
ತುಮಕೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಹೊರ ರಾಜ್ಯ ಅಧ್ಯಯನ ಪ್ರವಾಸಕ್ಕೆ ಶಾಸಕ ಹಾಗೂ ಕೆ.ಎಸ್.ಆರ್.ಟಿ.ಸಿ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ ಚಾಲನೆ ನೀಡಿದರು.
ನಗರದ ದೇವರಾಜ ಅರಸು ಬಸ್ ನಿಲ್ದಾಣದಲ್ಲಿ ಕೆ.ಎಸ್.ಆರ್.ಟಿ.ಸಿ ತುಮಕೂರು ವಿಭಾಗದ ೫೦ ಜನ ವಿವಿಧ ವೃಂದದ ನೌಕರರು ಮಹಾರಾಷ್ಟç, ಪಂಜಾಬ್ ಸೇರಿದಂತೆ ೧೪ ರಾಜ್ಯಗಳ ೧೫ ದಿನಗಳ ಆಧ್ಯಯನ ಪ್ರವಾಸ ಕೈಗೊಂಡಿದ್ದು,ತುಮಕೂರು ನಗರ ಶಾಸಕ ಜೋತಿ ಗಣೇಶ್,ಜಿ.ಪಂ.ಮಾಜಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ಕೆ.ಎಸ್.ಆರ್.ಟಿ.ಸಿ.ವಿಭಾಗೀಯ ನಿಯಂತ್ರಣಾಧಿ ಕಾರಿ ಚಂದ್ರಶೇಖರ್.ಎಸ್.ಅವರುಗಳೊAದಿಗೆ ಕೆ.ಎಸ್.ಆರ್.ಟಿ.ಸಿ. ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ ಹಸಿರು ನಿಶಾನೆ ತೋರಿಸಿದರು.
ಈ ವೇಳೆ ಮಾತನಾಡಿದ ಕೆ.ಎಸ್.ಆರ್.ಟಿ.ಸಿ. ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್,ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ತುಮಕೂರು ವಿಭಾ ಗದ ನೌಕರರು ಇಂದು ಅಧ್ಯಯನ ಪ್ರವಾಸಕ್ಕಾಗಿ ಪಂಜಾಬ್, ದೆಹಲಿ ಸೇರಿದಂತೆ ೧೪ ರಾಜ್ಯಗಳಿಗೆ ಹೋಗುತ್ತಿದ್ದು,ಅಲ್ಲಿನ ಸಾರಿಗೆ ವ್ಯವಸ್ಥೆಯ ನಿರ್ವಹಣೆ,ಮೂಲಭೂತ ಸೌಕರ್ಯ,ರೂಟ್‌ಗಳ ನಿರ್ವಹಣೆ,ನೌಕರರಿಗೆ ದೊರೆಯುತ್ತಿರುವ ಸೌಲಭ್ಯ, ಪ್ರಯಾಣಿಕರ ರಕ್ಷಣೆ ಮತ್ತು ಕಾರ್ಯಾಚರಣೆಗೆ ವಿಧಿ,ವಿಧಾನಗಳನ್ನು ತಿಳಿಯಲು ಹಾಗು ಹತ್ತಿರದ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಹೊರಟಿದ್ದಾರೆ. ಅವರಿಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ತುಮಕೂರು ವಿಭಾಗದಿಂದ ಮಾಡಿಕೊಡಲಾಗಿದೆ. ಸುಮಾರು ೫೦ ಜನರು ಪ್ರಯಾಣಿಸುತ್ತಿದ್ದು, ತಾವುಗಳ ಪ್ರವಾಸದ ಸಂದರ್ಭದಲ್ಲಿ ನಡೆಸಿದ ಅಧ್ಯ ಯನದ ವರದಿಯನ್ನು ನೀಡಲಿದ್ದಾರೆ.ಇದೊಂದು ವಿವಿಧ ರಾಜ್ಯಗಳ ಸಾರಿಗೆ ನೌಕರರ ನಡುವಿನ ವಿಚಾರ ವಿನಿಮಯ ಕಾರ್ಯಕ್ರಮ ಇದಾಗಿದೆ ಎಂದರು.
ಐವತ್ತು ಜನ ನೌಕಕರು ೧೫ ದಿನಗಳ ಕಾಲ ಕೈಗೊಳ್ಳುವ ಅಧ್ಯಯನ ಪ್ರವಾಸಕ್ಕೆ ನಮ್ಮ ಹಿರಿಯ ಅಧಿಕಾರಿಗಳು ವಾಹನವನ್ನು ವಿಶೇಷವಾಗಿ ವಿನ್ಯಾಸಗೊಳಿಸಿ,ಮಲಗಲು ಸಹ ಅವಕಾಶ ಕಲ್ಪಿಸಿದ್ದಾರೆ.ಪ್ರವಾಸಕ್ಕೆ ತೆರಳುವ ಎಲ್ಲಾ ನೌಕರರು ಒಳ್ಳೆಯ ರೀತಿಯಲ್ಲಿ ತೆರಳಿ,ಒಳ್ಳೆಯ ರೀತಿಯಲ್ಲಿ ನಡೆದು ಕೊಂಡು,ವಿಭಾಗಕ್ಕೆ ಕೀರ್ತಿ ತರಲಿ ಎಂದು ಕೆ.ಎಸ್.ಆರ್.ಟಿ.ಸಿ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ ಶುಭ ಹಾರೈಸಿದರು.
