BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಸಚಿವ ಬಿ.ನಾಗೇಂದ್ರ ವಿರುದ್ಧ ಪಿತೂರಿಗೆ ವಾಲ್ಮೀಕಿ ಸಮಾಜ ಖಂಡನೆ
  • ಉದ್ಯಮ ಸಂಸ್ಥೆ ಜೊತೆ ಎಸ್‌ಎಸ್‌ಐಟಿ ಒಡಂಬಡಿಕೆ
  • ವಿಬಿ ಜಿ ರಾಮ್ ಜಿ ಯೋಜನೆಯಡಿ ಜನರಿಗೆ ಉದ್ಯೋಗ ನೀಡಿ: ಜನರು ಗುಳೆ ಹೋಗುವುದನ್ನು ತಪ್ಪಿಸಿ
  • ಒಂದೇ ನಲ್ಲಿಯಲ್ಲಿ ೧೦೦ ಮನೆಯವರು ನೀರು ಹಿಡಿಯುವ ದುಸ್ಥಿತಿ
  • ಕಾಂಗ್ರೆಸ್ ಸರ್ಕಾರದ ವಿರುದ್ಧ ಶಾಸಕ ಸುರೇಶ್ ಗೌಡ ಆಕ್ರೋಶ
  • ತುಮಕೂರಿಗೆ ಆಗಮಿಸಿದ ರಾಜೀವ್ ಸದ್ಬಾವನ ರಥಯಾತ್ರೆ
  • ಕನಿಷ್ಠ ವೇತನ ಪರಿಷ್ಕೃರಣೆ ಆದೇಶ ಜಾರಿ ಮಾಡಲು ಒತ್ತಾಯಿಸಿ ಪ್ರತಿಭಟನೆ
  • ಅಲೆಮಾರಿಗಳಿಗೆ ಮನೆ ಕಟ್ಟಿಕೊಡುವಂತೆ ಶಾಸಕರಿಗೆ ಮನವಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ೨ಎ ಮೀಸಲಾತಿ ದೊರೆಯಬೇಕೆಂಬ ಒತ್ತಾಯ
news

೨ಎ ಮೀಸಲಾತಿ ದೊರೆಯಬೇಕೆಂಬ ಒತ್ತಾಯ

ಶ್ರೀ ಯೋಗಿ ನಾರೇಯಣ ಯತೀಂದ್ರರ ೧೯೧ನೇ ವರ್ಷದ ಜೀವ ಸಮಾಧಿ ಮಹೋತ್ಸವ
By News Desk BenkiyabaleUpdated:August 03, 2026 4:58 pm

