
ಮಧುಗಿರಿ: ಶಿಕ್ಷಣ ಕ್ಷೇತ್ರವೂ ಇಂದು ಉದ್ಯಮ ಕ್ಷೇತ್ರವಾಗುತ್ತಿದ್ದು ಶಿಕ್ಷಣ ತಜ್ಞರ ಜಾಗವನ್ನು ಶಿಕ್ಷಣೋದ್ಯಮಿಗಳು ಅಕ್ರಮಿಸಿಕೊಂಡು ವ್ಯಾಪಾರ ಕ್ಷೇತ್ರವಾಗಿ ಶಿಕ್ಷಣದ ಸಂವೇದನೆ ಲಕ್ಷಣಗಳು ಗಣನೀಯವಾಗಿ ಕೆಳಹಂತಕ್ಕೆ ಇಳಿಯಲ್ಪಿಟ್ಟಿರುವುದು ಅಘಾತಕಾರಿ ಸಂಗತಿ ಎಂದು ಹಿರಿಯ ಸಾಹಿತಿ ನಾಡೋಜ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯದಲ್ಲಿ ನಮ್ಮ ಕನ್ನಡಿಗರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಉದ್ಯೋಗ ಸಿಗಬೇಕಾದರೆ ಕನ್ನಡ ಭಾಷೆಯನ್ನೇ ಮುಖ್ಯವಾಗಿಸಿ ಉದ್ಯೋಗ ದೊರಕುವಂತೆ ಮಾಡುವ ಕೆಲಸವಾಗಬೇಕು ಕನ್ನಡ ದಿಂದ ಬದುಕು ಕಟ್ಟಿಕೊಳ್ಳಬಹುದೆಂಬ ದೃಢವಾದ ವಿಶ್ವಾಸವನ್ನ ಸರ್ಕಾರಗಳು ಕೈಗೆತ್ತಿಕೊಂಡು ಕನ್ನಡಿಗರಿಗೆ ನಂಬಿಕೆಯ ಶಕ್ತಿ ತುಂಬುವ ಅಗತ್ಯವಿದೆ,ನವೆಂಬರ್ ಕನ್ನಡ ನಾಯಕರು ನಮ್ಮಲ್ಲಿ ಹೆಚ್ಚಾಗುತ್ತಿದ್ದಾರೆ ನಮ್ಮ ಉಸಿರು ಇರುವವರೆಗೂ ಕನ್ನಡಕ್ಕಾಗಿ ದಿನನಿತ್ಯದ ನಾಯಕರಾಗಬೇಕು,ನಾಡಿನ ಜನಸಾಮಾನ್ಯರು ಕನ್ನಡ ಭಾಷೆಯನ್ನು ಬಳಸುತ್ತ ಉಳಿಸುತ್ತ ಬಂದಿದ್ದಾರೆ ಅವರಿಂದಲೇ ನಾಡು ನುಡಿ ಗಟ್ಟಿಯಾಗಿರುವುದು,ಕನ್ನಡ ಭಾಷೆಯ ಸಂವೇದನೆಯಲ್ಲಿ ಸಮಾನತೆ, ಸೌಹಾರ್ದತೆ,ಜಾತ್ಯಾತೀತತೆ ಎಲ್ಲವೂ ಇದೆ,
ಸಾಂಸ್ಕೃತಿಕ ಸ್ಪರ್ಧೆಗಳಿಂದ ವಿದ್ಯಾರ್ಥಿಗಳಲ್ಲಿ ಅಡಗಿರುವ ಕಲೆಯನ್ನು ಹೊರಹಮ್ಮಿಸಲು ಸಾಧ್ಯ. ಪ್ರಾಧ್ಯಾಪಕರು ವಿದ್ಯಾರ್ಥಿ ಗಳಲ್ಲಿ ಆತ್ಮವಿಶ್ವಾಸ ತುಂಬಬೇಕಿದೆ. ಶಿಕ್ಷಣದಿಂದ ಮಾತ್ರ ಮನ್ನಣೆ, ಗೌರವ ಸಿಗುತ್ತದೆ.ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರಲ್ಲಿ ಜಾತ್ಯತೀ ತವಾದ ಸಂಬ0ಧ ಇರಬೇಕಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಅತಿಯಾದ ತಂತ್ರಜ್ಞಾನ ಬಳಕೆ ಅಪಾಯಕಾರಿ, ತಂತ್ರಜ್ಞಾನವನ್ನು ಪೂರಕವಾಗಿ ಬಳಸಿಕೊಳ್ಳಬೇಕು ಮತ್ತು ಮಕ್ಕಳಲ್ಲಿ ಜಾತ್ಯತೀತ ಸಮಾನತೆ ಬೆಳೆಸಬೇಕು.
ಕಲೆಗೆ ಜನರನ್ನು ಒಂದುಗೂಡಿಸುವ ಶಕ್ತಿ ಇದೆ ಸಾಂಸ್ಕೃತಿಕ ಅರಿವು ಪ್ರತಿಯೊಬ್ಬರಲ್ಲೂ ಬರಬೇಕಾಗಿದೆ. ಸಾಂಸ್ಕೃತಿಕ ಮತ್ತು ಇತಿಹಾಸದ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಇಂದು ಜಾತಿ, ಧರ್ಮ, ಸಂಸ್ಕೃತಿ ಹೆಸರಿನಲ್ಲಿ ವಿಷ ಸರ್ಪಗಳು ಹೆಚ್ಚಾಗುತ್ತಿವೆ ಎಂದರು.
