
ಪಾವಗಡ: ಸಂವಿಧಾನದ ಆಶಯಗಳನ್ನು ಬದಿಗೊತ್ತಿ ಕೇಂದ್ರ ಸರ್ಕಾರ ತಾರತಮ್ಯ ಧೋರಣೆ ಅನುಸರಿಸುತ್ತಿದೆ, ಈ ಮಲತಾಯಿ ಧೋರಣೆಯಿಂದ ರಾಜ್ಯಗಳಿಗೆ ಅನಾನುಕೂಲವಾಗುತ್ತಿದೆ ಎಂದು ತುಮಕೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷರು ಹಾಗೂ ಶಾಸಕರಾದ ಹೆಚ್.ವಿ.ವೆಂಕಟೇಶ್ ರವರು ತಿಳಿಸಿದರು.
ಪಟ್ಟಣದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ಆಡಳಿತ ವತಿಯಿಂದ ಏರ್ಪಡಿಸಲಾಗಿದ್ದ ಗಣ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅದ್ಯಕ್ಷತೆ ವಹಿಸಿ ಮಾತನಾಡಿದ ಅವರು ೧೯೫೦ ಜನವರಿ ೨೬ ರಂದು ಭಾರತದ ಸಂವಿಧಾನವು ಜಾರಿಗೆ ಬಂದಿದ್ದನ್ನು ಸ್ಮರಿಸಲು ಪ್ರತಿ ವರ್ಷ ಈ ದಿನವನ್ನು ಆಚರಿಸಲಾಗುತ್ತದೆ. ಸಂವಿಧಾನವು ನಮಗೆ ನೀಡಿರುವ ಹಕ್ಕುಗಳನ್ನು ರಕ್ಷಿಸಿಕೊಳ್ಳುವುದು ಮತ್ತು ನಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದು. “ನಾವೆಲ್ಲರೂ ಭಾರತೀಯರು” ಎಂಬ ಭಾವನೆಯೊಂದಿಗೆ, ಯಾವುದೇ ತಾರತಮ್ಯವಿಲ್ಲದ, ಸಮಾನತೆಯ ಭಾರತವನ್ನು ಕಟ್ಟುವುದು ಇಂದಿನ ತುರ್ತು ಅಗತ್ಯವಾಗಿದೆ.ಸಂವಿಧಾನ ಜಾರಿಯಾಗುವ ಮುನ್ನ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರು ಎಲ್ಲಾ ಸೌಕರ್ಯಗಳಿಂದ ವಂಚಿತರಾಗಿದ್ದರು, ಸಂವಿಧಾನ ಜಾರಿಯಾದ ನಂತರ ಎಲ್ಲಾ ಕ್ಷೇತ್ರಗಳಲ್ಲೂ ಮುಂದುವರೆದಿದ್ದಾರೆ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ದೇಶದ ಎಲ್ಲಾ ರಾಜ್ಯಗಳು ಒಂದೇ ಎಂದು ಭಾವಿಸಿ ಕೇಂದ್ರ ಸರಕಾರ ಅನುದಾನ ಕೊಟ್ಟರೆ ದೇಶ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸಮಾನವಾಗಿ ಶಿಕ್ಷಣ ಪಡೆಯುತ್ತಿದ್ದಾರೆ ಸರ್ಕಾರ ಒಳ್ಳೆಯ ಶಿಕ್ಷಣ ಕೊಡಬೇಕಾಗಿದೆ, ನಮ್ಮ ತಾಲೂಕಿನ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯಬೇಕು ಜಿಲ್ಲೆಗೆ ರಾಜ್ಯಕ್ಕೆ ಒಳ್ಳೆಯ ಹೆಸರು ತರಬೇಕು, ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ನಾನೇ ಸ್ವಂತ ಹಣದಿಂದ ಪ್ರತಿಭಾ ಪುರಸ್ಕಾರವನ್ನು ಕೊಡುತ್ತೇನೆ ಸರ್ಕಾರಿ ಶಾಲಾ ಶಿಕ್ಷಕರು ನಿಮ್ಮ ಮಕ್ಕಳನ್ನು ಸರ್ಕಾರ ಶಾಲೆಗಳಲ್ಲಿಯೇ ಓದಿಸಬೇಕು ಶಾಲಾ ಮಕ್ಕಳಿಗೆ ಶಿಕ್ಷಕರು ಶಿಸ್ತನ್ನು ಕಲಿಸಿಕೊಡಬೇಕು ನಾನು ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದು ಕಡಮಲಕುಂಟೆಯಲ್ಲಿ ಅಲ್ಪಸಂಖ್ಯಾತರ ಮುರಾರ್ಜಿ ಶಾಲೆ ಸಿದ್ದಾಪುರದಲ್ಲಿ ಕಾರ್ಮಿಕ ವಸತಿ ಶಾಲೆ, ಪಬ್ಲಿಕ್ ಶಾಲೆಗಳನ್ನು ಮಂಜೂರು ಮಾಡಿಸಿದ್ದೇನೆ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗಾಗಿ ಹೆಚ್ಚು ಶ್ರಮ ವಹಿಸುತ್ತಿದ್ದೇನೆ ಎಂದು ತಿಳಿಸಿದರು.
