BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಕಾನೂನಿನಡಿಯಲ್ಲಿ ಎಲ್ಲಾ ಸಮಸ್ಯೆಗೂ ಪರಿಹಾರವಿದೆ
  • ರಾಷ್ಟ್ರೀಯ ಸಮ್ಮೇಳನದಲ್ಲಿ ವಿದ್ಯಾರ್ಥಿಗಳ ಸಾಧನೆ
  • ಕನಸು ಸಂಘಟನೆಯಿ0ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
  • ೧೪ನೇ ಶತಮಾನದ ‘ಜಾತ್ರೆ ವೀರಗಲ್ಲು’ ಶಾಸನ ಪತ್ತೆ
  • ಸ್ವಯಂ ಗಣತಿಯ ಅಭಿವೃದ್ಧಿಗೆ ಕೈಜೋಡಿಸಿ
  • ಏ.೮ ರ ಜನಸ್ಪಂದನ ಸಭೆಯಲ್ಲಿ ಗರಿಷ್ಠ ಪರಿಹಾರಗಳು: ಜಿಲ್ಲಾಧಿಕಾರಿ ವಿಶ್ವಾಸ
  • ಗುಣಮಟ್ಟದ ಹಾಲು ಶೇಖರಣೆ: ಜಿಲ್ಲೆ ರಾಜ್ಯದಲ್ಲೇ ಪ್ರಥಮ
  • ಸಿದ್ಧಗಂಗಾ ಶ್ರೀಗಳ ಜನ್ಮದಿನೋತ್ಸವ ಆಚರಣೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಸಮುದಾಯದ ಅಭ್ಯುದಯಕ್ಕೆ ಶಿಕ್ಷಣ ಪೂರಕ
ಇತರೆ ಸುದ್ಧಿಗಳು

