BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಗ್ರಾಮೀಣ ಪತ್ರಕರ್ತರಿಗೆ ಆಶ್ರಯ ನಿವೇಶನದ ಭರವಸೆ
  • ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣಾರ್ಪಣೆ ಮಾಡಿದ ವೀರರನ್ನು ಸ್ಮರಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ: ಬಿ.ಕೆ.ಸಪ್ತಶ್ರೀ ಹೇಳಿಕೆ
  • ಸಂವಿಧಾನದ ಆಶಯಗಳನ್ನು ಬದಿಗೊತ್ತಿ ಕೇಂದ್ರ ಸರ್ಕಾರ ತಾರತಮ್ಯ ಧೋರಣೆ ಅನುಸರಿಸುತ್ತಿದೆ: ಶಾಸಕ ವೆಂಕಟೇಶ್
  • ಕಾಸ್ಮೋಪಾಲಿಟನ್ ಕ್ಲಬ್‌ವತಿಯಿಂದ ನಿವೃತ್ತ ಯೋಧರಿಗೆ ಸನ್ಮಾನ
  • ಕೇಂದ್ರದ ವಿಳಂಬ ನೀತಿಗೆ ಪ್ರತಿಭಟನೆ ಅನಿವಾರ್ಯ
  • ತೆಂಗು ಬೆಳೆ: ಜಾಗೃತಿ ಮೂಡಿಸುವ ಕಾರ್ಯಕ್ರಮದ ವಾಹನಕ್ಕೆ ಶಾಸಕರಿಂದ ಹಸಿರು ನಿಶಾನೆ
  • ಡಾ.ಶಿವಕುಮಾರ ಶ್ರೀಗಳ ಪುಣ್ಯಸಂಸ್ಮರಣೆ: ದಾಸೋಹದಿನ ಆಚರಣೆ
  • ರೇಷ್ಮೆ ಕೃಷಿ ಬೆಳಗಾರರ ಗುಂಪು ಸಭೆ ಕಾರ್ಯಕ್ರಮ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಸಾಮಂತ ರಾಜ್ಯಗಳನ್ನು ಸಾಮ್ರಾಟರಂತೆ ವೈಭವೀಕರಿಸುವುದು ಸಲ್ಲದು. – ಡಾ. ಚನ್ನಸ್ವಾಮಿ ಸೋಸಲೆ
ತುಮಕೂರು

