BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ತುಮಕೂರಿಗೆ ಆಗಮಿಸಿದ ರಾಜೀವ್ ಸದ್ಬಾವನ ರಥಯಾತ್ರೆ
  • ಕನಿಷ್ಠ ವೇತನ ಪರಿಷ್ಕೃರಣೆ ಆದೇಶ ಜಾರಿ ಮಾಡಲು ಒತ್ತಾಯಿಸಿ ಪ್ರತಿಭಟನೆ
  • ಅಲೆಮಾರಿಗಳಿಗೆ ಮನೆ ಕಟ್ಟಿಕೊಡುವಂತೆ ಶಾಸಕರಿಗೆ ಮನವಿ
  • ಪದವಿಧರ ಕ್ಷೇತ್ರ: ಎನ್‌ಡಿಎ ಅಭ್ಯರ್ಥಿ ಕೆ.ಎಂ.ಸುರೇಶ್ ಪ್ರಚಾರ
  • ಜಿಲ್ಲೆಗೆ ಹೇಮಾವತಿ ನೀರು ಕೂಡಲೇ ಹರಿಸಬೇಕು, ತಾಲ್ಲೂಕನ್ನು ಬರದ ಪಟ್ಟಿಗೆ ಸೇರಿಸಬೇಕು: ಒತ್ತಾಯ
  • ಅಧಿಕಾರಿಗಳಿಗೆ ಡಿಸಿಎಂ ಕಟ್ಟುನಿಟ್ಟಿನ ಸೂಚನೆ
  • ಕನ್ನಡ ವಿರೋಧಿ ಶಿಕ್ಷಣ ಇಲಾಖೆಯಿಂದ ಕನ್ನಡಕ್ಕೆ ಕಂಟಕ: ಪ್ರೊ.ಬರಗೂರು
  • ನಕಲಿ ದಾಖಲೆ ಸೃಷ್ಟಿಸಿ ವೃದ್ಧಾಪ್ಯ ವೇತನ ವಂಚನೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಪುನಶ್ಚೇತನಗೊಂಡ ಕೆರೆ ಗ್ರಾಮಸ್ಥರಿಗೆ ಹಸ್ತಾಂತರ
ಇತರೆ ಸುದ್ಧಿಗಳು

