BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ 151ನೇ ಜನ್ಮದಿನಾಚರಣೆ
  • 2026ರ ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ 20 ಮಂದಿ ಆಯ್ಕೆ
  • ಸತ್ಯ, ಅಹಿಂಸೆ ಕುರಿತು ಉಪನ್ಯಾಸ ಕಾರ್ಯಕ್ರಮ
  • ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮ
  • ಗೂಬೆಹಳ್ಳಿ ಗ್ರಾಮದಲ್ಲಿ ಆರ್ಥಿಕ ಸೇರ್ಪಡೆ ಕಾರ್ಯಕ್ರಮ
  • ಅಪ್ಪು ನಮ್ಮೊಂದಿಗೆ ಸದಾ ಅಜರಾಮರ: ಅಭಿಮಾನಿಗಳ ಭಾವಪೂರ್ಣ ನುಡಿ
  • ಪತ್ರಿಕೋದ್ಯಮದಲ್ಲಿ ಭಾಷಾಂತರ ಕೌಶಲ್ಯಕ್ಕೆ ಮಹತ್ವ
  • ದಸೂಡಿ ಪಂಚಾಯಿತಿ ಮುತ್ತಿಗೆ ಹಾಕಿದ ಗ್ರಾಮಸ್ಥರು
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮ
news

ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮ

ಇಂದಿರಾಗಾಂಧಿ ಬಡವರು, ದೀನ ದಲಿತರು, ಮಹಿಳೆಯರ ಪಾಲಿಗೆ ಆದರ್ಶ ಮಹಿಳೆ
By News Desk BenkiyabaleUpdated:October 31, 2026 5:42 pm

