
ಕೊರಟಗೆರೆ: ಸರ್ಕಾರವು ಪರವಾಗಿ ಭೂಮಾಪಕರ ಹೆಸರಿನಲ್ಲಿ ರೈತರಿಂದ ಕೊಟ್ಯಂತರ ಶುಲ್ಕ ವಸೂಲು ಮಾಡಿಕೊಂಡು ನಮ್ಮನ್ನು ೨೬ ವರ್ಷಗಳಿಂದ ದುಡಿಸಿಕೊಂಡು ಅನ್ಯಾಯ ಮಾಡಿಕೊಂಡು ಬರುತ್ತಿದೆ ಎಂದು ತಾಲ್ಲೂಕು ಪರವಾನಗಿ ಭೂಮಾಪಕರ ಸಂಘದ ಅದ್ಯಕ್ಷ ಡಿ.ನಾರಾಯಣರಾಜು ಆರೋಪಿಸಿದರು.
ಅವರು ಕೊರಟಗೆರೆ ಪಟ್ಟಣದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತ ನಾಡಿ ಸರ್ಕಾರವು ರೈತರಿಂದ ಕ್ರಯ, ಧಾನ, ಹದ್ದುಭಸ್ತು, ತತ್ಕಾಲ್ ಪೋಡಿ ಸೇರಿದಂತೆ ಹಲವು ಪ್ರಕರಣಗಳಿಗೆ ಭೂಮಾಪನಾ ಕಾರ್ಯ ನಿರ್ವಹಿಸಲು ರೈತರಿಂದ ಸಾವಿರಾರು ರೂಗಳ ಶುಲ್ಕವನ್ನು ಪರವಾನಗಿ ಭೂಮಾಪಕರಿಗೆ ನೀಡಬೇಕೆಂದು ವಸೂಲು ಮಾಡುತ್ತಿದೆ, ನಮಗೆ ಅದರಲ್ಲಿ ಕಾಲು ಭಾಗ ಮಾತ್ರ ನೀಡಿ ಮುಕ್ಕಾಲು ಭಾಗ ಸರ್ಕಾರ ಇಟ್ಟುಕೊಳ್ಳುತ್ತಿದೆ, ಈ ಕಾಲು ಭಾಗದ ಹಣದಲ್ಲಿ ನಾವು ಬಾಂದು ಜವಾನರನ್ನು ಹಣ ನೀಡಿ ಕರೆದುಕೊಂಡು ಹೋಗಬೇಕು, ರೈತರ ಜಮೀನಿನ ಹತ್ತಿರದ ಪ್ರಯಾಣ ದರವನ್ನು ನಾವೇ ಭರಸಿಕೊಳ್ಳಬೇಕು ನಮಗೆ ಯಾವುದೇ ಭದ್ರತೆ, ಸೌಲಭ್ಯ ಇಲ್ಲ ಈ ೨೬ ವರ್ಷಗಳ ಅನ್ಯಾಯದ ವಿರುದ್ದ ನಾವು ಒಂದು ತಿಂಗಳಿನಿAದ ರಾಜ್ಯಾದ್ಯಂತ ಮುಷ್ಕರ ಮಾಡುತ್ತಿದ್ದು ನಮಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಸರ್ಕಾರ ವನ್ನು ಒತ್ತಾಯಿಸುತ್ತಿದ್ದೇವೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಮಗೆ ನ್ಯಾಯ ಒದಗಿಸಿಸುವ ಭರವಸೆ ನೀಡಿದ್ದರು ಅದು ಇದವರೆಗೂ ಈಡೇರಲ್ಲ ನಮ್ಮ ಬೇಡಿಕೆ ಈಡೇರÀದ್ದಿದ್ದರೆ ಮುಂದಿನ ದಿನಗಳಲ್ಲಿ ಉಗ್ರಹೋರಾಟ ಮಾಡಲಾಗುವುದು ಎಂದರು.
