BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಕನ್ನಡ ಕೈಬಿಟ್ಟು ರೈಲ್ವೆ ಇಲಾಖೆಯ ಹುದ್ದೆ ಪದೋನ್ನತಿಯ ಪರೀಕ್ಷೆ
  • ಮಳೆಯನ್ನು ಆಧರಿಸಿ ಬಿತ್ತನೆ ಕೈಗೊಳ್ಳಲು ರೈತರಿಗೆ ಸಲಹೆ
  • ಬೀದಿನಾಯಿಗಳ ಹಾವಳಿ: ಕಂಟಕಪ್ರಾಯವಾದ ಶ್ವಾನ ಪಡೆ
  • ವೀರಶೈವ ಲಿಂಗಾಯಿತರು ಸಂಘಟಿತರಾಗಿ ಸಮಾಜವನ್ನು ಮುನ್ನೆಡೆಸಿರಿ
  • ಪ್ರಧಾನಿಗಳ ವಿಕಸಿತ ಭಾರತದ ಪರಿಕಲ್ಪನೆಗೆ ಯುವಕರ ಪಾತ್ರ ಮಹತ್ವದ್ದು
  • ನಮ್ಮ ಕ್ಲಿನಿಕ್ ಸ್ಥಾಪನೆಗೆ ವಿರೋಧ
  • ಬೀದಿಯಲ್ಲಿ ತರಕಾರಿ ಮಾರುತ್ತಿದ್ದ ಹುಡುಗ ಈಗ ಟಾಪರ್!
  • ಕಾರ್ಮಿಕ ಇಲಾಖೆ ಯೋಜನೆಗೆ ಸಂಘದ ನೆರವು
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರಿಂದ ರಂಜಾನ್ ಸಡಗರ
ತುಮಕೂರು

ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರಿಂದ ರಂಜಾನ್ ಸಡಗರ

By News Desk BenkiyabaleUpdated:May 03, 2022 5:29 pm

ತುಮಕೂರು:
ಮುಸ್ಲಿಂ ಬಾಂಧವರ ಪವಿತ್ರ ಹಬ್ಬಗಳಲ್ಲಿ ಒಂದಾದ ಈದ್ ಉಲ್ ಫಿತರ್ ರಂಜಾನ್ ಹಬ್ಬವನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಕಳೆದ ಎರಡು ವರ್ಷಗಳಿಂದ ಕೊರೊನಾ ಮಹಾಮಾರಿಯ ಆರ್ಭಟದಿಂದಾಗಿ ರಂಜಾನ್ ಹಬ್ಬವನ್ನು ಮುಸ್ಲಿಂ ಬಾಂಧವರು ಯಾವುದೇ ಅದ್ದೂರಿ, ಆಡಂಬರ ಇಲ್ಲದೆ ತಮ್ಮ ಮನೆಗಳಲ್ಲೇ ಆಚರಿಸಿದ್ದರು. ಆದರೆ ಈ ಬಾರಿ ಕೊರೊನಾ ಸೋಂಕಿನ ಪ್ರಮಾಣ ಗಣನೀಯವಾಗಿ ತಗ್ಗಿ, ಕಠಿಣ ಕ್ರಮಗಳನ್ನು ತೆರವುಗೊಳಿಸಿರುವುದರಿಂದ ಮುಸ್ಲಿಂ ಬಾಂಧವರು ರಂಜಾನ್ ಹಬ್ಬವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಅದ್ದೂರಿಯಾಗಿ ಆಚರಿಸಿದರು.
ಬೆಳಿಗ್ಗೆ 9.15ಕ್ಕೆ ನಗರದ ಮೆಳೇಕೋಟೆ ಸಮೀಪ ಇರುವ ಮಾಜಿ ಶಾಸಕ ಡಾ. ನಜೀರ್ ಅಹ್ಮದ್ ಈದ್ಗಾ (ಕೆಂಪು ಈದ್ಗಾ) ಮೈದಾನದಲ್ಲಿ ಮುಸ್ಲಿಂ ಬಾಂಧವರು ಸಮಾವೇಶಗೊಂಡು ಪ್ರಾರ್ಥನೆ ಸಲ್ಲಿಸುವ ಮೂಲಕ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದರು.
ನಂತರ ಕುಣಿಗಲ್ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಜಮಾಯಿಸಿದ ಸಾವಿರಾರು ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಹಬ್ಬದ ಶುಭಾಶಯವನ್ನು ವಿನಿಮಯ ಮಾಡಿಕೊಂಡರು.
ಹೊಸ ಉಡುಪುಗಳನ್ನು ಧರಿಸಿ, ಒಬ್ಬರಿಗೊಬ್ಬರು ಆಲಿಂಗನ ಮಾಡಿ ಹಬ್ಬದ ಶುಭಾಶಯ ಕೋರಿದ್ದು ಕಂಡು ಬಂತು.
ಕಳೆದ 2 ವರ್ಷಗಳಿಂದ ಕೊರೊನಾ ಸೋಂಕಿನಿಂದಾಗಿ ರಂಜಾನ್ ಹಬ್ಬ ಕಳೆಗಟ್ಟಿರಲಿಲ್ಲ. ಆದರೆ ಈ ಬಾರಿ ರಂಜಾನ್ ಹಬ್ಬದ ಸಂಭ್ರಮದ ಹಿಂದೂ ಮತ್ತು ಮುಸ್ಲಿಂ ಬಾಂಧವರ ಭಾವೈಕ್ಯತೆಯ ಸಂಕೇತವಾಗಿ ಮಾರ್ಪಟ್ಟಿದೆ.
ಈದ್ಗಾ ಮೈದಾನದಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಾಹುಲ್‍ಕುಮಾರ್, ಉಪವಿಭಾಗಾಧಿಕಾರಿ ಅಜಯ್, ತಹಶೀಲ್ದಾರ್ ಮೋಹನ್‍ಕುಮಾರ್, ಡಿವೈಎಸ್ಪಿ ಶ್ರೀನಿವಾಸ್ ಅವರು ಭೇಟಿ ನೀಡಿ ಮಾಜಿ ಶಾಸಕರಾದ ಎಸ್. ಷಫಿಅಹಮದ್, ಡಾ. ರಫೀಕ್‍ಅಹಮದ್, ಇಕ್ಬಾಲ್ ಅಹಮದ್ ಸೇರಿದಂತೆ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯ ಕೋರಿದರು.
ಮಾಜಿ ಶಾಸಕರಾದ ಎಸ್. ಷಫಿಅಹಮದ್, ಡಾ. ರಫೀಕ್‍ಅಹಮದ್ ಹಾಗೂ ಇಕ್ಬಾಲ್ ಅಹಮದ್ ಮಾತನಾಡಿ, ಪವಿತ್ರವಾದ ರಂಜಾನ್ ಹಬ್ಬವನ್ನು ಮುಸ್ಲಿಂ ಹಾಗೂ ಹಿಂದೂ ಬಾಂಧವರು ಸೇರಿ ಸಡಗರದಿಂದ ಆಚರಿಸಲಾಗುತ್ತಿದೆ. ಒಂದು ತಿಂಗಳ ಕಾಲ ಉಪವಾಸ ಇದ್ದು ಪವಿತ್ರವಾಗಿ ಹಬ್ಬ ಆಚರಣೆ ಮಾಡಲಾಗುತ್ತಿದೆ. ಬಸವ ಜಯಂತಿ ಹಾಗೂ ರಂಜಾನ್ ಎರಡೂ ಹಬ್ಬಗಳು ಒಂದೇ ದಿನ ಬಂದಿರುವುದು ಹಿಂದೂ ಮತ್ತು ಮುಸ್ಲಿಂ ಬಾಂಧವರ ಭಾವೈಕ್ಯತೆಯ ಸಂಕೇತವಾಗಿದೆ ಎಂದರು. ಕುಣಿಗಲ್ ರಸ್ತೆಯಲ್ಲಿರುವ ಈದ್ಗಾ ಮೈದಾನದ ಸುತ್ತಮುತ್ತ ಬಿಗಿ ಪೆÇಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

(Visited 1 times, 1 visits today)
ramzan tumkur
Previous Articleಬಸವಣ್ಣನ ನೀರಾವರಿ ಯೋಜನೆ ಇಂದಿಗೂ ಮಾದರಿ
Next Article 24 ಗಂಟೆಯೂ ಜನರ ಸೇವೆಗೆ ಸದಾ ಸಿದ್ಧ: ಮಾಜಿ ಶಾಸಕ ಸುರೇಶ್ ಗೌಡ
News Desk Benkiyabale