ತುಮಕೂರು: ಬಲಿಜ ಸಮುದಾಯಕ್ಕೆ ಶೈಕ್ಷಣಿಕವಾಗಿ ೨ಎ ಮೀಸಲಾತಿ ದೊರೆಯುತ್ತಿದ್ದು, ಉದ್ಯೋಗ ಮತ್ತು ರಾಜಕೀಯ ಕ್ಷೇತ್ರದಲ್ಲಿಯೂ ೨ಎ ಮೀಸಲಾತಿ ದೊರೆಯು ಬೇಕೆಂಬುದು ಜನಾಂಗದ ಬಹುದಿನದ ಒತ್ತಾಯವಾಗಿದೆ. ಈ ನಿಟ್ಟಿನಲ್ಲಿ ಸರಕಾರದ ಮೇಲೆ ಒತ್ತಡ ತರಲು ಶ್ರಮಿಸುವುದಾಗಿ ವಿಧಾನ ಪರಿಷತ್ ಸದಸ್ಯ ರಮೇಶ ಬಾಬು ತಿಳಿಸಿದ್ದಾರೆ.
ನಗರದ ಶ್ರೀ ಸಿದ್ದಿವಿನಾಯಕ ಸಮುದಾಯ ಭವನದಲ್ಲಿ ಜಿಲ್ಲಾ ಬಲಿಜ ಸಂಘ(ರಿ), ತುಮಕೂರು ಹಾಗೂ ಶ್ರೀಯೋಗಿ ನಾರೇಯಣ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಶ್ರೀಶ್ರೀಶ್ರೀ ಯೋಗಿ ನಾರೇಯಣ ಯತೀಂದ್ರರ ೧೯೧ನೇ ವರ್ಷದ ಜೀವ ಸಮಾಧಿ ಮಹೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಜೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತಿದ್ದ ಅವರು,ಶಿಕ್ಷಣದಲ್ಲಿ ೨ಎ ಮೀಸಲಾತಿಯಿಂದ ವಿದ್ಯಾವಂತರ ಸಂಖ್ಯೆ ಹೆಚ್ಚಾಗಿದೆ. ಇದೇ ಮೀಸಲಾತಿ ಉದ್ಯೋಗ ಮತ್ತು ರಾಜಕೀಯ ಕ್ಷೇತ್ರದಲ್ಲಿ ದೊರೆತರೆ ನಮ್ಮ ಸಮುದಾಯದ ಜನರು ಸರಕಾರಿ ಉದ್ಯೋಗ ಪಡೆಯುವವರ ಸಂಖ್ಯೆ ಹೆಚ್ಚಲಿದೆ.ಅಲ್ಲದೆ ಸ್ಥಳೀಯ ಸಂಸ್ಥೆಗಳಿAದ ಸಂಸತ್‌ವರೆಗೆ ಸಮಾಜದ ಜನರು ಜನ ಪ್ರತಿನಿಧಿಗಳಾಗಿ ಆಯ್ಕೆಯಾಗಲು ಸಹಕಾರಿಯಾಗಲಿದೆ ಎಂದರು.
ಸ್ಪೂರ್ತಿ ಡೆವಲ್ರ‍್ಸ್ನ ಮಾಲೀಕರು, ನಮ್ಮ ಸಮಾಜದವರಾದ ಎಸ್.ಪಿ.