BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಗಂಗಸ0ದ್ರ ಕೆರೆ ಏರಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜ್ಯೋತಿಗಣೇಶ್ ಚಾಲನೆ
  • ಜನರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಿದ್ದವರು ವೀರಣ್ಣ
  • ಲೆಟರ್‌ಹೆಡ್ ಪದಾಧಿಕಾರಿಗಳಾಗುವುದರಿಂದ ಯಾವುದೇ ಪ್ರಯೋಜನವಿಲ್ಲ
  • ಸರ್ಕಾರಿ ಶಾಲೆ ಉಳಿವಿಗಾಗಿ ಒತ್ತಾಯಿಸಿ ಪ್ರತಿಭಟನೆ
  • ೧೦ ನಿಮಿಷದಲ್ಲಿ ೨೦ ಲಕ್ಷದ ಕಾಮಗಾರಿ ಮುಕ್ತಾಯ!
  • ಬಿಜೆಪಿ ಮಹಿಳಾ ಮೋರ್ಚಾದಿಂದ ರಕ್ಷಾ ಬಂಧನ ಹಬ್ಬದ ಸಂಭ್ರಮ
  • ಅರ್ಥಪೂರ್ಣವಾಗಿ ರಕ್ಷಾ ಬಂಧನ ಆಚರಣೆ
  • ಶಿರಾ ಕ್ಯಾಂಪಸ್‌ನಲ್ಲಿ ಶೀಘ್ರ ಪಿಯುವರೆಗೆ ವಸತಿ ಸಹಿತ ಉಚಿತ ಶಿಕ್ಷಣ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಸಾಲವನ್ನು ಸಕಾಲದಲ್ಲಿ ಮರುಪಾವತಿಸಿ : ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ
ಇತರೆ ಸುದ್ಧಿಗಳು

ಸಾಲವನ್ನು ಸಕಾಲದಲ್ಲಿ ಮರುಪಾವತಿಸಿ : ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ

By News Desk BenkiyabaleUpdated:September 05, 2022 5:24 pm

ತುಮಕೂರು :