ತುಮಕೂರು: ದೇಶದಲ್ಲಿ ಸಮಾನತೆ ತರುವ ನಿಟ್ಟಿನಲ್ಲಿ ಬ್ಯಾಂಕ್, ಸಾರಿಗೆ ರಾಷ್ಟ್ರೀಕರಣದಂತಹ ಮಹತ್ವದ ಕಾರ್ಯ ಕೈಗೊಂಡ ಉಕ್ಕಿನ ಮಹಿಳೆ, ದೇಶದ ಮೊದಲ ಮಹಿಳಾ ಪ್ರಧಾನಿ ಇಂದಿರಾಗಾಂಧಿ,ಬಡವರು, ದೀನ ದಲಿತರು,ಮಹಿಳೆಯರ ಪಾಲಿಗೆ ಆದರ್ಶ ಮಹಿಳೆ ಎಂದು ಮಾಜಿ ಶಾಸಕ ಡಾ.ಎಸ್.ಷಪಿ ಅಹಮದ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಡಿಸಿಸಿ ಅಧ್ಯಕ್ಷ ಚಂದ್ರಶೇಖರಗೌಡ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು,ಇಂದಿರಾಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು,ಅವರು ಜಾರಿಗೆ ತಂದ 20 ಅಂಶಗಳ ಕಾರ್ಯಕ್ರಮ ಬಡವರ ಪಾಲಿಗೆ ವರದಾನವಾಗಿದ್ದವು.ಸಾಲಮೇಳದ ಮೂರು 50 ಸಾವಿರ ರೂಗಳವರೆಗೆ ಯಾವುದೇ ಆಧಾರವಿಲ್ಲದೆ ಸಾಲ ನೀಡುವ ಮೂಲಕ ಬಡವರಿಗೆ ನೆರವಾಗಿದ್ದರು ಎಂದರು.
ಇಂದಿರಾಗಾಂಧಿ ಅವರ ಕಾಲದ ಆಡಳಿತ ಎಷ್ಟು ಬಿಗಿಯಾಗಿತ್ತೆಂದರೆ,ಅಂದು ವಿರೋಧ ಪಕ್ಷದ ನಾಯಕರಾಗಿದ್ದ ಅಟಲ್‍ಬಿಹಾರಿ ವಾಜಪೇಯಿ ಅವರೇ,ಇಂದಿರಾಗಾಂಧಿ ಅವರನ್ನು ದುರ್ಗಿ ಎಂದು ಬಣ್ಣಿಸಿದ್ದರು.ಆಂತಹ ಆಡಳಿತ ನೀಡಿದ ಕಾಂಗ್ರೆಸ್ ಪಕ್ಷ ಕೆಲವು ಕಡೆಗಳಲ್ಲಿ ಸೊರಗಿದೆ.ತಳಮಟ್ಟದಿಂದ ಪಕ್ಷವನ್ನು ಕಟ್ಟಿ,ಪುನಶ್ಚೇತನ ನೀಡುವ ಅಗತ್ಯವಿದೆ.ಪಕ್ಷದ ಕೆಲಸವನ್ನು ನನ್ನ ಕೆಲಸವೆಂದು ತಿಳಿದು ಒಗ್ಗಟ್ಟಿನಿಂದ ಕೆಲಸ ಮಾಡುವ ನಾಯಕರುಗಳ ಮುಂದೆ ಬರಬೇಕಿದೆ.ಮುಂಬರುವ ದಿನಗಳಲ್ಲಿ ವಿವಿಧ ಚುನಾವಣೆಗಳು ನಡೆಯಲಿದ್ದು, ಕಾರ್ಯಕರ್ತರು, ಮುಖಂಡರು ಸಜ್ಜಾಗುವಂತೆ ಮಾಜಿ ಶಾಸಕರಾದ ಡಾ.ಎಸ್.ಷಪಿ ಅಹಮದ್ ಸಲಹೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಹೆಚ್.ಸಿ.ಹನುಮಂತಯ್ಯ ಮಾತನಾಡಿ,ಸರಕಾರ ನಮಗೆ ಯಾವುದೇ ಅಧಿಕಾರ ನೀಡಿಲ್ಲ ಎಂದು ಕೇಳುವ ಕಾರ್ಯಕರ್ತರು,ನಾವು ಎಷ್ಟು ಪರಿಣಾಮಕಾರಿಯಾಗಿ ಪಕ್ಷದ ಕಾರ್ಯಕ್ರಮಗಳನ್ನು ಮಾಡಿದ್ದೇವೆ ಎಂದು ಕೇಳಿ ಕೊಳ್ಳಬೇಕಿದೆ.26 ಜನ ಶಾಸಕರಿದ್ದರೂ ಬಿಜೆಪಿ ಅಭ್ಯರ್ಥಿಗೆ 23 ಸಾವಿರ ಲೀಡ್ ಬಂದಿದೆ. ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಕಾರ್ಯಕರ್ತರ ನೋವು ನಮಗೂ ಅರ್ಥವಾಗುತ್ತದೆ. ಆದರೆ ನಾವು ನಮ್ಮೊಬ್ಬರ ಹಿತ ನೋಡದೆ, ಪಕ್ಷವನ್ನು ಬಲಿಷ್ಠಗೊಳಿಸಬೇಕಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ನರಸಿಯಪ್ಪ ಮಾತನಾಡಿ,ಇಂದಿರಾಗಾಂಧಿ ಅವರು ಅಧಿಕಾರದಲ್ಲಿದ್ದಾಗ ಇದುವರೆಗೂ ಯಾವ ಪ್ರಧಾನಿಯೂ ಮಾಡದ ಕೆಲಸವನ್ನು ಜನಸಾಮಾನ್ಯರಿಗಾಗಿ ಮಾಡಿದ್ದಾರೆ.