BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಜಿಲ್ಲೆಗೆ ಹೇಮಾವತಿ ನೀರು ಕೂಡಲೇ ಹರಿಸಬೇಕು, ತಾಲ್ಲೂಕನ್ನು ಬರದ ಪಟ್ಟಿಗೆ ಸೇರಿಸಬೇಕು: ಒತ್ತಾಯ
  • ಅಧಿಕಾರಿಗಳಿಗೆ ಡಿಸಿಎಂ ಕಟ್ಟುನಿಟ್ಟಿನ ಸೂಚನೆ
  • ಕನ್ನಡ ವಿರೋಧಿ ಶಿಕ್ಷಣ ಇಲಾಖೆಯಿಂದ ಕನ್ನಡಕ್ಕೆ ಕಂಟಕ: ಪ್ರೊ.ಬರಗೂರು
  • ನಕಲಿ ದಾಖಲೆ ಸೃಷ್ಟಿಸಿ ವೃದ್ಧಾಪ್ಯ ವೇತನ ವಂಚನೆ
  • ತಳ ಸಮುದಾಯಗಳು ಗುರುತಿಸಿಕೊಳ್ಳಲು ಸಾಂಸ್ಕೃತಿಕ ಮನಸ್ಥಿತಿಯೇ ಕಾರಣ
  • ಸ್ಲ0 ನಿವಾಸಿಗಳ ಕುಂದು ಕೊರತೆ ಈಡೇರಿಸಲು ಆಗ್ರಹಿಸಿ ಪ್ರತಿಭಟನೆ
  • ಬರ ಪರಿಸ್ಥಿತಿಯ ಸಮಗ್ರ ವರದಿ ಕೇಂದ್ರಕ್ಕೆ ಡಾ.ಜಿ.ಪರಮೇಶ್ವರ
  • ಹೆದ್ದಾರಿಯಲ್ಲಿ ಅವೈಜ್ಞಾನಿಕ ಅಂಡರ್ ಪಾಸ್ ನಿರ್ಮಾಣ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಅಧಿಕಾರಿಗಳಿಗೆ ಡಿಸಿಎಂ ಕಟ್ಟುನಿಟ್ಟಿನ ಸೂಚನೆ
news

ಅಧಿಕಾರಿಗಳಿಗೆ ಡಿಸಿಎಂ ಕಟ್ಟುನಿಟ್ಟಿನ ಸೂಚನೆ

ಜೆಜೆಎಂ: ಕಾಮಗಾರಿ ವಿಳಂಬ ಮಾಡುತ್ತಿರುವ ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್ಗೆ ಸೇರಿಸಿ
By News Desk BenkiyabaleUpdated:August 11, 2026 4:44 pm