ಸಹಕಾರಿ ಸಂಸ್ಥೆಗಳಿಂದ ಸಾಲ ಪಡೆಯುವುದು ಹೇಗೆ ಸದಸ್ಯರ ಹಕ್ಕೋ,ಹಾಗೆಯೇ ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವುದು ಕೂಡ ನಮ್ಮ ಕರ್ತವ್ಯವಾಗಿದೆ.ಸಾಲ ನೀಡುವುದು,ಮರುಪಾವತಿ ಎರಡು ಸಮನಾಗಿದ್ದರೆ ಮಾತ್ರ ಸಂಸ್ಥೆ ಏಳಿಗೆ ಹೊಂದಲು ಸಾಧ್ಯ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಅಭಿಪ್ರಾಯ ಪಟ್ಟಿದ್ದಾರೆ.
ನಗರದ ಭಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ಶ್ರೀಕಾಳಿಕಾಂಬ ಪತ್ತಿನ ಸಹಕಾರ ಸಂಘ ನಿಯಮಿತದ 25ನೇ ವರ್ಷದ ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಸಾಲ ನೀಡುವುದು ಮತ್ತು ವಸೂಲಿ ಮಾಡುವ ಕೆಲಸವನ್ನು ತಳ ಸಮುದಾಯಕ್ಕೆ ಸೇರಿದ ಕಾಳಿಕಾಂಬ ಪತ್ತಿನ ಸಹಕಾರ ಸಂಘದ ಸಿಬ್ಬಂದಿಗಳು ಮತ್ತು ಆಡಳಿತ ಮಂಡಳಿ ಕಟ್ಟುನಿಟ್ಟಾಗಿ ನಿರ್ವಹಿಸುವ ಮೂಲಕ ಉತ್ತುಂಗದತ್ತ ದಾಪುಕಾಲು ಹಾಕುತ್ತಿದೆ ಎಂದರು.
ಇಡೀ ರಾಜ್ಯಕ್ಕೆ ಹೊಲಿಕೆ ಮಾಡಿದರೆ ತುಮಕೂರು ಜಿಲ್ಲೆಯಲ್ಲಿ ತಳಸಮುದಾಯಕ್ಕೆ ಸೇರಿದ ಸಹಕಾರಿ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು,ತಮ್ಮ ಸಮುದಾಯದ ಮತ್ತು ಸಮಾಜದ ಅರ್ಥಿಕ ಚಟುವಟಿಕೆಯಲ್ಲಿ ಮುಖ್ಯ ಪಾತ್ರವಹಿಸಿವೆ.ಕಳೆದ 25 ವರ್ಷಗಳ ಹಿಂದೆ ಆರಂಭವಾದ ಶ್ರೀಕಾಳಿಕಾಂಬ ಪತ್ತಿನ ಸಹಕಾರ ಸಂಘ, ಇಂದು ರಜತ ಮಹೋತ್ಸವ ಆಚರಿಸಿಕೊಳ್ಳು ತ್ತಿರುವುದು ಸಂತೋಷದ ವಿಚಾರ.ಒಂದು ಸಹಕಾರ ಸಂಸ್ಥೆಯನ್ನು ಹುಟ್ಟು ಹಾಕುವುದು ಸುಲಭ.ಆದರೆ ಅದನ್ನು ಉಳಿಸಿ, ಬೆಳೆಸಿಕೊಂಡು ಹೋಗುವುದು ಕಷ್ಟದ ಕೆಲಸ.ಇದು ನನ್ನ ಐವತ್ತು ವರ್ಷಗಳ ಸಹಕಾರ ಜೀವನದ ಅನುಭವ ಎಂದು ಕೆ.ಎನ್.ರಾಜಣ್ಣ ನುಡಿದರು.
ವಿದ್ಯೆ ಮನುಷ್ಯನ ಸ್ವಾಭಿಮಾನದ ಬದುಕಿಗೆ ನಾಂದಿ ಹಾಡುತ್ತದೆ.ಇಂದು ನಿಮ್ಮದೆ ಸಮುದಾಯದ ಮೇಘನ ಎಂಬ ವಿದ್ಯಾರ್ಥಿನಿ ಯುಪಿಎಸ್ಸಿ ಪರೀಕ್ಷೆಯಲ್ಲಿ ತೆರ್ಗಡೆ ಹೊಂದಿದ್ದು,ನೀವೆಲ್ಲರು ಅವರನ್ನು ತುಂಬು ಹೃದಯದಿಂದ ಅಭಿನಂದಿಸುತ್ತಿದ್ದೀರಿ,ಇದು ಉಳಿದ ಮಕ್ಕಳಿಗೂ ಪ್ರೇರಣೆಯಾಗಲಿದೆ.ವಿಶ್ವಕರ್ಮ ಸಮುದಾಯ ಯಾವುದೇ ವೃತ್ತಿ ಮಾಡಿ, ಮಕ್ಕಳಿಗೆ ಕಲಿಸಿ, ಅಡ್ಡಿಯಿಲ್ಲ.ಆದರೆ ಕುಲಕಸುಬಿನ ಜೊತೆಗೆ, ಮಕ್ಕಳಿಗೆ ವಿದ್ಯೆಯನ್ನು ನೀಡಿ, ಶ್ರಮ ಮತ್ತು ಶ್ರದ್ದೆಯಿಂದ ವಿದ್ಯೆಯನ್ನು ಒಲಿಸಿಕೊಂಡವರಿಗೆ ಸರ್ವಸ್ವವೂ ಸಿಗುತ್ತದೆ.