ಸಮುದಾಯದ ಅಭ್ಯುದಯಕ್ಕೆ ಶಿಕ್ಷಣ ಪೂರಕ

By News Desk BenkiyabaleUpdated:November 14, 2022 5:51 pm

ತುಮಕೂರು


ಯಾವುದೇ ಒಂದು ಸಮುದಾಯ ಜಾಗತಿಕ ಮಟ್ಟದಲ್ಲಿ ತಮ್ಮನ್ನು ಗುರುತಿಸಬೇಕೆಂದರೆ, ಅದಕ್ಕೆ ಶಿಕ್ಷಣವೇ ಪೂರಕವಾದ ಅಂಶವಾಗಿದ್ದು, ನೇಕಾರರು ತಮ್ಮ ಮಕ್ಕಳನ್ನು ಉನ್ನತ ವ್ಯಾಸಾಂಗದತ್ತ ಗಮನಹರಿಸುವಂತೆ ಮಾಡಬೇಕೆಂದು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಮಹಾವೀರ ಭವನದಲ್ಲಿ ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ ಮತ್ತು ತುಮಕೂರು ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟದವತಿಯಿಂದ ಆಯೋಜಿಸಿದ್ದ ಜಿಲ್ಲಾ ನೇಕಾರರ ಸಮಾವೇಶ ಮತ್ತು ಪ್ರತಿಭಾಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,ಸಮುದಾಯದಲ್ಲಿ ಹೆಚ್ಚು ಹೆಚ್ಚು ಜನ ವಿದ್ಯಾವಂತರಾದಂತೆ, ಅವರ ಅರ್ಥಿಕ, ಸಾಮಾಜಿಕ ಸ್ಥಿತಿಗತಿಯೂ ಬದಲಾಗಲಿದೆ. ಹಾಗಾಗಿ ಎಲ್ಲರೂ ಶಿಕ್ಷಣದತ್ತ ಗಮನಹರಿಸಬೇಕೆಂದರು.
ಮಾಜಿ ಶಾಸಕ ಡಾ.ರಫೀಕ್ ಅಹಮದ್ ಮಾತನಾಡಿ,ರಾಜಕೀಯವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ಅರ್ಥಿಕವಾಗಿ ಹಿಂದುಳಿದಿರುವ ಈ ಸಮುದಾಯಕ್ಕೆ ಇದುವರೆಗೂ ಒಂದು ಅಭಿವೃದ್ದಿ ನಿಗಮ ಇಲ್ಲದಿರುವುದು ಶೋಚನೀಯ.ನಿಗಮಗಳ ಸ್ಥಾಪನೆಯಿಂದ ಸರಕಾರದಿಂದ ಜನಾಂಗದ ಅಭಿವೃದ್ದಿಗೆ ಅನುದಾನ ಬಿಡುಗಡೆಯಾಗುತ್ತದೆ.ಆ ಅನುದಾನವನ್ನು ಶೈಕ್ಷಣಿಕ ಮತ್ತು ಅರ್ಥಿಕ ಅಭಿವೃದ್ದಿಗೆ ವಿನಿಯೋಗಿಸಿ, ಸಮುದಾಯವನ್ನು ಬಲಿಷ್ಠಗೊಳಿಸಲು ಸಾಧ್ಯ. ನೇಕಾರರ ಅಭಿವೃದ್ದಿ ನಿಗಮ ಸ್ಥಾಪನೆ ಕುರಿತಂತೆ ನಾವು ಸಹ ನಿಮ್ಮೊಂದಿಗೆ ಇರುತ್ತೇವೆ ಎಂದರು.
ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಎಂ.ಡಿ.ಲಕ್ಷ್ಮಿನಾರಾಯಣ್ ಮಾತನಾಡಿ, ರಾಜ್ಯದಲ್ಲಿರುವ ಸುಮಾರು 1467 ಜಾತಿಗಳಲ್ಲಿ ಪ್ರವರ್ಗ 1ರಲ್ಲಿನ 102 ಮತ್ತು ಪ್ರವರ್ಗ 2ರಲ್ಲಿನ 95 ಹಿಂದುಳಿದ ಜಾತಿಗಳಲ್ಲಿ,ಸುಮಾರು 27 ಜಾತಿಗಳು ನೇಕಾರರ ಸಮುದಾಯಕ್ಕೆ ಸೇರಿವೆ.ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಯಾಗಿದ್ದಾಗ,ಕುಲಕಸುಬುಗಳನ್ನಾಧರಿಸಿದ, ಜಾತಿಗಳನ್ನು ಒಂದು ವೇದಿಕೆಗೆ ತಂದು, ಸುಮಾರು 75 ಕೋಟಿ ರೂಗಳನ್ನು ಅನುದಾನವನ್ನು ನೀಡಿದ್ದರು. ಆ ನಂತರದಲ್ಲಿ ನೇಕಾರ ಸಮುದಾಯಕ್ಕೆ ಅಂತಹ ಸಹಾಯ, ಸಹಕಾರ ಸರಕಾರಗಳಿಂದ ಸಿಕ್ಕಿಲ್ಲ.ಇಂದಿನ ಪೈಪೋಟಿ ಯುಗದಲ್ಲಿ ನೇಕಾರಿಕೆಯಿಂದ ಜೀವನ ನಡೆಸುವುದು ಕಷ್ಟವಾಗಿದೆ. ಇದಕ್ಕೆ ಪೂರಕವಾಗಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ, ಅವರ ಸರಕಾರದ ಉನ್ನತ ಹುದ್ದೆಗೆ ಹೋಗುವಂತೆ ಮಾಡುವತ್ತ ನಾವೆಲ್ಲರೂ ಗಮನಹರಿಸಬೇಕಿದೆ ಎಂದರು.
ರಾಜಕೀಯದಲ್ಲಿ ನಮ್ಮ ಸಮುದಾಯದ ಸಾಧನೆ ಶೂನ್ಯ.ಉಮಾಶ್ರೀ ಮತ್ತು ನಾನು ಎಂ.ಎಲ್.ಎ ಗಳಾಗಿದ್ದು ಬಿಟ್ಟರೆ ಆ ನಂತರದಲ್ಲಿ ಯಾರು ಇಲ್ಲ.ರಾಜಕೀಯ ಸ್ಥಾನಮಾನದ ಹಿನ್ನೆಲೆಯಲ್ಲಿ ಎಲ್ಲರನ್ನು ಒಗ್ಗೂಡಿ ಪಕ್ಷಗಳ ಮುಂದೆ ಶಕ್ತಿ ಪ್ರದರ್ಶನಕ್ಕೆ ಒಕ್ಕೂಟದ ಆಧ್ಯಕ್ಷರು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.ಅವರ ಕೈ ಬಲಪಡಿಸುವ ಕೆಲಸ ಆಗಬೇಕು.ಯಾರಿಗೆ ರಾಜಕೀಯದಲ್ಲಿ ಆಸಕ್ತಿ ಇದೆಯೋ ಅವರು ಪಕ್ಷಕ್ಕೆ ಟಿಕೇಟ್‍ಗೆ ಆರ್ಜಿ ಸಲ್ಲಿಸುವಂತೆ ಎಂ.ಡಿ.ಎಲ್ ಸಲಹೆ ನೀಡಿದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ರಾಜ್ಯಾಧ್ಯಕ್ಷ ಸೋಮಶೇಖರ್ ಮಾತನಾಡಿ,11 ವರ್ಷಗಳ ಹಿಂದೆ ಆರಂಭವಾದ ನಮ್ಮ ಸಂಘಟನೆ ಇಂದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಆಸ್ಥಿತ್ವದಲ್ಲಿದೆ. ಮುಂದಿನ ದಿನಗಳಲ್ಲಿ ತಾಲೂಕು ಮತ್ತು ವಿಧಾನಸಭಾ ಕ್ಷೇತ್ರವಾರು ಸಂಘಟಿಸುವ ಗುರಿಯನ್ನು ಒಕ್ಕೂಟ ಹೊಂದಿದೆ. ಮುಂದಿನ ದಿನಗಳಲ್ಲಿ ಸರಕಾರದಿಂದ ಈ ಸಮುದಾಯಕ್ಕೆ ಬರುವ ಸವಲತ್ತುಗಳನ್ನು ಜನರಿಗೆ ತಲುಪಿಸಲು ಒಕ್ಕೂಟ ಶಕ್ತಿ ಮೀರಿ ಕೆಲಸ ಮಾಡಲಿದೆ.