ತುಮಕೂರು: ಜಲಜೀವನ್ ಮಿಷನ್ ಯೋಜನೆ ೨೦೨೨ರಲ್ಲಿ ಪ್ರಾರಂಭವಾಗಿದ್ದು, ೨೦೨೪ರಲ್ಲಿ ಕಾಮಗಾರಿ ಮುಗಿಯಬೇಕಿತ್ತು. ಜಿಲ್ಲೆಯಲ್ಲಿ ೪೪೨ ಕಾಮಗಾರಿಗಳು ಈವರೆಗೂ ಪ್ರಾರಂಭವಾಗಿಲ್ಲ. ಗುತ್ತಿಗೆದಾರರಿಗೆ ಕಾಮಗಾರಿ ನೀಡುವಾಗ ಗಡುವು ನೀಡಲಾಗಿರುತ್ತದೆ. ಈ ಬಗ್ಗೆ ಎಚ್ಚರಿಸಬೇಕಲ್ಲವೇ? ಕಾಮಗಾರಿ ವಿಳಂಬ ಮಾಡಿರುವ ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್ಗೆ ಸೇರಿಸಿ ಎಂದು ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ: ಜಿ.ಪರಮೇಶ್ವರ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದರು.
ಸೋಮವಾರ ಸಂಜೆ ಜಿಲ್ಲೆಯ ಶಿರಾ, ಪಾವಗಡ, ಮಧುಗಿರಿ ತಾಲೂಕುಗಳ ವಿವಿಧ ಗ್ರಾಮಗಳ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಮಧುಗಿರಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಧುಗಿರಿ ಕಂದಾಯ ಉಪ ವಿಭಾಗದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಕುಡಿಯುವ ನೀರಿನ ಲಭ್ಯತೆ, ಜಾನುವಾರುಗಳಿಗೆ ಮೇವು, ಜನರಿಗೆ ಉದ್ಯೋಗ ಸೇರಿದಂತೆ ವಿವಿಧ ವಿಷಯಗಳ ಕುರಿತು ಸುದೀರ್ಘವಾಗಿ ಚರ್ಚಿಸಿ, ಬರ ಪರಿಸ್ಥಿತಿ ಎದುರಿಸಲು ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಿದರು.
ಮುಂದಿನ ಸಭೆಗಳಲ್ಲಿ ಕುಡಿಯುವ ನೀರಿಗೆ ಸಂಬAಧಿಸಿದAತೆ ನಗರ ಮತ್ತು ಗ್ರಾಮೀಣ ಭಾಗದ ಎಲ್ಲ ರೀತಿಯ ಯೋಜನೆಗಳ ಮಾಹಿತಿಯನ್ನು ತರಬೇಕು. ಎಷ್ಟು ಶುದ್ಧ ನೀರಿನ ಘಟಕಗಳಿವೆ. ಯಾವುದಕ್ಕೆ ಎಷ್ಟು ಖರ್ಚು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಿರಬೇಕು. ಎಲ್ಲದಕ್ಕೂ ಸಬೂಬು ಹೇಳಿದರೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಬರಗಾಲ ಇರುವುದರಿಂದ ಜನರು ಉದ್ಯೋಗಕ್ಕಾಗಿ ಊರನ್ನು ಬಿಟ್ಟು ವಲಸೆ ಹೋಗಬಾರದು ಎಂಬ ನಿಟ್ಟಿನಲ್ಲಿ ‘ವಿಬಿ ಜಿ ರಾಮ್ ಜಿ’ ಯೋಜನೆಯಡಿ ಉದ್ಯೋಗ ನೀಡುವಂತೆ ಸೂಚನೆ ನೀಡಲಾಗಿದೆ. ಶಿರಾ ತಾಲೂಕಿನಲ್ಲಿ ಈವರೆಗೂ ಉದ್ಯೋಗ ನೀಡಿಲ್ಲ. ಬರೀ ೮ ಲಕ್ಷ ರೂ.ಗಳನ್ನು ಖರ್ಚು ಮಾಡಲಾಗಿದೆ. ಏನೇ ಕೇಳಿದರು ತಾಂತ್ರಿಕ ಸಮಸ್ಯೆ ಎಂದು ನೆಪ ಹೇಳುತ್ತೀರಿ. ತುರ್ತು ಸಂದರ್ಭಗಳಲ್ಲಿ ಜನರ ಸಂಕಷ್ಟದ ಸಮಯವನ್ನು ತಮಾಷೆಯಾಗಿ ತೆಗೆದುಕೊಂಡರೆ ಸಹಿಸುವುದಿಲ್ಲ ಎಂದು ಸೂಚಿಸಿದರು.
ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಕೃಷಿ ಚಟುವಟಿಕೆಗಳು ನಿಂತು ಹೋಗಿವೆ. ಶಿರಾದಲ್ಲಿ ಶೇಂಗಾ, ರಾಗಿ ಸೇರಿದಂತೆ ಎಲ್ಲ ಬೆಳೆಗಳು ಒಣಗಿ ಹೋಗುವ ಪರಿಸ್ಥಿತಿ ಇದೆ. ಈಗ ಮಳೆ ಬಂದರೂ ಬೆಳೆಗಳು ಸುಧಾರಿಸಿಕೊಳ್ಳುವ ಪರಿಸ್ಥಿತಿ ಇಲ್ಲ. ಪಾವಗಡ, ಮಧುಗಿರಿ ತಾಲೂಕಿನಲ್ಲಿಯೂ ಇದೇ ಪರಿಸ್ಥಿತಿ ಇದೆ. ನಾಲ್ಕು ತಾಲ್ಲೂಕುಗಳಲ್ಲಿ ಸಂಪೂರ್ಣವಾಗಿ ಬೆಳೆ ಬರುವ ಯಾವ ಮುನ್ಸೂಚನೆಯೂ ಇಲ್ಲ ಎಂದು ಪರಿಸ್ಥಿತಿಯನ್ನು ವಿವರಿಸಿದರು.
ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಅಗತ್ಯ ಬಂದಾಗ ಖರ್ಚು ಮಾಡಲು ತಹಶೀಲ್ದಾರ್‌ಗಳಿಗೆ ಅನುದಾನ ನೀಡಲಾಗಿದೆ. ಅಧಿಕಾರಿಗಳ ವಲಯದಿಂದ ದುಡ್ಡಿಲ್ಲ ಎಂಬ ಅನಾವಶ್ಯಕ ಮಾತುಗಳು ಕೇಳಿ ಬಂದರೆ ಸುಮ್ಮನಿರುವುದಿಲ್ಲ ಎಂದರು.
ಮಧುಗಿರಿ ಕಂದಾಯ ಉಪವಿಭಾಗದ ನಾಲ್ಕು ತಹಶೀಲ್ದಾರ್ ಮತ್ತು ಇಒಗಳು ‘ವಿಬಿ ಜಿ ರಾಮ್ ಜಿ’ ಯೋಜನೆಗೆ ೫೧ ಸಾವಿರ ರೂ.ಗಳ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಎಲ್ಲ ತಾಲೂಕುಗಳಲ್ಲಿ ಸರಿಯಾಗಿ ಕೆಲಸ ನೀಡುತ್ತಿಲ್ಲ. ಮೇಲಾಧಿಕಾರಿಗಳು ಅನುಮೋದನೆ ನೀಡಿ ಸುಮ್ಮನೆ ಕುಳಿತರೆ ಸಾಲುವುದಿಲ್ಲ. ಕಾಮಗಾರಿಗಳು ಸಮರ್ಪಕವಾಗಿ ನಡೆಯುತ್ತಿವೆಯೇ ಎಂಬುದನ್ನು ಪರಿಶೀಲನೆ ನಡೆಸಬೇಕು. ಜನರಿಗೆ ಉದ್ಯೋಗ ನೀಡುವ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು.
ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಜನರಿಗೆ ಉದ್ಯೋಗ ನೀಡುವ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿ ಕೆಲಸ ಮಾಡಬೇಕು. ಹವಾಮಾನ ವ್ಯತ್ಯಾಸದಿಂದ ಜನರಿಗೆ ಆರೋಗ್ಯ ಸಮಸ್ಯೆಯಾಗಬಹುದು. ಈಗಿನಿಂದಲೇ ಮುನ್ನೆಚ್ಚರಿಕೆ ವಹಿಸಬೇಕು. ಈ ಬಗ್ಗೆ ಡಿಸಿ, ಸಿಇಒ ಅವರಿಗೆ ಪ್ರತಿ ವಾರ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕಂದಾಯ, ಕೃಷಿ, ಪಶುಸಂಗೋಪನೆ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು. ಸರ್ಕಾರದ ಸವಲತ್ತುಗಳನ್ನು ನೀಡುವಾಗ ಅರ್ಹರನ್ನು ಗುರುತಿಸಬೇಕು. ಕಷ್ಟದಲ್ಲಿರುವ ಬಡ ಜನರಿಗೆ ಸರ್ಕಾರದ ಸವಲತ್ತುಗಳು ತಲುಪಿದರೆ ಅನುಕೂಲವಾಗುತ್ತದೆ ಎಂದರು.
ಸಭೆಯಲ್ಲಿ ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ, ಪಾವಗಡ ಶಾಸಕ ಹೆಚ್.ವಿ. ವೆಂಕಟೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಮಧುಗಿರಿ ಉಪವಿಭಾಧಿಕಾರಿ ಶಿವಪ್ಪ ಮುಂತಾದವರು ಇದ್ದರು.