ಸಾಮಂತ ರಾಜ್ಯಗಳನ್ನು ಸಾಮ್ರಾಟರಂತೆ ವೈಭವೀಕರಿಸುವುದು ಸಲ್ಲದು. – ಡಾ. ಚನ್ನಸ್ವಾಮಿ ಸೋಸಲೆ

By News Desk BenkiyabaleUpdated:June 07, 2025 3:52 pm
ತುಮಕೂರು: ಇತಿಹಾಸ ಕಾಲಘಟ್ಟದಲ್ಲಿ ಸಾಮಂತರಾಗಿ ಸ್ಥಳೀಯವಾಗಿ ಆಳ್ವಿಕೆ ಮಾಸುತ್ತಿದ್ದ ನಾಡಪ್ರಭುಗಳನ್ನು ಪ್ರಬಲ ಸಮುದಾಯದವರು ಇತ್ತೀಚಿನ ದಿನಗಳಲ್ಲಿ ಅವರನ್ನು ಸಾಮ್ರಾಟರಾಜರಂತೆ ವೈಭವೀಕರಿಸುತ್ತಿರುವುದು ಇತಿಹಾಸಕ್ಕೆ ಮಾಡುತ್ತಿರುವ ಅಪಚಾರ ಈ ಪ್ರವೃತ್ತಿ ಎಲ್ಲಾ ಸಮುದಾಯಗಳಲ್ಲಿ ಹೆಚ್ಚಾಗುತ್ತಿರುವುದು ವಿಷಾದನೀಯ ಸಂಗತಿ ಎಂದು ಕನ್ನಡ ವಿ.ವಿ.ಯ ಇತಿಹಾಸ ಪ್ರಾಧ್ಯಾಪಕ ಡಾ. ಚನ್ನಸ್ವಾಮಿ ಸೋಸಲೆ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಬೆಂಗಳೂರಿನ ಸುಹಾಸ್‌ಗ್ರಾಫಿಕ್ಸ್ ಪ್ರಕಟಿಸಿರುವ ಡಾ. ಡಿ.ಎನ್.ಯೋಗೀಶ್ವರಪ್ಪನವರು ಸಂಶೋಧಿಸಿ ರಚಿಸಿರುವ ಕಲ್ಪಹಾಸ ಕೃತಿಯನ್ನು ಶ್ರೀ ಸಿದ್ಧಗಂಗಾ ಕಾಲೇಜಿನ ಡಾ. ಶ್ರೀ ಶ್ರೀ ಶಿವಕುಮಾರಸ್ವಾಮೀಜಿ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ಬಿಡುಗಡೆಯಾದ ಕೃತಿಯನ್ನು ಕುರಿತು ಮಾತನಾಡಿದರು.
ಒಂದು ಜಿಲ್ಲೆಗೆ ಸೀಮಿತವಾದಂತಹ ಸಮಗ್ರ ಇತಿಹಾಸವನ್ನು ಕಟ್ಟಿಕೊಡುವುದು ಸುಲಭದ ಮಾತಲ್ಲ. ಇಂತಹ ಇತಿಹಾಸ ರಚನೆಯಲ್ಲಿ ಡಾ. ಡಿ.ಎನ್.ಯೋಗೀಶ್ವರಪ್ಪನವರು ಸವಾಲಾಗಿ ಸ್ವೀಕರಿಸಿ ಮೌಖಿಕ ಮತ್ತು ಚಾರಿತ್ರಿಕ ದಾಖಲೆಗಳನ್ನು ಸಮಚಿತ್ತದಿಂದ ಪೂರ್ವಾಗ್ರಹವಿಲ್ಲದೆ ಅಧ್ಯಯನಮಾಡಿ ಪರಾಮರ್ಶಿಸಿ ಕಲ್ಪಹಾಸ ಕೃತಿಯನ್ನು ರಚಿಸಿದ್ದಾರೆ. ಈ ಜಿಲ್ಲೆಯ ೧೮೦೦ ವರ್ಷಗಳ ಇತಿಹಾಸವನ್ನು ಒಳಗೊಂಡಿರುವ ಈ ಕೃತಿ ಈ ಜಿಲ್ಲೆಯ ಇತಿಹಾಸಕ್ಕೆ ಕೊಟ್ಟ ಅಪೂರ್ವ ಕೊಡುಗೆಯಾಗಿದೆ. ಜಿಲ್ಲೆಯ ಚರಿತ್ರೆಯ ಬರಹಗಾರಿಗೆ ಇದೊಂದು ಮಾದರಿ ಕೃತಿಯಾಗಿ ಹೊರಹೊಮ್ಮಿದೆ ಎಂದರು.
ಕಲ್ಪಹಾಸ ಸಂಪುಟ-೦೧ ಕೃತಿಯನ್ನು ಬಿಡುಗಡೆಮಾಡಿ ಮಾತನಾಡಿದ ನಾಡಿನ ಹೆಸರಾಂತ ಸಂಶೋಧಕರೂ ಶಾಸನ ತಜ್ಞರಾದ ಡಾ. ದೇವರಕೊಂಡಾರೆಡ್ಡಿಯವರು ಮಾತನಾಡಿ ಸ್ಥಳೀಯ ಚರಿತ್ರೆಯ ರಚನೆಗೆ ಆಕರಗಳ ಕೊರತೆ ಇದ್ದರೂ ಈ ಕೃತಿಯ ಲೇಖಕರು ಬಹಳ ಶ್ರಮವಹಿಸಿ ಕ್ಷೇತ್ರಕರ‍್ಯದ ಮೂಲಕ ಹಲವಾರು ವಿಧದ ಮಾಹಿತಿಗಳನ್ನು ಸಂಗ್ರಹಿಸಿ ತುಲನಾತ್ಮಕ ಅಧ್ಯಯನಮಾಡಿ ಇತಿಹಾಸದ ಸತ್ಯ ಸಂಗತಿಗಳಿಗೆ ಲೋಪವಾಗದಂತೆ ಈ ಜಿಲ್ಲೆಯ ಇತಿಹಾಸವನ್ನು ರಚಿಸಿದ್ದಾರೆ. ಇಂತಹ ಪಠ್ಯಕ್ರಮಗಳನ್ನು ಈ ಜಿಲ್ಲೆಯ ವಿಶ್ವವಿದ್ಯಾನಿಲಯ ಪದವಿ ತರಗತಿಗಳಿಗೆ ಅಳವಡಿಸಿದರೆ ಜಿಲ್ಲೆಯ ಇತಿಹಾಸವನ್ನು ವಿದ್ಯಾರ್ಥಿಗಳಿಗೆ ತಲುಪಿಸುವುದರ ಮೂಲಕ ಹೆಚ್ಚಿನ ಸಂಶೋಧನೆಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದರು.