ಧ್ವಜಾರೋಹಣ ನೆರವೇರಿಸಿದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷರು ಹಾಗೂ ತಹಶೀಲ್ದಾರ್ ವೈ.ರವಿ ಯವರು ಮಾತನಾಡಿ ೧೯೪೭ ರಲ್ಲಿ ನಮ್ಮ ದೇಶಕ್ಕೆ ಸ್ವಾತಂತ್ರ‍್ಯ ಬಂದರೂ ಸಹ ಯಾವುದೇ ರೀತಿಯ ತನ್ನದೇ ಆದ ನೀತಿ ನಿಯಮಗಳು ನಿಯಮಗಳ ಚೌಕಟ್ಟು ಇರಲಿಲ್ಲ ಆದ್ದರಿಂದ ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನವನ್ನು ರಚಿಸಲಾಯಿತು ೧೯೫೦ ಜನವರಿ ೨೬ರಂದು ಸಂವಿಧಾನವನ್ನು ಜಾರಿಗೆ ತಂದಿದ್ದರಿAದ ಭಾರತವು ಒಂದು ಸ್ವತಂತ್ರ ಗಣರಾಜ್ಯವಾಯಿತು ಅಂದಿನಿ0ದ ಇಂದಿನವರೆಗೂ ರಾಜಕೀಯ ರಾಷ್ಟ್ರೀಯ ಹಬ್ಬವಾಗಿ ಆಚರಿಸುತ್ತಿದ್ದೇವೆ. ನಮ್ಮ ಸಂವಿಧಾನ ಜಗತ್ತಿನಲ್ಲಿ ದೊಡ್ಡ ಲಿಖಿತ ಸಂವಿಧಾನವಾಗಿದೆ ಈ ಸಂವಿಧಾನವನ್ನು ರಚಿಸಲು ಎರಡು ವರ್ಷ ೧೧ ತಿಂಗಳು ೧೮ ದಿನ ಬೇಕಾಯಿತು ಪ್ರತಿಯೊಬ್ಬ ಭಾರತೀಯ ನು ಗೌರವದಿಂದ ಬಾಳಲು ಸಂವಿಧಾನದ ರಕ್ಷಣಾ ಕವಚವಾಗಿದೆ ಗಣರಾಜ್ಯ ಎಂದರೆ ಜನರಿಂದ ಜನರಿಗಾಗಿ ಜನರಿಗೋಸ್ಕರ ಇರುವ ಜನತಾ ಆಳ್ವಿಕೆಯಾಗಿದೆ ಪ್ರಭು ಹಲವು ಸ್ವಾತಂತ್ರ‍್ಯ ಹೋರಾಟಗಾರರ ಶ್ರಮ ಇದರಲ್ಲಿದೆ ದೇಶವನ್ನು ಕಾಪಾಡುವ ಸೈನಿಕರಿಗೆ ಗೌರವ ಸಲ್ಲಿಸುತ್ತಿದ್ದೇನೆ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ಮಾತಿದೆ ಅದರಂತೆ ನೀವು ಮುನ್ನಡೆಯಬೇಕಾಗಿದೆ ಹಲವು ನಾಯಕರ ತ್ಯಾಗದ ಫಲವಾಗಿ ಈ ಸುಂದರ ಭಾರತದಲ್ಲಿ ನಾವು ಬದುಕುತ್ತಿದ್ದೇವೆ ಶಿಸ್ತು ಪ್ರಾಮಾಣಿಕತೆ ಕಠಿಣ ಶ್ರಮದಿಂದ ಓದಿ ದೇಶದ ಜಾಗತಿಕ ಮಟ್ಟದಲ್ಲಿ ಎತ್ತರಕ್ಕೆ ತೆಗೆದುಕೊಂಡು ಹೋಗಲು ಶ್ರಮ ವಹಿಸಬೇಕಾಗಿದೆ ನಮಗೆ ಸ್ವಾತಂತ್ರ‍್ಯ ಸಂವಿಧಾನ ಎರಡು ಸಿಕ್ಕಿವೆ. ಇವುಗಳನ್ನು ಕಾಪಾಡಿಕೊಂಡು ದೇಶದ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದೆ ಎಂದು ತಿಳಿಸಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಾದ ಮಧುಸೂಧನ ರವರು ಮಾತನಾಡಿ ನಮ್ಮ ರಾಷ್ಟ್ರಧ್ವಜವು