ಹುಳಿಯಾರು: ಸಾದಾರಣ ಮಳೆ ಬಂದರೂ ಸಾಕು ಹುಳಿಯಾರಿನ ವಾಲ್ಮೀಕಿ ಸರ್ಕಲ್‌ನಲ್ಲಿನ ರಾಷ್ಟಿçÃಯ ಹೆದ್ದಾರಿಯಲ್ಲಿ ನೀರು ನಿಂತು ಕೆರೆಯಂತಾಗುತ್ತದೆ. ಭಾರಿ ಮಳೆ ಬಂದರೆ ಮಳೆ ನೀರಿನ ಜೊತೆಗೆ ಚರಂಡಿಯ ಕೊಳಚೆ ನೀರು ಹೆದ್ದಾರಿ ಪಕ್ಕದ ಮನೆ, ಅಂಗಡಿಳಿಗೆ ನುಗ್ಗುತ್ತದೆ. ಈ ಸಮಸ್ಯೆ ಕಳೆದ ಐದಾರು ವರ್ಷಗಳಿಂದ ಇದ್ದರೂ ಸಹ ಯಾರೊಬ್ಬರೂ ಸ್ಪಂದಿಸದಿರುವುದು ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.
ಮಂಗಳೂರುನಿAದ ವಿಶಾಖಪಟ್ಟಣ ರಾಷ್ಟಿçÃಯ ಹೆದ್ದಾರಿ ೬೯ ರ ಕಾಮಗಾರಿ ಅವೈಜ್ಞಾನಿಕವಾಗಿದ್ದು ಸಮರ್ಪಕವಾಗಿ ಚರಂಡಿ ನೀರು ಹರಿಯುವುದಿಲ್ಲ. ರಸ್ತೆ ಮೇಲೆ ಬಿದ್ದ ಮಳೆಯ ನೀರು ಸರಾಗವಾಗಿ ಹರಿದು ಚರಂಡಿ ಪಾಲಾಗದೆ ರಸ್ತೆಯಲೇ ನಿಲ್ಲುತ್ತದೆ. ಇದು ಅನೇಕ ಅವಘಡಗಳಿಗೆ ಕಾರಣವಾಗಿ ಸ್ಥಳೀಯರು ಪ್ರತಿಭಟನೆ ಮಾಡಿದರೂ ಸಹ ಇಲ್ಲಿಯವರೆವಿಗೆ ಯಾರೊಬ್ಬರೂ ಸ್ಪಂಧಿಸಿಲ್ಲ.
ಪರಿಣಾಮ ಕಳೆದೈದಾರು ವರ್ಷಗಳಿಂದ ಪ್ರತಿ ಬಾರಿ ಮಳೆ ಬಂದಾಗಲೂ ಇಲ್ಲಿನ ಪರಿಸ್ಥಿತಿ ನೀರು ನಿಂತು ಸಂಚಾರಕ್ಕೆ ಕಿರಿಕಿರಿಯೊಡ್ಡುವುದೇ ಆಗಿದೆ. ಅಲ್ಲದೆ ಭಾರಿ ಮಳೆ ಬಂದಾಗ ಹೈವೆ ಪಕ್ಕದಲ್ಲಿರುವ ಮನೆ ಹಾಗೂ ಅಂಗಡಿ ಮಳಿಗೆಗಳಿಗೆ ಮಳೆಯ ನೀರಿನ ಜೊತೆಗೆ ಚರಂಡಿ ತ್ಯಾಜ್ಯ ಸಹ ನುಗ್ಗುತ್ತದೆ. ಹೈವೆ ಅಧಿಕಾರಿಗಳಿಗೆ, ಪಂಚಾಯ್ತಿಗೆ ಹಿಡಿ ಶಾಪ ಹಾಕಿ ಕೊಳಚೆ ನೀರು ಎತ್ತಾಕುತ್ತಿದ್ದಾರೆ. ಮಳೆ ಬಂದಾಗಲೆಲ್ಲಾ ಇದೇ ಸಮಸ್ಯೆಯಾಗಿದ್ದು ಸಂಬAಧ ಪಟ್ಟ ಇಲಾಖೆ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕಳೆದ ಮರ‍್ನಲ್ಕು ತಿಂಗಳ ಹಿಂದಷ್ಟೆ ಕೇಂದ್ರ ಸರ್ಕಾರದ ರಾಜ್ಯ ಸಚಿವ ವಿ.ಸೋಮಣ್ಣ ಅವರು ಶಾಸಕ ಸಿ.