ರಾಜಕೀಯ ಇತಿಹಾಸವೇ ಇಂದಿನ ಪಠ್ಯಕ್ರಮಗಳಲ್ಲಿ ವಿಜೃಂಭಿಸಿತ್ತಿದೆ. ಇಂದು ಜನರ ಬದುಕಿಗೆ ಹತ್ತಿರವಾಗಿರುವ ಸಾಂಸ್ಕೃತಿಕ ಇತಿಹಾಸದ ಅಧ್ಯಯನವನ್ನು ಮಾಡಬೇಕಿದೆ. ಈ ಕೃತಿಯಲ್ಲಿ ಎರಡೂ ಕ್ಷೇತ್ರಗಳಿಗೆ ಆದ್ಯತೆ ನೀಡಿರುವುದು ಪ್ರಶಂಸನೀಯವಾಗಿದೆ ಎಂದರಲ್ಲದೆ ಈ ಕೃತಿಯ ಮುಂದುವರಿದ ಭಾಗ ಕ್ರಿ.ಶ. ೧೮೦೦ ರಿಂದ ೨೦೦೦ ವರೆಗಿನ ಇತಿಹಾಸವನ್ನು ಅವರು ಶೀಘ್ರವಾಗಿ ರಚಿಸಲಿ ಎಂದು ಆಶಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಂಗಳೂರು ವಿ.ವಿ. ಚರಿತ್ರೆ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಅಶ್ವತ್ಥನಾರಾಯಣ ಮಾತನಾಡಿ ಗತಕಾಲದ ಸಂಗತಿಗಳೇ ಇತಿಹಾಸವಲ್ಲ. ಆ ಸಂಗತಿಗಳನ್ನು ಅಂತರAಗದ ಒಳಗಣ್ಣುಗಳಿಂದ ನೋಡಿ ನಿರೂಪಿಸಬೇಕು ಆಗ ಸತ್ಯದ ಅನಾವರಣವಾಗುತ್ತದೆ. ಇಂತಹ ಸತ್ಯದ ಅನಾವರಣವನ್ನು ಈ ಕೃತಿ ಮಾಡಿಕೊಡುತ್ತದೆ ಎಂದರು.
      ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಟಿ.ಕೆ.ನಂಜುAಡಪ್ಪನವರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕೆ.ಎಸ್ ಸಿದ್ದಲಿಂಗಪ್ಪ, ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ತುಮಕೂರು ವಿ.ವಿ ಚರಿತ್ರೆ ಪ್ರಾಧ್ಯಾಪಕ ಡಾ. ಎಂ.ಕೊಟ್ರೇಶ್, ಈ ಕೃತಿಯ ಪ್ರಕಾಶಕರಾದ ಬೆಂಗಳೂರು ಸುಹಾಸ್ ಗ್ರಾಫಿಕ್ಸ್ನ ಮೇಲುಕೋಟೆ ಮುರುಳೀಧರ್, ಪ್ರಾಂಶುಪಾಲರಾದ ಡಾ. ಟಿ.ಬಿ.ನಿಜಲಿಂಗಪ್ಪ, ಐ.ಸಿ.ಹಚ್.ಆರ್‌ನ ಉಪನಿರ್ದೇಶಕಿ ಡಾ. ಅರುಣಿ ಇತರರಿದ್ದರು.
ಕಲ್ಪಹಾಸ ಕೃತಿಯ ಸಂಶೋಧಕ ಡಾ. ಡಿ.ಎನ್.ಯೋಗೀಶ್ವರಪ್ಪನವರು ಸ್ವಾಗತಿಸಿ ಪ್ರಾಸ್ತವಿಕ ನುಡಿಗಳನ್ನಾಡಿದರು. ಇತಿಹಾಸ ಪ್ರಾಧ್ಯಾಪಕ ಡಾ. ಚಂದ್ರಶೇಖರ್ ವಂದಿಸಿದರು. ಕನ್ನಡ ವಿಭಾಗದ ಪ್ರಾಧ್ಯಾಪಕ ಸೋಮಶೇಖರ್ ನಿರೂಪಿಸಿದರು.
ಭಾವಚಿತ್ರ
    ಬೆಂಗಳೂರಿನ ಸುಹಾಸ್ ಗ್ರಾಫಿಕ್ಸ್ ಪ್ರಕಟಿಸಿರುವ ಡಾ. ಡಿ.ಎನ್.ಯೋಗೀಶ್ವರಪ್ಪನವರು ತುಮಕೂರು ಜಿಲ್ಲೆ ಇತಿಹಾಸ ಕಲ್ಪಹಾಸ ಸಂಪುಟ-೦೧ ಕೃತಿಯನ್ನು ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷರಾದ ಡಾ. ದೇವರ ಕೊಂಡಾರೆಡ್ಡಿ ಬಿಡುಗಡೆ ಮಾಡಿದರು. ಚಿತ್ರದಲ್ಲಿ ಟಿ.ಕೆ.ನಂಜುAಡಪ್ಪ, ಅರವಿಂದ ಜತ್ತಿ,  ಡಾ. ಚನ್ನಸ್ವಾಮಿ ಸೋಸಲೆ, ಡಾ. ಆಶ್ವತ್ಥನಾರಾಯಣ, ಕೆ.ಎಸ್.ಸಿದ್ದಲಿಂಗಪ್ಪ, ಡಾ. ಎಂ.ಕೊಟ್ರೇಶ್, ಮೇಲುಕೋಟೆ ಮುರುಳಿಧರ್,   ಡಾ. ಡಿ.ಎನ್.ಯೋಗೀಶ್ವರಪ್ಪ,  ಡಾ. ಚಂದ್ರಶೇಖರ್ ಇತರರಿದ್ದರು.
(Visited 1 times, 1 visits today)
tumkur
Previous Articleಶ್ರೀಕ್ಷೇತ್ರ ಸಿದ್ಧರಬೆಟ್ಟ ಮಠದ ೧೯ನೇ ವಾರ್ಷಿಕೋತ್ಸವ
Next Article ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ದೂರವಿರಿ: ಮಾಜಿ ಶಾಸಕ
News Desk Benkiyabale

