
ತುಮಕೂರು: ನಗರದ ಬಿ.ಜಿ.ಎಸ್. ವೃತ್ತ ಮಹಾನಗರ ಪಾಲಿಕೆ ಆವರಣದಲ್ಲಿರುವ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪುತ್ಥಳಿಯಿಂದ ಜಿಲ್ಲಾಧಿಕಾರಿಗಳ ಕಛೇರಿಯವರೆಗೆ ಭೀಮ್ ಆರ್ಮಿ ಸಂಘಟನೆಯ ವತಿಯಿಂದ ವಿವಿಧ ಬೇಡಿಕೆಗಳು ಹಾಗೂ ದಲಿತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಜಾಥಾ ನಡೆಸಿ ಜಿಲ್ಲಾಧಿಕಾರಿಗಳ ಕಛೇರಿಯ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಭೀಮ್ ಆರ್ಮಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ಅಯ್ಯನಪಾಳ್ಯ ಶ್ರೀನಿವಾಸ್ ರವರು ಮಾತನಾಡಿ ತುಮಕೂರು ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ನೌಕರರು ಹಾಗೂ ಆರೆ ಸರ್ಕಾರಿ, ಹೊರ ಗುತ್ತಿಗೆ ಮತ್ತು ಖಾಸಗಿ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡದ ಎಲ್ಲಾ ಕಾರ್ಮಿಕ ಹಾಗೂ ಅಧಿಕಾರಿ ವರ್ಗದ ಹಾಗೂ ಸಿಬ್ಬಂದಿಗಳ ಮೇಲೆ ಜಾತಿ ಆಧಾರಿತ ದೌರ್ಜನ್ಯಗಳ ನಡೆಯುತ್ತಿದ್ದು ಈ ಕುರಿತು ಅತೀ ಶೀಘ್ರವಾಗಿ ಎಚ್ಚೆತ್ತುಕೊಳ್ಳಬೇಕಿದೆ ಎಂದರು.
ಮುಂದುವರೆದು ಕರ್ನಾಟಕ ಪಬ್ಲಿಕ್ ಎಂಪ್ರೆಸ್ ಶಾಲೆ, ತುಮಕೂರು ಇಲ್ಲಿ ಉಪಪ್ರಾಂಶುಪಾಲರಾಗಿ ಕಾರ್ಯನಿರ್ವಹಣೆ ಮಾಡುತ್ತಿರುವ ಶ್ರೀಮತಿ ಮಂಜುಳ ಎನ್. ಇವರನ್ನು ಸೇವೆಯಿಂದ ಅಮಾನತು ಮಾಡಬೇಕಾಗಿದೆ ಏಕೆಂದರೆ ಈಕೆ ಇದೆ ಶಾಲೆಯಲ್ಲಿ ಡಿ.ಗ್ರೂಪ್ ನೌಕರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪರಿಶಿಷ್ಠ ಜಾತಿಯ ಕಾವ್ಯ ಎನ್ ರವರ ಮೇಲೆ ದಿನಾಂಕ : ೨೯-೦೭-೨೦೨೫ರಂದು ಜಾತಿ ನಿಂದನೆ ಮಾಡಿ ಮಾನಸಿಕ ಕಿರುಕುಳ ನೀಡಿದ್ದು ಪ್ರಕರಣವೂ ಸಹ ದಾಖಲಾಗಿರುತ್ತದೆ. ಆದರೆ ಕ್ರಮ ವಾಗದೇ ಇರುವುದು ಶೋಚನೀಯ ಸಂಗತಿಯಾಗಿದೆ ಆದುದರಿಂದ ಅವರನ್ನು ಈ ಕೂಡಲೇ ಅಮಾನತು ಮಾಡಬೇಕಾಗಿದೆ ಎಂದರಲ್ಲದೇ ಇದೇ ಮಂಜುಳ ರವರು ಸದರಿ ಶಾಲೆಗೆ ಬಿಡುಗಡೆಯಾದ ಕೆ.ಪಿ.ಎಸ್. ಅನುದಾನ ಬಳಕೆ ಮಾಡುವ ಮುನ್ನ ಮಾನ್ಯ ಶಾಸಕರ ಸಹಿ ಪಡೆಯದೆ ಅನುದಾನ ಬಳಕೆ ಮಾಡಿರುತ್ತಾರೆ ಹಾಗೂ ಅಕ್ಷರ ದಾಸೋಹ ಕಾರ್ಯಕ್ರಮದಡಿ ವಿದ್ಯಾರ್ಥಿಗಳಿಗೆ ನಿಗಧಿತ ಆಹಾರ ಪದಾರ್ಥಗಳನ್ನು ನಿಡದೆ ಎಸ್.ಓ.