BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ನೀರು ಸರಬರಾಜು ನೌಕರರನ್ನು ನೇರ ಪಾವತಿಗೆ ಒಳಪಡಿಸಲು ಆಗ್ರಹ
  • ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ
  • ಸರ್ಕಾರಿ ಶಾಲೆಯ ಕಿಟಕಿ ಗ್ಲಾಸ್‍ಗಳು ಪುಡಿಪುಡಿ
  • ಪುಟ್ಟ ಮನೆ ಬೆಂಕಿಗೆ ಆಹುತಿ
  • ಬೆಳೆ ಹಾನಿ, ಆಶ್ರಯ ನಿವೇಶನಗಳ ಸ್ಥಳ ಪರಿಶೀಲನೆ
  • ಪೌರಕಾರ್ಮಿಕರ ರೀತಿ ನೇರ ನೇಮಕಾತಿ ಮಾಡಬೇಕೆಂದು ಬೃಹತ್ ಪಾದಯಾತ್ರೆ
  • ಜನ ಮೆಚ್ಚಿದ ಅಧಿಕಾರಿಗೆ ಜನರಿಂದಲೇ ಅದ್ದೂರಿ ಸೀಮಂತ
  • ನೈಸ್ ವಿಷಯದಲ್ಲಿ ಹೈಕೋರ್ಟ್ ತೀರ್ಪು ಜಾರಿಗೆ ಒತ್ತಾಯಿಸಿದ ಮುಖಂಡರ ಬಂಧನ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಜಾತಿಯ ದಳ್ಳುರಿಯಲ್ಲಿ ಮಹಾನಗರ ಪಾಲಿಕೆ ಚುನಾವಣೆ : ಮೇಯರ್ ಮತ್ತು ಉಪಮೇಯರ್ ಜಟಾಪಟಿ
ಇತರೆ ಸುದ್ಧಿಗಳು

ಜಾತಿಯ ದಳ್ಳುರಿಯಲ್ಲಿ ಮಹಾನಗರ ಪಾಲಿಕೆ ಚುನಾವಣೆ : ಮೇಯರ್ ಮತ್ತು ಉಪಮೇಯರ್ ಜಟಾಪಟಿ

By News Desk BenkiyabaleUpdated:September 09, 2022 7:18 pm

ತುಮಕೂರು :

