BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಸರ್ಕಾರವೇ ನಿಡಗಲ್ಲು ಉತ್ಸವ ಆಚರಿಸಲಿ: ಶಾಂತಲಾ ರಾಜಣ್ಣ ಒತ್ತಾಯ
  • ತುಮಕೂರಿನಲ್ಲಿ ಕನ್ನಾಳೆ ವಜಾಕ್ಕೆ ಆಗ್ರಹಿಸಿ ಎಬಿವಿಪಿ ರಸ್ತೆ ತಡೆದು ಪ್ರತಿಭಟನೆ
  • ಕಾಮಗಾರಿಗಳ ಅಕ್ರಮ ಖಂಡಿಸಿ ಕಾಂಗ್ರೆಸ್ ಮುಖಂಡರ ಸತ್ಯಾಗ್ರಹ
  • ಪಾವಗಡ ತಾಲ್ಲೂಕಿನ ಹಸಿರೀಕರಣಕ್ಕಾಗಿ ಕೆರೆಗಳಿಗೆ ನೀರು
  • ರೈತರ ಜಮೀನಿಗೆ ಕೈಹಾಕಿದರೆ, ಕಂಬಕ್ಕೆ ಕಟ್ಟಿಹಾಕಿ: ಪ್ರತಿಭಟನೆ
  • ಸಾರ್ವಜನಿಕ ಹಬ್ಬಗಳಲ್ಲಿ ಡಿಜೆ ಸಂಪೂರ್ಣ ನಿಷೇಧ: ಸಿಐ ಸುರೇಶ್ ಸೂಚನೆ
  • ಮಳೆಗಾಲದಲ್ಲೇ ಕುಡಿಯುವ ನೀರಿಗೆ ಹಾಹಾಕಾರ
  • ತುಮಕೂರಿನಲ್ಲಿ ಮಣ್ಣಿನ ಗಣೇಶನಿಗೆ ಮಕ್ಕಳ ಕೈಚಳಕ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಹಸುವಿನ ರಾಜಕಾರಣ ಅಪಾಯ – ಬರಗೂರು ರಾಮಚಂದ್ರಪ್ಪ
Trending

ಹಸುವಿನ ರಾಜಕಾರಣ ಅಪಾಯ – ಬರಗೂರು ರಾಮಚಂದ್ರಪ್ಪ

By News Desk BenkiyabaleUpdated:December 24, 2018 4:48 pm

ತುಮಕೂರು:

      ಇಂದು ಹಸಿವಿಗಾಗಿ ರಾಜಕಾರಣ ಮಾಡುತ್ತಿಲ್ಲ. ಹಸುವಿಗಾಗಿ ರಾಜಕಾರಣ ನಡೆಯುತ್ತಿದೆ. ಇದು ಅಪಾಯಕಾರಿ ಎಂದು ನಾಡೋಜ ಸಾಹಿತಿ ಬರಗೂರು ರಾಮಚಂದ್ರಪ್ಪ ಆತಂಕ ವ್ಯಕ್ತಪಡಿಸಿದರು.

      ತುಮಕೂರು ನಗರದ ಕನ್ನಡ ಭವನದಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ಮತ್ತು ಶಶಾಂಕ ಪ್ರಕಾಶನ ಆಯೋಜಿಸಿದ್ದ ಡಾ. ಓ. ನಾಗರಾಜು ಅವರ ಹಟ್ಟಿ ಅರಳಿ ಹೂವಾಗಿ ಕಾಂದಬರಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ಸಮಾಜದಲ್ಲಿ ಯಾವುದೇ ಸಂಘರ್ಷ ನಡೆಯದಿದ್ದರೆ ಅದು ಒಳ್ಳೆಯ ಕಾಲ. ಬ್ರಿಟೀಷರ ಮತ್ತು ರಾಜರ ಕಾಲವೇ ಎಷ್ಟೋ ಉತ್ತಮವಾಗಿತ್ತು ಎಂದು ಹೇಳುವವರೂ ಇದ್ದಾರೆ. ಅಂದು ಕೂಡ ಸಮಸ್ಯೆಗಳು ಇದ್ದವು. ಸಂಘರ್ಷ ನಡೆದರೆ ಅಲ್ಲಿ ಏನೋ ನಡೆಯುತ್ತಿದೆ ಎಂದರ್ಥ. ಹಸಿವಿಗಾಗಿ ರಾಜಕಾರಣ ಮಾಡಿದರೆ ಒಳ್ಳೆಯದು. ಅದು ಆಗದೆ ಹಸುವಿನ ರಾಜಕಾರಣ ನಡೆಯುತ್ತಿದೆ ಎಂದು ತಿಳಿಸಿದರು.

