ಪ್ರತಿಭಟನೆಗೆ ನಿರಾಕರಣೆ : ಪೊಲೀಸರೊಂದಿಗೆ ಮುಖಂಡರ ವಾಗ್ವಾದ!

ತುಮಕೂರು :         ಕೇಂದ್ರ ಸರ್ಕಾರದ ಸಿಎಎ ಮತ್ತು ಎನ್‍ಆರ್‍ಸಿ ಕಾಯ್ದೆಗಳನ್ನು ವಿರೋಧಿಸಿ ಪ್ರಗತಿಪರ ನಾಗರಿಕ ಸಂಘಟನೆಗಳ ಒಕ್ಕೂಟದಿಂದ ಇಂದು ಹಮ್ಮಿಕೊಂಡಿದ್ದ ಪ್ರತಿಭಟನೆ ನಡೆಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರೊಂದಿಗೆ ವಾಗ್ವಾದ ಮಾತಿನ ಚಕಮಕಿ ನಡೆಯಿತು.       ಪ್ರತಿಭಟನೆ ಸಜ್ಜಾಗಿದ್ದ ಮುಖಂಡರನ್ನು ಸುತ್ತುವರಿದ ನೂರಾರು ಪೊಲೀಸರು ನಿಷೇಧಾಜ್ಞೆ ಜಾರಿಯಲ್ಲಿದೆ. ಹೀಗಾಗಿ ಪ್ರತಿಭಟನೆ ಅವಕಾಶ ನೀಡುವುದಿಲ್ಲ ಎಂದರು. ಇದಕ್ಕೆ ಪ್ರಗತಿಪರ ನಾಗರಿಕ ಸಂಘಟನೆಗಳ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದರು. ಆಗ ಪೊಲೀಸರಿಗೂ-ಮುಖಂಡರ ನಡುವೆ ವಾಗ್ವಾದ ನಡೆಯಿತು.       ನಾಯಕರನ್ನು ಪೊಲೀಸರು ಸುತ್ತುವರಿಯುತ್ತಿದ್ದಂತೆಯೇ ಅಲ್ಲಲ್ಲಿ ಚದುರಿದಂತಿದ್ದ ಪ್ರತಿಭಟನಾಕಾರರು ಪೊಲೀಸರತ್ತ ಧಾವಿಸಿದರು. ಆಗ ಮೈಕ್ ಮೂಲಕ 144 ನಿಷೇಧಾಜ್ಞೆ ಜಾರಿಯಲ್ಲಿದೆ. ಗುಂಪು ಸೇರಬಾರದು ಎಂದು ಪ್ರತಿಭಟನಾಕಾರರನ್ನು ಪೊಲೀಸರು ಚದುರಿಸಿ ಕಳಿಸಿದರು.       ಬಳಿಕ ಪೊಲೀಸರು ಪಿಯುಸಿಎಲ್ ಜಿಲ್ಲಾಧ್ಯಕ್ಷ…

ಮುಂದೆ ಓದಿ...

ಫುಡ್ ಪಾರ್ಕ್ ಅಭಿವೃದ್ಧಿಗೆ ಒತ್ತು – ಕೇಂದ್ರ ಸಚಿವ ರಮೇಶ್ವರ ತೆಲಿ

ತುಮಕೂರು :       ಫುಡ್ ಪಾರ್ಕ್‍ಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಕೇಂದ್ರ ಸರ್ಕಾರದ ರಾಜ್ಯ ಖಾತೆ ಆಹಾರ ಸಚಿವ ರಮೇಶ್ವರ ತೆಲಿ ತಿಳಿಸಿದರು.       ತುಮಕೂರು ಹೊರವಲಯದ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಫುಡ್ ಪಾರ್ಕ್‍ಗೆ ಬುಧವಾರ ಭೇಟಿ ನೀಡಿ, ಅಲ್ಲಿ ತಯಾರಾಗುವ ಉತ್ಪನ್ನಗಳ ಮಾಹಿತಿ ಪಡೆದು ಪರಿಶೀಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.       ಫುಡ್ ಪಾರ್ಕ್‍ಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಸ್ವತಃ ಮೋದಿಯವರೇ ತುಮಕೂರು ಫುಡ್ ಪಾರ್ಕ್‍ಗೆ ಚಾಲನೆ ನೀಡಿದ್ದು, ಅವರ ನಿರ್ದೇಶನದಂತೆ ತುಮಕೂರು ಸೇರಿದಂತೆ ದೇಶದ ಎಲ್ಲಾ ಫುಡ್ ಪಾರ್ಕ್‍ಗಳನ್ನು ನೂತನ ತಂತ್ರಜ್ಞಾನದ ಮೂಲಕ ಮತ್ತಷ್ಟು ಅಭಿವೃದ್ಧಿ ಪಡಿಸಲಾಗುವುದು ಎಂದರು.       ಫುಡ್ ಪಾರ್ಕ್‍ನಿಂದ ತುಮಕೂರು ಸುತ್ತಮುತ್ತಲಿನ ರೈತರಿಗೆ ಹಾಗೂ ಸ್ಥಳೀಯರಿಗೆ ಹೆಚ್ಚಿನ ಅನುಕೂಲವಾಗಲಿದೆ.…

ಮುಂದೆ ಓದಿ...

ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಾಗಿ ಟಿ.ಭೂಬಾಲನ್ ಅಧಿಕಾರ ಸ್ವೀಕಾರ

 ತುಮಕೂರು :       ಮಹಾನಗರ ಪಾಲಿಕೆ ಆಯುಕ್ತ ಟಿ.ಭೂಬಾಲನ್ ಭಾ.ಆ.ಸೇ ಅವರು ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹುದ್ದೆಯ ಹೆಚ್ಚುವರಿ ಪ್ರಭಾರವನ್ನು ಡಿಸೆಂಬರ್ 19ರಂದು ಅಧಿಕಾರ ಸ್ವೀಕರಿಸಿದರು.       ಅನಂತರ ಮಾತನಾಡಿದ ಅವರು, ಸ್ಮಾರ್ಟ್‍ಸಿಟಿ ಕಾಮಗಾರಿಗಳನ್ನು ಒಂದು ದಿನದಲ್ಲಿ ಪೂರ್ಣಗೊಳಿಸಲು ಸಾಧ್ಯವಿಲ್ಲ 3-4 ತಿಂಗಳಾದರೂ ಬೇಕು ಅಲ್ಲಿಯವರೆಗೂ ಸಾರ್ವಜನಿಕರು, ಜನಪ್ರತಿನಿಧಿಗಳು ತಾಳ್ಮೆಯಿಂದ ಇದ್ದು ನಮಗೆ ಸಹಕಾರ ಕೊಡಬೇಕು ಎಂದು ಸ್ಮಾರ್ಟ್‍ಸಿಟಿ ಲಿಮಿಟೆಡ್‍ನ ಹೆಚ್ಚುವರಿ ಪ್ರಭಾರ ವ್ಯವಸ್ಥಾಪಕ ನಿರ್ದೆಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ.ಭೂಬಾಲನ್ ಮನವಿ ಮಾಡಿದರು.       ಸ್ಮಾರ್ಟ್‍ಸಿಟಿ ಲಿಮಿಟೆಡ್ ನಗರದಲ್ಲಿ ಬಹಳಷ್ಟು ಕಾಮಗಾರಿ ನಡೆಸುತ್ತಿದ್ದು, ಅದರಲ್ಲಿ ಕೆಲವು ಸಮಸ್ಯೆಗಳು ಕಂಡು ಬಂದಿವೆ. ಅದರಲ್ಲೂ ಮುಖ್ಯವಾಗಿ ರಸ್ತೆ ಕಾಮಗಾರಿಯಿಂದ ಜನರಿಗೆ ತೊಂದರೆಯಾಗುತ್ತಿರುವ ಆರೋಪಗಳು ಕೇಳಿ ಬಂದಿವೆ. ಈ ಬಗ್ಗೆ ಪರಿಶೀಲನೆ ನಡೆಸಿ…

ಮುಂದೆ ಓದಿ...

ಸರ್ಕಾರಿ ಫಡ ಜಾಗದ ಮಂಜೂರಾತಿಗಾಗಿ 2 ಗುಂಪುಗಳ ನಡುವೆ ವಾಗ್ವಾದ!!

ಗುಬ್ಬಿ :       ಸರ್ಕಾರಿ ಫಡ ಜಾಗದ ಮಂಜೂರಾತಿಗೆ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದ ಘಟನೆ ತಾಲ್ಲೂಕಿನ ನಿಟ್ಟೂರು ಹೋಬಳಿ ಕಾರೇಹಳ್ಳಿ ಎಸ್ಕೇಪ್ ಬಳಿ ನಡೆದಿದೆ.        ಬಿದರೆಹಳ್ಳಿ ಕಾವಲ್ ಗ್ರಾಮಕ್ಕೆ ಸೇರಿದ ಸರ್ವೆ ನಂ.59 ರಲ್ಲಿರುವ 3.17 ಎಕರೆ ಪ್ರದೇಶ ಸಕಾರಿ ಫಡ ಎಂದು ಇಂದಿಗೂ ದಾಖಲೆ ಇದೆ. ಆದರೆ ಈ ಸ್ಥಳ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ಇರುವ ಬೀಳು ಜಾಗವಾಗಿದೆ. ಇಲ್ಲಿ ನಿವೇಶನ ವಿಂಗಡಿಸಿ ನಿರ್ಗತಿಕರಿಗೆ ನೀಡಲು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ 131 ಮಂದಿ ಈ ಸ್ಥಳದಲ್ಲೇ ನಿವೇಶನ ನೀಡುವುದು ಸೂಕ್ತ ಎಂದು ಕೋರಿಕೊಂಡಿದೆ. ಹಲವು ವರ್ಷಗಳಿಂದ ನಿವೇಶನ ಇಲ್ಲದೇ ಕೂಲಿ ಕೆಲಸ ಮಾಡಿಕೊಂಡು ಬದುಕು ಸಾಗಿಸುವ ಮಂದಿ ಈ ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಎಲ್ಲಾ ಜನಾಂಗ ವರ್ಗದ ಮಂದಿ ಇರುವುದಾಗಿ ನಿವೇಶನ…

ಮುಂದೆ ಓದಿ...