ಚಿದಾನಂದ ಅವರು ಬಹಳ ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿದ್ದಾರೆ. ಅವರು ಮನಸ್ಸು ಬದಲಾಯಿಸಿ ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಅವರಿಗೆ ತುಮಕೂರು ಲೋಕಸಭಾ ಕ್ಷೇತ್ರದ ಟಿಕೇಟ್ ಕೊಡಿಸುವ ನಿಟ್ಟಿನಲ್ಲಿ ಪಕ್ಷದ ಹಿರಿಯರ ಜೊತೆಗೆ ಮಾತನಾಡಲು ಸಿದ್ದ.ತುಮಕೂರು ನಗರ ವಿಧಾನಸಭಾ ಕ್ಷೇತ್ರ ಹಾಗೆಯೇ ತುಮಕೂರು ಲೋಕಸಭಾ ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗದ ಮತದಾರರ ಸಂಖ್ಯೆ ಹೆಚ್ಚಿವೆ. ಈ ಹಿಂದೆ ಸಿ.ಎಂ.ಭಾಸ್ಕರಪ್ಪ ಅವರ ಗೆಲುವಿಗೆ ಇದೇ ಕಾರಣ. ರಾಜ್ಯದಲ್ಲಿ ಸಚಿವ ಸಂಪುಟದ ವಿಸ್ತರಣೆ ಚಾಲ್ತಿಯಲ್ಲಿದೆ. ನಮ್ಮವರೇ ಆದ ಎಂ.ಆರ್.ಸೀತಾರಾಮ್ ಶೇ೧೦೦ಕ್ಕೆ ನೂರಷ್ಟು ಮಂತ್ರಿಯಾಗಲಿದ್ದಾರೆ. ಅವರೊಂದಿಗೆ ಸಹ ಉದ್ಯೋಗ ಮತ್ತು ರಾಜಕೀಯದಲ್ಲಿ ೨ಎ ಮೀಸಲಾತಿ ಕುರಿತು ಸರಕಾರದ ಮೇಲೆ ಒತ್ತಡ ತರಲು ಪ್ರಯತ್ನಿಸಲಾಗುವುದು ಎಂದು ರಮೇಶ್ ಬಾಬು ನುಡಿದರು.
ಜಿಲ್ಲಾ ಗೆಳೆಯರ ಬಳಗದ ಅಧ್ಯಕ್ಷ ಎನ್.ಗೋವಿಂದರಾಜು ಮಾತನಾಡಿ, ಹಿರಿಯರ ಹೋರಾಟದ ಫಲವಾಗಿ ಕೈತಪ್ಪಿದ್ದ ೨ಎ ಮೀಸಲಾತಿ ಶೈಕ್ಷಣಿಕ ವಲಯದಲ್ಲಿ ದೊರಕಿದೆ. ಇದನ್ನು ಬಳಸಿಕೊಂಡು ಮಕ್ಕಳು ಒಳ್ಳೆಯ ವಿದ್ಯಾವಂತರಾಗಿ, ತಮ್ಮ ಭವಿಷ್ಯ ರೂಪಿಸಿಕೊಳ್ಳುವತ್ತ ಗಮನಹರಿಸಬೇಕು. ನಮ್ಮ ಸಮುದಾಯದ ಜನರು ಗ್ರಾಮೀಣ ಭಾಗದಲ್ಲಿ ತೀರ ಹಿಂದುಳಿದಿದ್ದಾರೆ. ಇಂದಿನ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಶಿಕ್ಷಣ ಕೈಗೆಟುಕಲಾರದ ಸ್ಥಿತಿಯಲ್ಲಿದೆ. ಹಾಗಾಗಿ ಸ್ಪೂರ್ತಿ ಚಿದಾನಂದರವರು ಕನಿಷ್ಠ ಪ್ರತಿ ತಾಲೂಕಿನಲ್ಲಿ ಒಂದು ಅಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯನ್ನು ತೆರೆದು, ಸಮುದಾಯ ಮಕ್ಕಳು ಭರಿಸಬಹುದಾದ ಶುಲ್ಕದಲ್ಲಿ ಒಳ್ಳೆಯ ಶಿಕ್ಷಣ ಪಡೆಯುವಂತಹ ವ್ಯವಸ್ಥೆ ಮಾಡಲಿ. ಇದರಿಂದ ಲಕ್ಷಾಂತರ ತಾಯಂದಿರ ಕನಸು ನನಸಾಗಲಿದೆ ಎಂದರು.
ಪ್ರಸ್ತಾವಿಕ ನುಡಿಗಳನ್ನಾಡಿದ ಸ್ಪೂರ್ತಿ ಚಿದಾನಂದ, ಜನಾಂಗದ ಸರ್ವತೋಮುಖ ಅಭಿವೃದ್ದಿಯನ್ನು ಗಮನದಲ್ಲಿಟ್ಟುಕೊಂಡು ೧೯೭೫ರಲ್ಲಿ ಜಿಲ್ಲಾ ಬಲಿಜ ಸಂಘ(ರಿ)ವನ್ನು ಆಸ್ಥಿತ್ವಕ್ಕೆ ತರಲಾಯಿತು. ೧೯೮೨ರಲ್ಲಿ ಸಂಘ ಸ್ವಂತಕಟ್ಟಡ ಹೊಂದಿ ಕಾರ್ಯ ನಿರ್ವಹಿಸುತ್ತಿದೆ. ಸಂಘ ಜನಾಂಗದ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಪುರುಷ ಮತ್ತು ಮಹಿಳೆಯರ ಹಾಸ್ಟಲ್, ಯೋಗಿ ನಾರೇಯಣ ಪತ್ತಿನ ಸಹಕಾರ ಸಂಘ ತೆರೆದು ಜನರನ್ನು ಅರ್ಥಿಕವಾಗಿ ಸಧೃಡಗೊಳಿಸಲು ನಿರಂತರವಾಗಿ ಪ್ರಯತ್ನ ನಡೆಸಲಾಗುತ್ತಿದೆ. ಸಣ್ಣ ಸಣ್ಣ ಸಮುದಾಯಗಳು ಶೈಕ್ಷಣಿಕವಾಗಿ, ಉದ್ಯೋಗದಲ್ಲಿ ಬಹಳ ಸಾಧನೆ ಮಾಡಿವೆ. ಎಐ ಬುದ್ದಿವಂತಿಕೆಗಿAತ ನಿಮ್ಮ ಜ್ಞಾನ ಹೆಚ್ಚಾಗಬೇಕು. ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಅವಕಾಶಗಳಿವೆ. ಮೆಡಿಕಲ್, ಇಂಜಿನಿಯರಿAಗ್ ಕ್ಷೇತ್ರಗಳಷ್ಟೇ ಉದ್ಯೋಗ ನೀಡಲ್ಲ. ಇತರೆ ಕ್ಷೇತ್ರಗಳತ್ತಲೂ ಸಮುದಾಯದ ಯುವ ಜನರು ಗಮನಹರಿಸಬೇಕು. ಸಮುದಾಯದ ವತಿಯಿಂದ ಪ್ರತಿವರ್ಷ ನಡೆಯುವ ಪ್ರತಿಭಾ ಪುರಸ್ಕಾರಕ್ಕೆ ಒಂದು ಕೋಟಿಯ ದತ್ತಿ ನೀಡಿ ಇಡುವ ಚಿಂತನೆಯಿದ್ದ, ನಮ್ಮ ಕಡೆಯಿಂದ ೧೦ ಲಕ್ಷ ರೂಗಳ ಧೇಣಿಗೆ ನೀಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಬಲಿಜ ಸಂಘದ ಅಧ್ಯಕ್ಷರಾದ ಟಿ.