   
ತುಮಕೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಭಾವತಿಸುಧೀಶ್ವರ್ ಮೇಯೆರ್ ಗದ್ದುಗೆ ಏರಿದರೆ ಜೆಡಿಎಸ್ ಪಕ್ಷದ ವತಿಯಿಂದ ಟಿ.ಕೆ ನರಸಿಂಹ ಮೂರ್ತಿ ಉಪ ಮೇಯರ್ ಹುದ್ದೆಯನ್ನು ಅಲಂಕರಿಸಿದ್ದಾರೆ. ನಿರೀಕ್ಷೆಯಂತೆ ಬಿಜೆಪಿ ಪಕ್ಷವನ್ನು ವಿರೋಧ ಪಕ್ಷವನ್ನಾಗಿಯೆ ಉಳಿಸಿದ ತಂತ್ರಗಾರಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳದ್ದು. ಬಿಜೆಪಿ ಪಕ್ಷದ ಯಾವುದೇ ತಂತ್ರಗಳು, ರಣತಂತ್ರಗಳು, ಕುತಂತ್ರಗಳು, ನಡೆಯದಂತೆ ಮಾಡಿ ಹಾಲಿ ಬಿಜೆಪಿ ಪಕ್ಷದ ಶಾಸಕರು – ಸಂಸದರು ಸಚಿವರು ಮತ್ತು ಆಡಳಿತಾರೂಢ ಬಿಜೆಪಿ ಸರ್ಕಾರದ ಮುಖಕ್ಕೆ ತಣ್ಣೀರು ಎರಚಿದ್ದೇವೆ ಎಂಬ ಭ್ರಮೆಯಲ್ಲಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಕುರುಬ ಸಮುದಾಯಗಳ ವ್ಯಾಪಕ ವಿರೋಧಕ್ಕೆ ತುತ್ತಾಗಿದ್ದಾರೆ ಎಂದರೂ ತಪ್ಪಾಗಲಾರದು.
ಕಾಂಗ್ರೆಸ್‍ಪಕ್ಷ ಮೇಯರ್ ಪಟ್ಟವನ್ನು ಜೆಡಿಎಸ್ ಉಪಮೇಯರ್ ಪಟ್ಟವನ್ನು ಹರಿದು ಹಂಚಿಕೊಂಡು ವಲ್ಲದ ಮನಸಿನಿಂದ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದರು. ಈ ಎರಡು ಪಕ್ಷಗಳ ಆಲಿಂಗನದ ಅಪ್ಪುಗೆ ಬಿಜೆಪಿ ವಿರೋದಿ ಮನಸ್ಥಿಗಳಿಗೆ ಸರಿ ಎನಿಸಿದೆ ಯಾದರೂ ಕಾಂಗ್ರೆಸ್ ಮತ್ತು ಜೆಡಿಎಸ್ ಒಳಗೆ ಆಂತರಿಕವಾಗಿ ಜಾತಿಯ ದಳ್ಳೂರಿ ಪಕ್ಷದೊಳಗೆ ದಹಿಸುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಕಾಂಗ್ರೆಸ್ ಪಕ್ಷದೊಳಗೆ ಮೇಯರ್ ಪಟ್ಟಕ್ಕಾಗಿ (ಎಡ ಸಮುದಾಯದ) ರೂಪಶ್ರೀ ಶೆಟ್ಟಳಯ್ಯ ಮತ್ತು (ಬಲ ಸಮುದಾಯದ) ಪ್ರಭಾವತಿಸುಧೀಶ್ವರ್ ಇವರಿಬ್ಬರ ನಡುವೆ ಪೈಪೋಟಿ ಇತ್ತಾದರು ಕಾಗ್ರಸ್ ಪಕ್ಷದೊಳಗೆ ನಡೆದ ಆಂತರಿಕ ಕಚ್ಚಾಟಗಳು ಬುಗಿಲೆದ್ದಿತ್ತು. ಇದನ್ನು ಸಮರ್ಥವಾಗಿ ನಿಭಾಯಿಸಲಾಗದ ಮಾಜಿ ಶಾಸಕ ರಫೀಕ್ ಅಹಮದ್ ವರಿಷ್ಟರ ಮೊರೆ ಹೊದರು.
ಎಡ ಸಮುದಾಯಕ್ಕೆ ಅಧಿಕಾರವನ್ನು ನೀಡಲು ರಫೀಕ್ ಅಹಮದ್‍ ರವರಿಗೆ ಇಷ್ಟವಿರಲಿಲ್ಲ ವರಿಷ್ಟರ ತೀರ್ಮಾನಕ್ಕೆ ಬದ್ಧರೆಂಬ ಹಾರಿಕೆ ಉತ್ತರ ನೀಡುತ್ತ ತನ್ನ ರಾಜಕೀಯ ಅಸಮರ್ಥತೆ ಯನ್ನು ಪ್ರದರ್ಶಿಸಿದರು. ಕಾಗ್ರೆಸ್ ಪಕ್ಷದಲ್ಲಿ ಬಲಸಮುದಾಯದ ನಾಯಕರು ಹೆಚ್ಚಿರುವ ಕಾರಣದಿಂದ ಸಹಜವಾಗಿ ಬಲ ಸಮುದಾಯದ ಪ್ರಭಾವತಿ ಸುಧೀಶರ್‍ಗೆ ಮೇಯರ್ ಪಟ್ಟ ಒಲಿದು ಬಂದಿದೆ.