ಬರವಿದ್ದಾಗ ವಿದೇಶದಿಂದ ಕೆಂಪು ಜೋಳ,ಗೋಧಿ ನುಚ್ಚು ತಂದು ದೇಶದ ಜನರಿಗೆ ಮತ್ತು ಮಕ್ಕಳಿಗೆ ನೀಡಿ ಬಡವರನ್ನು ಬದುಕಿಸಿದರು.ಇಂದಿರಾಗಾಂಧಿ ಅವರ ಅಭಿವೃದ್ದಿಯ ಮುಂದೆ ಮೋದಿ ಅಭಿವೃದ್ದಿ ಶೂನ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಮಾತನಾಡಿ,ಭಾರತದ ಸಂವಿಧಾನ ಮತ್ತು ಭಾರತದ ಕಾನೂನುಗಳನ್ನು ಒಪ್ಪದೆ, ಭಾರತ ವಿರೋಧಿ ನೀತಿ ತಳದ ವ್ಯಕ್ತಿಗಳನ್ನು ಅಡಗಿದ್ದ ಅಮೃತಸರದ ಸ್ವರ್ಣ ಮಂದಿರಕ್ಕೆ ಭಾರತೀಯ ಸೇನೆಯನ್ನು ನುಗ್ಗಿಸಿ, ಉಗ್ರರರನ್ನು ಸದ ಬಡಿದು, ದೇಶದ ಐಕ್ಯತೆ ಮತ್ತು ಸಮಗ್ರತೆಯನ್ನು ಕಾಪಾಡಿದ ಇಂದಿರಾಗಾಂಧಿ ನಿಜಕ್ಕೂ ಉಕ್ಕಿನ ಮಹಿಳೆಯೇ?,ವಿದೇಶವೊಂದು ದೇಶದ ಗಡಿ ದಾಟಿ ಮನೆ ನಿರ್ಮಿಸಿದರೂ ಮಾತನಾಡದ ಪ್ರಧಾನಿ ಎಷ್ಟು ಇಂಚಿನ ಎದೆ ಇದ್ದರೆ ಏನು ಪ್ರಯೋಜನ. ಯುದ್ದದ ಗೆಲುವನ್ನು,ಜನರಿಗೆ ಕಂಟಕವಾಗಿದ್ದ ರೋಗಗಳ ವಿರುದ್ದ ಲಸಿಕೆ ಹಾಕಿಸಿದ್ದನ್ನು ಎಂದಿಗೂ ಪ್ರಚಾರಕ್ಕಾಗಿ ಬಳಸಿಕೊಂಡವರಲ್ಲ.ಇದು ನಿಜವಾದ ದೇಶ ಪ್ರೇಮ ಎಂದರು.
ಆಗ್ನೇಯ ಪದವಿಧರರ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ 26 ಜನ ಶಾಸಕರಿದ್ದರೂ ನಮ್ಮ ಅಭ್ಯರ್ಥಿ ಸೋಲು ಕಂಡಿದ್ದಾರೆ. ನಿಜಕ್ಕೂ ಇದು ಬೇಸರದ ಸಂಗತಿ. ನಮ್ಮದೇ ಸರಕಾರವಿದ್ದರೂ ಕಾರ್ಯಕರ್ತರಿಗೆ ಅಧಿಕಾರ ಸಿಕ್ಕಿಲ್ಲ ಎಂಬ ಹತಾಶೆ, ಆಕ್ರೋಶ ಕೂಡ ಸೋಲಿಗೆ ಒಂದು ಕಾರಣವಾಗಿದೆ. ನಮ್ಮ ಮುಂದೆ ಸಾಲು ಸಾಲು ಚುನಾವಣೆಗಳಿವೆ. ಪಕ್ಷದ ಮುಖಂಡರುಗಳು ಎಚ್ಚೆತ್ತುಕೊಳ್ಳದಿದ್ದರೆ, ಇದೇ ಫಲಿತಾಂಶ ರಿಪೀಟ್ ಆಗುವ ಸಾಧ್ಯತೆ ಇದೆ. ಹಾಗಾಗಿ ಪಕ್ಷದ ಹಿರಿಯರು ಅರ್ಥ ಮಾಡಿಕೊಂಡು, ಅರ್ಹರಿಗೆ ಪಕ್ಷದಲ್ಲಿ ಮತ್ತು ಸರಕಾರದ ನಿಗಮ ಮಂಡಳಿಗಳಲ್ಲಿ ಅವಕಾಶ ಕಲ್ಪಿಸಬೇಕು ಎಂದು ಚಂದ್ರಶೇಖರಗೌಡ ನುಡಿದರು.
ಮುಖಂಡರಾದ ಸುಜಾತ, ಕುಮಾರಸ್ವಾಮಿ, ಶಿವಾಜಿ,ಬೈಲಸ್ವಾಮಿ ಸೇರಿದಂತೆ ಹಲವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಮುಖಂಡರಾದ ಸುಜಾತ, ಕುಮಾರಸ್ವಾಮಿ, ಶಿವಾಜಿ, ಬೈಲಸ್ವಾಮಿ ಸೇರಿದಂತೆ ಹಲವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಫೈಯಾಜ್, ಮಹೇಶ್, ವಿವಿಧ ಘಟಕಗಳ ಅಧ್ಯಕ್ಷರಾದ ಇರ್ಫಾನ್ ಅಹಮದ್, ಕೆಂಪಣ್ಣ, ವಿಜಯಲಕ್ಷ್ಮಿ, ಲಕ್ಷ್ಮಿದೇವಮ್ಮ, ನಟರಾಜಶೆಟ್ಟಿ, ಆದಿಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

