BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಸಚಿವ ಬಿ.ನಾಗೇಂದ್ರ ವಿರುದ್ಧ ಪಿತೂರಿಗೆ ವಾಲ್ಮೀಕಿ ಸಮಾಜ ಖಂಡನೆ
  • ಉದ್ಯಮ ಸಂಸ್ಥೆ ಜೊತೆ ಎಸ್‌ಎಸ್‌ಐಟಿ ಒಡಂಬಡಿಕೆ
  • ವಿಬಿ ಜಿ ರಾಮ್ ಜಿ ಯೋಜನೆಯಡಿ ಜನರಿಗೆ ಉದ್ಯೋಗ ನೀಡಿ: ಜನರು ಗುಳೆ ಹೋಗುವುದನ್ನು ತಪ್ಪಿಸಿ
  • ಒಂದೇ ನಲ್ಲಿಯಲ್ಲಿ ೧೦೦ ಮನೆಯವರು ನೀರು ಹಿಡಿಯುವ ದುಸ್ಥಿತಿ
  • ಕಾಂಗ್ರೆಸ್ ಸರ್ಕಾರದ ವಿರುದ್ಧ ಶಾಸಕ ಸುರೇಶ್ ಗೌಡ ಆಕ್ರೋಶ
  • ತುಮಕೂರಿಗೆ ಆಗಮಿಸಿದ ರಾಜೀವ್ ಸದ್ಬಾವನ ರಥಯಾತ್ರೆ
  • ಕನಿಷ್ಠ ವೇತನ ಪರಿಷ್ಕೃರಣೆ ಆದೇಶ ಜಾರಿ ಮಾಡಲು ಒತ್ತಾಯಿಸಿ ಪ್ರತಿಭಟನೆ
  • ಅಲೆಮಾರಿಗಳಿಗೆ ಮನೆ ಕಟ್ಟಿಕೊಡುವಂತೆ ಶಾಸಕರಿಗೆ ಮನವಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಭಾರತೀಯ ಸಂಸ್ಕೃತಿಯಲ್ಲಿ ವಿವಾಹಕ್ಕೆ ವಿಶೇಷ ಸ್ಥಾನವಿದೆ
ತುಮಕೂರು

ಭಾರತೀಯ ಸಂಸ್ಕೃತಿಯಲ್ಲಿ ವಿವಾಹಕ್ಕೆ ವಿಶೇಷ ಸ್ಥಾನವಿದೆ

ಸಿದ್ದರಬೆಟ್ಟ ಬಾಳೆಹೊನ್ನೂರು ಮಠದ ೧೯ನೇ ವರ್ಷದ ವಾರ್ಷಿಕೋತ್ಸವದಲ್ಲಿ ಶ್ರೀಗಳು ಹೇಳಿಕೆ
By News Desk BenkiyabaleUpdated:June 09, 2025 3:24 pm