ಪುನಶ್ಚೇತನಗೊಂಡ ಕೆರೆ ಗ್ರಾಮಸ್ಥರಿಗೆ ಹಸ್ತಾಂತರ

By News Desk BenkiyabaleUpdated:March 27, 2026 4:19 pm

ತಿಪಟೂರು: ತಾಲ್ಲೂಕಿನ ಕಸಬಾ ಹೋಬಳಿಯ ಮತ್ತಿಹಳ್ಳಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಮ್ಮೂರು ನಮ್ಮ ಕೆರೆ ಅಡಿಯಲ್ಲಿ ಪುನಶ್ಚೇತನಗೊಂಡ ಕೆರೆ ಗ್ರಾಮಸ್ಥರಿಗೆ ಹಸ್ತಾಂತರ, ಸೂರಿಲ್ಲದ ನಿರ್ಗತಿಕರಾದ ಶಂಕರಮ್ಮನವರಿಗೆ ಶ್ರೀ ಕ್ಷೇತ್ರದ ವತಿಯಿಂದ ನಿರ್ಮಿಸಲಾದ ವಾತ್ಸಲ್ಯ ಮನೆ ಹಸ್ತಾಂತರ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಬೆಂಚ್ ಡೆಸ್ಕ್ಗಳ ವಿತರಣೆ ಕಾರ್ಯಕ್ರಮ ಗುರುವಾರ ನಡೆಯಿತು.
ಮತ್ತಿಹಳ್ಳಿ ಕೆರೆ ಹಸ್ತಾಂತರ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಚ್.ಎಮ್.ಸುದರ್ಶನ್ ಮಾತಾನಾಡಿ ಧರ್ಮಸ್ಥಳ ಕ್ಷೇತ್ರದಿಂದ ನಾನಾ ಕಾರ್ಯಗಳು ನೆಡೆಯುತ್ತಿದ್ದು, ಕೆರೆಗಳಲ್ಲಿ ಮಣ್ಣು ತೆಗೆಯುವ ಮೂಲಕ ಪರಿಸರ ಸಂರಕ್ಷಣೆಗೆ ಹೆಚ್ಚಿನ ಅಧ್ಯತೆ ನೀಡಲಾಗಿದೆ. ಹಸ್ತಾಂತರಗೊ0ಡ ಕೆರೆಯನ್ನು ಉಸ್ತುವಾರಿ ಸಮಿತಿಯು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದಾಗ ಮಾತ್ರ ಮಾಡಿದ ಕಾರ್ಯಕ್ಕೆ ಬೆಲೆಸಿಗುತ್ತದೆ ಎಂದರು.
ತಿಪಟೂರು ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವಿತರಣಾ ಕಾರ್ಯಕ್ರಮವನ್ನು ತಾಲ್ಲೂಕು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುದರ್ಶನ್ ರವರ ಸಮ್ಮುಖದಲ್ಲಿ ಹಮ್ಮಿಕೊಳ್ಳಲಾಗಿತ್ತು.ಮೊದಲಿಗೆ ಯೋಜನೆಯ ವತಿಯಿಂದ ಮಾಶಾಸನ ಪಡೆಯುತ್ತಿರುವ ಸೂರಿಲ್ಲದ ಶಂಕರಮ್ಮರವರಿಗೆ ವಿಧಿವಿದಾನಗಳ ಪ್ರಕಾರ ವಾತ್ಸಲ್ಯ ಮನೆಯನ್ನು ಹಸ್ತಾಂತರ ಮಾಡಿ ಶುಭಕೋರಲಾಯಿತು.