ಪಿ. ಪಾಲಿಸಿರುವುದಿಲ್ಲ, ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನಮಂತ್ರಿ ಶಕ್ತಿ ನಿರ್ಮಾಣ ಯೋಜನೆ ಪೂರಕ ಪೌಷ್ಟಿಕ ಆಹಾರ ನೀಡಲು ವಿಫಲರಾಗಿರುತ್ತಾರೆ, ಎಸ್.ಡಿ.ಎಂ.ಸಿ ಹಾಗೂ ಮುಖ್ಯ ಪ್ರಾಂಶುಪಾಲರ ಅನುಮೋದನೆ ಪಡೆಯದೆ ಸರ್ವಧಿಕಾಯಂತೆ ಕರ್ತವ್ಯ ಲೋಪ ಎಸಗಿರುತ್ತರೆ, ಮೇಲ್ಕಂಡ ಎಲ್ಲಾ ಅಂಶಗಳು ಮಾನ್ಯ ಕ್ಷೇತ್ರ ಶಿಕ್ಷಾಣಾಧಿಕಾರಿಗಳು, ತುಮಕೂರು ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ, ತಾಲ್ಲೂಕು ಪಂಚಾಯಿತಿ, ತುಮಕೂರು, ಇವರ ತಂಡ ಶಾಲೆಗೆ ಬೇಟಿ ನೀಡಿ ಪರಿಶೀಲನೆ ಮಾಡಿ ವರದಿಯಿಂದ ಸಬೀತಾಗಿರುತ್ತದೆ, ಆದ್ದರಿಂದ ಸರ್ಕಾರಿ ಕರ್ತವ್ಯ ಲೋಪ ಎಸಗಿ ಅನುದಾನ ದುರ್ಬಳಕೆ ಮಾಡಿಕೊಂಡಿರುವ ಇವರ ಮೇಲೆ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಇಂದು ಪ್ರತಿಭಟನೆ ಮಾಡುದುವರ ಮುಖೇನ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದೇವೆ ಎಂದು ತಿಳಿಸಿದರು.
ಕಾರ್ಯಧ್ಯಕ್ಷರಾದ ಕೀರ್ತಿ ಮಾತನಾಡಿ ತುಮಕೂರು ನಗರ ಎಂ.ಜಿ. ರಸ್ತೆಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನವು ಜಿಲ್ಲಾ ಕೇಂದ್ರ ಸ್ಥಾನದಲ್ಲಿದ್ದು ಸರಿಯಾದ ನಿರ್ವಹಣೆ ಇಲ್ಲದೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ÷್ಯದಿಂದ ಸಂಪೂರ್ಣ ದುರಸ್ಥಿತಿಗೆ ತಲುಪಿದೆ, ಜಿಲ್ಲಾಡಳಿತವು ಕಳೆದ ೧೨ ವರ್ಷಗಳಿಂದ ಸೂಕ್ತ ಕ್ರಮ ತೆಗೆದುಕೊಳ್ಳದೇ, ಬೇಜಾವಬ್ದಾರಿ ತನ ತೋರುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತವು ಈ ಕೂಡಲೇ ಸಾರ್ವಜನಿಕ ಹಾಗೂ ಸಂಘಟನೆಗಳ ಸಭೆ ಹಾಗೂ ಸಮಾರಂಭ ನಡೆಸಲು ಅಂಬೇಡ್ಕರ್ ಭವನದ ಸಭಾಂಗಣವನ್ನು ಸರಿ ಪಡಿಸಲು ಅಥವಾ ಅಂಬೇಡ್ಕರ್ ಭವನವನ್ನು ಮರು ನಿರ್ಮಾಣ ಮಾಡಲು ಒತ್ತಾಯಿಸುತ್ತಿದ್ದೇವೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಭೀಮ್ ಆರ್ಮಿ ಜಿಲ್ಲಾಧ್ಯಕ್ಷರಾದ ಅಯ್ಯನಪಾಳ್ಯ ಶ್ರೀನಿವಾಸ್, ಕಾರ್ಯಧ್ಯಕ್ಷರಾದ ಕೀರ್ತಿ, ಮುಖಂಡರುಗಳಾದ ನಟರಾಜ್ ಮೌರ್ಯ, ಸುರೇಶ್, ಹೆತ್ತೇನಹಳ್ಳಿ ಮಂಜುನಾಥ್, ಚೇತನ್, ಕಾಂತರಾಜು, ಕಿರಣ್ ಕುಮಾರ್, ಶಿವಾಜಿ, ರಂಗನಾಥ್, ಕುಮಾರ್, ಕೆ.ಸುಮಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು.