ನಮ್ಮ ಮಕ್ಕಳು ಐಎಎಸ್, ಕೆಎಎಸ್ ನಂತಹ ಉನ್ನತ ಹುದ್ದೆಗಳನ್ನು ಅಲಂಕರಿಸಲು ಅಗತ್ಯವಿರುವ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯನ್ನು ಆರಂಭಿಸಲು ಒಕ್ಕೂಟ ಮುಂದಾಗಿದೆ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ತುಮಕೂರು ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಧನಿಯಕುಮಾರ್, ನೇಕಾರರೆಂದರೆ ಕೇವಲವಾಗಿ ಕಾಣುತ್ತಿದ್ದ ದಿನಗಳಲ್ಲಿ ಪ್ರಧಾನಿ ನರೇಂದ್ರಮೋದಿ ಅವರು ಆಗಸ್ಟ್ 07ನೇ ತಾರೀಖನ್ನು ನೇಕಾರ ದಿವಸ್ ಎಂದು ಘೋಷಿಸಿದ ನಂತರ ಸಮುದಾಯದಲ್ಲಿ ಒಂದು ರೀತಿಯ ಸಂಚಲನ ಮೂಡಿದೆ. ಇಂದು ದೇಶದಲ್ಲಿ ಹಾರಾಡುತ್ತಿರುವ ರಾಷ್ಟ್ರಧ್ವಜವನ್ನು ರೂಪಿಸಿಕೊಟ್ಟವರು ನಾವು ಎಂಬ ಹೆಮ್ಮೆ ನಮಗಿದೆ.ಸರಕಾರ ನೇಕಾರರು, ರೈತರು ಎರಡು ಕಣ್ಣುಗಳಿದ್ದಂತೆ ಎಂದು ಹೇಳಿದೆ. ಆದರೆ ರೈತರಿಗೆ ನೀಡಿದಂತೆ ಉಚಿತ ವಿದ್ಯುತ್, ಸಾಲ ಮನ್ನಾ ಯೋಜನೆ ನಮ್ಮಗಿಲ್ಲ. ಸರಕಾರ ನೆರೆಯ ಆಂಧ್ರ, ತಮಿಳುನಾಡು ಸರಕಾರದಂತೆ ನೇಕಾರರಿಗೆ 200 ಯುನಿಟ್ ವರೆಗೆ ಉಚಿತ ವಿದ್ಯುತ್, ಸಾಲಮನ್ನಾ ಯೋಜನೆ, ನೇಕಾರರ ಮಕ್ಕಳಿಗೆ ಉಚಿತ ವಿಧ್ಯಾಭ್ಯಾಸಕ್ಕೆ ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮೇಯರ್ ಪ್ರಭಾವತಿ, ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ,ಪಾಲಿಕೆ ಸದಸ್ಯರಾದ ಶ್ರೀಮತಿ ಗಿರಿಜಾ ಧನಿಯಕುಮಾರ್,ಬಲಿಜ ಸಮಾಜದ ಟಿ.ಆರ್.ಅಂಜನಪ್ಪ,ಈಡಿಗ ಸಮಾಜದ ಜೆ.ಪಿ.ಶಿವಣ್ಣ, ಆರ್ಯವೈಶ್ಯ ಸಮಾಜದ ನಟರಾಜು,ಪಿ.ಎನ್.ರಾಮಯ್ಯ,ನೇಕಾರರ ಜಿಲ್ಲಾ ಒಕ್ಕೂಟದ ಕಾರ್ಯದರ್ಶಿ ಆರ್.ರಾಮಕೃಷ್ಣಯ್ಯ,ಉಪಾಧ್ಯಕ್ಷ ಎನ್.ವೆಂಕ ಟೇಶ್,ಕರಿಯಪ್ಪ,ಟಿ.ರೇವಣ್ಣಕುಮಾರ್,ಯೋಗಾನಂದ್,ಅನಿಲ್‍ಕುಮಾರ್,ಬಿ.ಎಲ್.ರವೀಂದ್ರಕುಮಾರ್,ಗೌರವಾಧ್ಯಕ್ಷ ಟಿ.ಹೆಚ್. ಶಿವಾನಂದ್,ಚೌಡಪ್ಪ,ಎಸ್.ವಿರೂಪಾಕ್ಷಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಇದೇ ವೇಳೆ 250ಕ್ಕೂ ಹೆಚ್ಚು ನೇಕಾರ ಸಮುದಾಯಕ್ಕೆ ಸೇರಿದ, ಎಸ್.ಎಸ್,ಎಲ್,ಸಿ. ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳನ್ನು ಗೌರವಿಸಲಾಯಿತು.

