ತುಮಕೂರು : ಚುನಾವಣೆ ಹಿನ್ನಲೆ 384 ಲೀ. ಮದ್ಯ – 4.7ಲೀ ಬಿಯರ್ ವಶ!!

ತುಮಕೂರು :       ಶಿರಾ ವಿಧಾನಸಭಾ ಉಪಚುನಾವಣೆ-2020 ಮತ್ತು ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಸಂಬಂಧ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 13ರವರೆಗೆ ಜಿಲ್ಲೆಯಲ್ಲಿ ಸಿರಾ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿ ಸೇರಿದಂತೆ ಒಟ್ಟು 12 ಘೋರ ಪ್ರಕರಣಗಳು, 85 15(ಎ) ಪ್ರಕರಣಗಳು, 12 ಬಿಎಲ್‍ಸಿ ಪ್ರಕರಣಗಳನ್ನು ದಾಖಲಿಸಲಾಗಿದ್ದು, 384.030 ಲೀಟರ್ ಮದ್ಯ ಹಾಗೂ 4.780 ಲೀಟರ್ ಬಿಯರ್ ಮತ್ತು 3 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.       ಜಿಲ್ಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅಕ್ರಮ ಮದ್ಯ ಮಾರಾಟ, ಸಾಗಾಣಿಕೆ, ಶೇಖರಣೆ ಇತ್ಯಾದಿ ಅಬಕಾರಿ ಅಕ್ರಮಗಳನ್ನು ತಡೆಗಟ್ಟಲು ಜಿಲ್ಲೆಯ ಅಬಕಾರಿ ಇಲಾಖೆಯಿಂದ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಅಬಕಾರಿ ಉಪ ಆಯುಕ್ತರ ಕಛೇರಿ ತುಮಕೂರು ಹಾಗೂ ಅಬಕಾರಿ ನಿರೀಕ್ಷಕರ ಕಛೇರಿ…

ಮುಂದೆ ಓದಿ...

ಬಿಜೆಪಿ ಅಭ್ಯರ್ಥಿ ರಾಜೇಶ್‍ಗೌಡ ಜೊತೆ ಉಪಮುಖ್ಯಮಂತ್ರಿ ನಾಮಪತ್ರ!!

ತುಮಕೂರು:       ಸಿರಾ ಕ್ಷೇತ್ರದ ಆರಾಧ್ಯ ದೈವ ಶ್ರೀ ಜುಂಜಪ್ಪಸ್ವಾಮಿಗೆ ನಮಸ್ಕರಿಸಿ ನಾವು ನಾಮಪತ್ರ ಸಲ್ಲಿಸಿದ್ದೇವೆ. ಜುಂಜಪ್ಪ ದೇವರ ಆಶೀರ್ವಾದ ಪಕ್ಷದ ಅಭ್ಯರ್ಥಿ ಡಾ. ರಾಜೇಶ್‍ಗೌಡರ ಮೇಲಿದೆ. ನೂರಕ್ಕೆ ನೂರರಷ್ಟು ಗೆದ್ದು ಭಾರತೀಯ ಜನತಾ ಪಕ್ಷದ ಪತಾಕೆಯನ್ನು ಸಿರಾದಲ್ಲಿ ಹಾರಿಸಲಿದ್ದೇವೆ ಎಂಬ ವಿಶ್ವಾಸವನ್ನು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಇಂದಿಲ್ಲಿ ವ್ಯಕ್ತಪಡಿಸಿದರು.       ಸಿರಾ ಉಪಚುನಾವಣೆಯಲ್ಲಿ ಆಶ್ಚರ್ಯಕರ ರೀತಿಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ರಾಜೇಶ್‍ಗೌಡ ಅವರು ಗೆದ್ದೇ ಗೆಲ್ಲುತ್ತಾರೆ ಎಂದು ಅವರು ಹೇಳಿದರು.       ಸಿರಾದಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್‍ಗೌಡ ಅವರ ಜತೆ ತೆರಳಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶ ಮತ್ತು ರಾಜ್ಯದ ಜನ ಭಾರತೀಯ ಜನತಾ ಪಕ್ಷ ಗೆಲ್ಲಬೇಕು ಎಂದು ಬಯಸುತ್ತಿದ್ದಾರೆ. ದೇಶದ ಶೇ. 75 ರಷ್ಟು ರಾಜ್ಯಗಳಲ್ಲಿ ಬಿಜೆಪಿ ಪಕ್ಷದ ಆಡಳಿತ…

ಮುಂದೆ ಓದಿ...