ಬಿ.ಸುರೇಶ್ ಬಾಬು ಅವರೊಂದಿಗೆ ಖುದ್ದು ಸಮಸ್ಯೆ ವೀಕ್ಷಿಸಿ ಇನ್ನೊಂದು ವಾರದಲ್ಲಿ ಸಮಸ್ಯೆ ಪರಿಹರಿಸುವಂತೆ ಹೈವೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಆದರೆ ಇದೂವರೆವಿಗೂ ಯಾವ ಬದಲಾವಣೆಯೂ ಕಾಣಲಿಲ್ಲ. ಪರಿಣಾಮ ಗುರುವಾರ ರಾತ್ರಿ ಸುರಿದ ಬಾರಿ ಮಳೆಗೆ ಚರಂಡಿಯ ಕೊಳಚೆ ನೀರು ಮನೆ, ಅಂಗಡಿಗಳಿಗೆ ನುಗ್ಗಿ ಭಾರಿ ನಷ್ಟದ ಜೊತೆಗೆ ಸಾಂಕ್ರಾಮಿಕ ರೋಗ ಹರಡುವ ಆತಂಕ ಸೃಷ್ಠಿಸಿದೆ.
ಈ ಸಮಸ್ಯೆಗೆ ಚರಂಡಿ ನೀರು ಸರಾಗವಾಗಿ ಹರಿಯುವಂತೆ ಕಾಮಗಾರಿ ಮಾಡದಿರುವುದು ಮುಖ್ಯವಾಗಿದೆ. ಅಲ್ಲದೆ ಹೈವೆ ಚರಂಡಿಗೆ ಹೈವೆ ಪಕ್ಕದಲ್ಲಿರುವ ಮನೆಯವರು ಬಾತ್‌ರೂಂ ಜೊತೆಗೆ ಟಾಯ್ಲೇಟ್ ಸಂಪರ್ಕ ಕೊಟ್ಟಿರುವುದು, ಅಂಗಡಿ ಹೋಟೆಲ್‌ನವರು ಟೀ ಲೋಟ, ಪ್ಲಾಸ್ಟಿಕ್ ಬಾಟಲ್ ಸೇರಿದಂತೆ ತ್ಯಾಜ್ಯವನ್ನು ಹಾಕುತ್ತಿದ್ದಾರೆ. ಇದು ಸರಗವಾಗಿ ನೀರು ಹರಿದು ಹೋಗದಂತೆ ತಡೆದು ಪೂರ್ಣವಾಗಿ ಕಟ್ಟಿಕೊಂಡಿದ್ದು ಮಳೆ ಬಂದಾಗ ಎಲ್ಲೆಂದರಲ್ಲಿ ಓಪನ್ ಆಗಿ ಮನೆ, ಅಂಗಡಿ ಮಳಿಗೆಗಳಿಗೆ ನುಗ್ಗುತ್ತದೆ.
ಪರಿಣಾಮ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಹೈವೆ ಪಕ್ಕದ ಅಂಗಡಿಯವರಿಗೆ ದುರ್ನಾತದ ಜೊತೆಗೆ ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಕಾಲಕಳೆಯುವಂತಾಗಿದೆ. ಇನ್ನಾದರೂ ಹುಳಿಯಾರಿನಲ್ಲಿ ಹಾದು ಹೋಗುವ ರಾಷ್ಟಿçÃಯ ಹೆದ್ದಾರಿ ಪಕ್ಕದಲ್ಲಿರುವ ಎರಡೂ ಬದಿಯ ಚರಂಡಿಯನ್ನು ಸ್ವಚ್ಚಗೊಳಿಸುವ ಜೊತೆಗೆ ಟೀ ಅಂಗಡಿ, ಹೋಟೆಲ್‌ನವರು ತ್ಯಾಜ್ಯ ಹಾಕುವುದನ್ನು ತಪ್ಪಿಸಿ ನೀರು ನಿತ್ಯ ಸರಾಗವಾಗಿ ಹರಿಯುವಂತೆ ಮಾಡಬೇಕಿದೆ.
(Visited 1 times, 1 visits today)