
ತುಮಕೂರು: ಪ್ರಗತಿಪರ ಸಂಘಟನೆಗಳ ಒಕ್ಕೂಟ ತುಮಕೂರು ಹಾಗೂ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಸಂವಿಧಾನ ಸ್ನೇಹಿ ಬಳಗ ಬೆಂಗಳೂರು ಇವರುಗಳ ಆ
ಶ್ರಯದಲ್ಲಿ ನ.೨೨ ರಿಂದ ೨೬ರವರೆಗೆ ಮನ-ಮನೆಗೂ ಸಂವಿಧಾನ ಕಾರ್ಯಕ್ರಮ ಆಯೋಜಿಸಿದ್ದು, ನ.೨೨ರಂದು ಬೆಳಗ್ಗೆ ೧೦.೩೦ಕ್ಕೆ ಆರ್.ಟಿ.ನಗರದ ಬಾಪೂಜಿ ರವೀಂದ್ರ ಕಲಾಮಹಾವಿದ್ಯಾಲಯದಲ್ಲಿ ಚಾಲನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅವರು ನಗರದ ಪತ್ರಿಕಾ ಭವನದಲ್ಲಿ ಜರುಗಿದ ಪತ್ರಿಕಾ ಗೋಷ್ಠಿಯಲ್ಲಿ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಿದ ಸಂಘಟನೆಯ ಮುಖಂಡರುಗಳು ಅಭಿಯಾನದ ಮಾಹಿತಿ ನೀಡಿದರು.
ನ.೨೩ ರಂದು ಸ್ಲಂಗಳಲ್ಲಿ ಜಾಗೃತಿ ಸಭೆ ನಡೆಯಲಿದ್ದು, ಎ.ನರಸಿಂಹಮೂರ್ತಿ, ಶಂಕರಪ್ಪ, ಜಾಬೀರ್ ಖಾನ್ ಅವರುಗಳು ಉಪಸ್ಥಿತರಿರುವರು. ಸಂಜೆ ೫.೩೦ಕ್ಕೆ ಮಾನಿಕೆರೆಯಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದ್ದು, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಉಮೇಶ್ ಚಂದ್ರ ಅವರು ಉಪಸ್ಥಿತರಿರುವರು. ನ.೨೪ ರಂದು ಕನ್ನಡ ವಿಭಾಗ, ತುಮಕೂರು ವಿಶ್ವವಿದ್ಯಾಲಯದಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದ್ದು, ಮುಖ್ಯ ಅತಿಥಿಗಳಾಗಿ ಜನಾರ್ಧನ ಕೆಸರಗದ್ದೆ, ಡಾ.ರವಿಕುಮಾರ್ ನೀಹಾ ಅವರುಗಳು ಆಗಮಿಸುವರು. ನ.೨೫ ರಂದು ಗ್ಲೋಬಲ್ ಶಾಹೀನ್ ಮಹಿಳಾ ಕಾಲೇಜು, ತುಮಕೂರು ಇಲ್ಲಿ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ನೂರುನ್ನೀಸಾ ಅವರು ಆಗಮಿಸುವರು. ನ.೨೬ ರಂದು ಅಲಿ ಪಿಯು ಕಾಲೇಜು ತುಮಕೂರು ಇಲ್ಲಿ ನಡೆಯಲಿದೆ ಸಂಜೆ ೫.೩೦ಕ್ಕೆ ಡಾ.ಗುಬ್ಬಿ ವೀರಣ್ಣ ಸಭಾಂಗಣದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಜಿ.ಪ್ರಭು, ವಿ.ಎಲ್.ನರಸಿಂಹಮೂರ್ತಿ ಅವರು ಆಗಮಿಸುವರು. ಇದೇ ಸಂದರ್ಭದಲ್ಲಿ ಕರ್ನಾಟಕದ ಹಲವು ಭಾಷೆಗಳಲ್ಲಿ ಸಂವಿಧಾನ ಪೀಠಿಕೆಯ ವಿಡಿಯೋ ಬಿಡುಗಡೆ ಮಾಡಲಾಗುವುದು. ನಂತರ ಜಂಗಮ ಕಲೆಕ್ಟಿವ್ ಪ್ರಸ್ತುತಪಡಿಸುವ ಬಾಬ್ ಮಾರ್ಲಿ ಫ್ರಮ್ ಕೋಡಿಯಳ್ಳಿ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ತುಮಕೂರು ಹಾಗೂ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಸಂವಿಧಾನ ಸ್ನೇಹಿ ಬಳಗ ತುಮಕೂರು ಇವರು ತಿಳಿಸಿದರು.