ಉಪ ಮೇಯರ್ ಸ್ಥಾನಕ್ಕೆ ಅಪವಿತ್ರ ಮೈತ್ರಿಯಲ್ಲಿ ಉಪಮೇಯರ್ ಸ್ಥಾನವನ್ನು ಬಿಟ್ಟು ಕೊಡಲಾಗಿತ್ತಾದರು ಜೆಡಿಎಸ್ ಪಕ್ಕದೊಳಗೆ ಪ್ರಬಲ ಆಕಾಂಕ್ಷಿಗಳಾಗಿದ್ದ ಕುರುಬ ಸಮುದಾಯದ ಎಚ್.ಡಿ.ಕೆ ಮಂಜುನಾಥ್ ಮತ್ತು ತಿಗಳ ಸಮುದಾಯದ ಟಿ.ಕೆ ನರಸಿಂಹ ಮೂರ್ತಿ ಪ್ರಬಲ ಆಕಾಂಕ್ಷಿಗಳಾಗಿದ್ದರು. ಎಚ್.ಡಿ.ಕೆ ಮಂಜುನಾಥ್ ಪರವಾಗಿ ಗ್ರಾಮಂತರ ಶಾಸಕರಾದ ಡಿಸಿ ಗೌರಿಶಂರ್ ಜೆಡಿಎಸ್ ಪಕ್ಷದ ಜಿಲ್ಲಾ ಅಧ್ಯಕ್ಷರಾದ ಅಂಜಿನಪ್ಪ ಮಾಜಿ ಸಚಿವ ಬಂಡಪ್ಪ ಕಾಶಂಪೂರ್,ಎಚ್‍ಡಿಕುಮಾರ ಸ್ವಾಮಿ ಸೇರಿದಂತೆ ಘಟಾನುಘಟಿಗಳ ಬೆಂಬಲವಿದ್ದರು ಸಹ ಶಾಸಕ
ಡಿಸಿ ಗೌರಿಶಂಕರ್ ಅವರ ಬಲಗೈಭಂಟ ಎಂಬ ಏಕೈಕ ಕಾರಣ ಮುಂದಿಟ್ಟು ಕೊಂಡು ರಾಜ್ಯ ನಾಯಕರ ಕೃಪಾಕಟಾಕ್ಷವನ್ನು ದಿಕ್ಕರಿಸಿ ತಿಗಳ ಸಮುದಾಯದ ನರಸಿಂಹಮೂರ್ತಿರವರನ್ನು ಉಪಮೇಯರ್ ಪಟ್ಟಕ್ಕೆ ಏರಿಸಲು ರಣತಂತ್ರವನ್ನು ರೂಪಿಸಿದ್ದು, ಜೆಡಿಎಸ್ ಪಕ್ಷದ ಘೋಷಿತ ಅಭ್ಯರ್ಥಿ ಎನ್.ಗೋವಿಂದರಾಜು, ಮಂಜುನಾಥ್‍ರವರನ್ನು ಯಾವುದೆ ಕಾರಣಕ್ಕೂ ಉಪಮೇಯರ್ ಪಟ್ಟಕ್ಕೆ ಏರಿಸಬಾರದು ಎಂಬ ಚರ್ಚೆಯ ಸಂದರ್ಭದಲ್ಲಿ ಕುರುಬ ಸಮುದಾಯದ ಮತಗಳು ಜೆಡಿಎಸ್ ಪಕ್ಷಕ್ಕೆ ಬರುವುದಿಲ್ಲ ಆ ಸಮುದಾಯದ ಮತಗಳು ನಮಗೆ ಬೇಕಿಲ್ಲ ಎನ್ನುವ ಮಾತುಗಳನ್ನಾಡಿರುವುದು ಜಗತ್ಜಾಹಿರ್ ಆಗಿದೆ.
ಕುರುಬ ಸಮುದಾಯದ ಮತಗಳು ಬೇಕಿಲ್ಲ ಎಂದು ಮಾತನಾಡಿರುವ ಗೋವಿಂದರಾಜುರವರ ಮಾತುಗಳು ಗೋವಿಂದರಾಜುರವರಿಗೆ ಇರುವಂತಹ ಕುರುಬ ಸಮುದಾಯದ ವಿರೋಧಿ ನೀತಿಯಿಂದ ಬೇಸತ್ತ ಆ ಸಮುದಾಯದ ಮತದಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಒಟ್ಟಾರೆ ಅಂತಿಮ ಗಳಿಗೆಯಲ್ಲಿ ತಿರ್ಮಾನವಾದಂತೆ ಕುರುಬ ಸಮುದಾಯದ ಕೆಂಗಣ್ಣಿಗೆ ಗುರಿಯಾಗುವುದು ಬೇಡವೆಂದು ಕೊನೆಯ ಅವಧಿ ಅಧಿಕಾರ ನೀಡುತ್ತೇವೆ ಎಂಬ ಪೊಳ್ಳು ಭರವಸೆ ನೀಡಿದ್ದಾರಾದರು. ಅದು ಭರವಸೆ ಈಡೆರದೆ ಭರವಸೆಯಾಗಿಯೆ ಉಳಿಯುತ್ತದೆ ಎಂಬ ಮಾತುಗಳು ಸಾರ್ವಜನಿವಾಗಿ ಚರ್ಚೆಗೀಡಾಗಿದೆ.  ಕಾಂಗ್ರೆಸ್ ಪಕ್ಷದ ಮಾಜಿ ಶಾಸಕÀ ರಫಿಕ್ ಅಹಮದ್ ಮತ್ತು ಜೆಡಿಎಸ್ ಪಕ್ಷದ ಮುಖಂಡ ಗೋವಿಂದರಾಜು ಈ ಎರಡು ಪಕ್ಷಗಳ ಮುಖಂಡರ ವಿರುದ್ಧ ದಲಿತ ಎಡ ಸಮುದಾಯದವರು ಮತ್ತು ಕುರುಬ ಸಮುದಾಯಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎಂಬ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ವ್ಯಾಪಕವಾಗಿದೆ ಎನ್ನುವ ಮಾತಿದೆ.