ಹಾಗಾಗಿ ನೀವೆಲ್ಲರೂ ನಿಮ್ಮ ಮಕ್ಕಳನ್ನು ಉತ್ತಮ ವಿದ್ಯಾವಂತರ ನ್ನಾಗಿ ರೂಪಿಸಿ ಎಂದು ಪೋಷಕರಿಗೆ ಕೆ.ಎನ್.ರಾಜಣ್ಣ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಕಾಳಿಕಾಂಬ ಪತ್ತಿನ ಸಹಕಾರ ಸಂಘ ನಿಯಮಿತದ ಅಧ್ಯಕ್ಷ ಬಿ.ವಿ. ಗಂಗಾರಾಜಾಚಾರ್ ಮಾತನಾಡಿ,1997-98ರಲ್ಲಿ ಕೇವಲ 9 ಜನ ಹಿರಿಯರು ಸೇರಿ ಆರಂಭಿಸಿದ ಸಹಕಾರ ಸಂಘ ಇಂದು ವಾರ್ಷಿಕ 15 ಕೋಟಿ ರೂ ವಹಿವಾಟು ನಡೆಸುತಿದ್ದು, 18 ಲಕ್ಷ ರೂ ಲಾಭ ಗಳಿಸಿದೆ.ಷೇರುದಾರರಿಗೆ ಶೇ12ರ ಡಿವಿಡೆಂಟ್ ನೀಡುತ್ತಿದೆ.ಮುಂದಿನ ದಿನಗಳಲ್ಲಿ 50 ಲಕ್ಷ ರೂ ಇರುವ ಷೇರು ಬಂಡವಾಳವನ್ನು 1 ಕೋಟಿ ರೂಗಳಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಬ್ಯಾಂಕಿನ ಬೆಳವಣಿಗೆಗೆ ಹಗಲಿರುಳು ಶ್ರಮಿಸಿದ ನಿರ್ದೇಶಕರುಗಳಿಗೂ, ಸಿಬ್ಬಂದಿ ವರ್ಗದವರಿಗೂ ಹೃಪೂರ್ವಕ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಶಾಸಕ ಜಿ.ಬಿ.ಜೋತಿಗಣೇಶ್,ಪಾಲಿಕೆ ಸದಸ್ಯರಾದ ದೀಪಶ್ರೀ,ನ್ಯಾಮಿನಿ ಸದಸ್ಯ ನರಸಿಂಹಮೂರ್ತಿ,ಟೂಡಾ ಅಧ್ಯಕ್ಷ ಹೆಚ್.ಜಿ.ಚಂದ್ರಶೇಖರ್ ಅವರುಗಳು ಕಾರ್ಯಕ್ರಮಕ್ಕೆ ಆಗಮಿಸಿ, ಶುಭಕೋರಿದರು.ಈ ಸಂದರ್ಭದಲ್ಲಿ ಕಳೆದ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ವಿಶ್ವಕರ್ಮ ಸಮುದಾಯದ ವಿಕಲಚೇನತರಾದ ಮೇಘನ,ಶ್ರೀಕಾಳಿಕಾಂಬ ಪತ್ತಿನ ಸಹಕಾರ ಸಂಘ ನಿಯಮಿತದ ಹಿರಿಯ ನಿರ್ದೇಶಕರಗಳು,ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ.ಜೆ.ವೆಂಕಟೇಗೌಡ,ನಿವೃತ್ತ ನ್ಯಾಯಾಧೀಶರಾದ ಎಂ.ಸಿ.ಸಚ್ಚಿದಾನಂದ ಪ್ರಸಾದ್,ಜಿಲ್ಲಾ ವಿಶ್ವಕರ್ಮ ಸೇವಾ ಸಮಿತಿಯ ಅಧ್ಯಕ್ಷ ಎಚ್.ಪಿ.ನಾಗರಾಜಾಚಾರ್,ವಿಶ್ವಕರ್ಮ ಸಾಹಿತ್ಯ ಪರಿಷತ್ತಿನ ಡಾ.ಕೆ.ವಿ.ಕೃಷ್ಣಮೂರ್ತಿ,ಚಿನ್ನ,ಬೆಳ್ಳಿ ಕೆಲಸಗಾರರ ಸಂಘದ ಜಿ.ಲಕ್ಷ್ಮಿನಾರಾಯಣ್, ಹೊರಪೇಟೆಯ ವಿಶ್ವಕರ್ಮ ಪತ್ತಿನ ಸಹಕಾರ ಸಂಘದ ವೆಂಕಟನರಸಪ್ಪಾಚಾರ್,ಶ್ರೀಕಾಳಿಕಾಂಬ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾದ ಕೆ.ವಿ.ಗೋವರ್ಧ ನಾಚಾರ್,ನಿರ್ದೇಶಕರಾದಟಿ.ಪಿ.ವೇಣುಗೋಪಾಲಾಚಾರ್,ಟಿ.ಎ.ಸುಧೀರ್,ರಾಮಲಿಂಗಾಚಾರ್,ಜೆ.ಎನ್.ಗೋಪಾಲಕೃಷ್ಣಾಚಾರ್, ಟಿ.ಸಿ.ಡಮರಗೇಶ್, ಶ್ರೀಮತಿ ವೈ.ಎಸ್.ನಾಗರತ್ನ, ಶ್ರೀಮತಿ ವಿ.ಈಶ್ವರಿ,ಎಸ್.ಹರೀಶ್, ಫೈರೋಜ್, ವ್ಯವಸ್ಥಾಪಕರಾದ ಶ್ರೀಮತಿ ಜೆ.ಲೀಲಾ ಮತ್ತಿತರರು ಉಪಸ್ಥಿತರಿದ್ದರು.