Related Posts

ಕನ್ನಡ ಕೈಬಿಟ್ಟು ರೈಲ್ವೆ ಇಲಾಖೆಯ ಹುದ್ದೆ ಪದೋನ್ನತಿಯ ಪರೀಕ್ಷೆ

June 22, 2026 5:23 pm news

ಮಳೆಯನ್ನು ಆಧರಿಸಿ ಬಿತ್ತನೆ ಕೈಗೊಳ್ಳಲು ರೈತರಿಗೆ ಸಲಹೆ

June 22, 2026 5:19 pm news

ಬೀದಿನಾಯಿಗಳ ಹಾವಳಿ: ಕಂಟಕಪ್ರಾಯವಾದ ಶ್ವಾನ ಪಡೆ

June 22, 2026 5:17 pm news
ತಾಜಾ ಸುದ್ಧಿಗಳು

ಕನ್ನಡ ಕೈಬಿಟ್ಟು ರೈಲ್ವೆ ಇಲಾಖೆಯ ಹುದ್ದೆ ಪದೋನ್ನತಿಯ ಪರೀಕ್ಷೆ

June 22, 2026 5:23 pm

ಮಳೆಯನ್ನು ಆಧರಿಸಿ ಬಿತ್ತನೆ ಕೈಗೊಳ್ಳಲು ರೈತರಿಗೆ ಸಲಹೆ

June 22, 2026 5:19 pm

ಬೀದಿನಾಯಿಗಳ ಹಾವಳಿ: ಕಂಟಕಪ್ರಾಯವಾದ ಶ್ವಾನ ಪಡೆ

June 22, 2026 5:17 pm

ವೀರಶೈವ ಲಿಂಗಾಯಿತರು ಸಂಘಟಿತರಾಗಿ ಸಮಾಜವನ್ನು ಮುನ್ನೆಡೆಸಿರಿ

June 22, 2026 5:14 pm

ಪ್ರಧಾನಿಗಳ ವಿಕಸಿತ ಭಾರತದ ಪರಿಕಲ್ಪನೆಗೆ ಯುವಕರ ಪಾತ್ರ ಮಹತ್ವದ್ದು

June 22, 2026 5:12 pm

ನಮ್ಮ ಕ್ಲಿನಿಕ್ ಸ್ಥಾಪನೆಗೆ ವಿರೋಧ

June 20, 2026 5:11 pm
Our Youtube Channel
Our Picks

ಕನ್ನಡ ಕೈಬಿಟ್ಟು ರೈಲ್ವೆ ಇಲಾಖೆಯ ಹುದ್ದೆ ಪದೋನ್ನತಿಯ ಪರೀಕ್ಷೆ

June 22, 2026 5:23 pm

ಮಳೆಯನ್ನು ಆಧರಿಸಿ ಬಿತ್ತನೆ ಕೈಗೊಳ್ಳಲು ರೈತರಿಗೆ ಸಲಹೆ

June 22, 2026 5:19 pm

ಬೀದಿನಾಯಿಗಳ ಹಾವಳಿ: ಕಂಟಕಪ್ರಾಯವಾದ ಶ್ವಾನ ಪಡೆ

June 22, 2026 5:17 pm

ವೀರಶೈವ ಲಿಂಗಾಯಿತರು ಸಂಘಟಿತರಾಗಿ ಸಮಾಜವನ್ನು ಮುನ್ನೆಡೆಸಿರಿ

June 22, 2026 5:14 pm

ಪ್ರಧಾನಿಗಳ ವಿಕಸಿತ ಭಾರತದ ಪರಿಕಲ್ಪನೆಗೆ ಯುವಕರ ಪಾತ್ರ ಮಹತ್ವದ್ದು

June 22, 2026 5:12 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss

ಕನ್ನಡ ಕೈಬಿಟ್ಟು ರೈಲ್ವೆ ಇಲಾಖೆಯ ಹುದ್ದೆ ಪದೋನ್ನತಿಯ ಪರೀಕ್ಷೆ

By News Desk BenkiyabaleJune 22, 2026 5:23 pm

ತುಮಕೂರು: ರೈಲ್ವೆ ಇಲಾಖೆಯ ಕನ್ನಡ ಕಡೆಗಣನೆ ಮುಂದುವರೆದಿದೆ. ಈ ತಿಂಗಳ ೨೫ರಂದು ಕರ್ನಾಟಕದಲ್ಲಿಯೇ ನಡೆಯುವ ನೈರುತ್ಯ ರೈಲ್ವೆಯ ಗೂಡ್ಸ್ ಟ್ರೇನ್…

ಮಳೆಯನ್ನು ಆಧರಿಸಿ ಬಿತ್ತನೆ ಕೈಗೊಳ್ಳಲು ರೈತರಿಗೆ ಸಲಹೆ

June 22, 2026 5:19 pm

ಬೀದಿನಾಯಿಗಳ ಹಾವಳಿ: ಕಂಟಕಪ್ರಾಯವಾದ ಶ್ವಾನ ಪಡೆ

June 22, 2026 5:17 pm

ವೀರಶೈವ ಲಿಂಗಾಯಿತರು ಸಂಘಟಿತರಾಗಿ ಸಮಾಜವನ್ನು ಮುನ್ನೆಡೆಸಿರಿ

June 22, 2026 5:14 pm
News by Date
June 2026
M T W T F S S
1234567
891011121314
15161718192021
22232425262728
2930  
« Apr    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.