ಕೊರಟಗೆರೆ: ಭಾರತೀಯ ಸಂಸ್ಕೃತಿಯಲ್ಲಿ ವಿವಾಹವು ವಿಶೇಷ ಸ್ಥಾನಮಾನ ಪಡೆದಿದೆ. ಸಾಮೂಹಿಕ ವಿವಾಹದ ಮೂಲಕ ದಾಂಪತ್ಯ ಜೀವನ ಪ್ರವೇಶಿಸುತ್ತಿರುವ ಆದರ್ಶ ದಂಪತಿಗಳು ನಿಜಕ್ಕೂ ಪುಣ್ಯವಂತರು ಎಂದು ಬಾಳೆಹೊನ್ನೂರು ಶ್ರೀಮಠದ ಶ್ರೀಮದ್ ರಂಭಾಪುರಿ ವೀರಸಿಂಹಾನಾಧೀಶ್ವರ ಶ್ರೀ೧೦೦೮ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ತಿಳಿಸಿದರು.
ತಾಲ್ಲೂಕಿನ ಶ್ರೀಕ್ಷೇತ್ರ ಸಿದ್ದರಬೆಟ್ಟ ಬಾಳೆಹೊನ್ನೂರು ಖಾಸಾ ಶಾಖಾ ಮಠದಲ್ಲಿ ಆಯೋಜಿಸಿದ್ದ ೧೯ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಶ್ರೀಜಗದ್ಗುರು ರೇಣುಕಾಚಾರ್ಯರ, ಶ್ರೀಜಗಜ್ಯೋತಿ ಬಸವೇಶ್ವರರ ಜಯಂತ್ಯೋತ್ಸವ ಹಾಗೂ ಸಾಮೂಹಿಕ ವಿವಾಹ, ಜನಜಾಗೃತಿ ಧರ್ಮ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಶ್ರೀಕ್ಷೇತ್ರದಲ್ಲಿ ವಾರ್ಷಿಕೋತ್ಸವ ಅಂಗವಾಗಿ ನಡೆಯುತ್ತಿರುವ ಹಲವಾರು ವೈವಿಧ್ಯಮಯ ಧಾರ್ಮಿಕ ಕಾರ್ಯಕ್ರಮಗಳು ಹಬ್ಬದ ವಾತಾವರಣ ಸೃಷ್ಠಿಸಿದೆ. ಧರ್ಮದ ಜಾಗೃತಿಗಾಗಿ ನೆಲೆಯೂರಿದ ಶ್ರೀಮಠÀ ೧೯ವರ್ಷ ಪೂರೈಸಿ ಮುಂದೆ ಸಾಗುತ್ತಿರುವ ಕೀರ್ತಿ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿಗೆ ಸಲ್ಲುತ್ತದೆ. ಶೈಕ್ಷಣಿಕ ವಿದ್ಯಾಲಯ ಪ್ರಗತಿ, ನಿತ್ಯ ದಾಸೋಹ, ಬಡ ವಿದ್ಯಾರ್ಥಿಗಳ ನಿಲಯವಿದ್ದು ಇಷ್ಟೆಲ್ಲಾ ಸೇವೆಗಳಿಗೆ ಭಕ್ತರೇ ಶ್ರೀಮಠದ ನಿಜವಾದ ಶಕ್ತಿ. ಆಧುನಿಕ ಜಗತ್ತಿನಲ್ಲಿ ಮಕ್ಕಳು ಸಂಸ್ಕಾರವAತರಾಗಿ ಬೆಳೆಯಬೇಕು ಎಂದು ಆಶೀರ್ವಾಚನ ನೀಡಿದರು.
ಬಾಳೆಹೊನ್ನೂರು ಖಾಸಾ ಶಾಖಾ ಮಠದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕಲಿಯುಗ ಮಾಯೆಯಿಂದ ಧರ್ಮ ಬಿಟ್ಟು ಅಧರ್ಮದ ಕಡೆಗೆ ಜನರು ವಾಲಿದ್ದಾರೆ. ಮನುಷ್ಯ ಅಧಿಕಾರ, ಹಣ, ಆಸ್ತಿ ಎಂದು ಧರ್ಮವನ್ನೇ ಮರೆತು ಜೀವನ ಹಾಳು ಮಾಡಿಕೊಳ್ಳುತ್ತಿದ್ದಾನೆ. ಆಧುನಿಕ ಜನರಿಗೆ ದಿನನಿತ್ಯ ಧರ್ಮದ ಬಗ್ಗೆ ಬೋಧನೆ ಮಾಡಿದರೂ ವ್ಯರ್ಥವೆನಿಸುತ್ತದೆ ಬೇಸರ ವ್ಯಕ್ತಪಡಿಸಿದರು.
ಬಾಳೆಹೊನ್ನೂರು ಜಗದ್ಗುರುಗಳ ದೃಷ್ಠಿಕೋನ, ಚಿಂತನೆಯನ್ನು ಶ್ರೀಮಠ ಅಚ್ಚುಕಟ್ಟಾಗಿ ಪಾಲಿಸಿ ೧೯ವರ್ಷ ಪೂರೈಸಿದೆ. ಶ್ರೀಕ್ಷೇತ್ರದಲ್ಲಿ ೧೦೦ಅಡಿ ಎತ್ತರದ ಶಿವಲಿಂಗ ಸ್ಥಾಪನೆಗೆ ಗೃಹಮಂತ್ರಿ ಭರವಸೆ ನೀಡಿದ್ದಾರೆ. ಭಕ್ತರ ಸಹಾಕರದಿಂದ ಶ್ರೀಮಠದಲ್ಲಿ ವೃದ್ಧರಿಗೆ ವಸತಿ ವ್ಯವಸ್ಥೆ ಕಲ್ಪಸಿ ಆರೈಕೆ ಮಾಡುವ ದೃಷ್ಠಿಕೋನವನ್ನು ಹೊಂದಿದ್ದೇವೆ. ಆದರ್ಶ ವಿವಾಹದ ಮೂಲಕ ವಧು ವರರು ಆದರ್ಶ ದಂಪತಿಗಳಾಗಿ ಹೊರಹೊಮ್ಮಬೇಕು ಎಂದು ಹೇಳಿದರು.
ಗೃಹ ಸಚಿವ ಡಾ.ಜಿ ಪರಮೇಶ್ವರ್ ಮಾತನಾಡಿ, ಸಿದ್ದರಬೆಟ್ಟ ಸಸ್ಯ ಸಂಜೀವಿನಿ ಕ್ಷೇತ್ರ ವೈಜ್ಞಾನಿಕ ಇತಿಹಾಸದಲ್ಲಿ ಅಚ್ಚಳಿಯಾಗಿ ಉಳಿದಿದೆ. ಭಾರತದ ಇತಿಹಾಸ ಪುಟದಲ್ಲಿ ಹಿಂದೂ ಧರ್ಮಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ೮೫೦ವರ್ಷ ಹಿಂದೆ ಜಗಜ್ಯೋತಿ ಬಸವೇಶ್ವರರು ಇಡೀ ಜಗತ್ತಿಗೆ ಸಮಾನತೆಯ ತತ್ವವನ್ನು ಸಾರಿದ್ದಾರೆ ಎಂದು ಹೇಳಿದರು.
ಕೇಂದ್ರ ಜಲಶಕ್ತಿ ಸಚಿವ ವಿ.ಸೋಮಣ್ಣ ಮಾತನಾಡಿ, ಇತಿಹಾಸವಿರುವ ಶ್ರೀಮಠ ೧೦-೧೫ವರ್ಷಗಳಲ್ಲಿ ರಾಷ್ಟçಮಟ್ಟದ ಏಗ್ಗಳಿಕೆಗೆ ಪಾತ್ರವಾಗಲಿದೆ. ಸಿದ್ದರಬೆಟ್ಟ ಮತ್ತು ದೇವರಾಯನ ದುರ್ಗ ಯಾತ್ರಾಸ್ಥಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ೨೦ದಿನಗಳಲ್ಲಿ ಅನುದಾನ ಬಿಡುಗಡೆ ಮಾಡಲಿದೆ. ಭಾರತ ಸರ್ಕಾರ ದೇಶಕ್ಕೆ ಮತ್ತು ಇತಿಹಾಸದ ಸುಭದ್ರತೆಗೆ ಹೊಸ ಶಕೆ ಪ್ರಾರಂಭ ಮಾಡಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಎಲೆರಾಂಪುರ ಶ್ರೀಮಠದ ಡಾ.ಹನುಮಂತನಾಥ ಸ್ವಾಮೀಜಿ, ಬೆಳ್ಳಾವಿ ಶ್ರೀಕಾರದ ವೀರಬಸವ ಸ್ವಾಮೀಜಿ, ರೇಣುಕ ಶಿವಾಚಾರ್ಯ ಸ್ವಾಮೀಜಿ, ರುದ್ರಮುನಿ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಸಾಸಕ ಜಿ.ಬಿ ಜ್ಯೋತಿಗಣೇಶ್, ಪುಟ್ಟಸ್ವಾಮಿಗೌಡ, ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿ.ಪಂ ಸಿಇಓ ಜಿ.ಪ್ರಭು, ತುಮಕೂರು ಎಸ್ಪಿ ಆಶೋಕ್, ರೋಟರಿ ಅಧ್ಯಕ್ಷ ರಘು ಕೆ.ಎನ್, ಗ್ರಾ.ಪಂ ಅಧ್ಯಕ್ಷೆ ಕವಿತಾ, ಉಪಾಧ್ಯಕ್ಷ ಲಕ್ಷಿö್ಮÃಕಾಂತ್, ಅ.ಭಾ.ವೀ.ಮ ಜಿಲ್ಲಾಧ್ಯಕ್ಷ ಪರಮೇಶ್ವರ್, ತಾ.ಅಧ್ಯಕ್ಷ ವೀರಭದ್ರಯ್ಯ, ಸಿದ್ದಮಲ್ಲಪ್ಪ, ದರ್ಶನ್ ಕೆ.ಎಲ್, ರುದ್ರೇಶ್ ಸೇರಿದಂತೆ ಇತರರು ಇದ್ದರು.