Related Posts

ಜ.10, 11: 26ನೇ ವರ್ಷದ ದುರ್ಗಪೂಜೆ

January 05, 2026 3:45 pm ತುಮಕೂರು

ಅಧ್ಯಯನದಿಂದ ಯಶಸ್ಸು ಸಾಧ್ಯ

January 05, 2026 3:41 pm ತುಮಕೂರು

ಆರ್‌ಡಿಪಿಆರ್‌ನಲ್ಲಿ ಸೇವೆಯ ಅವಕಾಶ ದೊಡ್ಡ ಸೌಭಾಗ್ಯ: ಜಿ.ಪ್ರಭು

January 05, 2026 3:38 pm ತುಮಕೂರು
ತಾಜಾ ಸುದ್ಧಿಗಳು
ಇತರೆ ಸುದ್ಧಿಗಳು

ಗ್ರಾಮೀಣ ಪತ್ರಕರ್ತರಿಗೆ ಆಶ್ರಯ ನಿವೇಶನದ ಭರವಸೆ

January 27, 2026 4:05 pm
ಇತರೆ ಸುದ್ಧಿಗಳು

ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣಾರ್ಪಣೆ ಮಾಡಿದ ವೀರರನ್ನು ಸ್ಮರಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ: ಬಿ.ಕೆ.ಸಪ್ತಶ್ರೀ ಹೇಳಿಕೆ

January 27, 2026 4:02 pm
ಇತರೆ ಸುದ್ಧಿಗಳು

ಸಂವಿಧಾನದ ಆಶಯಗಳನ್ನು ಬದಿಗೊತ್ತಿ ಕೇಂದ್ರ ಸರ್ಕಾರ ತಾರತಮ್ಯ ಧೋರಣೆ ಅನುಸರಿಸುತ್ತಿದೆ: ಶಾಸಕ ವೆಂಕಟೇಶ್

