ಜಿ.ಪಂ.ಅಧ್ಯಕ್ಷರ ವಿರುದ್ಧ ಅವಿಶ್ವಾಸ ಸೂಚನಾ ಸಭೆ : ಅ.15ಕ್ಕೆ ಮುಂದೂಡಿಕೆ

ತುಮಕೂರು:       ಭಾರತ ಚುನಾವಣಾ ಆಯೋಗವು ಬೆಂಗಳೂರು ಶಿಕ್ಷಕರ ಹಾಗೂ ಆಗ್ನೇಯ ಪದವೀಧರರ ಕ್ಷೇತ್ರಗಳಿಗೆ ಚುನಾವಣೆ ನಡೆಸಲು ಹೊರಡಿಸಿರುವ ವೇಳಾಪಟ್ಟಿಯನ್ವಯ ಚುನಾವಣಾ ನಾಮನಿರ್ದೇಶನ ಪ್ರಕ್ರಿಯೆಗಳ ಹಿನ್ನಲೆಯಲ್ಲಿ ಅಕ್ಟೋಬರ್ 7ರಂದು ನಿಗಧಿಯಾಗಿದ್ದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ಎಂ. ರವಿಕುಮಾರ್ ಅವರ ವಿರುದ್ಧ ಅವಿಶ್ವಾಸ ಸೂಚನಾ ಸಭೆಯನ್ನು ಅಕ್ಟೋಬರ್ 15ರ ಬೆಳಿಗ್ಗೆ 11.30 ಗಂಟೆಗೆ ಮುಂದೂಡಲಾಗಿದೆ.      ಸಭೆಯು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಾದೇಶಿಕ ಆಯುಕ್ತರ ಕಛೇರಿ ಪ್ರಕಟಣೆ ತಿಳಿಸಿದೆ.

ಮುಂದೆ ಓದಿ...

ಗುಬ್ಬಿ : ಪಟ್ಟಣ ಪಂಚಾಯಿತಿ ಅಧಿಕಾರಿಗಳಿಂದಲೇ ಹಳೆಯ ಮರದ ಮಾರಣ ಹೋಮ!

ಗುಬ್ಬಿ :      ಪಟ್ಟಣದ ಪರಿಸರ ಕಾಪಾಡಬೇಕಾದ ಸ್ಥಳೀಯ ಪಟ್ಟಣ ಪಂಚಾಯಿತಿ ಅಧಿಕಾರಿಗಳೇ ಮುಂದೆ ನಿಂತು ತಮ್ಮ ಕಚೇರಿ ಆವರಣದಲ್ಲಿದ್ದ ಮರವೊಂದನ್ನು ಕಡಿದು ಧರೆರುಳಿಸಿರುವ ಘಟನೆ ಶನಿವಾರ ನಡೆದಿದೆ.       ಸಾರ್ವಜನಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪಟ್ಟಣ ವ್ಯಾಪ್ತಿಯಲ್ಲಿ ಉದ್ಯಾನವನಗಳಲ್ಲಿ ಹಾಗೂ ರಸ್ತೆ ಬದಿಗಳಲ್ಲಿ ಗಿಡ ನೆಟ್ಟು ಪೋಷಿಸುವ ಜವಾಬ್ದಾರಿ ಕೆಲಸ ಮಾಡಬೇಕಾದ ಪಪಂ ಅಧಿಕಾರಿಗಳು ಕಚೇರಿ ಆವರಣದಲ್ಲಿದ್ದ ಸುಮಾರು 30 ವರ್ಷದ ಹಳೆಯ ಹೊಂಗೇಮರವನ್ನು ಕಡಿದಿದ್ದಾರೆ. ಕೆಲ ದಿನಗಳ ಹಿಂದೆ ಒಣಗಿದ ರೀತಿ ಕಾಣುವಂತೆ ಮಾಡಲಾಗಿ ನಂತರ ತುಂಡರಿಸಲಾಗಿದೆ. ಶುದ್ದ ಗಾಳಿ ಒದಗಿಸುವ ಕೆಲಸ ಸ್ಥಳೀಯ ಸಂಸ್ಥೆಯಾದ ಪಟ್ಟಣ ಪಂಚಾಯಿತಿ ಜವಾಬ್ದಾರಿ ಎನ್ನುವುದು ಮರೆತು ಇನ್ನೂ ಹಸಿಯಾದ ಮರವನ್ನು ಕಡಿಯುವ ಅಗತ್ಯವೇನಿತ್ತು ಎನ್ನುವುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ.       ಬೆಳಿಗ್ಗೆ ಕಚೇರಿ ಸಮಯಕ್ಕೆ ಮುನ್ನವೇ ಧರೆಗುರುಳಿದ ಹೊಂಗೇಮರದ ವಿಚಾರ ಸಾಮಾಜಿಕ…

ಮುಂದೆ ಓದಿ...

ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛ ಪರಿಸರ ಕಾರ್ಯಕ್ರಮ

 ತುಮಕೂರು:        ಸ್ಮಾರ್ಟ್ ಸಿಟಿ ವತಿಯಿಂದ ಗಾಂಧಿಜಯಂತಿ ಪ್ರಯುಕ್ತ ಅಕ್ಟೋಬರ್ 2ರಂದು ಸ್ವಚ್ಛ ಪರಿಸರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.       ಗಾಂಧೀಜಿಯವರ ಕನಸಿನ ಸ್ವಚ್ಛಭಾರತ ಅಭಿಯಾನದಡಿ ನಾಮದ ಚಿಲಮೆಯಲ್ಲಿನ ಪ್ಲಾಸ್ಟಿಕ್ ಸ್ವಚ್ಛಗೊಳಿಸುವ ಮೂಲಕ ಈ ಸ್ವಚ್ಛಪರಿಸರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಗಾಂಧಿಜಯಂತಿಯನ್ನು ಇನ್ನಷ್ಟು ಅರ್ಥಪೂರ್ಣವನ್ನಾಗಿಸುವ ಸಲುವಾಗಿ ಪರಿಸರ ಸ್ನೇಹಿ ಮತ್ತು ಆರೋಗ್ಯವನ್ನು ವೃದ್ಧಿಸುವ ಸೈಕಲ್ ತುಳಿಯುವ ಹವ್ಯಾಸವನ್ನು ಹೆಚ್ಚಿಸುವ ನಿಟ್ಟಿನಲ್ಲಿ 150 ಹವ್ಯಾಸಿ ಸೈಕ್ಲಿಸ್ಟ್‍ಗಳನ್ನೊಳಗೊಂಡ ತಂಡವು ನಗರದ ಬಾಲಗಂಗಾಧರ ಸ್ವಾಮಿ ವೃತ್ತದಿಂದ ಪ್ರವಾಸಿ ತಾಣವಾದ ನಾಮದ ಚಿಲುಮೆಯವರೆಗೂ ಸೈಕ್ಲೋಥಾನ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.       ಸ್ಮಾರ್ಟ್‍ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಟಿ ರಂಗಸ್ವಾಮಿ ಹಾಗೂ ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಸೈಕ್ಲೋಥಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.       ಇದೇ ಸಂದರ್ಭದಲ್ಲಿ ತುಮಕೂರು ನಗರದಲ್ಲಿ ಹಸಿರೀಕರಣವನ್ನು ಹೆಚ್ಚಿಸುವ…

ಮುಂದೆ ಓದಿ...