ತುಮಕೂರು: ಮೈಸೂರು ದಸರಾ ಮಾದರಿಯಲ್ಲೇ ತುಮಕೂರು ದಸರಾ ಸಹ ರಂಗ ಮೇರುಗನ್ನು ನೀಡಿರುವ ಉಪಮುಖ್ಯಮಂತ್ರಿಗಳು ಮತ್ತು ಕಂದಾಯ ಸಚಿವರಾದ ಡಾ.ಜಿ.ಪರಮೇಶ್ವರ್ ಮತ್ತು ಜಿಲ್ಲಾಡಳಿತವು ಜಿಲ್ಲೆಯ ರಂಗ ಕಲಾವಿದಗೆ ವಿಶೇಷ ಗೌರವ ನೀಡುತಿದೆ ಎಂದು ನಾಗಾರ್ಜುನ ಕಲಾ ಸಂಘದ ಸಂಸ್ಥಾಪಕರು ಮತ್ತು ಜಿಲ್ಲಾ ಪಂಚಾಯತ್ ನ ಮುಖ್ಯ ಲೆಕ್ಕಾಧಿಕಾರಿಯಾದ ನರಸಿಂಹಮೂರ್ತಿ ಇಂದು ತಿಳಿಸಿದರು.
ನಗರದ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ತುಮಕೂರು ದಸರಾ ಪ್ರಯುಕ್ತ ನಡೆಯುತ್ತಿರುವ ಎಂಟನೇ ದಿನದ ವಿಶೇಷ ನಾಟಕೋತ್ಸವದ ಅಂಗವಾಗಿ ಮೂರುವರೆ ವಜ್ರಗಳು ಎಂಬ ನಾಟಕದ ರಂಗಸಜ್ಜಿಕೆ ಉದ್ಘಾಟಿಸಿ ಮಾತನಾಡಿದ ಅವರು ರಂಗ ದಸರಾ ನಾಡಿನ ಹೆಮ್ಮೆಯ ಮೈಸೂರು ದಸರಾ ಮಾದರಿಯಲ್ಲೇ ಜಿಲ್ಲೆಯಲ್ಲೂ ವೈಭವದ ದಸರಾ ನಡೆಯುತ್ತಿದೆ. ಇದರಿಂದ ಜಿಲ್ಲೆಯ ರಂಗ ಕಲಾವಿದರಿಗೆ ತುಮಕೂರು ದಸರಾ ಹಮ್ಮೆಯ ವಿಷಯವಾಗಿದೆ. ಹದಿನೈದನೇ ಶತಮಾನದಲ್ಲಿ ಹಂಪಿಯಲ್ಲಿ ಪ್ರಾರಂಭವಾದ ದಸರಾ ಇಂದು ಸಾಂಸ್ಕöÈತಿಕ ನಗರ ಮೈಸೂರುನಲ್ಲಿ ನಡೆಯುತ್ತಿದ್ದು ವಿಶ್ವದಲ್ಲೇ ಮೈಸೂರು ದಸರಾ ಜಂಬೂ ಸವಾರಿ ಪ್ರಸಿದ್ದಿ ಪಡೆದಿದೆ. ಮೈಸೂರು ದಸರಾ ಮಾದರಿಯಲ್ಲಿ ತುಮಕೂರು ದಸರಾ ನಡೆಯುತ್ತಿರುವುದು ತುಮಕೂರು ಜಿಲ್ಲೆಯ ಎಲ್ಲರಿಗೂ ಹೆಮ್ಮೆಯ ಪ್ರತೀಕವಾಗಿದೆ. ಅದರಲ್ಲೂ ಕಲಾವಿದರಿಗೆ ಒಮ್ಮತದೊಂದೊAದಿಗೆ ಸಂಸ್ಕಾರಯುತ ಕಲಾ ಪೂಷಣೆಗೆ ತುಮಕೂರು ರಂಗ ದಸರಾ ಅವಕಾಶ ಕಲ್ಪಿಸಿರುವುದು ನಮ್ಮ ಎಲ್ಲಾ ಕಲಾವಿದರಿಗೆ ತುಂಬಾ ಉತ್ಸಹ ಮೂಡಿಸಿದೆ ಎಂದರು.
ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷರಾದ ಎಸ್.ಶಿವಣ್ಣ ಮತನಾಡಿ ಕಳೆದ ಎಂಟು ದಿನಗಳಿಂದ ತುಮಕೂರು ದಸರಾ ಪ್ರಯುಕ್ತ ನಡೆಯುತ್ತಿರುವ ರಂಗ ದಸರಾ ಕಳೆದ ಎಂಟು ದಿನದಿಂದಲೂ ಗುಬ್ಬಿ ವೀರಣ್ಣ ಕಲಾಕ್ಷೇತ್ರ ಕಲಾ ಪ್ರೇಕ್ಷರಿಂದ ತುಂಬಿ ಪ್ರದರ್ಶನಗೊಳ್ಳಿತ್ತಿರುವುದು ಜಿಲ್ಲೆಯ ಕಲಾವಿದರಿಗೆ ಸಂತಸ ಮೂಡಿಸಿದೆ. ಈ ಕಲಾ ಪೂಷಣೆಗೆ ಸಹಕರಿಸಿದ ಉಪಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವರ್ ಮತ್ತು ಜಿಲ್ಲಾಡಳಿತಕ್ಕೆ ತುಂಬು ಹೃದಯದ ಧನ್ಯವಾದಗಳು. ಇದೇ ರೀತಿಯಲ್ಲಿ ಮುಂದೆಯೂ ಸಹ ಜಿಲ್ಲೆಯ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹವು ಜಿಲ್ಲಾಡಳಿತದಿಂದ ಸೀಗಲಿ ಎಂದು ತಿಳಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಕಲಾವಿದರು ಹಾಗೂ ಕೆಯುಡಬ್ಲೂ÷್ಯಜೆ ಉಪಾಧ್ಯಕ್ಷರಾದ ಜಯನುಡಿ ಜಯಣ್ಣ, ಪತ್ರಕರ್ತರು ಹಾಗೂ ಕಲಾವಿದರಾದ ಮೇಳೆಕಲ್ಲಹಳ್ಳಿ ಯೋಗೀಶ್. ತುಮಕೂರು ಎಕ್ಸ್ಪ್ರೆಸ್ ದಿನಪತ್ರಿಕೆ ಸಂಪಾದಕರಾದ ಸೀಗಲಹಳ್ಳಿ ನರಸಿಂಹಮೂರ್ತಿ ಸೇರಿದಂತೆ ಹಲವು ಹಿರಿಯ ಕಲಾವಿದರಿದ್ದರು.
(Visited 1 times, 1 visits today)