JDS ಅಭ್ಯರ್ಥಿ ಅಮ್ಮಾಜಮ್ಮ ಪರವಾಗಿ ಹೆಚ್.ಡಿ.ರೇವಣ್ಣ ನಾಮಪತ್ರ!!

ತುಮಕೂರು :       ಶಿರಾ ವಿಧಾನಸಭಾ ಉಪಚುನಾವಣೆಗೆ ಸಂಬಂಧಿಸಿದಂತೆ ಜೆಡಿಎಸ್ ಪಕ್ಷದ ಅಭ್ಯರ್ಥಿ ಅಮ್ಮಾಜಮ್ಮ ಸತ್ಯನಾರಾಯಣ ಅವರ ಪರವಾಗಿ ಮಾಜಿ ಮಂತ್ರಿ ಹೆಚ್.ಡಿ.ರೇವಣ್ಣ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರ ಸ್ವಾಮಿ ಮತ್ತು ಶಿರಾ ಪುರಸಭೆ ಮಾಜಿ ಅಧ್ಯಕ್ಷ ರಾಮು ರವರುಗಳು ನಾಮಪತ್ರ ಸಲ್ಲಿಸಿದರು.       ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿರುವ ಅಮ್ಮಾಜಮ್ಮ ಅವರಿಗೆ ಕೋರೋನ ಸೋಂಕು ದೃಡಪಟ್ಟು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಅವರ ಪರವಾಗಿ ಜೆಡಿಎಸ್ ಪಕ್ಷದ ಮುಖಂಡರ ಚುನಾವಣಾಧಿಕಾರಿಗಳಾದ ಮಧುಗಿರಿ ಉಪವಿಭಾಗಾಧಿಕಾರಿ ಡಾ.ನಂದಿನಿ ದೇವಿ ಅವರಿಗೆ ಉಮೇದುವಾರಿಕೆ ಪತ್ರ ಸಲ್ಲಿಸಿದರು.       ಶಿರಾ ನಗರದ ಚೆಂಗಾವರ ರಸ್ತೆಯಲ್ಲಿರುವ ಮಾಜಿ ಶಾಸಕ ದಿವಂಗತ ಸತ್ಯನಾರಾಯಣ ಅವರಿಗೆ ಸೇರಿದ ವಸತಿಗೃಹದಿಂದ ಶಿರಾ ನಗರದ ಹೊರವಲಯದಲ್ಲಿರುವ ತಾಲೂಕು ಕಚೇರಿಗೆ ಮಿನಿ ವಿಧಾನಸೌಧದವರೆಗೆ ಸಾವಿರಾರು ಕಾರ್ಯಕರ್ತ ರೊಂದಿಗೆ ಮೆರವಣಿಗೆ ನಡೆಸಿದ ಶಾಸಕ ಹಾಗೂ ಪಕ್ಷದ ಉಪಾಧ್ಯಕ್ಷ…

ಮುಂದೆ ಓದಿ...