ಸಾಹಿತಿ,ಕವಿ ಹಾಗೂ ಸಂಶೋಧಕ ಡಾ. ವಡ್ಡಗೆರೆ ನಾಗರಾಜಯ್ಯ ಮಾತನಾಡಿ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಜೀವ ಕಾಣಬಹುದು ಮತ್ತು ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ. ಶಿಕ್ಷಣದಿಂದ ಮಾತ್ರ ಸಾಮಾಜಿಕ ನ್ಯಾಯ ದೊರಕಿಸಲು ಸಾಧ್ಯ ನಾನು ಪ್ರಾ ಥಮಿಕ ಶಿಕ್ಷಣ ಪಡೆಯುವಾಗ ಪೇಲಾಗಿ ಪೇಲಾಗಿ ಬಂದ ವಿದ್ಯಾರ್ಥಿ ಇಂದು ಏಳು ವಿಶ್ವವಿದ್ಯಾಲಯಗಳಲ್ಲಿ ನಾನು ಬರೆದ ಪುಸ್ತಕಗಳು ಪಠ್ಯ ಪುಸ್ತಕಗಳಾಗಿರುವುದು ಶಿಕ್ಷಣಕ್ಕೆ ಇರುವ ಶಕ್ತಿಯನ್ನು ತೋರಿಸುತ್ತದೆ ವಿದ್ಯಾರ್ಥಿಗಳು ಶಿಕ್ಷಣದ ಸಮಯದಲ್ಲಿ ಶ್ರದ್ಧೆ ಮತ್ತು ಅಸಕ್ತಿಯಿಂದ ಅಭ್ಯಾಸ ಮಾಡಿದರೆ ಉನ್ನತ ಸ್ಥಾನಗಳನ್ನು ಅಲಂಕರಿಸಿ ನಿಮ್ಮ ಶಿಕ್ಷಕರಿಗೂ, ಹೆತ್ತವರಿಗೂ ನಿಮ್ಮ ಊರಿಗೂ ಕೀರ್ತಿಯನ್ನು ತರುವುದರಲ್ಲಿ ಸಂಶಯವಿಲ್ಲ ಇತರಹ ಸಾಧನೆ ಮಾಡಲು ಕಠಿಣವಾದ ಶ್ರಮ ಅಗತ್ಯವಿರುತ್ತದೆ ಎಂದರು.
ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಡಾ. ಬಾಲ ಗುರುಮೂರ್ತಿ ಮಾತನಾಡಿ ಪದವಿ ಪೂರ್ವ ಶಿಕ್ಷಣ ಜೀವನವನ್ನು ನಿರ್ಧರಿಸುತ್ತದೆ ಮತ್ತು ನಿಜವಾದ ಜೀವನ ಪ್ರಾರಂಭ ವಾಗುವುದು ಇಲ್ಲಿಂದ. ಉತ್ತಮ ಶಿಕ್ಷಕರು ಪ್ರತಿಯೊಬ್ಬರ ಹೃದ ಯದಲ್ಲಿ ಇರುತ್ತಾರೆ. ಪದವಿ ಪೂರ್ವ ಶಿಕ್ಷಣದಿಂದ ಹೊಸ ಬದಲಾವಣೆ ಕಾಣಬಹುದು ಎಂದು ತಿಳಿಸಿದರು.
ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ನೇರಂ ನಾಗರಾಜು ಮಾತನಾಡಿ ಪಿಯುಸಿ ವಿದ್ಯಾರ್ಥಿಗಳ ಒತ್ತಡದ ಕೆಲಸದಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳು ಅತ್ಯವಶ್ಯಕ. ವಿದ್ಯಾರ್ಥಿಗಳು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ತಿಳಿಸಿದರು.
ಸಮಾರಂಭದಲ್ಲಿ ಜಿಲ್ಲಾ ಪ್ರಾಂಶುಪಾಲರ ಸಂಘದ ನಿಕಟ ಪೂರ್ವ ಅಧ್ಯಕ್ಷ ಪ್ರಭಾಕರ ರೆಡ್ಡಿ, ರಾಜ್ಯ ಪ್ರತಿನಿಧಿ ಚಂದ್ರಯ್ಯ ಬೆಳವಾಡಿ, ಜಿಲ್ಲಾ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ರಂಗಪ್ಪ, ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಮಹಾಲಿಂಗೇಶ್, ಜಿಲ್ಲಾ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಸಂಘದ ಅಧ್ಯಕ್ಷ ಪರಮೇಶ್ವರಪ್ಪ, ಪ್ರಾಂಶುಪಾಲರಾದ ವೇದಮೂರ್ತಿ, ಕೃಷ್ಣಮೂರ್ತಿ, ಎಂ ಕೆ ಲತಾ, ಶಂಭುಲಿ0ಗೇಶ್, ಈಶ್ವರಯ್ಯ, ಲಕ್ಷ್ಮಿ ಭಟ್ ಹಾಗೂ ಕಾಲೇಜು ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.