ತುಮಕೂರು ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ಗ್ರಾಮಾ ಭಿವೃದ್ಧಿ ಯೋಜನೆಯ ಸೇವೆ ತಿಪಟೂರು ತಾಲ್ಲೂಕಿನಲ್ಲಿ ಪ್ರಾರಂಭ ಗೊಂಡ ೧೨ ವರ್ಷದಲ್ಲಿ ಕೃಷಿ, ಜ್ಙಾನವಿಕಾಸ, ಕೆರೆ ಪುನಶ್ಚೇತನ, ರೈತಕ್ಷೇತ್ರ ಪಾಠಶಾಲೆ, ಅದ್ಯಯನ ಪ್ರವಾಸ, ಮಾಶಾಸನ, ವಾತ್ಸಲ್ಯ ಮನೆ, ಶುದ್ದ ಕುಡಿಯುವ ನೀರಿನ ಘಟಕಗಳ ಸ್ಥಾಪನೆ, ಸುಜ್ಙಾನನಿಧಿ ಶಿಷ್ಯವೇತನ, ಸಮುದಾಯ ಭವನಗಳ ನಿರ್ಮಾಣ, ಹಾಲಿನ ಡೈರಿ ನಿರ್ಮಾಣ, ಮಠ ಮಂದಿರ ಮಸೀದಿ ಚರ್ಚ್ ದೇವಸ್ಥಾನಗಳ ಜೀರ್ಣೋದ್ಧಾರ, ಜ್ಞಾನದೀಪ ಶಿಕ್ಷಕರ ನೇಮಕ, ಶಾಲಾ ಮಕ್ಕಳಿಗೆ ಬೆಂಚು ಡೆಸ್ಕ್ ವಿತರಣೆ, ಟ್ಯೂಷನ್ ಕ್ಲಾಸ್ ಶೌಚಾಲಯಗಳ ನಿರ್ಮಾಣ, ಹಿಂದೂ ರುದ್ರಭೂಮಿ ಪುನಶ್ಚೇತನ, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ, ಮದ್ಯವರ್ಜನ ಶಿಬಿರ ಇನ್ನು ಹತ್ತು ಹಲವಾರು ಸೇವೆಗಳಿಗೆ ಸರಿಸುಮಾರು ೮೦ ಕೋಟಿ ರೂಪಾಯಿಗೂ ಅಧಿಕ ಹಣವನ್ನು ಬಡವರ ಏಳಿಗಿಗಾಗಿ ವಿನಿಯೋಗಿಸಿದೆ ಎಂದು ತಿಳಿಸಿದರು.
ಇಂದು ಶ್ರೀ ಕ್ಷೇತ್ರದ ವತಿಯಿಂದ ರಾಜ್ಯಾದ್ಯಂತ ೧೦೫೩ಕ್ಕೂ ಅಧಿಕ ಕೆರೆಗಳನ್ನು ಪುನಶ್ಚೇತನಗೊಳಿಸಿದ್ದು ಲಕ್ಷಾಂತರ ರೈತರ ಕೃಷಿಭೂಮಿಗೆ ಜೀವ ಜಲಾದಾರೆಯನ್ನು ಸಮರ್ಪಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಇಷ್ಟಲ್ಲದೆ ತುಮಕೂರು ಜಿಲ್ಲೆಯ ಒಟ್ಟು ೨೦೫ ಶಾಲೆಗಳಿಗೆ ೧೫೪೦ ಜೊತೆ ಬೆಂಚು ಡೆಸ್ಕ್ ಗಳನ್ನು ಶಾಲಾ ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ, ಇದರೊಟ್ಟಿಗೆ ತುಮಕೂರು ಜಿಲ್ಲೆಯಲ್ಲಿ ಇದುವರೆಗೂ ೬೬ ಹಾಗೂ ತಿಪಟೂರು