(Visited 1 times, 1 visits today)
dcm dr.g.parameshwar kannada news karnataka Koratagere local news Tumkur mahanagara palike tumkur news ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು:
Previous Articleಕನ್ನಡ ವಿರೋಧಿ ಶಿಕ್ಷಣ ಇಲಾಖೆಯಿಂದ ಕನ್ನಡಕ್ಕೆ ಕಂಟಕ: ಪ್ರೊ.ಬರಗೂರು
Next Article ಜಿಲ್ಲೆಗೆ ಹೇಮಾವತಿ ನೀರು ಕೂಡಲೇ ಹರಿಸಬೇಕು, ತಾಲ್ಲೂಕನ್ನು ಬರದ ಪಟ್ಟಿಗೆ ಸೇರಿಸಬೇಕು: ಒತ್ತಾಯ
News Desk Benkiyabale

Related Posts

ಜಿಲ್ಲೆಗೆ ಹೇಮಾವತಿ ನೀರು ಕೂಡಲೇ ಹರಿಸಬೇಕು, ತಾಲ್ಲೂಕನ್ನು ಬರದ ಪಟ್ಟಿಗೆ ಸೇರಿಸಬೇಕು: ಒತ್ತಾಯ

August 11, 2026 4:46 pm news

ಕನ್ನಡ ವಿರೋಧಿ ಶಿಕ್ಷಣ ಇಲಾಖೆಯಿಂದ ಕನ್ನಡಕ್ಕೆ ಕಂಟಕ: ಪ್ರೊ.ಬರಗೂರು

August 10, 2026 5:47 pm news

ನಕಲಿ ದಾಖಲೆ ಸೃಷ್ಟಿಸಿ ವೃದ್ಧಾಪ್ಯ ವೇತನ ವಂಚನೆ

August 10, 2026 5:46 pm news
ತಾಜಾ ಸುದ್ಧಿಗಳು
news

ಜಿಲ್ಲೆಗೆ ಹೇಮಾವತಿ ನೀರು ಕೂಡಲೇ ಹರಿಸಬೇಕು, ತಾಲ್ಲೂಕನ್ನು ಬರದ ಪಟ್ಟಿಗೆ ಸೇರಿಸಬೇಕು: ಒತ್ತಾಯ

August 11, 2026 4:46 pm
news

ಅಧಿಕಾರಿಗಳಿಗೆ ಡಿಸಿಎಂ ಕಟ್ಟುನಿಟ್ಟಿನ ಸೂಚನೆ

August 11, 2026 4:44 pm
news

ಕನ್ನಡ ವಿರೋಧಿ ಶಿಕ್ಷಣ ಇಲಾಖೆಯಿಂದ ಕನ್ನಡಕ್ಕೆ ಕಂಟಕ: ಪ್ರೊ.ಬರಗೂರು

August 10, 2026 5:47 pm
news

ನಕಲಿ ದಾಖಲೆ ಸೃಷ್ಟಿಸಿ ವೃದ್ಧಾಪ್ಯ ವೇತನ ವಂಚನೆ

August 10, 2026 5:46 pm
news

ತಳ ಸಮುದಾಯಗಳು ಗುರುತಿಸಿಕೊಳ್ಳಲು ಸಾಂಸ್ಕೃತಿಕ ಮನಸ್ಥಿತಿಯೇ ಕಾರಣ

August 10, 2026 5:45 pm
news

ಸ್ಲ0 ನಿವಾಸಿಗಳ ಕುಂದು ಕೊರತೆ ಈಡೇರಿಸಲು ಆಗ್ರಹಿಸಿ ಪ್ರತಿಭಟನೆ

August 10, 2026 5:44 pm
Our Youtube Channel
Our Picks

ಜಿಲ್ಲೆಗೆ ಹೇಮಾವತಿ ನೀರು ಕೂಡಲೇ ಹರಿಸಬೇಕು, ತಾಲ್ಲೂಕನ್ನು ಬರದ ಪಟ್ಟಿಗೆ ಸೇರಿಸಬೇಕು: ಒತ್ತಾಯ

August 11, 2026 4:46 pm

ಅಧಿಕಾರಿಗಳಿಗೆ ಡಿಸಿಎಂ ಕಟ್ಟುನಿಟ್ಟಿನ ಸೂಚನೆ

August 11, 2026 4:44 pm

ಕನ್ನಡ ವಿರೋಧಿ ಶಿಕ್ಷಣ ಇಲಾಖೆಯಿಂದ ಕನ್ನಡಕ್ಕೆ ಕಂಟಕ: ಪ್ರೊ.ಬರಗೂರು

August 10, 2026 5:47 pm

ನಕಲಿ ದಾಖಲೆ ಸೃಷ್ಟಿಸಿ ವೃದ್ಧಾಪ್ಯ ವೇತನ ವಂಚನೆ

August 10, 2026 5:46 pm

ತಳ ಸಮುದಾಯಗಳು ಗುರುತಿಸಿಕೊಳ್ಳಲು ಸಾಂಸ್ಕೃತಿಕ ಮನಸ್ಥಿತಿಯೇ ಕಾರಣ

August 10, 2026 5:45 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಜಿಲ್ಲೆಗೆ ಹೇಮಾವತಿ ನೀರು ಕೂಡಲೇ ಹರಿಸಬೇಕು, ತಾಲ್ಲೂಕನ್ನು ಬರದ ಪಟ್ಟಿಗೆ ಸೇರಿಸಬೇಕು: ಒತ್ತಾಯ

By News Desk BenkiyabaleAugust 11, 2026 4:46 pm

ತುರುವೇಕೆರೆ: ಜಿಲ್ಲೆಗೆ ಹೇಮಾವತಿ ನೀರು ಕೂಡಲೇ ಹರಿಸಬೇಕು ಹಾಗೂ ತಾಲೂಕನ್ನು ಬರದ ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿ ತಾಲೂಕು ಜೆಡಿಎಸ್…

ಅಧಿಕಾರಿಗಳಿಗೆ ಡಿಸಿಎಂ ಕಟ್ಟುನಿಟ್ಟಿನ ಸೂಚನೆ

August 11, 2026 4:44 pm

ಕನ್ನಡ ವಿರೋಧಿ ಶಿಕ್ಷಣ ಇಲಾಖೆಯಿಂದ ಕನ್ನಡಕ್ಕೆ ಕಂಟಕ: ಪ್ರೊ.ಬರಗೂರು

August 10, 2026 5:47 pm

ನಕಲಿ ದಾಖಲೆ ಸೃಷ್ಟಿಸಿ ವೃದ್ಧಾಪ್ಯ ವೇತನ ವಂಚನೆ

August 10, 2026 5:46 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.