ಮೇಯರ್ ಗದ್ದುಗೆ ನಿಭಾಯಿಸಲು ಸಮರ್ಥರೆ ?

ಪ್ರಭಾವತಿ ಸುಧೀಶ್ವರ್ ಮತ್ತು ರೂಪಶ್ರೀ ಶೆಟ್ಟಳಯ್ಯನವರು ಸೇರಿದಂತೆ ಇಬ್ಬರ ವಿಧ್ಯಾ ಅರ್ಹತೆ ಮತ್ತು ರಾಜಕೀಯ ಸಮರ್ಥತೆ ಪ್ರಬುದ್ಧ ರಾಜಕಾರಣದ ಹಾಗೂ ಉತ್ತಮ ಅಧಿಕಾರ ನಿಭಾಯಿಸುವ ಸಾಮಥ್ರ್ಯವನ್ನು ಗಮನಿಸಿದರೆ ರೂಪಶ್ರೀ ಶೆಟ್ಟಳಯ್ಯನವರು ಮೇಯರ್ ಗದ್ದುಗೆಯನ್ನು ನಿಭಾಯಿಸಲು ಸಮರ್ಥರು ಎನ್ನುವುದು ಪಾಲಿಕೆಯ ಸದಸ್ಯರ ಅಭಿಪ್ರಾಯವಾಗಿದೆ. ಆದರೆ ಎಡ ಸಮುದಾಯ ಎಂಬ ಕಾರಣಕ್ಕೆ ಮೇಯರ್ ಪಟ್ಟ ಒಲಿದು ಬಂದಿಲ್ಲ ಎಂಬ ಮಾತುಗಳು ಕೇಳಿಬರುತಿತ್ತು. ಎಡ ಸಮುದಾಯದ ಪ್ರಬಲ ವಿರೋಧ ಹೆಚ್ಚಾದ ಹಿನ್ನೆಲೆಯಲ್ಲಿ ಕೊನೆಯ 6ತಿಂಗಳ ಅವಧಿಗೆ ರೂಪಶ್ರೀ ಶೆಟ್ಟಳಯ್ಯನವರಿಗೆ ಕೊನೆಯ ಅವಧಿಯಲ್ಲಿ ಅಧಿಕಾರ ದೊರೆಯುವ ಭರವಸೆÀ ದೊರೆತಿದೆಯಾದರು. ರಫಿಕ್ ಅಹಮದ್ ವಿರುದ್ಧ ಎಡ ಸಮುದಾಯ ಮುಖಂಡರು ತಿರುಗಿಬಿದ್ದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ

(Visited 5 times, 1 visits today)
tumkur
Previous Articleಕೌಶಲ್ಯಗಳನ್ನು ಕಲಿಯುವ ಮೂಲಕ ಆರ್ಥಿಕವಾಗಿ ಸಬಲರಾಗಿ
Next Article ಭಾರತ್ ಜೋಡೋ ತುಮಕೂರಿನಲ್ಲಿ ಯಾತ್ರೆ
News Desk Benkiyabale