(Visited 5 times, 1 visits today)
tumkur
Previous Articleಜನೋತ್ಸವ ಸಮಾವೇಶಕ್ಕೆ ತುಮಕೂರಿನ 30 ಸಾವಿರ ಜನ ಭಾಗಿ : ಬಿಜೆಪಿಯ ಜನಪ್ರಿಯ ಯೋಜನೆ , ಸಾಧನೆ ತಿಳಿಸುವ ಕಾರ್ಯಕ್ರಮ : ಹೆಚ್‍ಎಸ್.ರವಿಶಂಕರ್ ಹೆಬ್ಬಾಕ
Next Article ರಸ್ತೆ ದುರಸ್ಥಿಗೆ ಗ್ರಾಮಸ್ಥರ ಆಗ್ರಹ
News Desk Benkiyabale

Related Posts

ಗಂಗಸ0ದ್ರ ಕೆರೆ ಏರಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜ್ಯೋತಿಗಣೇಶ್ ಚಾಲನೆ

August 31, 2026 5:16 pm news

ಜನರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಿದ್ದವರು ವೀರಣ್ಣ

August 31, 2026 5:14 pm news

ಲೆಟರ್‌ಹೆಡ್ ಪದಾಧಿಕಾರಿಗಳಾಗುವುದರಿಂದ ಯಾವುದೇ ಪ್ರಯೋಜನವಿಲ್ಲ

August 31, 2026 5:12 pm news
ತಾಜಾ ಸುದ್ಧಿಗಳು
news

ಗಂಗಸ0ದ್ರ ಕೆರೆ ಏರಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜ್ಯೋತಿಗಣೇಶ್ ಚಾಲನೆ

August 31, 2026 5:16 pm
news

ಜನರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಿದ್ದವರು ವೀರಣ್ಣ

August 31, 2026 5:14 pm
news

ಲೆಟರ್‌ಹೆಡ್ ಪದಾಧಿಕಾರಿಗಳಾಗುವುದರಿಂದ ಯಾವುದೇ ಪ್ರಯೋಜನವಿಲ್ಲ

August 31, 2026 5:12 pm
news

ಸರ್ಕಾರಿ ಶಾಲೆ ಉಳಿವಿಗಾಗಿ ಒತ್ತಾಯಿಸಿ ಪ್ರತಿಭಟನೆ

August 31, 2026 5:09 pm
news

೧೦ ನಿಮಿಷದಲ್ಲಿ ೨೦ ಲಕ್ಷದ ಕಾಮಗಾರಿ ಮುಕ್ತಾಯ!

August 31, 2026 5:07 pm
news

ಬಿಜೆಪಿ ಮಹಿಳಾ ಮೋರ್ಚಾದಿಂದ ರಕ್ಷಾ ಬಂಧನ ಹಬ್ಬದ ಸಂಭ್ರಮ

August 29, 2026 5:38 pm
Our Youtube Channel
Our Picks

ಗಂಗಸ0ದ್ರ ಕೆರೆ ಏರಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜ್ಯೋತಿಗಣೇಶ್ ಚಾಲನೆ

August 31, 2026 5:16 pm

ಜನರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಿದ್ದವರು ವೀರಣ್ಣ

August 31, 2026 5:14 pm

ಲೆಟರ್‌ಹೆಡ್ ಪದಾಧಿಕಾರಿಗಳಾಗುವುದರಿಂದ ಯಾವುದೇ ಪ್ರಯೋಜನವಿಲ್ಲ

August 31, 2026 5:12 pm

ಸರ್ಕಾರಿ ಶಾಲೆ ಉಳಿವಿಗಾಗಿ ಒತ್ತಾಯಿಸಿ ಪ್ರತಿಭಟನೆ

August 31, 2026 5:09 pm

೧೦ ನಿಮಿಷದಲ್ಲಿ ೨೦ ಲಕ್ಷದ ಕಾಮಗಾರಿ ಮುಕ್ತಾಯ!

August 31, 2026 5:07 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಗಂಗಸ0ದ್ರ ಕೆರೆ ಏರಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜ್ಯೋತಿಗಣೇಶ್ ಚಾಲನೆ

By News Desk BenkiyabaleAugust 31, 2026 5:16 pm

ತುಮಕೂರು: ನಗರದ ಮಹಾನಗರ ಪಾಲಿಕೆಯ ೧೧ನೇ ವಾರ್ಡ್ ವ್ಯಾಪ್ತಿಗೆ ಒಳಪಡುವ ಗಂಗಸAದ್ರ ಅಮಾನಿಕೆರೆಯಲ್ಲಿ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ೧…

ಜನರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಿದ್ದವರು ವೀರಣ್ಣ

August 31, 2026 5:14 pm

ಲೆಟರ್‌ಹೆಡ್ ಪದಾಧಿಕಾರಿಗಳಾಗುವುದರಿಂದ ಯಾವುದೇ ಪ್ರಯೋಜನವಿಲ್ಲ

August 31, 2026 5:12 pm

ಸರ್ಕಾರಿ ಶಾಲೆ ಉಳಿವಿಗಾಗಿ ಒತ್ತಾಯಿಸಿ ಪ್ರತಿಭಟನೆ

August 31, 2026 5:09 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.