ತಾಲ್ಲೂಕಿನಲ್ಲಿ ೧೫ ವಾತ್ಸಲ್ಯ ಮನೆ ನಿರ್ಮಿಸಲಾಗಿದೆ ಇಷ್ಟಲ್ಲದೇ ತುಮಕೂರು ಜಿಲ್ಲೆಯಲ್ಲಿ ೧೦೨ ಕೆರೆಗಳನ್ನು ಹಾಗೂ ತಿಪಟೂರು ತಾಲ್ಲೂಕಿನಲ್ಲಿ ೧೫ ಕೆರೆಗಳಿಗೆ ಪುನಶ್ಚೇತನದ ಭಾಗ್ಯ ಶ್ರೀ ಕ್ಷೇತ್ರದ ವತಿಯಿಂದ ದೊರೆತಿದ್ದು ಈ ಎಲ್ಲಾ ಸೇವೆಗಳ ಜೊತೆಗೆ ಇನ್ನಷ್ಟು ಸೇವೆಗಳು ದೊರೆತು ತುಮಕೂರು ಜಿಲ್ಲೆ ಹಾಗೂ ತಿಪಟೂರು ತಾಲ್ಲೂಕಿನ ಬಡತನ ನಿರ್ಮೂಲನೆಗೊಂಡು ಸಂಪತ್ಬರಿತವಾಗಿ ಮಾರ್ಪಾಡುಗೊಂಡಿದೆ
ಸAದರ್ಭದಲ್ಲಿ ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಉದಯ್.ಕೆ, ಗ್ರಾಮದ ಪಟೇಲರಾದ ಜಯಣ್ಣ, ಕೆರೆ ಸಮಿತಿ ಅದ್ಯಕ್ಷರಾದ ಹರೀಶ್‌ಕುಮಾರ್ ಹಾಗೂ ಉಪಾದ್ಯಕ್ಷರಾದ ಶ್ರೀಕಂಠಪ್ಪ, ನಿವೃತ್ತ ಶಾಲಾ ಶಿಕ್ಷಕರಾದ ಸೋಮಶೇಖರ್, ಜಿಲ್ಲಾ ಜನಜಾಗೃತಿ ವೇಧಿಕೆ ಸದಸ್ಯರಾದ ಶ್ರೀಮತಿ ರೇಖಾ ಹಾಗೂ ಮಲ್ಲಿಗಪ್ಪಾಚಾರ್. ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಉದಯ್.ಕೆ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ರೇಣುಕಮ್ಮಓಂಕಾರಮೂರ್ತಿ, ಕೃಷಿ ಅಧಿಕಾರಿ ಪ್ರಮೋದ್‌ಕುಮಾರ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಪದ್ಮಾವತಿ, ಮೇಲ್ವಿಚಾರಕ ಮನೀಷ್, ಸೇವಾಪ್ರತಿನಿಧಿಗಳಾದ ಕಮಲಮ್ಮ, ಮೀನಾಕ್ಷಿ ಗ್ರಾಮದ ಮುಖಂಡರಾದ ಪರಮೇಶಪ್ಪ, ಓಂಕಾರಮೂರ್ತಿ, ಪ್ರೇಕ್ಷಾ ಶಾಮಿಯಾನ ಸಿದ್ದಪ್ಪ, ಜೆಸಿಬಿ ಗಣೇಶ್, ಲಿಂಗರಾಜು, ವಜ್ರಮುನಿ, ಸತೀಶ್, ಪುನೀತ್, ರಂಜಿತ್, ನವೀನ್, ಜಯಣ್ಣ, ಪ್ರೇಮಾ, ಮಹದೇವಮ್ಮ, ಕಾಂತಮ್ಮ, ಜ್ಯೋತಿ. ಕಮಲಮ್ಮ, ರಾಣೀ, ಉಷಾ, ಶಾರದಮ್ಮ, ರತ್ನಮ್ಮ, ಸೇರಿದಂತೆ ಧರ್ಮಸ್ಥಳ ಸಂಘದ ಪಾಲುದಾರ ಹಾಜರಿದ್ದರು.