ನವೆಂಬರ್ ೨೬, ೧೯೯೪೯ ರಂದು ಭಾರತದ ಸಂವಿಧಾನ ಸಭೆಯು ಭಾರತದ ಸಂವಿಧಾನವನ್ನು ಅಂಗೀಕರಿಸಿತು. ಇದನ್ನು ಸಂವಿಧಾನ ದಿನ ಎಂದು ಆಚರಿಸಲಾಗುತ್ತದೆ. ನಮ್ಮ ಸಂವಿಧಾನ ಅಂಗೀಕರಿಸಿ ೭೬ ವರ್ಷಗಳ ಸಂಭ್ರಮದಲ್ಲಿದ್ದೇವೆ. ಸಂವಿಧಾನದ ಆಶ್ರಯದಲ್ಲಿ ನಮ್ಮ ದೇಶ ಬಹಳಷ್ಟು ಪ್ರಗತಿ ಕಂಡಿದೆ. ೧೯೪೭ಕ್ಕೆ ಹೋಲಿಸಿದರೆ ಶಿಕ್ಷಣ ಪಡೆದವರ ಸಂಖ್ಯೆ ಹೆಚ್ಚಾಗಿದೆ. ಸಮಾಜದಲ್ಲಿ ಮಹಿಳೆಯರ ಸ್ಥಾನಮಾನ ಮತ್ತು ಅವಕಾಶಗಳು ಹೆಚ್ಚಾಗಿದೆ. ಜಾತಿಯ ಹಿಡಿತ ಸ್ವಲ್ಪ ಕಡಿಮೆಯಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ವ್ಯವಸ್ಥೆ ಮುಂಚೆಗಿ0ತ ವಿಸ್ತçೃಗೊಂಡಿದೆ. ಆದರೆ ನಾವು ಇನ್ನು ಸಹ ಸಮ ಸಮಾಜ ನಿರ್ಮಿಸಲು ಸಾಧ್ಯವಾಗಿಲ್ಲ. ಎಲ್ಲರಿಗೂ ಘನತೆಯ ಬದುಕನ್ನು ಖಾತ್ರಿಪಡಿಸಲು, ಅಸ್ಪೃಶ್ಯತೆ ತೊಲಗಿಸಲು ಸಾಧ್ಯವಾಗಿಲ್ಲ, ಅಸಮಾನತೆ ಹೆಚ್ಚುತ್ತಿದೆ. ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ದಾಳಿಗಳು ಹೆಚ್ಚಾಗಿವೆ. ಸಾರ್ವಜನಿಕ ಶಿಕ್ಷಣ ಹಾಗೂ ಆರೋಗ್ಯ ವ್ಯವಸ್ಥೆಯ ಗುಣಮಟ್ಟ ಹೆಚ್ಚು ಮಾಡುವ ಬದಲು ಸರ್ಕಾರಗಳು ಅದನ್ನು ಖಾಸಗೀಕರಿಸುತ್ತಿದ್ದಾರೆ. ಸಂವಿಧಾನ ಆಶಯಗಳಾದ ಸ್ಥಾನಮಾನದ ಸಮಾನತೆಯ ಹಾಗೂ ಅವಕಾಶಗಳ ಸಮಾನತೆ, ಘನತೆ, ಸಾಮಾಜಿಕ ನ್ಯಾಯ ಹಾಗೂ ಸ್ವಾತಂತ್ರö್ಯ ಮರೀಚಿಕೆಯಾಗಿ ಉಳಿಯುವುದೇ ಎಂಬ ಆತಂಕವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂವಿಧಾನದ ಪೀಠಿಕೆಯ ಭರವಸೆಗಳನ್ನು ಈಡೇರಿಸಬೇಕೆಂದರೆ ನಮ್ಮ ಸಂವಿಧಾನದ ಮೌಲ್ಯಗಳು ಪ್ರತಿ ಮನೆಯಲ್ಲೂ ಮನಸ್ಥಿನಲ್ಲೂ ಬೇರೂರಬೇಕು. ಶೋಷಿತರು, ದಮನಿರತರು ತಮ್ಮ ಹಕ್ಕಿನ ಬಗ್ಗೆ ತಿಳಿಯಬೇಕು. ಪ್ರತಿರೋಧದ ಹಕ್ಕು ಉಳಿಯಬೇಕು. ಈ ನಿಟ್ಟಿನಲ್ಲಿ ಸಂವಿಧಾನದ ಮೌಲ್ಯಗಳನ್ನು ಪ್ರತಿ ಬೀದಿ, ಮನೆ ಹಾಗೂ ಮನಸ್ಸಿಗೆ ತಲುಪಿಸಲು ಪ್ರಗತಿಪರ ಸಂಘಟನಗಳ ಒಕ್ಕೂಟ, ತುಮಕೂರು, ಸ್ಲಂ ಜನಾಂದೋಲನ ಕರ್ನಾಟಕ ಹಾಗೂ ಸಂವಿಧಾನ ಸ್ನೇಹಿ ಬಳಗ ಬೆಂಗಳೂರು ಜಂಟಿಯಾಗಿ ೫ ದಿವಸಗಳ ಸಂವಿಧಾನ ಜಾಥಾವನ್ನು ತುಮಕೂರಿನಲ್ಲಿ ಹಮ್ಮಿಕೊಂಡಿದ್ದೇವೆ. ಈ ಜಾಥಾದ ಉದ್ಘಾಟನಾ ಸಮಾರಂಭವು ನ.೨೨ ರಂದು ನಡೆಯಲಿದೆ ಎಂದು ವಿವರಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಚಿಂತಕ ಕೆ.ದೊರೈರಾಜ್, ಎ.ನರಸಿಂಹಮೂರ್ತಿ, ಪೂರ್ಣರವಿಶಂಕರ್, ಸುಬ್ರಹ್ಮಣ್ಯ, ಅನುಪಮಾ, ಅಶ್ವಿನಿಬೋದ್, ತಿರುಮಲ್ಲಯ್ಯ, ಮನೋಜ್‌ಕುಮಾರ್, ತಾಜುದ್ದೀನ್ ಮತ್ತಿತರರು ಉಪಸ್ಥಿತರಿದ್ದರು.