ಶ್ರೀಗಳ ಮೇಲೆ ದಾಖಲಾಗಿರುವ ಕೇಸ್ ವಜಾಗೊಳಿಸಿ: ರೈತ ದೇಶ ಬೆನ್ನುಲುಬು ಎಂದು ಸರ್ಕಾರ ಮರೆತಂತೆ ಕಾಣುತ್ತಿದೆ. ಹೇಮಾವತಿ ಲಿಂಕ್ ಕೆನಾಲ್ ರೈತರ ವಿರೋಧಿಯಾಗಿದೆ. ರೈತರ ಬೆನ್ನುಲುಬಾಗಿ ಹೋರಾಟದಲ್ಲಿ ಪಾಲ್ಗೊಂಡು ಹಲವು ಮಠದ ಶ್ರೀಗಳ ಮೇಲೆ ಕೇಸು ದಾಖಲಿಸುವುದು ಸಮಂಜಸವಲ್ಲಾ, ಆದ್ದರಿಂದ ಕೇಸ್ ವಜಾಗೊಳಿಸಿ ರೈತರಿಗೆ ನ್ಯಾಯ ಒದಗಿಸುವಂತೆ ಗೃಹ ಸಚಿವರ ಬಳಿ ಚರ್ಚೆ ಮಾಡಲಾಗಿದೆ ಎಂದು ಬಾಳೆಹೊನ್ನೂರು ಶ್ರೀಮಠದ ಭಗವತ್ಪಾದರು ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯಿಂದ ರಾಜ್ಯದ ಅಭಿವೃದ್ಧಿ ನೆಲ ಕಚ್ಚಿದೆ ಎಂದು ಆಡಳಿತ ಸರ್ಕಾರದ ಶಾಸಕರೇ ಮಾತನಾಡುವಂತಾಗಿದೆ. ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ಶ್ರೀಮಠ ವಿರೋಧವಿಲ್ಲ ಆದರೆ ಉತ್ತಮವಾಗಿರುವ ಗ್ಯಾರಂಟಿ ಯೋಜನೆಗೆ ಹಣ ಮೀಸಲಿರಿಸಿ ರಾಜ್ಯ ಅಭಿವೃದ್ಧಿ ಕೆಲಸಗಳ ಕಡೆ ಸರ್ಕಾರ ಗಮನಹರಿಸಬೇಕಿದೆ.
> ಶ್ರೀ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು, ಬಾಳೆಹೊನ್ನೂರು.