ಪರವಾಗಿ ಭೂಮಾಪಕ ದ್ವಾರಕನಾಥ್ ಮಾತನಾಡಿ ಸರ್ಕಾರದ ಮಹತ್ವ ಭೂಮಾಪಕನಾ ಯೋಜನೆಗಳಲ್ಲಾ ಬಹುತೇಕ ಕಾರ್ಯನಿರ್ವಹಿಸಿ ಯಶಸ್ವಿಗೋಳಿಸುತ್ತಿರುವುದು ಪರವಾನಗಿ ಭೂಮಾಪಕರು, ದುರದೃಷ್ಟವೇನೆಂದರೆ ಆ ಕೆಲಸದ ಹಣವನ್ನು ಇಲ್ಲಿವರೆಗೂ ನಮಗೆ ನೀಡಲ್ಲ ಇದರಿಂದ ನಮ್ಮ ಕುಟುಂಬ ನಿರ್ವಹಣೆ ತುಂಬಾ ಕಷ್ಟಕರವಾಗುತ್ತಿದೆ ಇದರೊಂದಿಗೆ ನಮಗೆ ಯಾವುದೇ ಭತ್ಯೆ ನೀಡದೆ ಬೇರೆ ತಾಲ್ಲೂಕುಗಳಿಗೂ ಕೆಲಸ ನಿರ್ವಹಿಸಲು ಏಕಾಏಕಿ ಹಾಕುತ್ತಿದ್ದಾರೆ ಅದರ ಕೆಲಸದ ಹಣವನ್ನು ನೀಡದೆ ಬಾಕಿ ಉಳಿಸಿಕೊಂಡಿದ್ದಾರೆ ಇದು ಪರವಾನಗಿ ಭೂಮಾ ಪಕರಿಗೆ ಮಾಡುತ್ತಿರುವ ಘೋರ ಅನ್ಯಾಯ ಎಂದರು.
ಪರವಾನಗಿ ಭೂಮಾಪಕ ಎಸ್,ನಂಜುಡಾರಾದ್ಯ ಮಾತನಾಡಿ ಭೂಮಪನಾ ಕೆಲಸಗಳಲ್ಲಿ ರೈತರಿಗೆ ತಿಂಗಳಿನಿAದ ಆಗುತ್ತಿರುವ ತೊಂದರೆಗೆ ಸರ್ಕಾರವೇ ಕಾರಣ, ನಮಗೆ ವಯಸ್ಸಾಗುತ್ತಾ ಬರುತ್ತಿದೆ ನಮ್ಮ ಹಲವು ಕೆಲಸದ ವೇತನ ಬಾಕಿ ಇದೆ, ನಮಗೆ ಜೀವನ ಭದ್ರತೆ ಇಲ್ಲ, ಈ ಕೆಲಸಬಿಟ್ಟು ನಮಗೆ ಬೇರೆ ಕೆಲಸ ಗೋತ್ತಿಲ್ಲ ನಮ್ಮ ಹೆಸರಿನಲ್ಲಿ ರೈತರಿಂದ ಪಡೆದಿರುವ ನೂರಾರು ಕೋಟಿ ಶುಲ್ಕ ಸರ್ಕಾರದ ಬಳಿ ಇದೆ ದುಯಮಾಡಿ ನಮಗೆ ನಿರ್ದಿಷ್ಠ ವೇತನ ನಿಗಧಿಮಾಡಿ ಎಂದು ಕೋರಿದರು.
ಈ ಸಂದರ್ಭದಲ್ಲಿ ಪರವಾನಗಿ ಭೂಮಾಪಕರಾದ ರಘು ಹೆಚ್, ಮಂಜುನಾಥ ಡಿ.ಎಲ್. ಸುಮ, ಪರಶುರಾಮ್, ನರಸರಾಜು, ನಾಗಭೂಷಣ್, ವೆಂಕಟೇಶಮೂರ್ತಿ, ವಸಂತಕುಮಾರ್, ಭರತ್, ಪ್ರಶಾಂತ್ ಸೇರಿದಂತೆ ಇತರರು ಹಾಜರಿದ್ದರು.