(Visited 1 times, 1 visits today)
Previous Articleಸರ್ಕಾರವು ಪರವಾಗಿ ಭೂಮಾಪಕರ ಹೆಸರಿನಲ್ಲಿ ರೈತಗೆ ಅನ್ಯಾಯ
Next Article ಏ.1 ರಂದು ಸಿದ್ದಗಂಗಾ ಮಠಕ್ಕೆ ರಾಷ್ಟ್ರಪತಿ ಭೇಟಿ
News Desk Benkiyabale

Related Posts

ತುಮಕೂರಿಗೆ ಆಗಮಿಸಿದ ರಾಜೀವ್ ಸದ್ಬಾವನ ರಥಯಾತ್ರೆ

August 11, 2026 4:53 pm news

ಕನಿಷ್ಠ ವೇತನ ಪರಿಷ್ಕೃರಣೆ ಆದೇಶ ಜಾರಿ ಮಾಡಲು ಒತ್ತಾಯಿಸಿ ಪ್ರತಿಭಟನೆ

August 11, 2026 4:52 pm news

ಅಲೆಮಾರಿಗಳಿಗೆ ಮನೆ ಕಟ್ಟಿಕೊಡುವಂತೆ ಶಾಸಕರಿಗೆ ಮನವಿ

August 11, 2026 4:50 pm news
ತಾಜಾ ಸುದ್ಧಿಗಳು
news

ತುಮಕೂರಿಗೆ ಆಗಮಿಸಿದ ರಾಜೀವ್ ಸದ್ಬಾವನ ರಥಯಾತ್ರೆ

August 11, 2026 4:53 pm
news

ಕನಿಷ್ಠ ವೇತನ ಪರಿಷ್ಕೃರಣೆ ಆದೇಶ ಜಾರಿ ಮಾಡಲು ಒತ್ತಾಯಿಸಿ ಪ್ರತಿಭಟನೆ

August 11, 2026 4:52 pm
news

ಅಲೆಮಾರಿಗಳಿಗೆ ಮನೆ ಕಟ್ಟಿಕೊಡುವಂತೆ ಶಾಸಕರಿಗೆ ಮನವಿ

August 11, 2026 4:50 pm
news

ಪದವಿಧರ ಕ್ಷೇತ್ರ: ಎನ್‌ಡಿಎ ಅಭ್ಯರ್ಥಿ ಕೆ.ಎಂ.ಸುರೇಶ್ ಪ್ರಚಾರ

August 11, 2026 4:49 pm
news

ಜಿಲ್ಲೆಗೆ ಹೇಮಾವತಿ ನೀರು ಕೂಡಲೇ ಹರಿಸಬೇಕು, ತಾಲ್ಲೂಕನ್ನು ಬರದ ಪಟ್ಟಿಗೆ ಸೇರಿಸಬೇಕು: ಒತ್ತಾಯ

August 11, 2026 4:46 pm
news

ಅಧಿಕಾರಿಗಳಿಗೆ ಡಿಸಿಎಂ ಕಟ್ಟುನಿಟ್ಟಿನ ಸೂಚನೆ

August 11, 2026 4:44 pm
Our Youtube Channel
Our Picks

ತುಮಕೂರಿಗೆ ಆಗಮಿಸಿದ ರಾಜೀವ್ ಸದ್ಬಾವನ ರಥಯಾತ್ರೆ

August 11, 2026 4:53 pm

ಕನಿಷ್ಠ ವೇತನ ಪರಿಷ್ಕೃರಣೆ ಆದೇಶ ಜಾರಿ ಮಾಡಲು ಒತ್ತಾಯಿಸಿ ಪ್ರತಿಭಟನೆ

August 11, 2026 4:52 pm

ಅಲೆಮಾರಿಗಳಿಗೆ ಮನೆ ಕಟ್ಟಿಕೊಡುವಂತೆ ಶಾಸಕರಿಗೆ ಮನವಿ

August 11, 2026 4:50 pm

ಪದವಿಧರ ಕ್ಷೇತ್ರ: ಎನ್‌ಡಿಎ ಅಭ್ಯರ್ಥಿ ಕೆ.ಎಂ.ಸುರೇಶ್ ಪ್ರಚಾರ

August 11, 2026 4:49 pm

ಜಿಲ್ಲೆಗೆ ಹೇಮಾವತಿ ನೀರು ಕೂಡಲೇ ಹರಿಸಬೇಕು, ತಾಲ್ಲೂಕನ್ನು ಬರದ ಪಟ್ಟಿಗೆ ಸೇರಿಸಬೇಕು: ಒತ್ತಾಯ

August 11, 2026 4:46 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ತುಮಕೂರಿಗೆ ಆಗಮಿಸಿದ ರಾಜೀವ್ ಸದ್ಬಾವನ ರಥಯಾತ್ರೆ

By News Desk BenkiyabaleAugust 11, 2026 4:53 pm

ತುಮಕೂರು: ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ಹತ್ಯೆಗೀಡಾದ ಶ್ರೀ ಪರೆಂಬದೂರಿನಿAದ ಹೊರಟಿರುವ ರಾಜೀವ್ ಸದ್ಬಾವನ ರಥಯಾತ್ರೆ ತುಮಕೂರು…

ಕನಿಷ್ಠ ವೇತನ ಪರಿಷ್ಕೃರಣೆ ಆದೇಶ ಜಾರಿ ಮಾಡಲು ಒತ್ತಾಯಿಸಿ ಪ್ರತಿಭಟನೆ

August 11, 2026 4:52 pm

ಅಲೆಮಾರಿಗಳಿಗೆ ಮನೆ ಕಟ್ಟಿಕೊಡುವಂತೆ ಶಾಸಕರಿಗೆ ಮನವಿ

August 11, 2026 4:50 pm

ಪದವಿಧರ ಕ್ಷೇತ್ರ: ಎನ್‌ಡಿಎ ಅಭ್ಯರ್ಥಿ ಕೆ.ಎಂ.ಸುರೇಶ್ ಪ್ರಚಾರ

August 11, 2026 4:49 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.