      ಚಳವಳಿಗಳು ಸೃಜನಶೀಲತೆಯನ್ನು ನಾಶ ಮಾಡುತ್ತದೆ ಎಂಬ ವಾದವಿದೆ. ಆದರೆ ಇದು ಸುಳ್ಳು. ಸಾಮಾಜಿಕ ಮತ್ತು ಸಾಹಿತ್ಯಕ ಚಳವಳಿಗಳು ನಡೆಯುವುದರಿಂದಲೇ ಒಳ್ಳೆಯ ಕೃತಿಗಳು ಮೂಡಿಬರಲು ಸಾಧ್ಯ. ಅದರ ಭಾಗವೇ ಹಟ್ಟಿ ಅರಳಿ ಹೂವಾಗಿ ಕೃತಿಯಂಥವುಗಳು ಬರಹ ರೂಪ ತಾಳುತ್ತವೆ ಎಂದರು.

      ಪಂಪ, ವಚನಕಾರರು, ಕುಮಾರವ್ಯಾಸ ಸಾಹಿತ್ಯ ಕೃತಿಗಳಲ್ಲಿ ಚಳವಳಿಯಿಂದ ಸೃಜನಶೀಲವಾಗಿ ಅಭಿವ್ಯಕ್ತಿಸಿರುವುದನ್ನು ನಾವು ನೋಡಬಹುದು. ಈ ಸನ್ನಿವೇಶಗಳನ್ನು ನೋಡದೇ ಹೋದರೆ ಇಂತಹ ಅಪವ್ಯಾಖ್ಯಾನಗಳು ಮೂಡಿಬರಲು ಸಾಧ್ಯ. ಪಂಪ ರಾಜಪ್ರಭುತ್ವದ ವಿರುದ್ದ ದನಿ ಎತ್ತಿದ. ವಚನಕಾರರು ಭಾಷಾ ಚಳವಳಿಯನ್ನೇ ನಡೆಸುವ ಜೊತೆಗೆ ಧಾರ್ಮಿಕ ಚಳವಳಿಯನ್ನು ಮಾಡಿದರು ಎಂದು ವಿವರಿಸಿದರು.

      ದಲಿತ-ಬಂಡಾಯ ಸಾಹಿತ್ಯ ಬಂದ ಮೇಲೆ ಸಾಹಿತಿಗಳು ಬೀದಿಗೆ ಬಂದರು. ಹಟ್ಟಿಗಳಿಗಳ ಅನುಭವ ಹೊರಬಂತು. 70ರ ದಶಕ ದಲ್ಲಾದ ಚಳವಳಿಯ ಪರಿಣಾಮ ಇಂದು ಊರು ಕೇರಿ, ಹಟ್ಟಿಗಳು ಕೂಡ ಸಾಹಿತ್ಯದ ಒಳಗೆ ಬಂದಿವೆ. ಇತ್ತೀಚಿನ ಬರಹಗಳಲ್ಲಿ ಹೊಸ ಚಹರೆ ಕಂಡುಬರುತ್ತಿದೆ. ಜನಪರ ಚಳವಳಿಗಳ ಪ್ರಭಾವ ಪರಿಣಾಮವೇ ಇಂತಹ ಕೃತಿಗಳ ರಚನೆಗೆ ಕಾರಣ ಎಂದು ತಿಳಿಸಿದರು.

      ಹಟ್ಟಿ ಅರಳಿ ಹೂವಾಗಿ ಒಂದು ಆದರ್ಶದ ಕಾದಂಬರಿ. ಇಲ್ಲಿ ಬರುವ ಪಾತ್ರಗಳೆಲ್ಲವೂ ಒಳ್ಳೆಯವೇ ಆಗಿದೆ. ಕಾದಂಬರಿಕಾರರ ಆಶಯ ಒಳ್ಳೆಯದೆ.ಹಟ್ಟಿಗಳ ಅರಳಿ ಹೂವಾಗುವ ಮತ್ತು ಹಟ್ಟಿಗಳು ನರಳಿ ನೋವಾಗುವ ಬಗೆಯೂ ಇದೆ. ಶಿಕ್ಷಣ ಪಡೆದವರು ಹೊಸ ಆಲೋಚನೆ ಮಾಡತೊಡಗುತ್ತಾರೆ. ಕಾದಂಬರಿಯಲ್ಲಿ ಈ ಬದಲಾವಣೆಯೂ ಕಂಡುಬರುತ್ತದೆ ಎಂದರು.