ಆರ್.ಆಂಜನಪ್ಪ ಮಾತನಾಡಿ, ಶಿಕ್ಷಣ ಇಂದು ಅತಿ ಅವಶ್ಯಕವಾಗಿದೆ. ಹಾಗಾಗಿ ಪೋಷಕರು ತಮಗೆ ಎಂತಹದ್ದೇ ಕಷ್ಟವಿದ್ದರೂ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ, ಸರಕಾರ ಹಾಗೂ ಸಂಘ ಸಂಸ್ಥೆಗಳು ನಿಮ್ಮ ಜೊತೆ ಕೈ ಜೋಡಿಸಲಿವೆ. ಹಾಗೆಯೆ ಸಮುದಾಯವೂ ಸಹ ಪ್ರತಿಭಾವಂತರ ವಿದ್ಯಾಭ್ಯಾಸಕ್ಕೆ ಕೈಜೋಡಿಸಲಿದೆ.ತಾವುಗಳು ಒಳ್ಳೆಯ ಗುರಿಯೊಂದಿಗೆ ಮುನ್ನೆಡೆದರೆ ಎಲ್ಲವೂ ಸಾಧ್ಯ. ಇಂದಿನ ಯೋಗಿ ನಾರೇಯಣ ಯತೀಂದ್ರರ ೧೯೧ನೇ ಜೀವ ಸಮಾಧಿ ಮಹೋತ್ಸವ ಕಾರ್ಯಕ್ರಮ ಯಶಸ್ವಿಯಾಗಿದೆ. ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಇದೇ ವೇಳೆ ಸಮಾಜದ ಏಳಿಗೆಗಾಗಿ ದುಡಿದ ಹಿರಿಯರು, ೨೦೨೫-೨೬ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳು, ಸಿಎ ಪರೀಕ್ಷೆ ಪಾಸು ಮಾಡಿದ ಪೂರ್ಣೀಮ, ಸದರನ್ ರೈಲ್ವೆ ಅಭಿವೃದ್ದಿ ಮಂಡಳಿ ಸದಸ್ಯ ಲಕ್ಷಿö್ಮನಾರಾಯಣ್ ಅವರುಗಳನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಜಿಲ್ಲಾ ಬಲಿಜ ಸಂಘದ ಕಾರ್ಯದರ್ಶಿ ಟಿ.ಆರ್.ಹೆಚ್ ಪ್ರಕಾಶ್, ಹಿರಿಯ ಲೇಖಕ ಎಂ.ಡಿ.ಶ್ರೀನಿವಾಸ್, ತಾಲೂಕು ಅಧ್ಯಕ್ಷರುಗಳಾದ ಶಂಕರಪ್ಪ, ಪದ್ಮನಾಭ್, ಶಂಕರನಾರಾಯಣ, ರಾಮಚಂದ್ರಪ್ಪ, ಶ್ರೀರಂಗಪ್ಪ, ನಂಜುAಡಪ್ಪ, ಲಕ್ಷö್ಮಣಪ್ಪ, ಎನ್.ಪದ್ಮನಾಭ್, ವಿಶ್ವನಾಥ್, ಎಸ್.ಎಸ್.ರಂಗನಾಥ್, ಗಿರೀಶ್, ಛಿಪ್ರಕಾಶ್ ಮತ್ತಿತರರು ವೇದಿಕೆಯಲ್ಲಿದ್ದರು.