ಜಿ.ಪಂ. ಮಾಜಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ ಮಾತನಾಡಿ,ನಿಜಕ್ಕೂ ಇದೊಂದು ಸಂತೋಷದ ವಿಷಯ.ದಿನವೂ ನಟ್ಟು, ಬೊಟ್ಲು, ಸ್ಪಾನರ್,ಸ್ಟೆöÊರಿಂಗ್ ಗಳಲ್ಲಿ ಮುಳುಗಿದ್ದ ಸಿಬ್ಬಂದಿಗೆ ಒಂದು ರೀತಿಯ ಜ್ಞಾರ್ನಾಜನೆಗೆ ಕೆ.ಎಸ್.ಆರ್.ಟಿ.ಸಿ. ಅವಕಾಶ ಕಲ್ಪಿಸಿದೆ.ಹಿರಿಯ ಅಧಿಕಾರಿಗಳು ನೌಕರರಿಗೆ ಪ್ರವಾಸ ಕಲ್ಪಿಸಿ, ಒಳ್ಳೆಯದನ್ನು ಮಾಡಿದ್ದಾರೆ. ಪ್ರವಾಸ ಫಲಪ್ರಧವಾಗಲಿ ಎಂದು ಶುಭ ಹಾರೈಸಿದರು.
ಕೆ.ಎಸ್.ಆರ.ಟಿ.ಸಿ. ತುಮಕೂರು ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್.ಎಸ್ ಮಾತನಾಡಿ,ನಮ್ಮ ವಿಭಾಗದ ಸಿಬ್ಬಂದಿ ಇಲಾ ಖೆಯ ಮುಂದಿಟ್ಟ ಪ್ರಸ್ತಾವನೆಗೆ ಅಧ್ಯಕ್ಷರು ಸೇರಿದಂತೆ ಎಲ್ಲರೂ ಅನುಮೋಧನೆ ನೀಡಿದ ಪ್ರಯತ್ನ ಇಂದು ಐವತ್ತು ಜನರು ಪ್ರವಾಸ ಕೈಗೊಂಡಿದ್ದಾರೆ.ಪ್ರವಾಸದಲ್ಲಿ ನೌಕರರು ಬೇರೆ ಬೇರೆ ರಾಜ್ಯಗಳ ಪ್ರಾಕ್ಟಿಸ್ ಹೇಗಿದೆ. ನೌಕರರಿಗೆ ಮತ್ತು ಪ್ರಯಾಣಿಕರಿಗೆ ಇರುವ ಸೌಲಭ್ಯಗಳೇನು ?, ಎಂದು ಅಧ್ಯಯನ ನಡೆಸಲಿದ್ದಾರೆ. ಅಲ್ಲದೆ ಉತ್ತಮವಾಗಿ ಕಂಡು ಬರುವ ಯೋಜನೆಗಳನ್ನು ಇಲ್ಲಿಗೆ ತರುವ,ನಮ್ಮಲ್ಲಿರುವ ಉತ್ತಮ ಅಂಶಗಳನ್ನು ಅಲ್ಲಿಯ ಸಾರಿಗೆ ಸಿಬ್ಬಂದಿ ಜೊತೆ ವಿನಿಮಯ ಮಾಡಿಕೊಳ್ಳುವ ಉದ್ದೇಶ ಇದಾಗಿದೆ.ಡಿಸೇಲ್ ದರವನ್ನು ಪ್ರವಾಸದಲ್ಲಿರುವ ನೌಕರರೇ ಭರಿಸುತಿದ್ದಾರೆ ಎಂದರು.
ಈ ವೇಳೆ ಕೆ.ಎಸ್.ಆರ್.ಟಿ.ಸಿ ವಿಭಾಗಿಯ ಕಾರ್ಯಾಗಾರ ತುಮಕೂರಿನ ಆಶೀಫ್‌ವುಲ್ಲಾ ಷರೀಫ್,ವಿಭಾಗೀಯ ಸಂಚಲನಾಧಿಕಾರಿ ಮಂಜುನಾ ಥ್.ಬಿ,ವಿಭಾಗೀಯ ಲೆಕ್ಕಾಧಿಕಾರಿ ತೇಜಸ್, ಸಹಾಯಕ ಕಾರ್ಮಿಕ ಕಲ್ಯಾಣಾ ಧಿಕಾರಿ ಕುಮಾರಿ ಹಂಸವೀಣಾ,ಸಹಾಯಕ ಉಗ್ರಾಣಾಧಿಕಾರಿ ರೇಷ್ಮಾ ಅಂಜು0, ನವೀನ್ ಅಪ್ತ ಸಹಾಯಕರು, ಕೆ.ಎಸ್.ಆರ್.ಟಿ.ಸಿ ನೌಕರರ ಸಂಘದ ಅಧ್ಯಕ್ಷರಾದ ಶ್ರೀನಿವಾಸ್,ಕಾರ್ಯಾಧ್ಯಕ್ಷ ನಾಗೇಶ್.ಜಿ.ಬಿ, ಪ್ರಧಾನ ಕಾರ್ಯದರ್ಶಿ ವನರಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.





