
ಗುಬ್ಬಿ: ಪ್ರತಿ ಮನೆಗಳಲ್ಲಿ ಮನಗಳಲ್ಲಿ ಪ್ರತಿ ಗ್ರಾಮ, ರಾಜ್ಯ ದೇಶದಲ್ಲೇಡೆ ನಾವೆಲ್ಲರೂ ಹಿಂದು ನಾವೆಲ್ಲ ಒಂದು ಎಂದು ಅರ್ಥ ಮಾಡಿಕೊಂಡು ನಮ್ಮ ಹಿಂದೂ ಧರ್ಮವನ್ನು ಕಾಪಾ ಡಿಕೊಳ್ಳಬಹುದು ಎಂದು ಬೆಟ್ಟದಹಳ್ಳಿಯ ಚಂದ್ರಶೇಖರ ಸ್ವಾಮೀಜಿ ತಿಳಿಸಿದರು.
ಗುಬ್ಬಿಯ ಚನ್ನಬಸವೇಶ್ವರ ಸ್ವಾಮಿ ದೇವಾಲಯದ ದಾಸೋಹ ಭವನದಲ್ಲಿ ಹಿಂದೂ ಸಮಾಜ ಸಮಿತಿ ವತಿಯಿಂದ ಹಿಂದೂ ಸಮಾಜೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಪುರಾತನ ಇತಿಹಾ ಸವುಳ್ಳ ಹಿಂದೂ ಧರ್ಮ, ನಮ್ಮ ಸಂಸ್ಕೃತಿ ಸಂಸ್ಕಾರ ಪರಂಪರೆಯನ್ನು ಉಳಿಸುವಂತಹ ಕೆಲಸವನ್ನು ಪ್ರತಿಯೊ ಬ್ಬರೂ ಮಾಡಲೇಬೇಕಿದೆ.
ನಮ್ಮ ದೇಶವನ್ನ ಶಾಂತಿ ಸಮೃದ್ಧಿ ಮಾನವೀಯ ಮೌಲ್ಯಗಳನ್ನ ಉಳಿಸಿಕೊಂಡು ನಾವೆಲ್ಲರೂ ಒಟ್ಟಾಗಿ ಬದುಕಬೇಕು ಎಂದರೆ ಹಿಂದೂ ಧರ್ಮ ದೇಶದಲ್ಲಿ ಉಳಿಯ ಲೇಬೇಕು, ಮತ್ತು ಅದನ್ನು ಕಾಪಾಡಿಕೊಳ್ಳುವಂತಹ ಕೆಲಸವನ್ನ ಪ್ರತಿಯೊಬ್ಬರೂ ಮಾಡಬೇಕಾಗಿದೆ.
ಜನ್ಮ ಕೊಟ್ಟ ತಾಯಿ ಹಾಗೂ ಜನ್ಮ ನೀಡಿದ ಭೂಮಿಗೆ ನಾವು ಯಾವತ್ತೂ ಚಿರಋಣಿಯಾಗಿರಬೇಕು. ಎರಡು ನಮಗೆ ಸ್ವರ್ಗ ಹಾಗಾಗಿ ನಾವೆಲ್ಲರೂ ಸಹ ನಮ್ಮ ಧರ್ಮವನ್ನು ನಮ್ಮ ಹಿಂದುತ್ವವನ್ನ ಬೇ ಳಸುವಂತಹ ಉಳಿಸುವಂತಹ ಕೆಲಸವನ್ನು ಮಾಡಬೇಕಾಗಿದ್ದು, ಇದು ಗ್ರಾಮ ಮಟ್ಟದಲ್ಲಿ ಅಲ್ಲದೆ ಪ್ರತಿಯೊಂದು ಮನೆಯಲ್ಲಿ ಪ್ರತಿಯೊಂದು ಮನದಲ್ಲಿ ಹಿಂದೂ ಸಮಾಜೋತ್ಸವ ನಡೆಯಲಿ ಇದಕ್ಕೆಲ್ಲ ತಾವು ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡಿ ಎಂದು ತಿಳಿಸಿದರು.
ಕೋಡಿಮಠದ ಬಸವ ಬೃಂಗೇಶ್ವರ ಮಹಾಸ್ವಾಮಿಜಿ ಮಾತನಾಡಿ ಸ್ವಾಭಿಮಾನಿ ಸಶಕ್ತ ರಾಷ್ಟ್ರ ನಿರ್ಮಾಣ ಮಾಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಸಮಿತಿಯ ಅಧ್ಯಕ್ಷ ರುದ್ರೇಶ್ ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡರು ಗಳಾದ ಶ್ರೀ ಶಿವಕುಮಾರ ಸ್ವಾಮಿ, ದಕ್ಷಿಣ ಮೂರ್ತಿ, ಸಿದ್ದಲಿಂಗಯ್ಯ, ನಂಜೇಗೌಡರು, ದಾಸಪ್ಪ, ಪಲ್ಲವಿ, ಲತಾ,ಹುಚ್ಚವರೇಗೌಡರು, ದಯಾನಂದ್, ಹೇಮಂತ್ ಸೇರಿದಂತೆ ಇನ್ನಿತರರು ಹಾಜರಿದ್ದರು.