(Visited 1 times, 1 visits today)
kannada news karnataka local news tumakur tumkur tumkur news ಜಿಲ್ಲಾಡಳಿತ ತುಮಕೂರು:
Previous Articleವಿವೇಕಾನ0ದರ ಸಾಧನೆಯ ಹಾದಿ ಪ್ರತಿಯೊಬ್ಬ ವಿದ್ಯಾರ್ಥಿಯ ಗುರಿಯಾಗಲಿ
Next Article ಆರ್ಥಿಕ ಸಾಕ್ಷರತಾ ಶಿಬಿರ ಯಶಸ್ವಿ
News Desk Benkiyabale

Related Posts

ಸಚಿವ ಬಿ.ನಾಗೇಂದ್ರ ವಿರುದ್ಧ ಪಿತೂರಿಗೆ ವಾಲ್ಮೀಕಿ ಸಮಾಜ ಖಂಡನೆ

August 12, 2026 5:37 pm news

ಉದ್ಯಮ ಸಂಸ್ಥೆ ಜೊತೆ ಎಸ್‌ಎಸ್‌ಐಟಿ ಒಡಂಬಡಿಕೆ

August 12, 2026 5:35 pm news

ವಿಬಿ ಜಿ ರಾಮ್ ಜಿ ಯೋಜನೆಯಡಿ ಜನರಿಗೆ ಉದ್ಯೋಗ ನೀಡಿ: ಜನರು ಗುಳೆ ಹೋಗುವುದನ್ನು ತಪ್ಪಿಸಿ

August 12, 2026 5:33 pm news
ತಾಜಾ ಸುದ್ಧಿಗಳು
news

ಸಚಿವ ಬಿ.ನಾಗೇಂದ್ರ ವಿರುದ್ಧ ಪಿತೂರಿಗೆ ವಾಲ್ಮೀಕಿ ಸಮಾಜ ಖಂಡನೆ

August 12, 2026 5:37 pm
news

ಉದ್ಯಮ ಸಂಸ್ಥೆ ಜೊತೆ ಎಸ್‌ಎಸ್‌ಐಟಿ ಒಡಂಬಡಿಕೆ

August 12, 2026 5:35 pm
news

ವಿಬಿ ಜಿ ರಾಮ್ ಜಿ ಯೋಜನೆಯಡಿ ಜನರಿಗೆ ಉದ್ಯೋಗ ನೀಡಿ: ಜನರು ಗುಳೆ ಹೋಗುವುದನ್ನು ತಪ್ಪಿಸಿ

August 12, 2026 5:33 pm
news

ಒಂದೇ ನಲ್ಲಿಯಲ್ಲಿ ೧೦೦ ಮನೆಯವರು ನೀರು ಹಿಡಿಯುವ ದುಸ್ಥಿತಿ

August 12, 2026 5:30 pm
news

ಕಾಂಗ್ರೆಸ್ ಸರ್ಕಾರದ ವಿರುದ್ಧ ಶಾಸಕ ಸುರೇಶ್ ಗೌಡ ಆಕ್ರೋಶ

August 12, 2026 5:28 pm
news

ತುಮಕೂರಿಗೆ ಆಗಮಿಸಿದ ರಾಜೀವ್ ಸದ್ಬಾವನ ರಥಯಾತ್ರೆ

August 11, 2026 4:53 pm
Our Youtube Channel
Our Picks

ಸಚಿವ ಬಿ.ನಾಗೇಂದ್ರ ವಿರುದ್ಧ ಪಿತೂರಿಗೆ ವಾಲ್ಮೀಕಿ ಸಮಾಜ ಖಂಡನೆ

August 12, 2026 5:37 pm

ಉದ್ಯಮ ಸಂಸ್ಥೆ ಜೊತೆ ಎಸ್‌ಎಸ್‌ಐಟಿ ಒಡಂಬಡಿಕೆ

August 12, 2026 5:35 pm

ವಿಬಿ ಜಿ ರಾಮ್ ಜಿ ಯೋಜನೆಯಡಿ ಜನರಿಗೆ ಉದ್ಯೋಗ ನೀಡಿ: ಜನರು ಗುಳೆ ಹೋಗುವುದನ್ನು ತಪ್ಪಿಸಿ

August 12, 2026 5:33 pm

ಒಂದೇ ನಲ್ಲಿಯಲ್ಲಿ ೧೦೦ ಮನೆಯವರು ನೀರು ಹಿಡಿಯುವ ದುಸ್ಥಿತಿ

August 12, 2026 5:30 pm

ಕಾಂಗ್ರೆಸ್ ಸರ್ಕಾರದ ವಿರುದ್ಧ ಶಾಸಕ ಸುರೇಶ್ ಗೌಡ ಆಕ್ರೋಶ

August 12, 2026 5:28 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಸಚಿವ ಬಿ.ನಾಗೇಂದ್ರ ವಿರುದ್ಧ ಪಿತೂರಿಗೆ ವಾಲ್ಮೀಕಿ ಸಮಾಜ ಖಂಡನೆ

By News Desk BenkiyabaleAugust 12, 2026 5:37 pm

ತುಮಕೂರು: ವಾಲ್ಮೀಕಿ ಸಮಾಜದ ನಾಯಕರು, ಸಮುದಾಯದ ಧ್ವನಿಯಾಗಿ ಗುರುತಿಸಿಕೊಂಡಿರುವ ಸಚಿವ ಬಿ. ನಾಗೇಂದ್ರ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಲು ಬಿಜೆಪಿ…

ಉದ್ಯಮ ಸಂಸ್ಥೆ ಜೊತೆ ಎಸ್‌ಎಸ್‌ಐಟಿ ಒಡಂಬಡಿಕೆ

August 12, 2026 5:35 pm

ವಿಬಿ ಜಿ ರಾಮ್ ಜಿ ಯೋಜನೆಯಡಿ ಜನರಿಗೆ ಉದ್ಯೋಗ ನೀಡಿ: ಜನರು ಗುಳೆ ಹೋಗುವುದನ್ನು ತಪ್ಪಿಸಿ

August 12, 2026 5:33 pm

ಒಂದೇ ನಲ್ಲಿಯಲ್ಲಿ ೧೦೦ ಮನೆಯವರು ನೀರು ಹಿಡಿಯುವ ದುಸ್ಥಿತಿ

August 12, 2026 5:30 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.