      ಹಟ್ಟಿಗಳಿಂದ ಬಂದ ಹೊಸ ಅನುಭವ ದ್ರವ್ಯದ ಭಾಗವಾಗಿ ಇದು ಕಾದಂಬರಿಯಾಗಿದೆ. ಕಾದಂಬರಿ ಉತ್ತಮವಾಗಿ ಓದಿಸಿಕೊಂಡು ಹೋಗುತ್ತದೆ. ಪ್ರಜಾಪ್ರಭುತ್ವದ ನಂತರ ಹಳ್ಳಿಗಳು ಬದಲಾಗಿರುವುದನ್ನು ಹಟ್ಟಿ ಅರಳಿ ಕಾದಂಬರಿಯಲ್ಲಿ ದಾಖಲಾಗಿದೆ. ಇದು ಡಾ.ಒ.ನಾಗರಾಜು ಅವರ ಕನಸಿನ ಕಾದಂಬರಿ. ಸಮಾಜ ಸೌಹಾರ್ದವಾಗಿರಬೇಕು ಎಂಬ ಕಾದಂಬರಿ ಕಾರರ ಕನಸು ನನಸಾದರೆ ಒಳ್ಳೆಯದು ಎಂದು ಹೇಳಿದರು.

      ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಸಮಾಜ ಚಿಂತಕ ಪ್ರೊ.ಜಿ.ಎಂ.ಶ್ರೀನಿವಾಸಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕವಿ ಡಾ.ಆರನಕಟ್ಟೆ ರಂಗನಾಥ ಹಟ್ಟಿ ಅರಳಿ ಹೂವಾಗಿ ಕಾದಂಬರಿ ಕುರಿತು ಮಾತನಾಡಿದರು. ಯುವಜನ ಮುಖಂಡ ಬಿ.ರಾಜಶೇಖರಮೂರ್ತಿ, ಕರ್ನಾಟಕ ರಾಜ್ಯ ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷ ಡಾ.ಟಿ.ಎಂ.ಮಂಜುನಾಥ್, ಕಾದಂಬರಿಕಾರ ಡಾ.ಓ.ನಾಗರಾಜು ಉಪಸ್ಥಿತರಿದ್ದರು.

      ಉಪನ್ಯಾಸಕಿ ಶ್ವೇತಾರಾಣಿ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಡಾ.ಓ.ನಾಗಭೂಷಣ್ ಬಗ್ಗನಡು ಕಾರ್ಯಕ್ರಮ ನಿರೂಪಿಸಿದರು. ಯುವ ಮುಖಂಡ ರಂಗಥಾಮಯ್ಯ ಹಾಡು ಹಾಡಿದರು. ಪ್ರಾಧ್ಯಾಪಕ ತಿಪ್ಪೇಸ್ವಾಮಿ ವಂದಿಸಿದರು.

(Visited 24 times, 1 visits today)
Previous Article  ಕೆಲೋ ಇಂಡಿಯಾ ಯೋಜನೆಯಡಿ ಹೆಚ್ಚಿನ ಅನುದಾನಕ್ಕೆ ಕೇಂದ್ರಕ್ಕೆ ಮನವಿ: ಡಿಸಿಎಂ
Next Article ಹಾಡಹಗಲೇ ಜೆಡಿಎಸ್‌ ಮುಖಂಡನ ಬರ್ಬರ ಕೊಲೆ
News Desk Benkiyabale

