
ಕೊರಟಗೆರೆ: ಕೊರಟಗೆರೆ ತಾಲೂಕಿನಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆಯುತ್ತಿದ್ದ ೮,೫೮೯ ಮಂದಿ ಫಲಾನುಭವಿಗಳಿಗೆ ಕಳೆದ ಕೆಲ ದಿನಗಳಿಂದ ಪಿಂಚಣಿ ಜಮೆಯಾಗದೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ವೃದ್ಧರು, ವಿಧವೆಯರು ಹಾಗೂ ವಿಕಲಚೇತನರಲ್ಲಿ ಆತಂಕ ಮೂಡಿಸಿದೆ.
ಈ ಕುರಿತು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ತಹಶೀಲ್ದಾರ್ ಮಂಜುನಾಥ್, ತಾಲೂಕಿನಲ್ಲಿ ಒಟ್ಟು ೪೫,೨೮೭ ಮಂದಿ ವಿವಿಧ ಪಿಂಚಣಿ ಯೋಜನೆಗಳ ಫಲಾನುಭವಿಗಳಿದ್ದಾರೆ. ಅದರಲ್ಲಿ ೮,೫೮೯ ಪ್ರಕರಣಗಳು ಮೇಲ್ನೋಟಕ್ಕೆ ಅನರ್ಹ ಅಥವಾ ದಾಖಲೆಗಳ ಪರಿಶೀಲನೆಗೆ ಒಳಪಟ್ಟಿವೆ ಎಂದು ತಿಳಿಸಿದರು.
ಏಕೆ ಸ್ಥಗಿತ?: ಪಿಂಚಣಿ ಸ್ಥಗಿತಕ್ಕೆ ಪ್ರಮುಖ ಕಾರಣಗಳನ್ನು ವಿವರಿಸಿದ ತಹಶೀಲ್ದಾರ್, “ನಿಗದಿತ ಅರ್ಹ ವಯಸ್ಸು ಪೂರ್ಣಗೊಳ್ಳದಿರುವುದು, ಅಗತ್ಯ ದಾಖಲೆಗಳನ್ನು ಸಲ್ಲಿಸದಿರುವುದು, ಆಧಾರ್-ರೇಷನ್ ಕಾರ್ಡ್ನಲ್ಲಿ ಹೆಸರು-ವಯಸ್ಸು ವ್ಯತ್ಯಾಸ, ಮರುಪರಿಶೀಲನೆಯಲ್ಲಿ ಅನರ್ಹತೆ ಕಂಡುಬAದಿರುವುದು ಸೇರಿದಂತೆ ವಿವಿಧ ಆಡಳಿತಾತ್ಮಕ ಕಾರಣಗಳಿವೆ ಎಂದರು.
ರೂ.೪,೦೦೦ಕ್ಕೂ ಹೆಚ್ಚು ಪಿಂಚಣಿ ದರದ ಮಾಹಿತಿ ಪಡೆದ ಪ್ರಕರಣಗಳನ್ನು ಈಗಾಗಲೇ ಸರಿಪಡಿಸಲಾಗಿದೆ. ಇನ್ನುಳಿದ ಪ್ರಕರಣಗಳು ತಾತ್ಕಾಲಿಕವಾಗಿ ಮಾತ್ರ ಸ್ಥಗಿತಗೊಂಡಿವೆ, ಶಾಶ್ವತವಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಪರಿಹಾರ ಏನು? ತಹಶೀಲ್ದಾರ್ ಸೂಚನೆ: ಪಿಂಚಣಿ ಬಂದ್ ಆಗಿರುವ ಫಲಾನುಭವಿಗಳು ಯಾವುದೇ ಕಾರಣಕ್ಕೂ ಆತಂಕಪಡುವ ಅಗತ್ಯವಿಲ್ಲ. ಆಧಾರ್ ಕಾರ್ಡ್, ರೇಷನ್ ಕಾರ್ಡ್, ವಯಸ್ಸಿನ ದಾಖಲೆ, ಬ್ಯಾಂಕ್ ಪಾಸ್‌ಬುಕ್ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ತಮ್ಮ ವ್ಯಾಪ್ತಿಯ ಗ್ರಾಮ ಆಡಳಿತಾಧಿಕಾರಿ, ನಾಡ ಕಚೇರಿ ಅಥವಾ ತಾಲೂಕು ಕಚೇರಿಯ ಕಂದಾಯ ವಿಭಾಗವನ್ನು ಸಂಪರ್ಕಿಸಿ ದಾಖಲೆಗಳನ್ನು ಪರಿಶೀಲನೆಗೆ ಸಲ್ಲಿಸಬೇಕು. ದಾಖಲೆಗಳು ಸರಿಯಾಗಿದ್ದರೆ ೭ ದಿನದೊಳಗೆ ಪರಿಶೀಲನೆ ಪೂರ್ಣಗೊಳಿಸಿ ಪಿಂಚಣಿಯನ್ನು ಮರು ಚಾಲನೆಗೊಳಿಸಲಾಗುವುದು, ಎಂದು ತಹಶೀಲ್ದಾರ್ ಮಂಜುನಾಥ್ ಭರವಸೆ ನೀಡಿದರು.
ವದಂತಿಗೆ ಕಿವಿಗೊಡಬೇಡಿ: ಪಿಂಚಣಿ ಸಂಪೂರ್ಣ ಕಟ್ ಆಗಿದೆ ಎಂಬ ವದಂತಿಗಳು ಹಬ್ಬಿವೆ. ಅದು ಸುಳ್ಳು. ಇದು ಕೇವಲ ದಾಖಲೆ ಪರಿಶೀಲನೆ ಪ್ರಕ್ರಿಯೆ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡದೆ, ನೇರವಾಗಿ ಸಂಬAಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ,” ಎಂದು ಅವರು ಮನವಿ ಮಾಡಿದರು.