(Visited 8 times, 1 visits today)
tumkur
Previous Articleಲೈನ್‍ಮನ್‍ಗಳು ಸುರಕ್ಷತಾ ಕ್ರಮಗಳನ್ನು ಪಾಲಿಸಿ
Next Article ವಿದ್ಯುತ್ ಪ್ರಸರಣ ಅಧಿಕಾರಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ
News Desk Benkiyabale

Related Posts

ಕಾನೂನಿನಡಿಯಲ್ಲಿ ಎಲ್ಲಾ ಸಮಸ್ಯೆಗೂ ಪರಿಹಾರವಿದೆ

April 13, 2026 3:10 pm news

ರಾಷ್ಟ್ರೀಯ ಸಮ್ಮೇಳನದಲ್ಲಿ ವಿದ್ಯಾರ್ಥಿಗಳ ಸಾಧನೆ

April 03, 2026 4:46 pm ತುಮಕೂರು ಜಿಲ್ಲಾ ಸುದ್ಧಿಗಳು

ಕನಸು ಸಂಘಟನೆಯಿ0ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

April 03, 2026 4:44 pm ತುಮಕೂರು ಜಿಲ್ಲಾ ಸುದ್ಧಿಗಳು
ತಾಜಾ ಸುದ್ಧಿಗಳು

ಕಾನೂನಿನಡಿಯಲ್ಲಿ ಎಲ್ಲಾ ಸಮಸ್ಯೆಗೂ ಪರಿಹಾರವಿದೆ

April 13, 2026 3:10 pm
ತುಮಕೂರು ಜಿಲ್ಲಾ ಸುದ್ಧಿಗಳು

ರಾಷ್ಟ್ರೀಯ ಸಮ್ಮೇಳನದಲ್ಲಿ ವಿದ್ಯಾರ್ಥಿಗಳ ಸಾಧನೆ

April 03, 2026 4:46 pm
ತುಮಕೂರು ಜಿಲ್ಲಾ ಸುದ್ಧಿಗಳು

ಕನಸು ಸಂಘಟನೆಯಿ0ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

April 03, 2026 4:44 pm
ತುಮಕೂರು ಜಿಲ್ಲಾ ಸುದ್ಧಿಗಳು

೧೪ನೇ ಶತಮಾನದ ‘ಜಾತ್ರೆ ವೀರಗಲ್ಲು’ ಶಾಸನ ಪತ್ತೆ

April 03, 2026 4:42 pm
ತುಮಕೂರು ಜಿಲ್ಲಾ ಸುದ್ಧಿಗಳು

ಸ್ವಯಂ ಗಣತಿಯ ಅಭಿವೃದ್ಧಿಗೆ ಕೈಜೋಡಿಸಿ

April 03, 2026 4:39 pm
ತುಮಕೂರು ಜಿಲ್ಲಾ ಸುದ್ಧಿಗಳು

ಏ.೮ ರ ಜನಸ್ಪಂದನ ಸಭೆಯಲ್ಲಿ ಗರಿಷ್ಠ ಪರಿಹಾರಗಳು: ಜಿಲ್ಲಾಧಿಕಾರಿ ವಿಶ್ವಾಸ

April 03, 2026 4:37 pm
Our Youtube Channel
Our Picks

ವಿಷ ಕುಡಿಯಲು ಯತ್ನಿಸಿದವರ ರಕ್ಷಿಸಿದ ಶಾಸಕ

April 02, 2026 3:56 pm

ಸಂಪನ್ನಗೊ0ಡ ವಿಶ್ವ ರಂಗಭೂಮಿ ಸಂಭ್ರಮಾಚರಣೆ

March 28, 2026 4:00 pm

ಮಕ್ಕಳು ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿ

March 28, 2026 3:41 pm

ಗುಬ್ಬಚ್ಚಿಗಳ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವ : ಜಿ.ವಿ. ರಘು

March 28, 2026 3:35 pm

ಏ.1 ರಂದು ಸಿದ್ದಗಂಗಾ ಮಠಕ್ಕೆ ರಾಷ್ಟ್ರಪತಿ ಭೇಟಿ

March 27, 2026 5:01 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss

ಕಾನೂನಿನಡಿಯಲ್ಲಿ ಎಲ್ಲಾ ಸಮಸ್ಯೆಗೂ ಪರಿಹಾರವಿದೆ

By News Desk BenkiyabaleApril 13, 2026 3:10 pm

ತುಮಕೂರು: ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಆಹಿತಕರ ಘಟನೆಯನ್ನು ಜಿಲ್ಲಾ ಕಾಂಗ್ರೆಸ್ ಖಂಡಿಸುತ್ತದೆ. ಕೆ.ಆರ್.ಎಸ್ ಪಕ್ಷದ ಕಾರ್ಯಕರ್ತರು ಉದ್ದೇಶ…

ರಾಷ್ಟ್ರೀಯ ಸಮ್ಮೇಳನದಲ್ಲಿ ವಿದ್ಯಾರ್ಥಿಗಳ ಸಾಧನೆ

April 03, 2026 4:46 pm

ಕನಸು ಸಂಘಟನೆಯಿ0ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

April 03, 2026 4:44 pm

೧೪ನೇ ಶತಮಾನದ ‘ಜಾತ್ರೆ ವೀರಗಲ್ಲು’ ಶಾಸನ ಪತ್ತೆ

April 03, 2026 4:42 pm
News by Date
May 2026
M T W T F S S
 123
45678910
11121314151617
18192021222324
25262728293031
« Apr    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.