(Visited 1 times, 1 visits today)
Congress dcm dr.g.parameshwar karnataka local news tumakur tumkur ತುಮಕೂರು:
Previous Articleಗೂಬೆಹಳ್ಳಿ ಗ್ರಾಮದಲ್ಲಿ ಆರ್ಥಿಕ ಸೇರ್ಪಡೆ ಕಾರ್ಯಕ್ರಮ
Next Article ಸತ್ಯ, ಅಹಿಂಸೆ ಕುರಿತು ಉಪನ್ಯಾಸ ಕಾರ್ಯಕ್ರಮ
News Desk Benkiyabale

Related Posts

ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ 151ನೇ ಜನ್ಮದಿನಾಚರಣೆ

October 31, 2026 5:46 pm news

2026ರ ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ 20 ಮಂದಿ ಆಯ್ಕೆ

October 31, 2026 5:44 pm news

ಸತ್ಯ, ಅಹಿಂಸೆ ಕುರಿತು ಉಪನ್ಯಾಸ ಕಾರ್ಯಕ್ರಮ

October 31, 2026 5:43 pm news
ತಾಜಾ ಸುದ್ಧಿಗಳು
news

ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ 151ನೇ ಜನ್ಮದಿನಾಚರಣೆ

October 31, 2026 5:46 pm
news

2026ರ ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ 20 ಮಂದಿ ಆಯ್ಕೆ

October 31, 2026 5:44 pm
news

ಸತ್ಯ, ಅಹಿಂಸೆ ಕುರಿತು ಉಪನ್ಯಾಸ ಕಾರ್ಯಕ್ರಮ

October 31, 2026 5:43 pm
news

ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮ

October 31, 2026 5:42 pm
news

ಗೂಬೆಹಳ್ಳಿ ಗ್ರಾಮದಲ್ಲಿ ಆರ್ಥಿಕ ಸೇರ್ಪಡೆ ಕಾರ್ಯಕ್ರಮ

October 30, 2026 5:44 pm
news

ಅಪ್ಪು ನಮ್ಮೊಂದಿಗೆ ಸದಾ ಅಜರಾಮರ: ಅಭಿಮಾನಿಗಳ ಭಾವಪೂರ್ಣ ನುಡಿ

October 30, 2026 5:43 pm
Our Youtube Channel
Our Picks

ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ 151ನೇ ಜನ್ಮದಿನಾಚರಣೆ

October 31, 2026 5:46 pm

2026ರ ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ 20 ಮಂದಿ ಆಯ್ಕೆ

October 31, 2026 5:44 pm

ಸತ್ಯ, ಅಹಿಂಸೆ ಕುರಿತು ಉಪನ್ಯಾಸ ಕಾರ್ಯಕ್ರಮ

October 31, 2026 5:43 pm

ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮ

October 31, 2026 5:42 pm

ಗೂಬೆಹಳ್ಳಿ ಗ್ರಾಮದಲ್ಲಿ ಆರ್ಥಿಕ ಸೇರ್ಪಡೆ ಕಾರ್ಯಕ್ರಮ

October 30, 2026 5:44 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ 151ನೇ ಜನ್ಮದಿನಾಚರಣೆ

By News Desk BenkiyabaleOctober 31, 2026 5:46 pm

ಪಾವಗಡ: ದೇಶದ ಏಕತೆ, ಸಮಗ್ರತೆ ಮತ್ತು ಭದ್ರತೆಯ ಸಂಕೇತವಾಗಿರುವ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ 151ನೇ ಜನ್ಮದಿನಾಚರಣೆಯ…

2026ರ ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ 20 ಮಂದಿ ಆಯ್ಕೆ

October 31, 2026 5:44 pm

ಸತ್ಯ, ಅಹಿಂಸೆ ಕುರಿತು ಉಪನ್ಯಾಸ ಕಾರ್ಯಕ್ರಮ

October 31, 2026 5:43 pm

ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮ

October 31, 2026 5:42 pm
News by Date
October 2026
M T W T F S S
 1234
567891011
12131415161718
19202122232425
262728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.