Related Posts

ನೀರು ಸರಬರಾಜು ನೌಕರರನ್ನು ನೇರ ಪಾವತಿಗೆ ಒಳಪಡಿಸಲು ಆಗ್ರಹ

September 22, 2026 5:12 pm news

ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ

September 22, 2026 5:09 pm Trending

ಸರ್ಕಾರಿ ಶಾಲೆಯ ಕಿಟಕಿ ಗ್ಲಾಸ್‍ಗಳು ಪುಡಿಪುಡಿ

September 22, 2026 5:05 pm news
ತಾಜಾ ಸುದ್ಧಿಗಳು
news

ನೀರು ಸರಬರಾಜು ನೌಕರರನ್ನು ನೇರ ಪಾವತಿಗೆ ಒಳಪಡಿಸಲು ಆಗ್ರಹ

September 22, 2026 5:12 pm
Trending

ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ

September 22, 2026 5:09 pm
news

ಸರ್ಕಾರಿ ಶಾಲೆಯ ಕಿಟಕಿ ಗ್ಲಾಸ್‍ಗಳು ಪುಡಿಪುಡಿ

September 22, 2026 5:05 pm
ಇತರೆ ಸುದ್ಧಿಗಳು

ಪುಟ್ಟ ಮನೆ ಬೆಂಕಿಗೆ ಆಹುತಿ

September 22, 2026 5:01 pm
Trending

ಬೆಳೆ ಹಾನಿ, ಆಶ್ರಯ ನಿವೇಶನಗಳ ಸ್ಥಳ ಪರಿಶೀಲನೆ

September 22, 2026 4:57 pm
news

ಪೌರಕಾರ್ಮಿಕರ ರೀತಿ ನೇರ ನೇಮಕಾತಿ ಮಾಡಬೇಕೆಂದು ಬೃಹತ್ ಪಾದಯಾತ್ರೆ

September 21, 2026 5:56 pm
Our Youtube Channel
Our Picks

ನೀರು ಸರಬರಾಜು ನೌಕರರನ್ನು ನೇರ ಪಾವತಿಗೆ ಒಳಪಡಿಸಲು ಆಗ್ರಹ

September 22, 2026 5:12 pm

ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ

September 22, 2026 5:09 pm

ಸರ್ಕಾರಿ ಶಾಲೆಯ ಕಿಟಕಿ ಗ್ಲಾಸ್‍ಗಳು ಪುಡಿಪುಡಿ

September 22, 2026 5:05 pm

ಪುಟ್ಟ ಮನೆ ಬೆಂಕಿಗೆ ಆಹುತಿ

September 22, 2026 5:01 pm

ಬೆಳೆ ಹಾನಿ, ಆಶ್ರಯ ನಿವೇಶನಗಳ ಸ್ಥಳ ಪರಿಶೀಲನೆ

September 22, 2026 4:57 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ನೀರು ಸರಬರಾಜು ನೌಕರರನ್ನು ನೇರ ಪಾವತಿಗೆ ಒಳಪಡಿಸಲು ಆಗ್ರಹ

By News Desk BenkiyabaleSeptember 22, 2026 5:12 pm

ತುಮಕೂರು ಅತಿ ಕಡಿಮೆ ವೇತನಕ್ಕೆ ದುಡಿಯುತ್ತಿರುವ ಸ್ಥಳೀಯ ಸಂಸ್ಥೆಗಳ ನೀರು ಸರಬರಾಜು ನೌಕರರನ್ನು ನೇರ ಪಾವತಿಗೆ ಒಳಪಡಿಸಬೇಕು. ಪೌರಕಾರ್ಮಿಕರ ರೀತಿ…

ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ

September 22, 2026 5:09 pm

ಸರ್ಕಾರಿ ಶಾಲೆಯ ಕಿಟಕಿ ಗ್ಲಾಸ್‍ಗಳು ಪುಡಿಪುಡಿ

September 22, 2026 5:05 pm

ಪುಟ್ಟ ಮನೆ ಬೆಂಕಿಗೆ ಆಹುತಿ

September 22, 2026 5:01 pm
News by Date
September 2026
M T W T F S S
 123456
78910111213
14151617181920
21222324252627
282930  
« Aug    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.