Related Posts

ಸರ್ಕಾರವೇ ನಿಡಗಲ್ಲು ಉತ್ಸವ ಆಚರಿಸಲಿ: ಶಾಂತಲಾ ರಾಜಣ್ಣ ಒತ್ತಾಯ

September 09, 2026 5:41 pm news

ತುಮಕೂರಿನಲ್ಲಿ ಕನ್ನಾಳೆ ವಜಾಕ್ಕೆ ಆಗ್ರಹಿಸಿ ಎಬಿವಿಪಿ ರಸ್ತೆ ತಡೆದು ಪ್ರತಿಭಟನೆ

September 09, 2026 5:39 pm news

ಕಾಮಗಾರಿಗಳ ಅಕ್ರಮ ಖಂಡಿಸಿ ಕಾಂಗ್ರೆಸ್ ಮುಖಂಡರ ಸತ್ಯಾಗ್ರಹ

September 09, 2026 5:37 pm news
ತಾಜಾ ಸುದ್ಧಿಗಳು
news

ಸರ್ಕಾರವೇ ನಿಡಗಲ್ಲು ಉತ್ಸವ ಆಚರಿಸಲಿ: ಶಾಂತಲಾ ರಾಜಣ್ಣ ಒತ್ತಾಯ

September 09, 2026 5:41 pm
news

ತುಮಕೂರಿನಲ್ಲಿ ಕನ್ನಾಳೆ ವಜಾಕ್ಕೆ ಆಗ್ರಹಿಸಿ ಎಬಿವಿಪಿ ರಸ್ತೆ ತಡೆದು ಪ್ರತಿಭಟನೆ

September 09, 2026 5:39 pm
news

ಕಾಮಗಾರಿಗಳ ಅಕ್ರಮ ಖಂಡಿಸಿ ಕಾಂಗ್ರೆಸ್ ಮುಖಂಡರ ಸತ್ಯಾಗ್ರಹ

September 09, 2026 5:37 pm
news

ಪಾವಗಡ ತಾಲ್ಲೂಕಿನ ಹಸಿರೀಕರಣಕ್ಕಾಗಿ ಕೆರೆಗಳಿಗೆ ನೀರು

September 09, 2026 5:36 pm
news

ರೈತರ ಜಮೀನಿಗೆ ಕೈಹಾಕಿದರೆ, ಕಂಬಕ್ಕೆ ಕಟ್ಟಿಹಾಕಿ: ಪ್ರತಿಭಟನೆ

September 09, 2026 5:34 pm
news

ಸಾರ್ವಜನಿಕ ಹಬ್ಬಗಳಲ್ಲಿ ಡಿಜೆ ಸಂಪೂರ್ಣ ನಿಷೇಧ: ಸಿಐ ಸುರೇಶ್ ಸೂಚನೆ

September 08, 2026 5:26 pm
Our Youtube Channel
Our Picks

ಸರ್ಕಾರವೇ ನಿಡಗಲ್ಲು ಉತ್ಸವ ಆಚರಿಸಲಿ: ಶಾಂತಲಾ ರಾಜಣ್ಣ ಒತ್ತಾಯ

September 09, 2026 5:41 pm

ತುಮಕೂರಿನಲ್ಲಿ ಕನ್ನಾಳೆ ವಜಾಕ್ಕೆ ಆಗ್ರಹಿಸಿ ಎಬಿವಿಪಿ ರಸ್ತೆ ತಡೆದು ಪ್ರತಿಭಟನೆ

September 09, 2026 5:39 pm

ಕಾಮಗಾರಿಗಳ ಅಕ್ರಮ ಖಂಡಿಸಿ ಕಾಂಗ್ರೆಸ್ ಮುಖಂಡರ ಸತ್ಯಾಗ್ರಹ

September 09, 2026 5:37 pm

ಪಾವಗಡ ತಾಲ್ಲೂಕಿನ ಹಸಿರೀಕರಣಕ್ಕಾಗಿ ಕೆರೆಗಳಿಗೆ ನೀರು

September 09, 2026 5:36 pm

ರೈತರ ಜಮೀನಿಗೆ ಕೈಹಾಕಿದರೆ, ಕಂಬಕ್ಕೆ ಕಟ್ಟಿಹಾಕಿ: ಪ್ರತಿಭಟನೆ

September 09, 2026 5:34 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಸರ್ಕಾರವೇ ನಿಡಗಲ್ಲು ಉತ್ಸವ ಆಚರಿಸಲಿ: ಶಾಂತಲಾ ರಾಜಣ್ಣ ಒತ್ತಾಯ

By News Desk BenkiyabaleSeptember 09, 2026 5:41 pm

ಪಾವಗಡ: ಮಹರ್ಷಿ ವಾಲ್ಮೀಕಿ ಆಶ್ರಮ, ವಾಲ್ಮೀಕಿ ಜಾಗೃತಿ ವೇದಿಕೆ, ನಿಡಗಲ್ಲು ಗ್ರಾಮಸ್ಥರು ಮತ್ತು ದುರ್ಗದ ಅಭಿಮಾನಿಗಳ ವತಿಯಿಂದ ೧೦ನೇ ವರ್ಷದ…

ತುಮಕೂರಿನಲ್ಲಿ ಕನ್ನಾಳೆ ವಜಾಕ್ಕೆ ಆಗ್ರಹಿಸಿ ಎಬಿವಿಪಿ ರಸ್ತೆ ತಡೆದು ಪ್ರತಿಭಟನೆ

September 09, 2026 5:39 pm

ಕಾಮಗಾರಿಗಳ ಅಕ್ರಮ ಖಂಡಿಸಿ ಕಾಂಗ್ರೆಸ್ ಮುಖಂಡರ ಸತ್ಯಾಗ್ರಹ

September 09, 2026 5:37 pm

ಪಾವಗಡ ತಾಲ್ಲೂಕಿನ ಹಸಿರೀಕರಣಕ್ಕಾಗಿ ಕೆರೆಗಳಿಗೆ ನೀರು

September 09, 2026 5:36 pm
News by Date
September 2026
M T W T F S S
 123456
78910111213
14151617181920
21222324252627
282930  
« Aug    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.