ಹೇಮಾವತಿ ಕೆನಾಲ್ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಮಂಗಳವಾರ ಸ್ಥಳಕ್ಕೆ ಕೂಡ ಬೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ. ಕೇಂದ್ರ ಸರ್ಕಾರ ೩೯ಸಾವಿರ ಕೋಟಿ ಅನುದಾನ ರೈಲ್ವೆ ಇಲಾಖೆ ಖಾತೆಗೆ ಬಿಡುಗಡೆ ಮಾಡಿ ೨೫-೩೦ವರ್ಷ ಯೋಜನೆ ಅಭಿವೃದ್ಧಿ ಪೂರೈಕೆಯಾಗುತ್ತಿದೆ. ತುಮಕೂರು-ರಾಯದುರ್ಗ ರೈಲ್ವೆ ಕಾಮಗಾರಿ ೨೦೨೭ಕ್ಕೆ ಪೂರ್ಣಗೊಳ್ಳಲಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದೆ.
> ವಿ.ಸೋಮಣ್ಣ, ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ಸಚಿವ.

(Visited 1 times, 1 visits today)
tumkur ಕೊರಟಗೆರೆ:
Previous Articleಅನಂತಮೂರ್ತಿ ಆರಂಭಿಸಿದ ಚಲನೆ ಬಾನುರಿಂದ ಪೂರ್ಣ
Next Article ಉದ್ದಿಮೆದಾರರಿಗಾಗಿ ಉದ್ಯಮಿ ಮಿತ್ರ ಸಹಕಾರ ಸಂಘ0 ಸ್ಥಾಪನೆ
News Desk Benkiyabale