ಹುಳಿಯಾರಿನಲ್ಲಿ ಪಂಚಾಯ್ತಿ ನಿರ್ಲಕ್ಷ್ಯದಿಂದ ಬಯಲು ಬಹಿರ್ದೆಸೆ ಇನ್ನೂ ಜೀವಂತ

 ಹುಳಿಯಾರು :        ಬಯಲು ಬಹಿರ್ದೆಸೆ ನಿರ್ಮೂಲನೆಗೆ ಸರ್ಕಾರ ಯುದ್ದೋಪಾದಿಯಲ್ಲಿ ಕ್ರಮ ಕೈಗೊಂಡು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರೂ ಸಹ ಪಂಚಾಯ್ತಿಯ ನಿರ್ಲಕ್ಷ್ಯದಿಂದಾಗಿ ಬಯಲು ಬಹಿರ್ದೆಸೆ ಇನ್ನೂ ಜೀವಂತವಾಗಿದ್ದು ಸಾರ್ವಜನಿಕರು ರಸ್ತೆ ಬದಿ ಮಲಮೂತ್ರ ವಿಸರ್ಜಿಸುವ ವ್ಯವಸ್ಥೆ ಇದ್ದು ನಾಗರಿಕ ಸಮಾಜವನ್ನು ಅಣಕಿಸುವಂತಿದೆ.       ಹೌದು, ಜಿಲ್ಲೆಯಲ್ಲೇ ಅತೀ ಹೆಚ್ಚು ಆದಾಯವುಳ್ಳ, ತಾಲೂಕು ಸರಿಸಮಾನಕ್ಕೆ ಬೆಳೆದು ನಿಂತಿರುವ, ವ್ಯಾಪಾರ ವಹಿವಾಟಿಗೆ ಹೆಸರಾಗಿರುವ ಹುಳಿಯಾರಿನ ಸ್ಥಿತಿ ಇದು. ಹೆಚ್ಚು ಜನಸಂದಣಿ ಇರುವ ರಾಮಗೋಪಾಲ್ ಸರ್ಕಲ್ ಮತ್ತು ಬಸ್ ನಿಲ್ದಾಣದಲ್ಲಿ ಪಂಚಾಯ್ತಿಯಿಂದ ದಶಕಗಳ ಹಿಂದೆ ಶೌಚಾಲಯ ಕಟ್ಟಿಸಿ, ಪ್ರಯಾಣಿಕರು, ಖಾಸಗಿ ಬಸ್ ಚಾಲಕ ಮತ್ತು ನಿರ್ವಾಹಕರು, ಹಮಾಲಿಗಳು, ಕೂಲಿಕಾರ್ಮಿಕರಿಗೆ, ಸಾರ್ವಜನಿಕರಿಗೆ ದೇಹಬಾಧೆ ತೀರಿಸಿಕೊಳ್ಳಲು ಅನುಕೂಲ ಮಾಡಿಕೊಟ್ಟಿದ್ದರು. ಆದರೆ ರಾಮಗೋಪಾಲ್ ಸರ್ಕಲ್ ಶೌಚಾಲಯ ಹೈವೆ ರಸ್ತೆ ಕಾಮಗಾರಿಗೆ ತೆರವು ಮಾಡಿದವರು ಪುನಃ ನಿರ್ಮಿಸಿಲ್ಲ. ಬಸ್ ನಿಲ್ದಾಣದ…

ಮುಂದೆ ಓದಿ...

ರೈತಸ್ನೇಹಿ ಕಾಯ್ದೆಗಳ ಜಾರಿಗೆ ಕಾಂಗ್ರೆಸ್-ಜೆಡಿಎಸ್ ಅಡ್ಡಿಯಾಗಿವೆ

ಮಧುಗಿರಿ:       ರೈತರ ಬಗ್ಗೆ ಕಾಳಜಿಯಿರುವ ನರೇಂದ್ರ ಮೋದಿಯವರ ಕಾರ್ಯಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಅಡ್ಡಗಾಲಾಗಿದ್ದು, ಎಪಿಎಂಸಿ ತಿದ್ದುಪಡಿಯಾಗಲು ಬಿಜೆಪಿಗೆ ಮತ ನೀಡುವಂತೆ ಶಾಸಕ ವೈ.ಎನ್.ನಾರಾಯಣಸ್ವಾಮಿ ತಿಳಿಸಿದರು.       ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಆಗ್ನೀಯ ಪದವೀಧರ ಕ್ಷೇತ್ರದ ಪಕ್ಷದ ಅಭ್ಯರ್ಥಿ ಎಂ.ಚಿದಾನಂದ ಗೌಡರ ಪರವಾಗಿ ಮತಯಾಚನೆ ಮಾಡಿದ ಅವರು ರೈತರು ದಲ್ಲಾಳಿಗಳ ಹಾವಳಿಯಿಂದ ಹೊರಬಂದು ಸ್ವತಂತ್ರವಾಗಿ ಬೆಳೆದ ಬೆಳೆಯನ್ನು ಮಾರಾಟ ಮಾಡಲು ನೂತನ ಎಪಿಎಂಸಿ ಕಾಯ್ದೆ ಸಹಕಾರಿಯಾಗಿದೆ. ಆದರೆ ಈ ಕಾಯ್ದೆ ತಿದ್ದುಪಡಿಗೆ ವಿರೋಧ ಪಕ್ಷಗಳು ಅಡ್ಡಿಯಾಗಿದ್ದು, ಕಾಯ್ದೆ ಮೇಲ್ಮನೆಯಲ್ಲಿ ಬಿದ್ದುಹೋಗುವಂತೆ ಮಾಡಿವೆ. ಈಗಿನ ನಾಲ್ಕು ವಿಧಾನ ಪರಿಷತ್ ಹಾಗೂ ವಿಧಾನಸಭೆಯ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆದ್ದರೆ ಆ ಕಾಯ್ದೆ ಜಾರಿಗೆ ಬಂದು ರೈತರಿಗೆ ಅನುಕೂಲವಾಗಲಿದೆ. ಬಿಜೆಪಿ ಕಾರ್ಯಕರ್ತರು ಈ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರವಾಗಿ ಮತಯಾಚನೆ ಮಾಡಿ ಗೆಲುವಿಗೆ ಕಾರಣರಾಗಬೇಕು…

ಮುಂದೆ ಓದಿ...