January 27, 2026 3:59 pm
ಇತರೆ ಸುದ್ಧಿಗಳು

ಕಾಸ್ಮೋಪಾಲಿಟನ್ ಕ್ಲಬ್‌ವತಿಯಿಂದ ನಿವೃತ್ತ ಯೋಧರಿಗೆ ಸನ್ಮಾನ

January 27, 2026 3:57 pm
ಇತರೆ ಸುದ್ಧಿಗಳು

ಕೇಂದ್ರದ ವಿಳಂಬ ನೀತಿಗೆ ಪ್ರತಿಭಟನೆ ಅನಿವಾರ್ಯ

January 27, 2026 3:55 pm
ಇತರೆ ಸುದ್ಧಿಗಳು

ತೆಂಗು ಬೆಳೆ: ಜಾಗೃತಿ ಮೂಡಿಸುವ ಕಾರ್ಯಕ್ರಮದ ವಾಹನಕ್ಕೆ ಶಾಸಕರಿಂದ ಹಸಿರು ನಿಶಾನೆ

January 22, 2026 4:20 pm
Our Youtube Channel
Our Picks

ಗ್ರಾಮೀಣ ಪತ್ರಕರ್ತರಿಗೆ ಆಶ್ರಯ ನಿವೇಶನದ ಭರವಸೆ

January 27, 2026 4:05 pm

ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣಾರ್ಪಣೆ ಮಾಡಿದ ವೀರರನ್ನು ಸ್ಮರಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ: ಬಿ.ಕೆ.ಸಪ್ತಶ್ರೀ ಹೇಳಿಕೆ

January 27, 2026 4:02 pm

ಸಂವಿಧಾನದ ಆಶಯಗಳನ್ನು ಬದಿಗೊತ್ತಿ ಕೇಂದ್ರ ಸರ್ಕಾರ ತಾರತಮ್ಯ ಧೋರಣೆ ಅನುಸರಿಸುತ್ತಿದೆ: ಶಾಸಕ ವೆಂಕಟೇಶ್

January 27, 2026 3:59 pm

ಕಾಸ್ಮೋಪಾಲಿಟನ್ ಕ್ಲಬ್‌ವತಿಯಿಂದ ನಿವೃತ್ತ ಯೋಧರಿಗೆ ಸನ್ಮಾನ

January 27, 2026 3:57 pm

ಕೇಂದ್ರದ ವಿಳಂಬ ನೀತಿಗೆ ಪ್ರತಿಭಟನೆ ಅನಿವಾರ್ಯ

January 27, 2026 3:55 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ಇತರೆ ಸುದ್ಧಿಗಳು

ಗ್ರಾಮೀಣ ಪತ್ರಕರ್ತರಿಗೆ ಆಶ್ರಯ ನಿವೇಶನದ ಭರವಸೆ

By News Desk BenkiyabaleJanuary 27, 2026 4:05 pm

ತುಮಕೂರು: ಜಿಲ್ಲೆಯಾದ್ಯಂತ ಆಶ್ರಯ ಯೋಜನೆಯಡಿ ನಿವೇಶನ ಹಂಚಿಕೆ ಸಂದರ್ಭದಲ್ಲಿ ಗ್ರಾಮೀಣಭಾಗದ ಕಾರ್ಯ ನಿರತ ಪತ್ರಕರ್ತರನ್ನು ಪರಿಗಣಿಸುವಂತೆ ಜಿಲ್ಲಾಧಿಕಾರಿಗೆ ಜಿಲ್ಲಾ ಉಸ್ತುವಾರಿ…

ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣಾರ್ಪಣೆ ಮಾಡಿದ ವೀರರನ್ನು ಸ್ಮರಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ: ಬಿ.ಕೆ.ಸಪ್ತಶ್ರೀ ಹೇಳಿಕೆ

January 27, 2026 4:02 pm

ಸಂವಿಧಾನದ ಆಶಯಗಳನ್ನು ಬದಿಗೊತ್ತಿ ಕೇಂದ್ರ ಸರ್ಕಾರ ತಾರತಮ್ಯ ಧೋರಣೆ ಅನುಸರಿಸುತ್ತಿದೆ: ಶಾಸಕ ವೆಂಕಟೇಶ್

January 27, 2026 3:59 pm

ಕಾಸ್ಮೋಪಾಲಿಟನ್ ಕ್ಲಬ್‌ವತಿಯಿಂದ ನಿವೃತ್ತ ಯೋಧರಿಗೆ ಸನ್ಮಾನ

January 27, 2026 3:57 pm
News by Date
February 2026
M T W T F S S
 1
2345678
9101112131415
16171819202122
232425262728  
« Jan    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.