
ಶಿರಾ: ಜನಸಾಮಾನ್ಯರು ಜನಪ್ರತಿನಿಧಿಗಳಿಂದ ಬಯಸೋದು ಒಂದೇ ಅದುವೇ ಅಭಿವೃದ್ಧಿ ಕೆಲಸ ಕಾರ್ಯಗಳು, ನಮಗೆ ಆಶೀರ್ವದಿಸಿ ಸಮಾಜದಲ್ಲಿ ಗೌರವ ನೀಡಿರುವಂತಹ ಜನತೆಗೆ ಸರ್ಕಾರದ ಅನುದಾನವನ್ನು ನಿರೀಕ್ಷಿಸದೆ ಏನಾದರು ಅಭಿವೃದ್ಧಿಯ ಕೆಲಸ ಮಾಡಿಯೇ ಅವರ ಋಣ ತಿರುಸುವಂತಹ ಕೆಲಸಗಳನ್ನು ಮಾಡುವುದು ಜನಪ್ರತಿನಿಧಿಗಳ ಕರ್ತವ್ಯ ಎಂದು ವಿ. ಪ. ಸದಸ್ಯ ಹಾಗೂ ಮಧುಗಿರಿ ಸಂಘಟನಾತ್ಮಕ ಜಿಲ್ಲಾಧ್ಯಕ್ಷ ಚಿದಾನಂದ್ ಎಂ. ಗೌಡ ಹೇಳುದರು.
ತಾಲ್ಲೂಕಿನ ಲಕ್ಷ್ಮೀಸಾಗರ ಗ್ರಾಮದ ಶ್ರೀರಾಮ ದೇವಾಲಯಕ್ಕೆ ಗ್ರಾಮಸ್ಥರ ಒತ್ತಾಸೆಯಂತೆ ಸರ್ಕಾರದ ಅನುದಾನಕ್ಕೆ ಕಾಯದೆ, ಸ್ವಂತ ನಿಧಿ ಯಿಂದ ಸೋಲಾರ್ ಹೈಮಾಸ್ಟ್ ದೀಪವನ್ನು ಕೊಡುಗೆ ನೀಡಿ ಲೋಕಾರ್ಪಣೆಗೊಳಿಸಿ ಮಾತ ನಾಡಿದರು.
ತಾಲ್ಲೂಕಿನ ಎಲ್ಲಾ ಗ್ರಾಮಗಳಿಗೂ ಸಿ. ಎಂ. ಜಿ. ಸೂರ್ಯ ಬಿಂಬ ಯೋಜನೆಯಡಿಯಲ್ಲಿ ಸೋಲಾರ್ ಬೆಳಕಿನ ದೀಪ ಅಳವಡಿಸುವ ನನ್ನ ಸಂಕಲ್ಪ ಈಡೇರುತ್ತಿದೆ,ಇದರ ಮುಂದುವರೆದ ಭಾಗವಾಗಿ ಇಂದು ಸಂಕ್ರಾ0ತಿ ಹಬ್ಬದ ದಿನದಂ ದು ಲಕ್ಷೀಸಾಗರ ಗ್ರಾಮದಲ್ಲಿ ಶ್ರೀರಾಮ ದೇವಾ ಲಯದ ಆವರಣಕ್ಕೆ ಸೋಲಾರ್ ಬೆಳಕಿನ ದೀಪವನ್ನು ಅಳವಡಿಸಿರುವುದು ಸಂತಸತ0ದಿದೆ, ಗ್ರಾಮಸ್ಥರೆಲ್ಲ ಒಗ್ಗೂಡಿ ನನ್ನ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿರುವುದು ಅತ್ಯಂತ ಭಾವುಕ ಕ್ಷಣ. ಜನರ ಈ ಪ್ರೀತಿ ಬೆಲೆಕಟ್ಟಲಾಗದ್ದು. ಕ್ಷೇತ್ರದ ಪ್ರತಿ ಹಳ್ಳಿಗೂ ಮೂಲಸೌಕರ್ಯ ಒದಗಿಸುವುದೇ ನನ್ನ ಸಂಕಲ್ಪಕ್ಕೆ ವಿಶೇಷ ದಿನವಾದ ಸಂಕ್ರಾ0ತಿ ಹಬ್ಬ ಸಾಕ್ಷಿಯಾಗಿದೆ, ಜನರ ಈ ಪ್ರೀತಿ, ನಂಬಿಕೆಗೆ ನಾನೆಂದು ಚಿರಋಣಿ ಎಂದರು.
ಈ ವೇಳೆ ಲಕ್ಷ್ಮೀಸಾಗರ ಗ್ರಾಮದ ಶ್ರೀ ರಾಮ ದೇವಾಲಯದ ಆವರಣವು ವಿದ್ಯುತ್ ದೀಪಗಳ ಬೆಳಕು ಮತ್ತು ಗ್ರಾಮಸ್ಥರ ಜೈಕಾರದಿಂದ ಕಳೆಗಟ್ಟಿತ್ತು. ಎಳ್ಳು-ಬೆಲ್ಲ ಹಂಚಿ ಹಬ್ಬವನ್ನು ನೆಚ್ಚಿನ ನಾಯಕನ ಜೊತೆ ಆಚರಿಸಿದ ಗ್ರಾಮಸ್ಥರು, ತಾಲ್ಲೂಕಿನ ಎಲ್ಲಾ ಗ್ರಾಮದ ಅಭಿವೃದ್ಧಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಸೋಲಾರ್ ಹೈಮಾಸ್ಟ್ ಲೈಟ್ ಅಳವಡಿಸಲು ಶ್ರಮಿಸುತ್ತಿರುವ ನಾಯಕನಿಗೆ ಹೃತೂರ್ವಕ ಧನ್ಯವಾದ ಅರ್ಪಿಸಿ ಅವರ ಜನ ಪರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಊರಿನ ಮುಖಂಡರಾದ ಕಣುಮಣ್ಣ, ರಾಮಕೃಷ್ಣಪ್ಪ, ಅಜ್ಜಣ್ಣ, ನಾಗರಾ ಜು, ರಾಘವೇಂದ್ರ ಸಿರಾ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಈರಣ್ಣ ಪಟೇಲ್, ಜಿಲ್ಲಾ ಉಪಾಧ್ಯಕ್ಷರಾದ ಚಿಕ್ಕಣ್ಣ, ಜಿಲ್ಲಾ ಕಾರ್ಯ ದರ್ಶಿಯಾದ ಕುಮಾರ್ ಮಾಸ್ಟರ್, ನಗರಸಭೆ ಮಾಜಿ ಸದಸ್ಯರಾದ ನಟರಾಜ್ ಸಂತೆಪೇಟೆ, ಉಪಾಧ್ಯಕ್ಷರಾದ ಬೊಪ್ಪರಾಯಪ್ಪ, ಪ್ರಧಾನ ಕಾರ್ಯದರ್ಶಿ ಭಾಸ್ಕರ್, ಮುಖಂಡರಾದ ಮದ್ದ ಕ್ಕನಹಳ್ಳಿ ರಂಗನಾಥ್, ಗ್ರಾಮ ಪಂಚಾಯತಿ ಸದಸ್ಯರಾದ ಡಿ ಎಚ್ ಗೌಡ, ಅಜಿತ್, ಊರಿನ ಗ್ರಾಮಸ್ಥರು ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.





