರೇಮವನ್ನು ಎತ್ತಿ ಹಿಡಿಯುತ್ತದೆ.       ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢಶಾಲಾ ವಿಭಾಗವಿದ್ದು, ಸುಮಾರು 800-1000 ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದು ಸಾಕಷ್ಟು ನುರಿತ ಉಪಾಧ್ಯಾಯರುಗಳಿದ್ದು ಇವರ ಮೇಲ್ವಿಚಾರಣೆಗೆ ಉಪಪ್ರಾಂಶುಪಾಲೆ ಭವ್ಯರವರು ಈ ಎಲ್ಲಾ ಉಸ್ತುವಾರಿಗಳನ್ನು ನೋಡಿಕೊಳ್ಳುತ್ತಿದ್ದು ದೈಹಿಕ ಶಿಕ್ಷಕಿಯನ್ನು ತಮ್ಮ ಹಿಡಿತದಲ್ಲಿ ಹಿಡಿದಿಟ್ಟುಕೊಳ್ಳಲಾಗದೆ ರಾಷ್ಟ್ರಧ್ವಜವನ್ನು ತನ್ನ ಕೊಠಡಿಯಲ್ಲಿ ಭದ್ರವಾಗಿ ಇರಿಸಿಬೇಕಾದಂತಹ ದೈಹಿಕ ಶಿಕ್ಷಕಿ ಅಕ್ತರ್‍ತಾಜ್‍ರವರು ಕಸ ಗುಡಿಸುವ ಪೊರಕೆಗಳ ನಡುವೆ ಹಾಗೂ ಗೆದ್ದಲು ಹುಳು ಬಿದ್ದ ರಾಷ್ಟ್ರಧ್ವಜವನ್ನು ಕಲಿಯುವ ಮಕ್ಕಳು ತಿರುಗಾಡುವ ಜಾಗದಲ್ಲೇ ಅಸಡ್ಡೆಯಿಂದ ಎಸೆದಿದ್ದು ಇಡೀ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವುದು ಎಷ್ಟು ಸಮಂಜಸ.       ಈ ಬಗ್ಗೆ…

ಮುಂದೆ ಓದಿ...

ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಮಧುಗಿರಿ ಪೋಲಿಸರು ಯಶಸ್ವಿ!!

ಮಧುಗಿರಿ :          ತಾಲ್ಲೂಕಿನ ಮರಬಳ್ಳಿ ಗೇಟ್ ಬಳಿ ಮನೆಯ ಮಾಲಿಕನನ್ನು ಕೊಲೆ ಮಾಡಿದ್ದ ಮೂವರು ಆರೋಪಿಗಳನ್ನು ಬಂದಿಸುವಲ್ಲಿ ಮಧುಗಿರಿ ಪೋಲಿಸರು ಯಶಸ್ವಿಯಾಗಿದ್ದಾರೆ.        ಮರಬಹಳ್ಳಿ ಗ್ರಾಮದ ವಾಸಿ ಚೌಡಪ್ಪ ಎಂಬುವವರ ಮನೆಗೆ ಡಿ.10 ರಂದು ರಾತ್ರಿ 09.30 ಗಂಟೆ ಸಮಯದಲ್ಲಿ ನಾಲ್ಕು ಜನ ಅಪರಿಚಿತರು ನುಗ್ಗಿ ಚೌಡಪ್ಪ ಅವರ ಕುತ್ತಿಗೆಯನ್ನು ಚಾಕುವಿನಿಂದ ಕೊಯ್ದು ಕೊಲೆ ಮಾಡಿ, ಮನೆಯಲ್ಲಿದ್ದ ಅವರ ಮಗ ವಿಕಲಚೇತನ ಹನುಮಂತರಾಯನನ್ನು ಕೊಲೆ ಮಾಡಲು ಯತ್ನಿಸಿ ಬೀರುವಿನಲ್ಲಿದ್ದ ಹಣ ಮತ್ತು ವಡವೆಗಳನ್ನು ದೋಚಿಕೊಂಡು ಹೋಗಿದ್ದು, ಈ ಬಗ್ಗೆ ಮಧುಗಿರಿ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.       ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಲು ಸಿಪಿಐ ದಯಾನಂದ ಶೇಗುಣಸಿ ಅವರ ನೇತೃತ್ವದಲ್ಲಿ ತಂಡ ರಚಿಸಿದ್ದ ಪೋಲಿಸರು ಪಟ್ಟಣದ ಕರಡಿಪುರ ವಾಸಿಗಳಾದ ಸುರೇಶ್, ವಿಜಯ್ ಮತ್ತು ಲೋಕೇಶ್ ಎಂಬುವವರನ್ನು…

ಮುಂದೆ ಓದಿ...