
ತುರುವೇಕೆರೆ: ತಾಲೂಕಿನ ತಂಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗವಿಪುರ (ಕರೆಕಲ್ ಬಾರೆ) ಗ್ರಾಮದ ಜನರು ಕುಡಿಯುವ ನೀರಿಗಾಗಿ ಆಗ್ರಹಿಸಿ ಪಂಚಾಯಿತಿ ಮುಂಬಾಗ ಖಾಲಿ ಕೊಡ ಹಿಡಿದು ಪ್ರತಿಭಟನೆ ನೆಡೆಸಿದರು.
ಗ್ರಾಮ ಮುಖಂಡ ಓಂಕಾರ ಚಾರ್ ಮಾತನಾಡಿ ನಮ್ಮ ಗ್ರಾಮದಲ್ಲಿ ಸುಮಾರು ೨೫ ಕ್ಕೂ ಹೆಚ್ಚು ಮನೆಗಳಿದ್ದು ಸುಮಾರು ೧೫೦ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದೇವೆ. ನಮಗೆ ಸುಮಾರು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು ಪ್ರತಿದಿನ ಜನರು ನೀರಿಗಾಗಿ ಪರಿಪಾಟಲು ಪಢುವಂತಾಗಿದೆ. ದೂರದ ರೈತರ ತೋಟಗಳ ಬೋರ್ ವೆಲ್ ಗಳಲ್ಲಿ ಬಿಟ್ಟ ಸಂದರ್ಭದಲ್ಲಿ ನೀರಿಗಾಗಿ ಕಾಯುವಂತಹ ಪರಿಸ್ಥಿತಿ ತಲೆದೋರಿದೆ. ನಮ್ಮ ಗ್ರಾಮದಲ್ಲಿನ ಬಹುತೇಖ ಜನರು ಕೂಲಿ ಕಾರ್ಮಿಕರಾಗಿದ್ದು ಪ್ರತಿದಿನ ಕೆಲಸಕ್ಕೆ ತೆರಳವುದರಿಂದ ನೀರು ಹಿಡಿಯಲು ರಾತ್ರಿ ಸಮಯದಲ್ಲಿ ತೋಟಕ್ಕೆ ತೆರಳಬೇಕಾಗಿದೆ. ಈ ಮೊದಲು ಬಹುಗ್ರಾಮ ಕುಡಿಯುವ ಯೋಜನೆಯ ಟ್ಯಾಂಕರ್ ನಿಂದ ನಮ್ಮ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲಾಗಿತ್ತು ಆದರೆ ಅದು ಬಂದ್ ಹಾಗಿದೆ. ಗ್ರಾಮದ ಎರಡು ಸಿಸ್ಟನ್ ಗಳಿಗೆ ಪಂಚಾಯಿತಿ ಬೋರ್ ವೆಲ್ ಮೂಲಕ ನೀರು ಬಿಡಲಾಗುತ್ತಿತ್ತು ಆದರೆ ಪಂಚಾಯಿತಿಯಿAದ ಬೋರ್ ವೆಲ್ನ ಮೋಟರ್ ಪೈಪ್ ಗಳನ್ನು ಬೇರೆಡೆಗೆ ತೆಗೆದು ಕೊಂಡು ಹೋಗಿದ್ದಾರೆ. ನೀರು ಇಲ್ಲದಂತೆ ಮಾಡಿದ್ದಾರೆ. ಈಗಾಗಲೇ ಕುಡಿಯುವ ನೀರು ಕಲ್ಪಿಸುವಂತೆ ಗ್ರಾಮ ಪಂಚಾಯಿತಿ ಸದಸ್ಯರಿಗೂ ಹಾಗೂ ಪಿಡಿಓಗೂ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜವಾಗಿಲ್ಲ ಕೂಡಲೇ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಇಲ್ಲವಾದರೇ ಉಗ್ರವಾದ ಪ್ರತಿಭಟನೆ ಮಾಡಲಾಗುವುದು ಎಂದು ಒತ್ತಾಯಿಸಿದರು.
ಪಿಡಿಓ ಕುಮಾರ್ ಸ್ವಾಮಿ ಪ್ರತಿಭಟನಾಕಾರರ ಜೊತೆ ಮಾತನಾಡಿ ನಾಳೆಯಿಂದ ಟ್ಯಾಂಕರ್ ಮೂಲಕ ಕುಡಿಯುವ ನೀರು ಕಲ್ಪಿಸಲಾಗುವುದು. ಮುಂದಿನ ಕೆಲ ದಿನಗಳಲ್ಲಿ ಬೋರ್ ವೆಲ್ ಗೆ ಹೊಸ ಮೋಟರ್ ಅಳವಡಿಸಿ ನಂತರ ಸಿಸ್ಟನ್ ಗಳಿಗೆ ನೀರು ಬಿಡಲಾಗುವುದು ಎಂದು ಬರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.
ಪ್ರತಿಭಟನೆಯಲ್ಲಿ ಗೊವಿಂದಪ್ಪ, ಶೀಲಾ, ಪ್ರಮೀಳ, ಶಕೀಲ, ಗಂಗಾಧರಯ್ಯ, ಪುಟ್ಟಲಕ್ಷ್ಮಯ್ಯ, ನರಸಯ್ಯ, ಜಯಮ್ಮ, ಪ್ರವೀಣ್, ಗೋವಿಂದಪ್ಪ ರೇಖ ಸೇರಿದಂತೆ ಇತರರು ಇದ್ದರು.