Related Posts

ಸಚಿವ ಬಿ.ನಾಗೇಂದ್ರ ವಿರುದ್ಧ ಪಿತೂರಿಗೆ ವಾಲ್ಮೀಕಿ ಸಮಾಜ ಖಂಡನೆ

August 12, 2026 5:37 pm news

ಉದ್ಯಮ ಸಂಸ್ಥೆ ಜೊತೆ ಎಸ್‌ಎಸ್‌ಐಟಿ ಒಡಂಬಡಿಕೆ

August 12, 2026 5:35 pm news

ವಿಬಿ ಜಿ ರಾಮ್ ಜಿ ಯೋಜನೆಯಡಿ ಜನರಿಗೆ ಉದ್ಯೋಗ ನೀಡಿ: ಜನರು ಗುಳೆ ಹೋಗುವುದನ್ನು ತಪ್ಪಿಸಿ

August 12, 2026 5:33 pm news
ತಾಜಾ ಸುದ್ಧಿಗಳು
news

ಸಚಿವ ಬಿ.ನಾಗೇಂದ್ರ ವಿರುದ್ಧ ಪಿತೂರಿಗೆ ವಾಲ್ಮೀಕಿ ಸಮಾಜ ಖಂಡನೆ

August 12, 2026 5:37 pm
news

ಉದ್ಯಮ ಸಂಸ್ಥೆ ಜೊತೆ ಎಸ್‌ಎಸ್‌ಐಟಿ ಒಡಂಬಡಿಕೆ

August 12, 2026 5:35 pm
news

ವಿಬಿ ಜಿ ರಾಮ್ ಜಿ ಯೋಜನೆಯಡಿ ಜನರಿಗೆ ಉದ್ಯೋಗ ನೀಡಿ: ಜನರು ಗುಳೆ ಹೋಗುವುದನ್ನು ತಪ್ಪಿಸಿ

August 12, 2026 5:33 pm
news

ಒಂದೇ ನಲ್ಲಿಯಲ್ಲಿ ೧೦೦ ಮನೆಯವರು ನೀರು ಹಿಡಿಯುವ ದುಸ್ಥಿತಿ

August 12, 2026 5:30 pm
news

ಕಾಂಗ್ರೆಸ್ ಸರ್ಕಾರದ ವಿರುದ್ಧ ಶಾಸಕ ಸುರೇಶ್ ಗೌಡ ಆಕ್ರೋಶ

August 12, 2026 5:28 pm
news

ತುಮಕೂರಿಗೆ ಆಗಮಿಸಿದ ರಾಜೀವ್ ಸದ್ಬಾವನ ರಥಯಾತ್ರೆ

August 11, 2026 4:53 pm
Our Youtube Channel
Our Picks

ಸಚಿವ ಬಿ.ನಾಗೇಂದ್ರ ವಿರುದ್ಧ ಪಿತೂರಿಗೆ ವಾಲ್ಮೀಕಿ ಸಮಾಜ ಖಂಡನೆ

August 12, 2026 5:37 pm

ಉದ್ಯಮ ಸಂಸ್ಥೆ ಜೊತೆ ಎಸ್‌ಎಸ್‌ಐಟಿ ಒಡಂಬಡಿಕೆ

August 12, 2026 5:35 pm

ವಿಬಿ ಜಿ ರಾಮ್ ಜಿ ಯೋಜನೆಯಡಿ ಜನರಿಗೆ ಉದ್ಯೋಗ ನೀಡಿ: ಜನರು ಗುಳೆ ಹೋಗುವುದನ್ನು ತಪ್ಪಿಸಿ

August 12, 2026 5:33 pm

ಒಂದೇ ನಲ್ಲಿಯಲ್ಲಿ ೧೦೦ ಮನೆಯವರು ನೀರು ಹಿಡಿಯುವ ದುಸ್ಥಿತಿ

August 12, 2026 5:30 pm

ಕಾಂಗ್ರೆಸ್ ಸರ್ಕಾರದ ವಿರುದ್ಧ ಶಾಸಕ ಸುರೇಶ್ ಗೌಡ ಆಕ್ರೋಶ

August 12, 2026 5:28 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಸಚಿವ ಬಿ.ನಾಗೇಂದ್ರ ವಿರುದ್ಧ ಪಿತೂರಿಗೆ ವಾಲ್ಮೀಕಿ ಸಮಾಜ ಖಂಡನೆ

By News Desk BenkiyabaleAugust 12, 2026 5:37 pm

ತುಮಕೂರು: ವಾಲ್ಮೀಕಿ ಸಮಾಜದ ನಾಯಕರು, ಸಮುದಾಯದ ಧ್ವನಿಯಾಗಿ ಗುರುತಿಸಿಕೊಂಡಿರುವ ಸಚಿವ ಬಿ. ನಾಗೇಂದ್ರ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಲು ಬಿಜೆಪಿ…

ಉದ್ಯಮ ಸಂಸ್ಥೆ ಜೊತೆ ಎಸ್‌ಎಸ್‌ಐಟಿ ಒಡಂಬಡಿಕೆ

August 12, 2026 5:35 pm

ವಿಬಿ ಜಿ ರಾಮ್ ಜಿ ಯೋಜನೆಯಡಿ ಜನರಿಗೆ ಉದ್ಯೋಗ ನೀಡಿ: ಜನರು ಗುಳೆ ಹೋಗುವುದನ್ನು ತಪ್ಪಿಸಿ

August 12, 2026 5:33 pm

ಒಂದೇ ನಲ್ಲಿಯಲ್ಲಿ ೧೦೦ ಮನೆಯವರು ನೀರು ಹಿಡಿಯುವ ದುಸ್ಥಿತಿ

August 12, 2026 5:30 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.