ತುಮಕೂರು : 2020-21ನೇ ಶೈಕ್ಷಣಿಕ ಸಾಲಿನ ಹೊಸ ಸ್ನಾತಕೋತ್ತರ ಕೋರ್ಸ್‍ಗಳ ಆರಂಭ

ತುಮಕೂರು :        ತುಮಕೂರು ವಿಶ್ವವಿದ್ಯಾನಿಲಯದ ಗೌರವಾನ್ವಿತ ಕುಲಪತಿಗಳಾದ ಪ್ರೊ. ವೈ.ಎಸ್. ಸಿದ್ದೇಗೌಡ ರವರು 2020-21ನೇ ಶೈಕ್ಷಣಿಕ ಸಾಲಿನಿಂದ ವಿಶ್ವವಿದ್ಯಾನಿಲಯದಲ್ಲಿ, ತಿಪಟೂರಿನ ಸ್ನಾತಕೋತ್ತರ ಕೇಂದ್ರದಲ್ಲಿ ಹಾಗೂ ಶಿರಾ ಸ್ನಾತಕೋತ್ತರ ಕೇಂದ್ರದಲ್ಲಿ ಈ ಕೆಳಕಂಡ ಸ್ನಾತಕೋತ್ತರ ಕೋರ್ಸ್‍ಗಳನ್ನು ಹಾಗೂ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್‍ಗಳನ್ನು ಪ್ರಾರಂಭಿಸಲು ಕ್ರಮ ಕೈಗೊಂಡಿದ್ದಾರೆ.       ವಿಶ್ವವಿದ್ಯಾನಿಲಯದಲ್ಲಿ ಪ್ರಾರಂಭಿಸಿರುವ ಕೋರ್ಸ್ ಗಳು:     1) ಎಂ.ಎ. ಹಿಂದಿ:       ಸ್ನಾತಕೋತ್ತರ ಹಿಂದಿ ಪದವಿಯನ್ನು ಪಡೆಯುವುದರಿಂದ ಬೋಧಕರಾಗಬಹುದು. ಭಾಷಾಂತರಕಾರರಾಗಿ ಹಾಗೂ ಪ್ರವಾಸಿ ಕೇಂದ್ರಗಳಲ್ಲಿ ಹಿಂದಿ ಭಾಷಾ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುವ ಅವಕಾಶವಿದೆ. 2) ಎಂ.ಎ. ಸಂಸ್ಕøತ: ಸಂಸ್ಕøತ ಅಧ್ಯಯನದಿಂದ ಭಾಷಾಂತರಕಾರರಾಗಬಹುದು ಹಾಗೂ ಶಾಲಾ ಕಾಲೇಜುಗಳಲ್ಲಿ ಬೋಧಕರಾಗಿ, ಭಾಷಾ ಪ್ರಚಾರಕರಾಗಿ ಕಾರ್ಯನಿರ್ವಹಿಸಬಹುದು. ತಿಪಟೂರು ಸ್ನಾತಕೋತ್ತರ ಕೇಂದ್ರ:        1) ಎಂ.ಎಸ್ಸಿ. ಮೈಕ್ರೋಬಯಾಲಜಿ: ಈ ಕೋರ್ಸ್‍ನ್ನು ಅಧ್ಯಯನ…

ಮುಂದೆ ಓದಿ...

ನಗರದಲ್ಲಿ ಮೆಟ್ರೋ ಮಳಿಗೆ ಆರಂಭವಾಗಿರುವುದು ಗ್ರಾಹಕರಿಗೆ ಅನುಕೂಲ

ತುಮಕೂರು :        ನಗರದ ಮಂಡಿಪೇಟೆಯಲ್ಲಿ ಮೆಟ್ರೋ ಭಾರತದ 28ನೆಯ ಮತ್ತು ಕರ್ನಾಟಕದ 7ನೇ ಮೆಟ್ರೋ ಹೋಲ್‍ಸೇಲ್ ಮಳಿಗೆಯನ್ನು ಆರಂಭಿಸಲಾಗಿದೆ.       ದೇಶದ ಅತಿದೊಡ್ಡ ಸಂಘಟಿತ ಹೋಲ್‍ಸೇಲ್ ಮಾರಾಟಗಾರ ಮತ್ತು ಆಹಾರದ ಪರಿಣಿತಿ ಹೊಂದಿರುವ ಮೆಟ್ರೋ ಕ್ಷಾಶ್ ಅಂಡ್ ಕ್ಯಾರಿ ನಗರದಲ್ಲಿ ಆರಂಭಿಸಿರುವ ಮಳಿಗೆಯನ್ನು ಶಾಸಕ ಜಿ.ಬಿ. ಜ್ಯೋತಿಗಣೇಶ್ ಉದ್ಘಾಟಿಸಿದರು.       ನಂತರ ಮಾತನಾಡಿದ ಅವರು, ನಗರದಲ್ಲಿ ಮೆಟ್ರೋ ಮಳಿಗೆ ಆರಂಭವಾಗಿರುವುದು ಗ್ರಾಹಕರಿಗೆ ತುಂಬಾ ಅನುಕೂಲವಾಗುತ್ತದೆ. ಬೆಂಗಳೂರಿನ ರಾಜಾಜಿನಗರದಲ್ಲಿ ಮೆಟ್ರೋ ಸ್ಟೋರ್‍ಗೆ ಹೋಗಿ ಹೋಲ್‍ಸೇಲ್‍ನಲ್ಲಿ ಸರಕುಗಳನ್ನು ತರುವುದು ತಪ್ಪಿದಂತಾಗಿದೆ ಎಂದರು. ಮಂಗಳೂರು, ಹುಬ್ಬಳ್ಳಿಯಲ್ಲಿ ಮೆಟ್ರೋ ಹೋಲ್‍ಸೇಲ್ ಮಳಿಗೆ ಆರಂಭಿಸಲಾಗಿಲ್ಲ. ಬದಲಾಗಿ ತುಮಕೂರಿನಲ್ಲಿ ಆರಂಭಿಸಿರುವುದು ದಿನೇ ದಿನೇ ಬೆಳೆಯುತ್ತಿರುವ ತುಮಕೂರಿನ ಪ್ರಗತಿಗೆ ಪೂರಕವಾಗಲಿದೆ ಎಂದರು.        ಮೆಟ್ರೋ ಆರಂಭದಿಂದ ಎಲ್ಲರಿಗೂ ಎಲ್ಲ ರೀತಿಯ ವಸ್ತುಗಳನ್ನು ಖರೀದಿಸಲು ಅನುಕೂಲಕರವಾಗಿದೆ…

ಮುಂದೆ ಓದಿ...