
ತುಮಕೂರು: ಸೂಚಿತ ಪಠ್ಯ ವಿಷಯಗಳಲ್ಲಿ ನೈಪುಣ್ಯತೆ ಹೊಂದಿದ್ದರೆ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧ್ಯ ಎಂದು ಎಸ್ ರವಿಶಂಕರ್ ಅಭಿಪ್ರಾಯಪಟ್ಟರು. ಅವರು ವಿಜ್ಞಾನ ಬಿಂದು ಸಂಸ್ಥೆ ಮ್ಯಾಥ್ ಲ್ಯಾಬ್ ಸಹಯೋಗದಲ್ಲಿ ನವೋದಯ-ಸೈನಿಕ್ ಶಾಲೆ ಪ್ರವೇಶ ಆಕಾಂಕ್ಷಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಅಣಕು ಪರೀಕ್ಷೆಯಲ್ಲಿ ಭಾಗವಹಿಸಿ ಮಾತನಾಡಿದರು.
ರಾಷ್ಟಮಟ್ಟದಲ್ಲಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳುದೃಷ್ಟಿಕೋನದಲ್ಲಿ ಅಭ್ಯರ್ಥಿಗಳ ಬುದ್ಧಿಮತ್ತೆಯನ್ನು ಪರೀಕ್ಷಿಸಲಿವೆ. ಭವಿಷ್ಯದ ಬೆಳವಣಿಗೆ, ಅಭಿವೃದ್ಧಿಗೆ ಸಹಕಾರಿಯಾಗುವ ಕೌಶಲ್ಯಯುತ ಮಾನವ ಸಂಪನ್ಮೂಲ ಸೃಷ್ಟಿ ಸ್ಪರ್ಧಾತ್ಮಕ ಪರೀಕ್ಷೆಗಳ ಉದ್ಧೇಶವಾಗಿದೆ. ಆದ್ದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳ ಪೋಷಕರು ಪ್ರಾಥಮಿಕ ಹಂತದಿ0ದಲೇ ಅಕ್ಷರ ಜ್ಞಾನ, ಸರಳ ಗಣಿತ, ಸಂವಹನ, ಅನ್ವಯಿಕ ಕೌಶಲ್ಯಗಳು ಸಮಯ ನಿರ್ವಹಣೆ ಬಗ್ಗೆ ಮಕ್ಕಳಲ್ಲಿ ಸೂಕ್ತ ತರಬೇತಿ ಮತ್ತು ಮಾರ್ಗದರ್ಶನದಿಂದ ಜಾಗೃತಿ ಮೂಡಿಸಬೇಕೆಂದರು.
ಮುಖ್ಯ ಪರೀಕ್ಷೆಗಳ ರೂಪುರೇಷೆ, ಅಭ್ಯರ್ಥಿಗಳು ಪರೀಕ್ಷೆಗೆ ನಡೆಸಿರುವ ಸಿದ್ಧತೆಯ ಅವಲೋಕನ, ಕಲಿಯಬೇಕಾಗಿರುವ ಅಭ್ಯಾಸ ಮತ್ತು ಪರೀಕ್ಷಾ ಕೌಶಲ್ಯಗಳ ಬಗ್ಗೆ ಗಮನ ನೀಡಲು ಅಣಕು ಪರೀಕ್ಷೆ ಹೆಚ್ಚು ಸಹಕಾರಿ ಎಂದರು. ಜಿಲ್ಲೆಯ ವಿವಿಧ ತಾಲ್ಲೂಕುಗಳ ನವೋದಯ-ಸೈನಿಕ್ ಶಾಲೆ ಪ್ರವೇಶ ಪರೀಕ್ಷೆ ಆಕಾಂಕ್ಷಿಗಳು ಅಣಕು ಪರೀಕ್ಷೆ ಪ್ರಯೋಜನ ಪಡೆದರು. ಡಿಸೆಂಬರ್ ಮತ್ತು ಜನವರಿಯಲ್ಲಿ ನಡೆಯಲಿರುವ ನವೋದಯ ಮತ್ತು ಸೈನಿಕ್ ಪ್ರವೇಶ ಪರೀಕ್ಷೆಗಳು ನಡೆಯಲಿವೆ. ಆಸಕ್ತ ಪರೀಕ್ಷಾರ್ಥಿಗಳು ಹೆಚ್ಚಿನ ಮಾಹಿತಿಗೆ ನಗರದ ಡಿಡಿಪಿಐ ಕಚೇರಿ ವಿಜ್ಞಾನ ಬಿಂದು ಸಂಸ್ಥೆ ಅಥವಾ ಸಂಖ್ಯೆ ೮೬೬೦೫೮೭೧೫೦ರಲ್ಲಿ ಸಂಪರ್ಕಿಸಬಹುದು.