ಆಕಾಶದಲ್ಲಿ ಎತ್ತರಕ್ಕೆ ಹಾರಾಡುತ್ತಿರುವುದು ನಮ್ಮ ದೇಶದ ಸ್ವಾತಂತ್ರ‍್ಯ, ಏಕತೆ ಮತ್ತು ಹೆಮ್ಮೆಯ ಸಂಕೇತವಾಗಿದೆ. ಈ ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳು ನಮಗೆ ತ್ಯಾಗ, ಶಾಂತಿ ಮತ್ತು ಸಮೃದ್ಧಿಯ ಪಾಠವನ್ನು ಕಲಿಸುತ್ತವೆ. ಇಂದು ನಾವು ಅನುಭವಿಸುತ್ತಿರುವ ಈ ಸ್ವಾತಂತ್ರ‍್ಯದ ಹಿಂದೆ ಸಾವಿರಾರು ವೀರ ಸೇನಾನಿಗಳ ಮತ್ತು ಮಹಾಪುರುಷರ ಬಲಿದಾನವಿದೆ,ನಾವೆಲ್ಲರೂ ಭಾರತದ ಜವಾಬ್ದಾರಿಯುತ ನಾಗರಿಕರಾಗಿ,ನಮ್ಮ ದೇಶದ ಅಭಿವೃದ್ಧಿಗೆ ಕೈಜೋಡಿಸೋಣ. ಜಾತಿ-ಮತಗಳ ಭೇದವಿಲ್ಲದೆ ಒಂದಾಗಿ ಬಾಳೋಣ. ದೇಶ ಮೊದಲು ಎಂಬ ಭಾವನೆ ನಮ್ಮದಾಗಿರಲಿ ಎಂದು ತಿಳಿಸಿದರು.
ಇದಕ್ಕೂ ಮುನ್ನ ಶಾಸಕರು ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು ತೆರದ ಜೀಪಿನಲ್ಲಿ ಗೌರವ ತುಕಡಿಗಳಿಂದ ಧ್ವಜಾರೋಹಣ ಸ್ವೀಕರಿಸಿದರು, ಪೊಲೀಸ್ ಇಲಾಖೆ, ಶಾಲಾ ಮಕ್ಕಳು, ಗೃಹರಕ್ಷಕ ದಳ, ಪೊಲೀಸ್ ಬ್ಯಾಂಡ್ ಗಳ ಪಥಸಂಚನ ನಡೆಸಿ ಗೌರವ ವಂದನೆ ಸ್ವೀಕರಿಸಿದರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು. ಇದೇವೇಳೆ ಪಥಸಂಚನ ನಡೆಸಿದ ಮೂರು ಶಾಲಾ ಮಕ್ಕಳಿಗೆ ಬಹುಮಾನ ನೀಡಲಾಯಿತು.
ಈ ಸಂದರ್ಭದಲ್ಲಿ ವೃತ್ತ ನಿರೀಕ್ಷಕರಾದ ಸುರೇಶ್,ಗಿರೀಶ್, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷರಾದ ಹೆಚ್ ವಿ ರವಿಕುಮಾರ್, ತುಮಕೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ನಿರ್ದೇಶಕರಾದ ಚಂದ್ರಶೇಖರರೆಡ್ಡಿ, ಪುರಸಭಾ ಮಾಜಿ ಅಧ್ಯಕ್ಷರಾದ ಸುದೇಶ್ ಬಾಬು,ಶಂಕರರೆಡ್ಡಿ, ಸದಸ್ಯರಾದ ರವಿ,ಸಮಾಜ ಸೇವಕರಾದ ಬತ್ತಿನೇನಿ ನಾಗೇಂದ್ರರಾವ್, ಪುರಸಭಾ ನಾಮನಿರ್ದೇಶಿತ ಸದಸ್ಯರಾದ ಗಂಗಾಧರ್,ರೈತ ಸಂಘದ ಅಧ್ಯಕ್ಷರಾದ ಪೂಜಾರಪ್ಪ, ಕೃಷ್ಣರಾವ್,ಅಲ್ಪಸಂಖ್ಯಾತ ಮುಖಂಡ ಷಾ ಬಾಬು ಸೇರಿದಂತೆ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.





